ಆಸ್ಟ್ರೇಲಿಯಾ ಪ್ರವಾಸಕ್ಕೆ 26 ಮಂದಿಯ ತಂಡ ಉತ್ತಮ: ಎಂಎಸ್‌ಕೆ ಪ್ರಸಾದ್

ನವದೆಹಲಿ, ಜುಲೈ 24: ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿರುವ ಟೀಮ್ ಇಂಡಿಯಾ, ಸರಣಿ ಆಡುವುದಕ್ಕೂ ಮುನ್ನ ಅಲ್ಲಿ 14 ದಿನಗಳ ಕಡ್ಡಾಯ ಕ್ವಾರಂಟೈನ್ ಪಾಲಿಸಲಿದೆ. ಈ ಪ್ರವಾಸದಲ್ಲಿ 4 ಪಂದ್ಯಗಳ ಟೆಸ್ಟ್ ಸರಣಿ ಹೆಚ್ಚು ಗಮನ ಸೆಳೆಯಲಿದೆ. ಯಾಕೆಂದರೆ ಕಳೆದ ವರ್ಷ ಇದೇ ಸರಣಿಯಲ್ಲಿ ಭಾರತ 2-1ರ ಗೆಲುವಿನೊಂದಿಗೆ ಇತಿಹಾಸ ನಿರ್ಮಿಸಿತ್ತು.
ಆಸ್ಟ್ರೇಲಿಯಾಕ್ಕೆ ಭಾರತದ ಪ್ರವಾಸದ ವೇಳೆ, ಇಂಗ್ಲೆಂಡ್‌ಗೆ ವೆಸ್ಟ್ ಇಂಡೀಸ್ ಮತ್ತು ಪಾಕಿಸ್ತಾನಗಳು ಪ್ರವಾಸ ಹೋಗುವಾಗ 26 ಮಂದಿಯ ದೊಡ್ಡ ತಂಡ ಹೋದಂತೆ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ ಕೂಡ 26 ಮಂದಿಯ ದೊಡ್ಡ ತಂಡವನ್ನು ಕಳುಹಿಸೋದು ಉತ್ತಮ ಎಂದು ಭಾರತದ ಮಾಜಿ ಮುಖ್ಯ ಆಯ್ಕೆದಾರ ಎಂಎಸ್‌ಕೆ ಪ್ರಸಾದ್ ಹೇಳಿದ್ದಾರೆ.
ಪ್ರಸಾದ್ ಪ್ರಕಾರ, ಇಂಡಿಯಾ 'ಎ' ಮತ್ತು ಇಂಡಿಯಾ 'ಬಿ'ಯನ್ನು ಒಟ್ಟು ಸೇರಿಸಿರುವ 26 ಮಂದಿಯ ಬಲಿಷ್ಠ ತಂಡವನ್ನು ಆಸ್ಟ್ರೇಲಿಯಾಕ್ಕೆ ಕಳುಹಿಸಬೇಕು. ಇಂಗ್ಲೆಂಡ್ ಪ್ರವಾಸದ ವೇಳೆ ಪಾಕಿಸ್ತಾನ 29 ಮಂದಿಯ ತಂಡ ಕರೆದೊಯ್ದಿತ್ತು, ವೆಸ್ಟ್ ಇಂಡೀಸ್ ಕೂಡ 26 ಮಂದಿಯ ತಂಡವನ್ನು ಇಂಗ್ಲೆಂಡ್‌ಗೆ ಕರೆತಂದಿತ್ತು. ಹೀಗೆ ಮಾಡುವುದರಿಂದ ಕೊರೊನಾ ಸಮಸ್ಯೆ ಎದುರಾದರೆ ಬದಲಿ ಆಟಗಾರರನ್ನು ಹೆಕ್ಕೋದಕ್ಕೆ ಅನುಕೂಲವಾಗುತ್ತದೆ.
'ವೇದಿಕೆಗಾಗಿ ಎದುರು ನೋಡುತ್ತಿರುವ ಯುವ ಆಟಗಾರರತ್ತ ನೋಟ ಹರಿಸಲು ತಂಡದ ನಿರ್ವಾಹಕರಿಗೆ ಆಸ್ಟ್ರೇಲಿಯಾ ಪ್ರವಾಸದಲ್ಲಿ ಅವಕಾಶವಿದೆ. ಕೊರೊನಾ ಭೀತಿಯಿರುವುದರಿಂದ ನಾವು ನೆಟ್ ಬೌಲರ್‌ಗಳನ್ನೇ ನಂಬೋದು ಕಷ್ಟ. ಹೆಚ್ಚು ಆಟಗಾರರನ್ನು ಕರೆದೊಯ್ದರೆ ಉತ್ತಮ,' ಎಂದು ಪ್ರಸಾದ್ ವಿವರಿಸಿದ್ದಾರೆ. ಭಾರತ-ಆಸ್ಟ್ರೇಲಿಯಾ ಸರಣಿ ಅಕ್ಟೋಬರ್ 11ರಿಂದ ಆರಂಭಗೊಳ್ಳಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications