ದಕ್ಷಿಣ ಆಫ್ರಿಕಾ ವಿರುದ್ಧ ಈ ಆಟಗಾರನ ಅಲಭ್ಯತೆ ಭಾರತಕ್ಕೆ ಕಾಡುತ್ತಿದೆ ಎಂದ ಆಕಾಶ್ ಚೋಪ್ರ

ಭಾರತ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಮೊದಲ ಎರಡು ಪಂದ್ಯಗಳಲ್ಲಿಯೂ ಭಾರತ ಸೋಲು ಅನುಭವಿಸುವ ಮೂಲಕ ಹಿನ್ನೆಡೆ ಅನುಭವಿಸಿದೆ. ಹೀಗಾಗಿ ಅಂತಿಮ ಮೂರು ಪಂದ್ಯಗಳಲ್ಲಿಯೂ ಭಾರತ ತಂಡ ಗೆದ್ದರೆ ಮಾತ್ರವೇ ಸರಣಿ ವಶಕ್ಕೆ ಪಡೆಯಲು ಸಾಧ್ಯವಿದೆ. ಹೀಗಾಗಿ ರಿಷಬ್ ಪಂತ್ ಪಡೆಯ ಮೇಲೆ ಒತ್ತಡ ಹೆಚ್ಚಿದೆ. ಈ ಸಂದರ್ಭದಲ್ಲಿ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರ ಟೀಮ್ ಇಮಡಿಯಾ ಓರ್ವ ಆಟಗಾರನನ್ನು ಮಿಸ್ ಮಾಡಿಕೊಳ್ಳುತ್ತಿದೆ ಎಂದಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ಮೊದಲು ಭಾರತ ತಂಡವನ್ನು ಕೆಎಲ್ ರಾಹುಲ್ ಮುನ್ನಡೆಸಬೇಕಾಗಿತ್ತು. ಆದರೆ ಕೆಎಲ್ ರಾಹುಲ್ ಸರಣಿಯ ಆರಂಭಕ್ಕೆ ಕೆಲವೇ ಗಂಟೆಗಳಿರುವಾಗ ಗಾಯದ ಕಾರಣದಿಂದಾಗಿ ಹೊರಗುಳಿಯುವ ಅನಿವಾರ್ಯತೆಗೆ ಸಿಲುಕಿದರು. ಹೀಗಾಗಿ ಪಂತ್ ತಂಡವನ್ನು ಮುನ್ನಡೆಸುತ್ತಿದ್ದು ಆರಂಭಿಕನಾಗಿ ಇಶಾನ್ ಕಿಶನ್‌ಗೆ ಋತುರಾಜ್ ಗಾಯಕ್ವಾಡ್ ಸಾಥ್ ನೀಡುತ್ತಿದ್ದಾರೆ. ಕೆಎಲ್ ರಾಹುಲ್ ಈ ಸರಣಿಗೆ ಲಭ್ಯವಿದ್ದರೆ ಆಟಗಾರರ ಆತ್ಮ ವಿಶ್ವಾಸದ ಮಟ್ಟ ಹೆಚ್ಚಾಗಿರುತ್ತಿತ್ತು ಎಂದಿದ್ದಾರೆ ಆಕಾಶ್ ಚೋಪ್ರ.

ಅವರು ಬಂದರೆ ದಿನೇಶ್ ಕಾರ್ತಿಕ್‌ ತಂಡದಿಂದ ಹೊರಬೀಳ್ತಾರೆ; ಸುಮ್ಮನೆ ಅವಕಾಶ ಕೊಡಬೇಡಿ ಎಂದ ಗಂಭೀರ್!ಅವರು ಬಂದರೆ ದಿನೇಶ್ ಕಾರ್ತಿಕ್‌ ತಂಡದಿಂದ ಹೊರಬೀಳ್ತಾರೆ; ಸುಮ್ಮನೆ ಅವಕಾಶ ಕೊಡಬೇಡಿ ಎಂದ ಗಂಭೀರ್!

ಕೆಎಲ್ ರಾಹುಲ್ ಅಲಭ್ಯತೆ ಕಾಡುತ್ತಿದೆ

ಕೆಎಲ್ ರಾಹುಲ್ ಅಲಭ್ಯತೆ ಕಾಡುತ್ತಿದೆ

ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಆಕಾಶ್ ಚೋಪ್ರ ಕೆಎಲ್ ರಾಹುಲ್ ಅವರನ್ನು ಭಾರತ ತಂಡ ಸ್ವಲ್ಪ ಮಟ್ಟಿಗೆ ಮಿಸ್ ಮಾಡಿಕೊಳ್ಳುತ್ತಿದೆ ಎಂದಿದ್ದಾರೆ. ಕೆಎಲ್ ರಾಹುಲ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿಯಂತಾ ಆಟಗಾರರು ತಂಡದಲ್ಲಿದ್ದಾಗ ತಂಡದ ಆತ್ಮವಿಶ್ವಾಸದ ಮಟ್ಟ ಭಿನ್ನವಾಗಿರುತ್ತದೆ. ಎದುರಾಳಿಗೂ ಈ ಆಟಗಾರರ ಭಯವಿರುತ್ತದೆ. ಆದರೆ ತಂಡ ಗೆಲ್ಲುತ್ತಾ ಇದ್ದಾಗ ಯಾವ ತಂಡ ಕೂಡ ಯಾರನ್ನೂ ಮಿಸ್ ಮಾಡಿಕೊಳ್ಳುವುದಿಲ್ಲ ಎಂದಿದ್ದಾರೆ ಚೋಪ್ರ.

ದಕ್ಷಿಣ ಆಫ್ರಿಕಾ ಕಥೆ ಭಿನ್ನವಾಗಿದೆ ಎಂದ ಚೋಪ್ರ

ದಕ್ಷಿಣ ಆಫ್ರಿಕಾ ಕಥೆ ಭಿನ್ನವಾಗಿದೆ ಎಂದ ಚೋಪ್ರ

ಇನ್ನು ಈ ಸಂದರ್ಭದಲ್ಲಿ ದಕ್ಷಿಣ ಆಫ್ರಿಕಾ ತಂಡ ಸತತ ಎರಡು ಪಂದ್ಯಗಳನ್ನು ಗೆದ್ದುಕೊಂಡಿದೆ. ಹೀಗಾಗಿ ಆ ತಂಡದ ಸ್ಥಿತಿ ಭಿನ್ನವಾಗಿದೆ. ತಂಡ ಐಡೆನ್ ಮಾರ್ಕ್ರಮ್, ಕ್ವಿಂಡನ್ ಡಿಕಾಕ್ ಅವರಂತಾ ಆಟಗಾರರ ಅಲಭ್ಯತೆಯಿದ್ದರೂ ಅವರನ್ನು ಮಿಸ್ ಮಾಡಿಕೊಳ್ಳುತ್ತಿಲ್ಲ. ಗೆದ್ದಾಗ ಪರಿಸ್ಥಿತಿ ಭಿನ್ನವಾಗಿರುತ್ತದೆ. ಆದರೆ ಸೋಲು ಅನುಭವಿಸಿದಾಗ ಮಾತ್ರ ತಂಡಕ್ಕೆ ಕೆಲ ಆಟಗಾರರ ಒರತೆಗಳು ಕಾಡುತ್ತದೆ ಎಂದಿದ್ದಾರೆ ಆಕಾಶ್ ಚೋಪ್ರ.

ಮೂರನೇ ಪಂದ್ಯದಲ್ಲಿ ಸವಾಲು

ಮೂರನೇ ಪಂದ್ಯದಲ್ಲಿ ಸವಾಲು

ಭಾರತ ತಂಡ ಟಿ20 ಸರಣಿಯ ಮೂರನೇ ಪಂದ್ಯದಲ್ಲಿ ಗೆಲ್ಲೇ ಬೇಕಾದ ಒತ್ತಡದಲ್ಲಿದೆ. ತಂಡದ ಬ್ಯಾಟಿಮಗ್ ವಿಭಾಗದ ಪ್ರದರ್ಶನ ಆಶಾದಾಯಕವಾಗಿದ್ದರೂ ಬೌಲಿಂಗ್ ವಿಭಾಗದ ಪ್ರದರ್ಶನ ಕಳವಳಕಾರಿಯಾಗಿದೆ. ಆರಂಭದಲ್ಲಿ ಮೇಲುಗೈ ಸಾಧಿಸಿದರೂ ಆ ಯಶಸ್ಸನ್ನು ಮುಂದುವರಿಸಿಕೊಂಡು ಹೋಗಲು ವಿಫಲವಾಗುತ್ತಿದೆ. ಹೀಗಾಗಿ ಸತತ ಎರಡು ಪಂದ್ಯಗಳಲ್ಲಿಯೂ ಭಾರತ ಸೋಲು ಅನುಭವಿಸಿದೆ.

ಪಂತ್ ನಾಯಕತ್ವಕ್ಕೆ ಟೀಕೆ

ಪಂತ್ ನಾಯಕತ್ವಕ್ಕೆ ಟೀಕೆ

ಇನ್ನು ಕೆಎಲ್ ರಾಹುಲ್ ಅಲಭ್ಯತೆಯ ಹಿನ್ನಲೆಯಲ್ಲಿ ರಿಷಭ್ ಪಂತ್ ನಾಯಕತ್ವಕ್ಕೆ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿದೆ. ಒತ್ತಡದ ಸಂದರ್ಭದಲ್ಲಿ ಪಂತ್ ತಂಡವನ್ನು ಸಮರ್ಥವಾಗಿ ಮುನ್ನಡೆಸಲು ವಿಫಲವಾಗುತ್ತಿದ್ದಾರೆ. ಒತ್ತಡದಲ್ಲಿ ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಲು ಪಂತ್ ಅವರಿಂದ ಸಾಧ್ಯವಾಗುತ್ತಿಲ್ಲ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ. ಅಲ್ಲದೆ ಪಂತ್ ಬ್ಯಾಟಿಂಗ್‌ನ್ಲಲಿಯೂ ವಿಫಲವಾಗುತ್ತಿದ್ದು ತಂಡಕ್ಕೆ ಹಿನ್ನಡೆಯಾಗುತ್ತಿದೆ.

For Quick Alerts
ALLOW NOTIFICATIONS
For Daily Alerts
Story first published: Tuesday, June 14, 2022, 18:26 [IST]
Other articles published on Jun 14, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X