ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆಸಿಸ್ vs ವಿಂಡೀಸ್: 4ನೇ ದಿನವೂ ಮುಂದುವರಿದ ಆಸಿಸ್ ಹಿಡಿತ: ಗೆಲುವಿನ ಸನಿಹ ಕಮ್ಮಿನ್ಸ್ ಪಡೆ

Australia vs West Indies Perth Test, 4th day Match Highlights

ಆಸ್ಟ್ರೇಲಿಯಾ ಹಾಗೂ ವೆಸ್ಟ್ ಇಂಡೀಸ್ ನಡುವಿನ ಟೆಸ್ಟ್ ಸರಣಿಯ ಮೊದಲ ಪಂದ್ಯ ಪರ್ತ್‌ನಲ್ಲಿ ನಡೆಯುತ್ತಿದೆ. ನಾಲ್ಕನೇ ದಿನದಾಟ ಮುಕ್ತಾಯವಾಗಿದ್ದು ವೆಸ್ಟ್ ಇಂಡೀಸ್ ವಿರುದ್ಧ ಆಸ್ಟ್ರೇಲಿಯಾ ತಂಡದ ಬಿಗಿ ಹಿಡಿತ ಮುಂದುವರಿದಿದೆ. ಈ ಪಂದ್ಯದಲ್ಲಿ ಎರಡನೇ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ ನೀಡಿದ ಬೃಹತ್ ಗುರಿಯನ್ನು ಬೆನ್ನಟ್ಟಿರುವ ವೆಸ್ಟ್ ಇಂಡೀಸ್ ತಂಡ ಎರಡನೇ ಇನ್ನಿಂಗ್ಸ್‌ನಲ್ಲಿ 192 ರನ್‌ಗಳನ್ನು ಗಳಿಸಿದ್ದು ಮೂರು ವಿಕೆಟ್ ಕಳೆದುಕೊಂಡಿದೆ.

ಅಂತಿಮ ದಿನದಾಟದಲ್ಲಿ ವೆಸ್ಟ್ ಇಂಡೀಸ್ ಗೆಲುವಿಗೆ 306 ರನ್‌ಗಳನ್ನು ಗಳಿಸಬೇಕಿದ್ದು 7 ವಿಕೆಟ್‌ಗಳು ವಿಂಡೀಸ್ ಕೈಯಲ್ಲಿದೆ. ನಾಯಕ ಕ್ರೇಗ್ ಬ್ರಾಥ್‌ವೇಟ್ ಶತಕ ಸಿಡಿಸಿ ಅಜೇಯವಾಗುಳಿದಿದ್ದು ಅಂತಿಮ ದಿನದಾಟದಲ್ಲಿ ಕೈಲ್ ಮೇಯರ್ಸ್ ಜೊತೆಗೆ ಬ್ಯಾಟಿಂಗ್‌ಗೆ ಇಳಿಯಲಿದ್ದಾರೆ. ಆಸಿಸ್ ಬೌಲಿಂಗ್ ಪಡೆ ಅಂತಿಮ ದಿನ ಆದಷ್ಟು ಶೀಘ್ರವಾಗಿ ಉಳಿದ 7 ವಿಕೆಟ್‌ಗಳನ್ನು ಕಬಳಿಸಿ ಗೆಲುವನ್ನಾರಿಸುವ ಉತ್ಸಾಹದಲ್ಲಿದೆ.

ಟೆಸ್ಟ್‌ನಲ್ಲಿ ಪಾಕ್ ವಿರುದ್ಧ ಇಂಗ್ಲೆಂಡ್ ಅಬ್ಬರದ ಬ್ಯಾಟಿಂಗ್: ಮೆಚ್ಚುಗೆ ಸೂಚಿಸಿದ ಪಿಸಿಬಿ ಅಧ್ಯಕ್ಷಟೆಸ್ಟ್‌ನಲ್ಲಿ ಪಾಕ್ ವಿರುದ್ಧ ಇಂಗ್ಲೆಂಡ್ ಅಬ್ಬರದ ಬ್ಯಾಟಿಂಗ್: ಮೆಚ್ಚುಗೆ ಸೂಚಿಸಿದ ಪಿಸಿಬಿ ಅಧ್ಯಕ್ಷ

ಆಸಿಸ್ ಪಡೆಯ ಭರ್ಜರಿ ಪ್ರದರ್ಶನ

ಆಸಿಸ್ ಪಡೆಯ ಭರ್ಜರಿ ಪ್ರದರ್ಶನ

ಮೊದಲ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ ತಂಡ ಮಾರ್ನಸ್ ಲ್ಯಾಬುಶೈನ್ ಹಾಗೂ ಸ್ಟೀವ್ ಸ್ಮಿತ್ ಅವರ ಅದ್ಭುತ ದ್ವಿಶತಕದ ನೆರವಿನಿಂದಾಗಿ 598 ರನ್‌ಗಳ ಬೃಹತ್ ಮೊತ್ತವನ್ನು ದಾಖಲಿಸಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತ್ತು. ಬಳಿಕ ಬ್ಯಾಟಿಂಗ್ ನಡೆಸಿದ ವೆಸ್ಟ್ ಇಂಡೀಸ್ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 283 ರನ್‌ಗಳನ್ನು ಮಾತ್ರವೇ ಗಳಿಸಿತು. ನಾಯಕ ಬ್ರಾಥ್‌ವೇಟ್ ಹಾಗೂ ಚೊಚ್ಚಲ ಪಂದ್ಯವನ್ನಾಡುತ್ತಿರುವ ಟಗೆನರೈನ್ ಚಂದರ್‌ಪಾಲ್ ಮಾತ್ರವೇ ಅರ್ಧ ಶತಕ ಸಿಡಿಸಿ ವಿಂಡೀಸ್ ಪರ ಮಿಂಚಿದರು. ಆಸ್ಟ್ರೇಲಿಯಾ ಪರವಾಗಿ ನಾಯಕ ಪ್ಯಾಟ್ ಕಮ್ಮಿನ್ಸ್ ಹಾಗೂ ಮಿಚೆಲ್ ಸ್ಟಾರ್ಕ್ ತಲಾ ಮೂರು ವಿಕೆಟ್ ಸಂಪಾದಿಸಿದ್ದಾರೆ.

ವಿಂಡೀಸ್‌ಗೆ ಬೃಹತ್ ಸವಾಲು

ವಿಂಡೀಸ್‌ಗೆ ಬೃಹತ್ ಸವಾಲು

ವೆಸ್ಟ್ ಇಂಡೀಸ್ ತಂಡವನ್ನು 283 ರನ್‌ಗಳಿಗೆ ಆಲೌಟ್ ಮಾಡಿದ ಬಳಿಕ ಆಸ್ಟ್ರೇಲಿಯಾ ಎರಡನೇ ಇನ್ನಿಂಗ್ಸ್‌ನ ಬ್ಯಾಟಿಂಗ್ ನಡೆಸಿತು. ಮೊದಲ ಇನ್ನಿಂಗ್ಸ್‌ನಲ್ಲಿ 315 ರನ್‌ಗಳ ದೊಡ್ಡ ಮುನ್ನಡೆ ಸಾಧಿಸಿರುವ ಆಸ್ಟ್ರೇಲಿಯಾ ಎರಡನೇ ಇನ್ನಿಂಗ್ಸ್‌ನಲ್ಲಿ 182 ರನ್‌ಗಳಿಸಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಮೊದಲ ಇನ್ನಿಂಗ್ಸ್‌ನಲ್ಲಿ ದ್ವಿಶತಕ ಸಿಡಿಸಿದ್ದ ಮಾರ್ನಸ್ ಲ್ಯಾಬುಶೈನ್ ಎರಡನೇ ಇನ್ನಿಂಗ್ಸ್‌ನಲ್ಲಿ ಅಜೇಯ ಶತಕ ಸಿಡಿಸಿದರು. ಈ ಮೂಲಕ ಅಂತಿಮ ಇನ್ನಿಂಗ್ಸ್‌ನಲ್ಲಿ 488 ರನ್‌ಗಳನ್ನು ಗಳಿಸುವ ಬೃಹತ್ ಸವಾಲು ನಿಗದಿಪಡಿಸಿತ್ತು.

ಅಂತಿಮ ದಿನದ ಕುತೂಹಲ

ಈ ಮೊತ್ತವನ್ನು ಬೆನ್ನಟ್ಟಿರುವ ವೆಸ್ಟ್ ಇಂಡೀಸ್ ತಂಡಕ್ಕೆ ಉತ್ತಮ ಆರಂಭ ದೊರೆಯಿತು.ಟಗೆನರೈನ್ ಚಂದರ್ಪಾಲ್ ಹಾಗೂ ಬ್ರಾಥ್‌ವೇಟ್ ಜೋಡಿ ಮೊದಲ ವಿಕೆಟ್‌ಗೆ 116 ರನ್‌ಗಳ ಜೊತೆಯಾಟ ನೀಡಿದರು. ಆದರೆ ಬಳಿಕ ಬಂದ ಶಮರ್ ಬ್ರೂಕ್ಸ್ ಹಾಗೂ ಬ್ಲಾಕ್‌ವುಡ್ ಅವರಿಂದ ದೊಡ್ಡ ಮೊತ್ತದ ಕೊಡುಗೆ ಬರಲಿಲ್ಲ. ಸದ್ಯ ಕೈಲ್ ಮೇಯರ್ಸ್ ಬ್ರಾತ್‌ವೆಟ್‌ಗೆ ಸಾಥ್ ನೀಡುತ್ತಿದ್ದು ಅಂತಿಮ ದಿನದಾಟದಲ್ಲಿ ಈ ಜೋಡಿಯ ಪ್ರದರ್ಶನ ನಿರ್ಣಾಯಕವಾಗಿರಲಿದೆ.

ಇತ್ತಂಡಗಳ ಆಡುವ ಬಳಗ

ಇತ್ತಂಡಗಳ ಆಡುವ ಬಳಗ

ಆಸ್ಟ್ರೇಲಿಯಾ ಆಡುವ ಬಳಗ: ಉಸ್ಮಾನ್ ಖವಾಜಾ, ಡೇವಿಡ್ ವಾರ್ನರ್, ಮಾರ್ನಸ್ ಲ್ಯಾಬುಸ್ಚಾಗ್ನೆ, ಸ್ಟೀವನ್ ಸ್ಮಿತ್, ಟ್ರಾವಿಸ್ ಹೆಡ್, ಕ್ಯಾಮೆರಾನ್ ಗ್ರೀನ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಪ್ಯಾಟ್ ಕಮ್ಮಿನ್ಸ್ (ನಾಯಕ), ಮಿಚೆಲ್ ಸ್ಟಾರ್ಕ್, ನಾಥನ್ ಲಿಯಾನ್, ಜೋಶ್ ಹ್ಯಾಜಲ್ವುಡ್
ಬೆಂಚ್: ಸ್ಕಾಟ್ ಬೋಲ್ಯಾಂಡ್, ಮಾರ್ಕಸ್ ಹ್ಯಾರಿಸ್

ವೆಸ್ಟ್ ಇಂಡೀಸ್ ಆಡುವ ಬಳಗ: ಕ್ರೈಗ್ ಬ್ರಾಥ್‌ವೈಟ್ (ನಾಯಕ), ಟಗೆನರೈನ್ ಚಂದ್ರಪಾಲ್, ಎನ್‌ಕ್ರುಮಾ ಬೊನ್ನರ್, ಜರ್ಮೈನ್ ಬ್ಲಾಕ್‌ವುಡ್, ರೋಸ್ಟನ್ ಚೇಸ್, ಕೈಲ್ ಮೇಯರ್ಸ್, ಜೇಸನ್ ಹೋಲ್ಡರ್, ಜೋಶುವಾ ಡಾ ಸಿಲ್ವಾ (ವಿಕೆಟ್ ಕೀಪರ್), ಅಲ್ಜಾರಿ ಜೋಸೆಫ್, ಕೆಮರ್ ರೋಚ್, ಜೇಡನ್ ಸೀಲ್ಸ್, ಶಮರ್ ಬ್ರೂಕ್ಸ್
ಬೆಂಚ್: ಡೆವೊನ್ ಥಾಮಸ್, ರೇಮನ್ ರೀಫರ್, ಆಂಡರ್ಸನ್ ಫಿಲಿಪ್

Story first published: Saturday, December 3, 2022, 16:17 [IST]
Other articles published on Dec 3, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X