ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನಾನು ಸೆಲೆಕ್ಟರ್ ಆಗಿದ್ರೆ, ಮೊಹಮ್ಮದ್ ಶಮಿಯನ್ನು ತಂಡಕ್ಕೆ ಆಯ್ಕೆ ಮಾಡುತ್ತಿದ್ದೆ: ಕೃಷ್ಣಮಾಚಾರಿ ಶ್ರೀಕಾಂತ್‌

Kris srikkanth

ಏಷ್ಯಾಕಪ್ 2022ರ ಟೂರ್ನಮೆಂಟ್‌ಗೆ ಟೀಂ ಇಂಡಿಯಾ 15 ಸದಸ್ಯರ ತಂಡವನ್ನ ಬಿಸಿಸಿಐ ಆಯ್ಕೆ ಸಮಿತಿ ಘೋಷಣೆ ಮಾಡಿದೆ. ತಂಡ ಘೋಷಣೆಯಾದ ಬಳಿಕ ಆಟಗಾರರ ಆಯ್ಕೆ ಕುರಿತಾಗಿ ಸಾಕಷ್ಟು ಚರ್ಚೆ ಶುರುವಾಗಿದ್ದು, ಆಯ್ಕೆ ಸಮಿತಿ ವಿರುದ್ಧ ಮಾತನಾಡಿದ್ದಾರೆ.

ಟೀಂ ಇಂಡಿಯಾ ಮಾಜಿ ಆಟಗಾರ ಹಾಗೂ ಆಟಗಾರರ ಆಯ್ಕೆ ಸಮಿತಿ ಮಾಜಿ ಅಧ್ಯಕ್ಷ ಕೃಷ್ಣಮಾಚಾರಿ ಶ್ರೀಕಾಂತ್ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದು, ನಾನು ಆಯ್ಕೆ ಸಮಿತಿ ಅಧ್ಯಕ್ಷನಾಗಿದ್ರೆ, ಏಷ್ಯಾಕಪ್‌ ಸ್ಕ್ವಾಡ್‌ನಿಂದ ಮೊಹಮ್ಮದ್ ಶಮಿಯನ್ನು ಬಿಡುತ್ತಿರಲಿಲ್ಲ ಎಂದು ಹೇಳಿದ್ದಾರೆ.

ಸೋಮವಾರ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಆಗಸ್ಟ್ 27ರಿಂದ ಪ್ರಾರಂಭಗೊಳ್ಳಲಿರುವ ಏಷ್ಯಾಕಪ್‌ ಟೂರ್ನಮೆಂಟ್‌ಗೆ 15 ಸದಸ್ಯರನ್ನೊಳಗೊಂಡ ತಂಡವನ್ನು ಘೋಷಿಸಿದೆ.

15 ಸದಸ್ಯರ ಏಷ್ಯಾಕಪ್‌ ಸ್ಕ್ವಾಡ್‌

15 ಸದಸ್ಯರ ಏಷ್ಯಾಕಪ್‌ ಸ್ಕ್ವಾಡ್‌

ನಾಲ್ವರು ಸ್ಪಿನ್ನರ್ ಹಾಗೂ ಮೂವರು ಪೇಸರ್ ಒಳಗೊಂಡಂತೆ ಟೀಂ ಇಂಡಿಯಾ 15 ಸದಸ್ಯರ ತಂಡ ಘೋಷಣೆಯಾಗಿದೆ.

ರೋಹಿತ್ ಶರ್ಮಾ (ನಾಯಕ), ಕೆ.ಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ದೀಪಕ್ ಹೂಡಾ, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಯುಜವೇಂದ್ರ ಚಾಹಲ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್, ಅವೇಶ್ ಖಾನ್

ಕೇವಲ ಮೂವರು ಪೇಸರ್ಸ್ ಆಯ್ಕೆ!

ಕೇವಲ ಮೂವರು ಪೇಸರ್ಸ್ ಆಯ್ಕೆ!

ಟೀಂ ಇಂಡಿಯಾ ಆಯ್ಕೆ ಸಮಿತಿಯು ನಾಲ್ವರು ಸ್ಪಿನ್ನರ್‌ಗಳಿಗೆ ಮಣೆ ಹಾಕಿದ್ದು ಕೇವಲ ಮೂವರು ಸ್ಪಿನ್ನರ್‌ಗಳನ್ನ ಆಯ್ಕೆ ಮಾಡಿದೆ. ಭುವನೇಶ್ವರ್ ಕುಮಾರ್, ಅರ್ಷ್‌ದೀಪ್ ಸಿಂಗ್ ಮತ್ತು ಅವೇಶ್ ಖಾನ್ ಸ್ಥಾನ ಪಡೆದಿದ್ದು, ದೀಪಕ್ ಚಹಾರ್ ಸ್ಟ್ಯಾಂಡ್ ಬೈ ಪ್ಲೇಯರ್ ಆಗಿದ್ದಾರೆ. ಇಂಜ್ಯುರಿ ಕಾರಣದಿಂದ ಜಸ್ಪ್ರೀತ್ ಬುಮ್ರಾ ಮತ್ತು ಹರ್ಷಲ್ ಪಟೇಲ್ ಆಯ್ಕೆಯಾಗಿಲ್ಲ. ಆದ್ರೆ ನಾಲ್ವರು ಸ್ಪಿನ್ನರ್‌ಗಳ ಆಯ್ಕೆಯು ಅಚ್ಚರಿಗೆ ಕಾರಣವಾಗಿದೆ.

ಏಷ್ಯಾಕಪ್ 2022: ಟೀಂ ಇಂಡಿಯಾ ಸ್ಕ್ವಾಡ್ ಆಯ್ಕೆ, ಆಯ್ಕೆ ಸಮಿತಿಯ ಐದು ಎಡವಟ್ಟು!

ಮೊಹಮ್ಮದ್‌ ಶಮಿಗೆ ಏಕಿಲ್ಲ ಅವಕಾಶ?

ಮೊಹಮ್ಮದ್‌ ಶಮಿಗೆ ಏಕಿಲ್ಲ ಅವಕಾಶ?

ಟೀಂ ಇಂಡಿಯಾ ಅನುಭವಿ ವೇಗಿ ಮೊಹಮ್ಮದ್ ಶಮಿಗೆ ಟೀಂ ಇಂಡಿಯಾದಲ್ಲಿ ಅವಕಾಶ ನೀಡದೇ ಇರುವುದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಇದು ಕ್ರಿಕೆಟ್ ಅಭಿಮಾನಿಗಳು ಮತ್ತು ಕ್ರಿಕೆಟ್‌ ಪಂಡಿತರಿಗೆ ಬಿಸಿ ಬಿಸಿ ಚರ್ಚೆಗೆ ಎಡೆಮಾಡಿಕೊಟ್ಟಿದೆ.

"ನನ್ನ ತಂಡದಲ್ಲಿ ಶಮಿ ಅಕ್ಷರಶಃ ಇದ್ದರು. ನಾನು ಆಯ್ಕೆ ಸಮಿತಿಯ ಅಧ್ಯಕ್ಷನಾಗಿದ್ದರೆ, ಶಮಿ ಇರುತ್ತಿದ್ದರು ಮತ್ತು ಬಹುಶಃ ನಾನು ರವಿ ಬಿಷ್ಣೋಯ್ ಅವರನ್ನ ಆಯ್ಕೆ ಮಾಡುತ್ತಿರಲಿ್ಲ ಎಂದು ಭಾವಿಸುತ್ತೇನೆ. ಆದರೆ ನನ್ನ ತಂಡದಲ್ಲಿ ಅಕ್ಷರ್ ಪಟೇಲ್ ಗಂಭೀರ ಸ್ಪರ್ಧಿ ಎಂದು ನಾನು ಇನ್ನೂ ನಂಬುತ್ತೇನೆ. ಇದು ಅಕ್ಷರ್ ಪಟೇಲ್ ಮತ್ತು ಅಶ್ವಿನ್ ನಡುವೆ ದೊಡ್ಡ ಟಾಸ್ ಅಪ್ ಆಗುತ್ತಿತ್ತು" ಎಂದು ಸ್ಟಾರ್ ಸ್ಪೋರ್ಟ್ಸ್‌ನ 'ಫಾಲೋ ದಿ ಬ್ಲೂಸ್' ಶೋನಲ್ಲಿ ಶ್ರೀಕಾಂತ್ ಹೇಳಿದರು.

Asia Cup 2022: ಈ ಇಬ್ಬರು ವಿಕೆಟ್ ಕೀಪರ್-ಬ್ಯಾಟರ್‌ಗಳು ಆಡುವ 11ರಲ್ಲಿರುತ್ತಾರೆ; ಕಿರಣ್ ಮೋರೆ

ಸ್ಕ್ವಾಡ್ ಉತ್ತಮವಾಗಿದೆ, ಆದ್ರೆ ಶಮಿ ಇರಬೇಕಿತ್ತು ಎಂದ ಶ್ರೀಕಾಂತ್

ಸ್ಕ್ವಾಡ್ ಉತ್ತಮವಾಗಿದೆ, ಆದ್ರೆ ಶಮಿ ಇರಬೇಕಿತ್ತು ಎಂದ ಶ್ರೀಕಾಂತ್

ಟೀಂ ಇಂಡಿಯಾ ಏಷ್ಯಾಕಪ್ ಸ್ಕ್ವಾಡ್ ಉತ್ತಮವಾಗಿದೆ. ಆದ್ರೆ ಓರ್ವ ಪೇಸರ್ ಕಡಿಮೆಯಾಗಿದ್ದಾನೆ. ದೀಪಕ್ ಹೂಡ ತಂಡದಲ್ಲಿ ಆಯ್ಕೆ ಮಾಡಿರುವುದು ಖುಷಿ ತರಿಸಿದೆ. ಆದ್ರೆ ಅದೇ ವೇಳೆಯಲ್ಲಿ ಅಕ್ಷರ್ ಪಟೇಲ್‌ರನ್ನು ಹೊರಗಿಟ್ಟಿರುವುದು ಬೇಸರ ತರಿಸಿದೆ ಎಂದು ಮಾಜಿ ಆಯ್ಕೆ ಸಮಿತಿ ಅಧ್ಯಕ್ಷ ಕೃಷ್ಣಮಾಚಾರಿ ಶ್ರೀಕಾಂತ್‌ ಹೇಳಿದ್ದಾರೆ.

"ತಂಡವು ಉತ್ತಮವಾಗಿದೆ ಎಂದು ನಾನು ಭಾವಿಸುತ್ತೇನೆ ಆದರೆ ನಮಗೆ ಇನ್ನೂ ಒಬ್ಬ ಮಧ್ಯಮ ವೇಗಿ ಅಗತ್ಯವಿದೆ. ನಾವು ಒಬ್ಬ ಮಧ್ಯಮ ವೇಗಿ ಇಲ್ಲದೆ ಹೋಗುತ್ತಿದ್ದೇವೆ. ಇಬ್ಬರು ಮಣಿಕಟ್ಟಿನ ಸ್ಪಿನ್ನರ್‌ಗಳು ಚೆನ್ನಾಗಿದ್ದಾರೆ. ಅಕ್ಷರ್ ಪಟೇಲ್ ಬಗ್ಗೆ ನನಗೆ ಬೇಸರವಾಗಿದೆ. ದೀಪಕ್ ಹೂಡಾ ಅವರ ಬಗ್ಗೆ ನನಗೆ ತುಂಬಾ ಸಂತೋಷವಾಗಿದೆ. ಅವರು ಸ್ವಲ್ಪ ಬೌಲ್ ಮಾಡಬಹುದು, ಅವರು ಉತ್ತಮ ಹಿಟ್ಟರ್ ಮತ್ತು ಅವರು ಚೆಂಡಿನ ಉತ್ತಮ ಸ್ಟ್ರೈಕರ್. ದೀಪಕ್ ಹೂಡಾ ಅವರಲ್ಲಿ ನಾನು ಇಷ್ಟಪಡುವ ವಿಷಯವೆಂದರೆ ಅವನು ಚೆಂಡಿನ ಉತ್ತಮ ಸ್ಟ್ರೈಕರ್. ಅಕ್ಷರ್ ಪಟೇಲ್ ಕೂಡ ಇಲ್ಲದಿದ್ದರೆ, ಈ ತಂಡವು ಅದ್ಭುತವಾಗಿದೆ'' ಎಂದು ಕ್ರಿಸ್ ಶ್ರೀಕಾಂತ್ ಹೇಳಿದ್ದಾರೆ.

ಶಸ್ತ್ರ ಚಿಕಿತ್ಸೆ ನಂತರ ಟೆಂಪಲ್ ರನ್ ಮಾಡುತ್ತಿರುವ KL Rahul !! | *Cricket | OneIndia Kannada
ಆಗಸ್ಟ್‌ 27ರಿಂದ ಏಷ್ಯಾ ಕಪ್ ಟೂರ್ನಿ ಆರಂಭ

ಆಗಸ್ಟ್‌ 27ರಿಂದ ಏಷ್ಯಾ ಕಪ್ ಟೂರ್ನಿ ಆರಂಭ

ನಾಲ್ಕು ವರ್ಷಗಳಿಂದ ಕಾಯುತ್ತಿದ್ದ ಏಷ್ಯಾ ಕಪ್ 2022 ಟೂರ್ನಿ ಬಹುತೇಕ ಸನಿಹಗೊಂಡಿದೆ. ಈ ಮೆಗಾ ಟೂರ್ನಮೆಂಟ್ ಆಗಸ್ಟ್ 27 ರಿಂದ ಯುಎಇನಲ್ಲಿ ಆರಂಭವಾಗಲಿದೆ. ಶ್ರೀಲಂಕಾದಲ್ಲಿ ನಡೆಯಬೇಕಿದ್ದ ಏಷ್ಯಾ ಕಪ್‌ ಟೂರ್ನಿಯನ್ನು ಲಂಕಾ ಆಯೋಜಿಸಲು ವಿಫಲಗೊಂಡ ಕಾರಣ ಮೆಗಾ ಟೂರ್ನಿಗೆ ಯುಎಇಗೆ ಶಿಫ್ಟ್‌ ಆಗಿದೆ.

ಒಟ್ಟು 6 ತಂಡಗಳು ಭಾಗವಹಿಸಲಿರುವ ಈ ಟೂರ್ನಿಯಲ್ಲಿ ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ ಈಗಾಗಲೇ ಅರ್ಹತೆ ಪಡೆದಿದ್ದು, ಆರನೇ ಸ್ಥಾನಕ್ಕಾಗಿ ಅರ್ಹತಾ ಸುತ್ತಿನಲ್ಲಿ ಹಾಂಕಾಂಗ್, ಸಿಂಗಾಪುರ, ಕುವೈತ್ ಮತ್ತು ಯುಎಇ ತಂಡಗಳು ಪೈಪೋಟಿ ನಡೆಸಲಿವೆ. ಪೂರ್ವ ನಿಗದಿತ ವೇಳಾಪಟ್ಟಿಯಂತೆ, ಈ ಪಂದ್ಯಾವಳಿಯನ್ನು ಶ್ರೀಲಂಕಾದಲ್ಲಿ ನಡೆಸಬೇಕಾಗಿತ್ತು ಆದರೆ ಅಲ್ಲಿನ ರಾಜಕೀಯ ಮತ್ತು ಆರ್ಥಿಕ ಪರಿಸ್ಥಿತಿಯಿಂದಾಗಿ, ಅದನ್ನು ಮರುಭೂಮಿ ದೇಶವಾದ ಯುಎಇಗೆ ಸ್ಥಳಾಂತರಿಸಲಾಯಿತು.

Story first published: Tuesday, August 9, 2022, 14:38 [IST]
Other articles published on Aug 9, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X