ರಸೆಲ್, ಮೆಕಾಯ್ ಆರ್ಭಟ: ಆಸ್ಟ್ರೇಲಿಯಾ ವಿರುದ್ಧ ವೆಸ್ಟ್‌ ಇಂಡೀಸ್‌ಗೆ ಜಯ!

ಸೇಂಟ್ ಲೂಸಿಯಾ: ಸೇಂಟ್ ಲೂಸಿಯಾದಲ್ಲಿರುವ ಡ್ಯಾರೆನ್ ಸಾಮಿ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ಶನಿವಾರ (ಜುಲೈ 10) ನಡೆದ ವೆಸ್ಟ್‌ ಇಂಡೀಸ್ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲನೇ ಟಿ20ಐ ಪಂದ್ಯದಲ್ಲಿ ವಿಂಡೀಸ್ 18 ರನ್ ಜಯ (ಡಕ್ವರ್ಥ್ ಲೂಯಿಸ್ ನಿಯಮದ ಆಧಾರದಲ್ಲಿ) ಗಳಿಸಿದೆ. ಆಲ್ ರೌಂಡರ್ ಆ್ಯಂಡ್ರೆ ರಸೆಲ್ ಸ್ಫೋಟಕ ಅರ್ಧ ಶತಕದೊಂದಿಗೆ ಕೆರಿಬಿಯನ್ ಪಡೆ ಮೂರು ಪಂದ್ಯಗಳ ಟಿ20ಐ ಸರಣಿಯಲ್ಲಿ ಮುನ್ನಡೆ ಸಾಧಿಸಿದೆ.

ಭಾರತ vs ಶ್ರೀಲಂಕಾ: 3 ಪಂದ್ಯಗಳ ಏಕದಿನ ಸರಣಿಯ ವೇಳಾಪಟ್ಟಿ ಬದಲು!ಭಾರತ vs ಶ್ರೀಲಂಕಾ: 3 ಪಂದ್ಯಗಳ ಏಕದಿನ ಸರಣಿಯ ವೇಳಾಪಟ್ಟಿ ಬದಲು!

ಆ್ಯಂಡ್ರೆ ರಸೆಲ್ ಬಿರುಸಿನ ಬ್ಯಾಟಿಂಗ್‌, ಒಬೆಡ್ ಮೆಕಾಯ್ ಮತ್ತು ಹೇಡನ್ ವಾಲ್ಷ್ ಮಾರಕ ಬೌಲಿಂಗ್‌ ಬಲದಿಂದ ವೆಸ್ಟ್‌ ಇಂಡೀಸ್‌ ತಂಡ ಪಂದ್ಯ ಗೆದ್ದಿದೆ. ಆದರೆ ಆಸ್ಟ್ರೇಲಿಯಾದ ಮಿಚೆಲ್ ಮಾರ್ಷ್ ಅರ್ಧ ಶತಕದ ಕೊಡುಗೆ ವ್ಯರ್ಥವಾಗಿದೆ.

ನಿಕೋಲಸ್ ಪೂರನ್ ನಾಯಕ

ನಿಕೋಲಸ್ ಪೂರನ್ ನಾಯಕ

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ವೆಸ್ಟ್ ಇಂಡೀಸ್ ತಂಡ, ಲೆಂಡ್ಲ್ ಸಿಮನ್ಸ್ 27, ಶಿಮ್ರನ್ ಹೆಟ್ಮೈಯರ್ 20, ನಾಯಕ ನಿಕೋಲಸ್ ಪೂರನ್ 17, ಆ್ಯಂಡ್ರೆ ರಸೆಲ್ 51 (28 ಎಸೆತ), ಫ್ಯಾಬಿಯನ್ ಅಲೆನ್ 8, ಡ್ವೇನ್ ಬ್ರಾವೋ 7 ರನ್‌ನೊಂದಿಗೆ 20 ಓವರ್‌ಗೆ 6 ವಿಕೆಟ್ ಕಳೆದು 145 ರನ್‌ ಗಳಿಸಿತ್ತು.

ಆ್ಯಂಡ್ರೆ ರಸೆಲ್ 5 ಸಿಕ್ಸರ್

ಆ್ಯಂಡ್ರೆ ರಸೆಲ್ 5 ಸಿಕ್ಸರ್

ವೆಸ್ಟ್‌ ಇಂಡೀಸ್ ಪರ 6ನೇ ಬ್ಯಾಟಿಂಗ್‌ ಕ್ರಮಾಂಕದಲ್ಲಿ ಬಂದಿದ್ದ ಆ್ಯಂಡ್ರೆ ರಸೆಲ್ 28 ಎಸೆತಗಳಲ್ಲಿ 51 ರನ್ ಬಾರಿಸಿ ಜೋಶ್ ಹೇಝಲ್ವುಡ್‌ಗೆ ವಿಕೆಟ್ ಒಪ್ಪಿಸಿ ನಿರ್ಮಿಸಿದರು. ರಸೆಲ್ ಬ್ಯಾಟಿಂದ 3 ಫೋರ್ಸ್, 5 ಸಿಕ್ಸರ್‌ಗಳು ಸಿಡಿದಿದ್ದವು.

ಮಾರ್ಷ್ ಸ್ಫೋಟಕ ಬ್ಯಾಟಿಂಗ್

ಮಾರ್ಷ್ ಸ್ಫೋಟಕ ಬ್ಯಾಟಿಂಗ್

ಆಸ್ಟ್ರೇಲಿಯಾ ಇನ್ನಿಂಗ್ಸ್‌ ವೇಳೆ ಮಳೆ ಸುರಿದಿದ್ದರಿಂದ ಆಸೀಸ್‌ಗೆ 16 ಓವರ್‌ಗೆ 146 ರನ್ ಗುರಿ ನೀಡಲಾಗಿತ್ತು. ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ, ಮ್ಯಾಥ್ಯೂ ವೇಡ್ 33, ಮಿಚೆಲ್ ಮಾರ್ಷ್ 51, ಮೋಯ್ಸಸ್ ಹೆಂಡ್ರಿಕ್ಸ್ 16, ಡೇನಿಯಲ್ ಕ್ರಿಸ್ಚಿಯನ್ 10 ರನ್‌ ಸೇರ್ಪಡೆಯೊಂದಿಗೆ 16 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 127 ರನ್ ಬಾರಿಸಿ ಶರಣಾಯಿತು.

ಒಬೆಡ್ ಮೆಕಾಯ್ ಪಂದ್ಯಶ್ರೇಷ್ಠ

ಒಬೆಡ್ ಮೆಕಾಯ್ ಪಂದ್ಯಶ್ರೇಷ್ಠ

ವೆಸ್ಟ್ ಇಂಡೀಸ್ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾದ ಜೋಶ್ ಹ್ಯಾಝಲ್ವುಡ್ 3, ಮಿಚೆಲ್ ಮಾರ್ಷ್ 2 ವಿಕೆಟ್ ಪಡೆದರೆ, ಆಸ್ಟ್ರೇಲಿಯಾ ಇನ್ನಿಂಗ್ಸ್‌ನಲ್ಲಿ ವೆಸ್ಟ್‌ ಇಂಡೀಸ್‌ನ ಫ್ಯಾಬಿಯೆನ್ ಅಲೆನ್ 2, ಆ್ಯಂಡ್ರೆ ರಸೆಲ್ 1, ಒಬೆಡ್ ಮೆಕಾಯ್ 26 ರನ್‌ಗೆ 4, ಹೇಡನ್ ವಾಲ್ಷ್ 3 ವಿಕೆಟ್‌ನಿಂದ ಗಮನ ಸೆಳೆದರು. ಮೆಕಾಯ್ ಪಂದ್ಯಶ್ರೇಷ್ಠರೆನಿಸಿದರು.

For Quick Alerts
ALLOW NOTIFICATIONS
For Daily Alerts
Story first published: Saturday, July 10, 2021, 13:12 [IST]
Other articles published on Jul 10, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X