ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Aus vs Pak : ಏಕೈಕ ಟಿ20 ಸರಣಿಯಲ್ಲಿ ಪಾಕ್- ಆಸಿಸ್ ಮುಖಾಮುಖಿ: ಏಕದಿನ ಸರಣಿ ಸೋಲಿಗೆ ಸೇಡು ತೀರಿಸಿಕೊಳ್ಳುತ್ತಾ ಫಿಂಚ್ ಪಡೆ!

Australia vs Pakistan T20 match: Australia looking bounce back in T20 match after ODI defeat

ಆಸ್ಟ್ರೇಲಿಯಾ ಹಾಗೂ ಪಾಕಿಸ್ತಾನ ಕ್ರಿಕೆಟ್ ತಂಡಗಳ ನಡುವಿನ ಟೆಸ್ಟ್ ಹಾಗೂ ಏಕದಿನ ಸರಣಿ ಮುಕ್ತಾಯವಾಗಿದ್ದು ಏಕೈಕ ಪಂದ್ಯದ ಟಿ20 ಸರಣಿಗೆ ಇದೀಗ ಎರಡೂ ತಂಡಗಳು ಸಜ್ಜಾಗಿದೆ. ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಮೊದಲ ಪಂದ್ಯವನ್ನು ಗೆದ್ದ ಆಸ್ಟ್ರೇಲಿಯಾ ತಂಡಕ್ಕೆ ಸರಣಿಯನ್ನು ವಶಕ್ಕೆ ಪಡೆಯುವ ಅದ್ಭುತ ಅವಕಾಶವಿತ್ತು. ಆದರೆ ಅಂತಿಮ ಎರಡು ಪಂದ್ಯಗಳಲ್ಲಿಯೂ ಬಾಬರ್ ಅಜಂ ಪಡೆ ಅದ್ಭುತ ಹೋರಾಟ ಪ್ರದರ್ಶಿಸಿದ್ದು ಆಸಿಸ್ ತಂಡವನ್ನು ಮಣಿಸಿ ಸರಣಿ ವಶಕ್ಕೆ ಪಡೆದುಕೊಂಡಿತು. ಹೀಗಾಗಿ ಈ ಸರಣಿ ಸೋಲಿಗೆ ಟಿ20 ಪಂದ್ಯವನ್ನು ಗೆದ್ದು ಸೇಡು ತೀರಿಕೊಳ್ಳುವ ಲೆಕ್ಕಾಚಾರದಲ್ಲಿದೆ ಆರೋನ್ ಫಿಂಚ್ ಪಡೆ.

ಆಸ್ಟ್ರೇಲಿಯಾ ಹಾಗೂ ಪಾಕಿಸ್ತಾನ ಎರಡು ತಂಡಗಳು ಕೂಡ ಟಿ20 ಮಾದರಿಯಲ್ಲಿ ಇತ್ತೀಚೆಗೆ ಅದ್ಭುತ ಪ್ರದರ್ಶನ ನೀಡಿದ್ದು ಕಳೆದ ನವೆಂಬರ್‌ನಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ಆಸಿಸ್ ಪಡೆ ಚಾಂಪಿಯನ್ ತಂಡವಾಗಿ ಮೆರೆದಿತ್ತು. ಇತ್ತ ಪಾಕಿಸ್ತಾನ ತಂಡದಲ್ಲಿ ಕೂಡ ಚುಟುಕು ಮಾದರಿಯಲ್ಲಿ ಅದ್ಭುತ ಪ್ರದರ್ಶನ ನೀಡುವ ಸಾಕಷ್ಟು ಪ್ರತಿಭಾವಂತ ಆಟಗಾರರಿದ್ದಾರೆ. ನಾಯಕ ಬಾಬರ್ ಅಜಂ ಅವರ ಅದ್ಭುತ ಫಾರ್ಮ್ ಕೂಡ ಪಾಕಿಸ್ತಾನ ತಂಡದ ಆತ್ಮವಿಶ್ವಾಸ ಹೆಚ್ಚಿಸಿದೆ. ಹೀಗಾಗಿ ಈ ಪಂದ್ಯದ ಕುತೂಹಲ ಹೆಚ್ಚಾಗಿದೆ.

IPL 2022: RCB vs RR ಪಂದ್ಯದ ಡ್ರೀಮ್ ಟೀಂ, ಪ್ಲೇಯಿಂಗ್ 11, ಪಿಚ್ ರಿಪೋರ್ಟ್‌IPL 2022: RCB vs RR ಪಂದ್ಯದ ಡ್ರೀಮ್ ಟೀಂ, ಪ್ಲೇಯಿಂಗ್ 11, ಪಿಚ್ ರಿಪೋರ್ಟ್‌

ಹೆಡ್ ಟು ಹೆಡ್: ಆಸ್ಟ್ರೇಲಿಯಾ ಹಾಗೂ ಪಾಕಿಸ್ತಾನ ತಂಡಗಳು ಟಿ20 ಕ್ರಿಕೆಟ್‌ನಲ್ಲಿ ಈವರೆಗೆ ಒಟ್ಟು 24 ಪಂದ್ಯಗಳಲ್ಲಿ ಮುಖಾಮುಖಿಯಾಗಿದೆ. ಇದರಲ್ಲಿ ಪಾಕಿಸ್ತಾನ ತಂಡ ಮೇಲುಗೈ ಸಾಧಿಸಿದ್ದು ಒಟ್ಟು 12 ಪಂದ್ಯಗಳಲ್ಲಿ ಗೆದ್ದಿದೆ. 10 ಪಂದ್ಯಗಳಲ್ಲಿ ಆಸ್ಟ್ರೇಲಿಯಾ ಗೆಲುವು ಸಾಧಿಸಿದ್ದು ಉಳಿದ ಎರಡು ಪಂದ್ಯಗಳು ಫಲಿತಾಂಶ ಕಂಡಿಲ್ಲ.

ಸ್ಕ್ವಾಡ್‌ಗಳು ಹೀಗಿದೆ
ಪಾಕಿಸ್ತಾನ: ಬಾಬರ್ ಅಜಮ್ (ನಾಯಕ), ಶಾದಾಬ್ ಖಾನ್, ಆಸಿಫ್ ಅಫ್ರಿದಿ, ಆಸಿಫ್ ಅಲಿ, ಫಖರ್ ಜಮಾನ್, ಹೈದರ್ ಅಲಿ, ಹಾರಿಸ್ ರೌಫ್, ಹಸನ್ ಅಲಿ, ಇಫ್ತಿಕರ್ ಅಹ್ಮದ್, ಖುಷ್ದಿಲ್ ಶಾ, ಮೊಹಮ್ಮದ್ ಹ್ಯಾರಿಸ್, ಮೊಹಮ್ಮದ್ ನವಾಜ್, ಮೊಹಮ್ಮದ್ ರಿಜ್ವಾನ್, ಮೊಹಮ್ಮದ್ ವಾಸಿಂ ಜು. ಅಫ್ರಿದಿ, ಶಹನವಾಜ್ ದಹಾನಿ, ಉಸ್ಮಾನ್

ರೋಹಿತ್ ಶರ್ಮಾ ಮುಂಬೈಗೂ ಮೊದಲೇ ಡೆಕ್ಕನ್ ಚಾರ್ಜಸ್ ಕ್ಯಾಪ್ಟನ್ ಆಗ್ಬೇಕಿತ್ತು: ಪ್ರಗ್ಯಾನ್ ಓಜಾರೋಹಿತ್ ಶರ್ಮಾ ಮುಂಬೈಗೂ ಮೊದಲೇ ಡೆಕ್ಕನ್ ಚಾರ್ಜಸ್ ಕ್ಯಾಪ್ಟನ್ ಆಗ್ಬೇಕಿತ್ತು: ಪ್ರಗ್ಯಾನ್ ಓಜಾ

RCB Saree : ಶಿರಸಿ ಮಾರಿಕಾಂಬಾ ಜಾತ್ರೆಯ ಹರಾಜಿನಲ್ಲಿ RCB ಸೀರೆ ಮಾರಾಟವಾಗಿದ್ದು ಎಷ್ಟಕ್ಕೆ?| Oneindia Kannada

ಆಸ್ಟ್ರೇಲಿಯಾ: ಆರೋನ್ ಫಿಂಚ್ (ನಾಯಕ), ಸೀನ್ ಅಬಾಟ್, ಆಶ್ಟನ್ ಅಗರ್, ಜೇಸನ್ ಬೆಹ್ರೆನ್‌ಡಾರ್ಫ್, ಅಲೆಕ್ಸ್ ಕ್ಯಾರಿ, ನಾಥನ್ ಎಲ್ಲಿಸ್, ಕ್ಯಾಮೆರಾನ್ ಗ್ರೀನ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಮಾರ್ನಸ್ ಲ್ಯಾಬುಸ್‌ಚಾಗ್ನೆ, ಬೆನ್ ಮೆಕ್‌ಡರ್ಮಾಟ್, ಕೇನ್ ರಿಚರ್ಡ್‌ಸನ್, ಮಾರ್ಕಸ್ ಸ್ಟೊಯಿನಿಸ್, ಆಡಮ್ ಝಾಂಪಾ, ಮಿಚೆಲ್.

Story first published: Tuesday, April 5, 2022, 18:03 [IST]
Other articles published on Apr 5, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X