ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20 ವಿಶ್ವಕಪ್ 2022: ಕೊಹ್ಲಿಯನ್ನ ಬಿಟ್ಟರೆ ಎಡವಟ್ಟು ಗ್ಯಾರೆಂಟಿ ಎಂದ ಗಿಲ್‌ಕ್ರಿಸ್ಟ್‌

Virat kohli

ಟೀಂ ಇಂಡಿಯಾ ಇತ್ತೀಚೆಗಷ್ಟೇ ವೆಸ್ಟ್‌ ಇಂಡೀಸ್ ವಿರುದ್ಧ ಏಕದಿನ ಸರಣಿ ಗೆದ್ದ ಬಳಿಕ, ಟಿ20 ಸರಣಿಯನ್ನೂ ಗೆಲ್ಲುವ ವಿಶ್ವಾಸ ಹೊಂದಿದೆ. ವಿರಾಟ್ ಕೊಹ್ಲಿ ಅನುಪಸ್ಥಿತಿಯ ನಡುವೆಯೂ ವೆಸ್ಟ್ ಇಂಡೀಸ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ ಕ್ಲೀನ್ ಸ್ವೀಪ್ ಮಾಡಿದ್ದು ಗೊತ್ತೇ ಇದೆ. ಇದಾದ ಬಳಿಕ ವಿರಾಟ್‌ ಇಲ್ಲದ 5 ಪಂದ್ಯಗಳ ಟಿ20 ಸರಣಿಯಲ್ಲೂ ಆಡುತ್ತಿಲ್ಲ.

ಆಸ್ಟ್ರೇಲಿಯಾದಲ್ಲಿ ಇದೇ ವರ್ಷ ನಡೆಯಲಿರುವ ಟಿ20 ವಿಶ್ವಕಪ್‌ ಆಡುವ ಮೊದಲು ಬಲಿಷ್ಟವಾದ ಸ್ಕ್ವಾಡ್ ರಚಿಸಬೇಕಾದ ಹೊಣೆ ಬಿಸಿಸಿಐ ಆಯ್ಕೆಗಾರರ ಸಮಿತಿ ಮೇಲಿದೆ. ವಿಂಡೀಸ್ ವಿರುದ್ಧ ಐದು ಪಂದ್ಯಗಳ ಟಿ20 ಸರಣಿ ಮುಗಿದ ಬಳಿಕ ಭಾರತದ ಅಗ್ರ 15 ಆಟಗಾರರನ್ನು ಗುರುತಿಸಲು ನಾಯಕ ರೋಹಿತ್ ಶರ್ಮಾ ಮತ್ತು ಕೋಚ್ ರಾಹುಲ್ ದ್ರಾವಿಡ್ ಮೌಲ್ಯಮಾಪನ ಮಾಡುತ್ತಾರೆ. ಟಿ20 ವಿಶ್ವಕಪ್ ತಂಡದಲ್ಲಿ ವಿರಾಟ್ ಕೊಹ್ಲಿ ಸ್ಥಾನ ಇನ್ನೂ ಅನಿಶ್ಚಿತವಾಗಿದೆ.

ಇಂಗ್ಲೆಂಡ್‌ನಲ್ಲಿ ಮುಗ್ಗರಿಸಿದ ವಿರಾಟ್‌ ಕೊಹ್ಲಿ

ಇಂಗ್ಲೆಂಡ್‌ನಲ್ಲಿ ಮುಗ್ಗರಿಸಿದ ವಿರಾಟ್‌ ಕೊಹ್ಲಿ

ಎಡ್ಜ್‌ಬಾಸ್ಟನ್‌ನಲ್ಲಿ ಮರುನಿಗದಿಪಡಿಸಲಾದ ಟೆಸ್ಟ್‌ನಲ್ಲಿ ವಿರಾಟ್ ಕೊಹ್ಲಿ 11 ಮತ್ತು 20 ರನ್‌ಗಳನ್ನು ಮಾತ್ರ ಗಳಿಸಲು ಸಾಧ್ಯವಾಯಿತು. ನಂತರ ಟಿ20ಯಲ್ಲೂ ಕೆಟ್ಟ ಪ್ರದರ್ಶನ ತೋರಿದರು. ಅವರು ಎರಡು ಇನ್ನಿಂಗ್ಸ್‌ಗಳಲ್ಲಿ ಕೇವಲ 12 ರನ್ ಗಳಿಸಿದರು. ಏಕದಿನ ಪಂದ್ಯದಲ್ಲೂ ಅವರು ಎರಡು ಪಂದ್ಯಗಳಲ್ಲಿ ಕೇವಲ 17 ಮತ್ತು 16 ರನ್ ಗಳಿಸಿ ಪೆವಿಲಿಯನ್‌ಗೆ ಹೋದರು.

ಸದ್ಯ ವಿರಾಟ್ ಕೊಹ್ಲಿ ಯಾವುದೇ ಫಾರ್ಮೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿಲ್ಲ. ಅವರು ತಮ್ಮ ವೃತ್ತಿಜೀವನದ ಅತ್ಯಂತ ಕೆಟ್ಟ ಫಾರ್ಮ್‌ ಎದುರಿಸುತ್ತಿದ್ದಾರೆ. ಒಂದೊಮ್ಮೆ ಶತಕಗಳ ಸುರಿಮಳೆಗೈದಿದ್ದ ಕೊಹ್ಲಿ 2019ರಿಂದ ಯಾವುದೇ ಮಾದರಿಯಲ್ಲಿ ಶತಕ ಸಿಡಿಸಿಲ್ಲ. ಇದು ಅವರ ಸ್ಥಾನದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಅವರನ್ನು ತಂಡದಿಂದ ತೆಗೆದುಹಾಕುವಂತೆ ಹಲವರು ಈಗಾಗಲೇ ಟೀಕೆಗಳನ್ನ ಮಾಡುತ್ತಿದ್ದಾರೆ.

ಕಾಮನ್‌ವೆಲ್ತ್ ಗೇಮ್ಸ್: ಹರ್ಮನ್‌, ರೇಣುಕಾ ಸಿಂಗ್ ಪ್ರಯತ್ನ ವ್ಯರ್ಥ: ಭಾರತಕ್ಕೆ ಆಘಾತ ನೀಡಿದ ಗಾರ್ಡ್ನರ್

ಕೊಹ್ಲಿ ತಂಡದಿಂದ ಹೊರಗಿಟ್ಟರೆ ಎಚ್ಚರಿಕೆ: ಆ್ಯಡಂ ಗಿಲ್‌ಕ್ರಿಸ್ಟ್‌

ಕೊಹ್ಲಿ ತಂಡದಿಂದ ಹೊರಗಿಟ್ಟರೆ ಎಚ್ಚರಿಕೆ: ಆ್ಯಡಂ ಗಿಲ್‌ಕ್ರಿಸ್ಟ್‌

ಆಸ್ಟ್ರೇಲಿಯಾದ ದಿಗ್ಗಜ ಆಟಗಾರ ಆಡಮ್ ಗಿಲ್ ಕ್ರಿಸ್ಟ್ ಕೊಹ್ಲಿ ಸ್ಥಾನದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ವಿರಾಟ್ ಕೊಹ್ಲಿಯನ್ನು ತಂಡದಿಂದ ಕೈ ಬಿಟ್ಟರೆ ಟೀಂ ಇಂಡಿಯಾಕ್ಕೆ ಅಪಾಯಕಾರಿ ಎಂದು ಎಚ್ಚರಿಕೆ ನೀಡಿದ್ದಾರೆ.

''ಈಗ ಕೊಹ್ಲಿಯನ್ನು ತಪ್ಪಿಸುವುದು ಅಪಾಯಕಾರಿ. ಅವನು ಬಹುಶಃ ಇದೀಗ ತನ್ನ ಹವಾ ತೋರಿಸಲು ಸಾಧ್ಯವಿಲ್ಲ. ಆದರೆ ಅವರು ಅಪಾರ ಅನುಭವ ಮತ್ತು ಕೌಶಲ್ಯವನ್ನು ಹೊಂದಿದ್ದಾರೆ. ಅವರು ದೀರ್ಘಕಾಲದವರೆಗೆ ಭಾರತೀಯ ಕ್ರಿಕೆಟ್‌ನಲ್ಲಿ ಉನ್ನತ ಗುಣಮಟ್ಟವನ್ನು ಸ್ಥಾಪಿಸುತ್ತಿದ್ದಾರೆ. ಆದರೂ ಕೆಲವರು ಅವರನ್ನು ನಿರ್ಣಯಿಸುತ್ತಿದ್ದಾರೆ" ಎಂದು ಮುಂಬೈ ಕ್ರಿಕೆಟ್ ಅಸೋಸಿಯೇಶನ್‌ನ ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್ ಒಳಾಂಗಣ ಅಕಾಡೆಮಿಯಲ್ಲಿ ಗಿಲ್‌ಕ್ರಿಸ್ಟ್ ಸುದ್ದಿಗಾರರಿಗೆ ತಿಳಿಸಿದರು.

ಕಾಮನ್‌ವೆಲ್ತ್‌ ಗೇಮ್ಸ್‌ 2022: ಭಾರತದ ಅತ್ಯಂತ ಕಿರಿಯ ಅಥ್ಲೀಟ್ ಅನಾಹತ್ ಸಿಂಗ್

ಟೀಂ ಇಂಡಿಯಾದಲ್ಲಿ ಪ್ರತಿಭಾವಂತ ಆಟಗಾರರಿದ್ದಾರೆ

ಟೀಂ ಇಂಡಿಯಾದಲ್ಲಿ ಪ್ರತಿಭಾವಂತ ಆಟಗಾರರಿದ್ದಾರೆ

ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಸ್ಥಾನದ ಬಗ್ಗೆಯೂ ಗಿಲ್ಲಿ ಇದೇ ವೇಳೆಯಲ್ಲಿ ಮಾತನಾಡಿದ್ದಾರೆ.

''ಟೀಂ ಇಂಡಿಯಾ ಪ್ರತಿಭಾವಂತ ಆಟಗಾರರಿಂದ ತುಂಬಿದೆ. ಈ ಸಮಯದಲ್ಲಿ ಅವರು ತಮ್ಮ ಅಂತಿಮ 11 ಆಟಗಾರರನ್ನ ಹೊಂದಿಲ್ಲದಿದ್ದರೂ, ತಂಡವು ಸಾಕಷ್ಟು ಪ್ರತಿಭಾವಂತ ಆಟಗಾರರನ್ನು ಹೊಂದಿದೆ ಮತ್ತು ಅವರು ಇತ್ತೀಚಿನ ಸರಣಿಯಲ್ಲಿ ಉತ್ತಮ ಫಲಿತಾಂಶಗಳನ್ನು ಸಾಧಿಸುತ್ತಿದ್ದಾರೆ. ಟೀಂ ಇಂಡಿಯಾ ಮ್ಯಾನೇಜ್‌ಮೆಂಟ್ ತಂಡವನ್ನು ವಿಸ್ತರಿಸುತ್ತಿದೆ. ಇನ್ನು ಮುಂದೆ ಯುವ ಪ್ರತಿಭಾವಂತ ಆಟಗಾರರಿಗೆ ಅಂತಾರಾಷ್ಟ್ರೀಯ ಅನುಭವ ನೀಡಲಾಗುತ್ತಿದೆ. ಹಾಗಾಗಿ ಸದ್ಯದ ಭವಿಷ್ಯ ಭಾರತಕ್ಕೆ ಒಳ್ಳೆಯದು. ಮತ್ತು ಆಸ್ಟ್ರೇಲಿಯಾವನ್ನು ಅವರ ತವರು ನೆಲದಲ್ಲಿ ಟಿ20 ವಿಶ್ವಕಪ್‌ನಲ್ಲಿ ಸೋಲಿಸುವುದು ತುಂಬಾ ಕಷ್ಟ. ಯಾರು ಗೆಲ್ಲುತ್ತಾರೆ ಎಂದು ಈಗಲೇ ಹೇಳಲು ಸಾಧ್ಯವಿಲ್ಲ, ಆದರೆ ಆಸ್ಟ್ರೇಲಿಯಾ, ಇಂಗ್ಲೆಂಡ್, ಪಾಕಿಸ್ತಾನ ಮತ್ತು ಭಾರತ ಮೊದಲ ನಾಲ್ಕು ಸ್ಥಾನಗಳಲ್ಲಿ ಇರುತ್ತವೆ ಎಂದು ನಾನು ಖಚಿತವಾಗಿ ಹೇಳಬಲ್ಲೆ'' ಎಂದು ಗಿಲ್‌ಕ್ರಿಸ್ಟ್‌ ಹೇಳಿದ್ದಾರೆ.

Story first published: Friday, July 29, 2022, 21:01 [IST]
Other articles published on Jul 29, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X