ಯುಎಸ್ ಓಪನ್: ಕ್ವಾರ್ಟರ್‌ಫೈನಲ್ ಪಂದ್ಯಕ್ಕೆ ಸಾಕ್ಷಿಯಾದ ಭಾರತದ ಇಬ್ಬರು ಕ್ರಿಕೆಟ್ ದಿಗ್ಗಜರು

ಯುಎಸ್ ಓಪನ್‌ ಗ್ರ್ಯಾಂಡ್‌ಸ್ಲ್ಯಾಮ್‌ನ ಅಂತಿಮ ಘಟ್ಟಕ್ಕೆ ತಲುಪಿದೆ. ಫೈನಲ್ ಹಂತದ ಪಂದ್ಯಗಳು ಮಾತ್ರವೇ ಬಾಕಿಯಿದೆ. ಆದರೆ ಈ ಪ್ರತಿಷ್ಠಿತ ಟೆನಿಸ್ ಟೂರ್ನಿಯ ಕ್ವಾರ್ಟರ್ ಫೈನಲ್ ಮುಖಾಮುಖಿಗೆ ಭಾರತದ ಇಬ್ಬರು ಕ್ರಿಕೆಟ್ ದಿಗ್ಗಜರು ಭಾಗಿಯಾಗಿದ್ದರು. ಭಾರತ ವಿಶ್ವಕಪ್ ಗೆದ್ದ ನಾಯಕರಿಬ್ಬರು ಪಂದ್ಯದಲ್ಲಿ ಹಾಜರಿದ್ದದ್ದು ಕುತೂಹಲ ಮೂಡಿಸಿದೆ. ಮಾಜಿ ನಾಯಕರಾದ ಕಪಿಲ್ ದೇವ್ ಹಾಗೂ ಎಂಎಸ್ ಧೋನಿ ಯುಎಸ್ ಓಪನ್‌ನ ಕ್ವಾರ್ಟರ್‌ಫೈನಲ್ ಪಂದ್ಯವನ್ನು ವೀಕ್ಷಿಸಿದ್ದಾರೆ.

ಇಟೆಲಿಯ ಜನಿಕ್ ಸಿನ್ನರ್ ಹಾಗೂ ಸ್ಪೈನ್‌ನ ಕಾರ್ಲೋಜ್ ಅಲ್ಕರಾಜ್ ನಡುವಿನ ಕ್ವಾರ್ಟರ್‌ಫೈನಲ್ ಮುಖಾಮುಖಿಗೆ ಕಪಿಲ್ ದೇವ್ ಹಾಗೂ ಎಂಎಸ್ ಧೋನಿ ಸಾಕ್ಷಿಯಾಗಿದ್ದಾರೆ. ಯುಎಸ್ ಓಪನ್‌ನ ಇತಿಹಾಸದ ಅತ್ಯಂತ ಸುದೀರ್ಘ ಪಂದ್ಯಗಳಲ್ಲಿ ಈ ಪಂದ್ಯ ಕೂಡ ಒಂದಾಗಿದೆ. ಈ ಪಂದ್ಯ ಭರ್ತಿ 5 ಗಂಟೆ 15 ನಿಮಿಷಗಳ ಕಾಲ ನಡೆದಿತ್ತು. ರೋಚಕವಾಗಿ ನಡೆದ ಈ ಕದನದಲ್ಲಿ ಇಬ್ಬರು ಯುವ ಆಟಗಾರರು ಕೂಡ ಅದ್ಭುತ ಪ್ರದರ್ಶನ ನೀಡಿದ್ದಾರೆ.

 ದುಲೀಪ್‌ ಟ್ರೋಫಿಯಲ್ಲಿ ದ್ವಿಶತಕ ಸಿಡಿಸಿದ ರಹಾನೆ, ಯಶಸ್ವಿ ಜೈಸ್ವಾಲ್! ದುಲೀಪ್‌ ಟ್ರೋಫಿಯಲ್ಲಿ ದ್ವಿಶತಕ ಸಿಡಿಸಿದ ರಹಾನೆ, ಯಶಸ್ವಿ ಜೈಸ್ವಾಲ್!

ಕ್ಯಾಮರಾಗೆ ಕೈಬೀಸಿದ ಧೋನಿ

ಈ ರೋಚಕ ಸೆಣೆಸಾಟ ನಡೆಯುತ್ತಿರುವ ಸಂದರ್ಭದಲ್ಲಿ ಕ್ಯಾಮೆರಾ ಗ್ಯಾಲರಿಯಲ್ಲಿ ಕುಳಿತು ಪಂದ್ಯ ವೀಕ್ಷಿಸುತ್ತಿದ್ದ ಎಂಎಸ್ ಧೋನಿಯನ್ನು ಸೆರೆ ಹಿಡಿಯಿತು. ಗೆಳೆಯರೊಂದಿಗೆ ಮಾತನಾಡುತ್ತಿದ್ದ ಧೋನಿ ಮೈದಾನದ ದೊಡ್ಡ ಪರದೆಯಲ್ಲಿ ಕಾಣಿಸುತ್ತಿದ್ದಂತೆಯೇ ನಗುತ್ತಾ ಕೈ ಬೀಸಿದರು. ಅದಾದ ಬಳಿಕ ಕಪಿಲ್‌ದೇವ್ ಕೂಡ ಗಂಭೀರವಾಗಿ ನಿಂತುಕೊಂಡು ಪಂದ್ಯವನ್ನು ವೀಕ್ಷಿಸುತ್ತಿದ್ದ ದೃಶ್ಯ ಸೆರೆಯಾಯಿತು. ಕ್ಯಾಮರಾ ತನ್ನ ಮೇಲೆ ಕಣ್ಣಿಟ್ಟಿರುವುದು ತಿಳಿದ ತಕ್ಷಣ ಕಪಿಲ್‌ದೇವ್ ಕೂಡ ನಗು ಬೀರುತ್ತಾ ಸ್ಪಂದಿಸಿದ್ದಾರೆ.

ವಿಶ್ವಕಪ್ ವಿಜೇತ ನಾಯಕರು

ವಿಶ್ವಕಪ್ ವಿಜೇತ ನಾಯಕರು

ಎಂಎಸ್ ಧೋನಿ ಹಾಗೂ ಕಪಿಲ್‌ದೇವ್ ಇಬ್ಬರು ಕೂಡ ಭಾರತ ವಿಶ್ವಕಪ್ ಗೆದ್ದ ತಂಡದ ನಾಯಕರಾಗಿದ್ದವರು. ಎಂಎಸ್ ಧೋನಿ ನಾಯಕತ್ವದಲ್ಲಿ ಭಾರತ 2007ರಲ್ಲಿ ಟಿ20 ವಿಶ್ವಕಪ್ ಗೆದ್ದುಕೊಂಡಿದ್ದರೆ 2011ರಲ್ಲಿ ಏಕದಿನ ವಿಶ್ವಕಪ್ ಜಯಿಸಿತ್ತು. ಇನ್ನು ಕಪಿಲ್‌ದೇವ್ ನಾಯಕತ್ವದಲ್ಲಿ 1983ರ ವಿಶ್ವಕಪ್ ಗೆಲ್ಲುವ ಮೂಲಕ ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಬಾರಿಗೆ ಈ ಮಹತ್ತರ ಸಾಧನೆ ಮಾಡಿತ್ತು.

ಮುಂದಿನ ಆವೃತ್ತಿಗೂ ಧೋನಿಯೇ ನಾಯಕ ಎಂದ ಸಿಎಸ್‌ಕೆ

ಮುಂದಿನ ಆವೃತ್ತಿಗೂ ಧೋನಿಯೇ ನಾಯಕ ಎಂದ ಸಿಎಸ್‌ಕೆ

ಇನ್ನು ಎಂಎಸ್ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಈಗಾಘಲೇ ನಿವೃತ್ತಿ ಘೋಷಣೆ ಮಾಡಿದ್ದರೂ ಐಪಿಎಲ್‌ನಲ್ಲಿ ಸಕ್ರಿಯವಾಗಿದ್ದಾರೆ. ಕಳೆದ ಆವೃತ್ತಿಯ ಆರಂಭದಲ್ಲಿ ಸಿಎಸ್‌ಕೆ ನಾಯಕತ್ವ ತೊರೆದಿದ್ದ ಎಂಎಸ್ ಧೋನಿ ಬಳಿಕ ಅಂತಿಮ ಹಂತದಲ್ಲಿ ಮತ್ತೆ ನಾಯಕತ್ವ ವಹಿಸಿಕೊಂಡಿದ್ದರು. ಇನ್ನು ಮುಂದಿನ ಐಪಿಎಲ್ ಆವೃತ್ತಿಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎಂಎಸ್ ಧೋನಿಯೇ ಮುನ್ನಡೆಸಲಿದ್ದಾರೆ ಎಂದು ಸಿಎಸ್‌ಕೆ ಸಿಇಒ ಇತ್ತೀಚೆಗಷ್ಟೇ ಸ್ಪಷ್ಟಪಡಿಸಿದ್ದಾರೆ.

T20 ವಿಶ್ವಕಪ್‌ 2022: ಭಾರತದ ಸಂಭಾವ್ಯ ಸ್ಕ್ವಾಡ್‌ ಘೋಷಿಸಿದ ಆಶಿಶ್ ನೆಹ್ರಾ

ಇತರ ಕ್ರೀಡೆಗಳ ಮೇಲೂ ಧೋನಿಗೆ ಬಹಳ ಪ್ರೀತಿ

ಇತರ ಕ್ರೀಡೆಗಳ ಮೇಲೂ ಧೋನಿಗೆ ಬಹಳ ಪ್ರೀತಿ

ಇನ್ನು ಭಾರತದ ಮಾಜಿ ನಾಯಕ ಎಂಎಸ್ ಧೋನಿ ಕ್ರಿಕೆಟ್ ಹೊರತುಪಡಿಸಿ ಇತರ ಕ್ರೀಡೆಗಳ ಮೇಲೂ ಸಾಕಷ್ಟು ಆಸಕ್ತಿಯನ್ನು ಹೊಂದಿದವರಾಗಿದ್ದಾರೆ. ಧೋನಿಗೆ ಫುಟ್ಬಾಲ್ ಎಂದರೆ ಬಹಳ ಇಷ್ಟವಾಗಿದ್ದು ಭಾರತ ತಂಡದಲ್ಲಿ ಸಕ್ರಿಯವಾಗಿದ್ದಾಗ ಸಹ ಆಟಗಾರರ ಜೊತೆಗೆ ಧೋನಿ ಬಿಡುವಿನ ಸಂದರ್ಭದಲ್ಲಿ ಫುಟ್ಬಾಲ್ ಆಡುತ್ತಿದ್ದರು. ಇನ್ನು ಟೆನಿಸ್ ಕೂಡ ಧೋನಿಯ ಇಷ್ಟದ ಕ್ರೀಡೆಗಳಲ್ಲಿ ಒಂದಾಗಿದೆ. ಅಲ್ಲದೆ ಎಂಎಸ್ ಧೋನಿಗೆ ವಿಡಿಯೋ ಗೇಮ್‌ಗಳಂದರೆ ಬಹಳ ಇಷ್ಟ ಎಂಬುದನ್ನು ತಂಡದ ಸಹ ಆಟಗಾರರೇ ಬಿಚ್ಚಿಟ್ಟಿದ್ದರು. ಸದ್ಯ ಭಾರತದಲ್ಲಿ ನಿಷೇಧವಾಗಿರುವ ಪಬ್‌ಜಿ ಸೇರಿದಂತೆ ಅನೇಕ ವಿಡಿಯೋ ಗೇಮ್ಸ್‌ಗಳು ಧೋನಿಯ ನೆಚ್ಚಿನ ವಿಡಿಯೋ ಗೇಮ್‌ಗಳು.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Saturday, September 10, 2022, 13:03 [IST]
Other articles published on Sep 10, 2022

Latest Videos

  + More
  POLLS
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Yes No
  Settings X