ಟೆನಿಸ್ : ವೃತ್ತಿ ಬದುಕಿಗೆ ವಿದಾಯ ಹೇಳಿದ ಮಾರ್ಟಿನಾ ಹಿಂಗಿಸ್

Posted By:

ಸಿಂಗಪುರ, ಅಕ್ಟೋಬರ್ 27: ಟೆನಿಸ್ ಲೋಕದ ಅದ್ಭುತ ಪ್ರತಿಭೆ ಮಾರ್ಟಿನಾ ಹಿಂಗಿಸ್ ಅವರು ತಮ್ಮ ವೃತ್ತಿ ಬದುಕಿಗೆ ಅಂತ್ಯ ಹಾಡಲು ನಿರ್ಧರಿಸಿದ್ದಾರೆ.

37ವರ್ಷ ವಯಸ್ಸಿನ ಸ್ವಿಸ್ ತಾರೆ ಹಿಂಗಿಸ್ ಅವರು ತಮ್ಮ 23 ವರ್ಷಗಳ ವೃತ್ತಿ ಬದುಕಿನಲ್ಲಿ ಹಲವು ಏಳು ಬೀಳುಗಳು, ತಾತ್ಕಾಲಿಕ ನಿವೃತ್ತಿಯನ್ನು ಕಂಡಿದ್ದಾರೆ. ಈ ವಾರಾಂತ್ಯದಲ್ಲಿ ಡಬ್ಲ್ಯೂಟಿಎ ಫೈನಲ್ ನಡೆಯಲಿದ್ದು, ತೈವಾನಿನ ಚಾನ್ ಯುಂಗ್ ಜಾನ್ ಜತೆ ಡಬಲ್ಸ್ ಆಡುತ್ತಿದ್ದಾರೆ. ಈ ಪಂದ್ಯದ ನಂತರ ಟೆನಿಸ್ ಗೆ ವಿದಾಯ ಹೇಳುವುದಾಗಿ ಮಾರ್ಟಿನಾ ಘೋಷಿಸಿದ್ದಾರೆ.

Tennis: Martina Hingis announces retirement

ತಮ್ಮ ನಿವೃತ್ತಿ ಬಗ್ಗೆ ಫೇಸ್ ಬುಕ್ ನಲ್ಲಿ ಬರೆದುಕೊಂಡಿರುವ ಮಾರ್ಟಿನಾ ಹಿಂಗಿಸ್ ಅವರು ಸಿಂಗಪುರದಲ್ಲಿ ಕೊನೆಯ ಪಂದ್ಯವಾಡುತ್ತಿರುವುದಾಗಿ ಹೇಳಿದ್ದಾರೆ. 23 ವರ್ಷ ಗಳ ವೃತ್ತಿ ಬದುಕಿನಲ್ಲಿ 25 ಗ್ರ್ಯಾನ್ ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದಾರೆ. 5 ಸಿಂಗಲ್ಸ್, 7 ಮಿಶ್ರ ಡಬಲ್ಸ್ ಹಾಗೂ 13 ಮಹಿಳಾ ಡಬಲ್ಸ್ ಪ್ರಶಸ್ತಿ ಇದರಲ್ಲಿ ಒಳಗೊಂಡಿದೆ.

2003ರಲ್ಲಿ 22 ವರ್ಷ ವಯಸ್ಸಿನಲ್ಲೇ ನಿವೃತ್ತಿ ಘೋಷಿಸಿ ಅಚ್ಚರಿ ಮೂಡಿಸಿದ್ದರು. ಗಾಯದ ಸಮಸ್ಯೆಯಿಂದ ಬಳಲುತ್ತಿದ್ದ ಮಾರ್ಟಿನಾ ಮತ್ತೊಮ್ಮೆ 2007ರಲ್ಲಿ ಟೆನಿಸ್ ಅಂಗಳದಿಂದ ಹಿಂದೆ ಸರಿದಿದ್ದರು. ಟೀನೇಜ್ ನಲ್ಲಿ ಆಸ್ಟ್ರೇಲಿಯನ್, ಯುಎಸ್, ವಿಂಬಲ್ಡನ್ ಎಲ್ಲಾ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದರು.

Story first published: Friday, October 27, 2017, 0:14 [IST]
Other articles published on Oct 27, 2017

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ