1095 ದಿನಗಳ ನಂತರ ತವರು ನೆಲದಲ್ಲಿ ಆಡುತ್ತಿದೆ ಚೆನ್ನೈ

Posted By:

ಚೆನ್ನೈ, ಏಪ್ರಿಲ್ 10: ಬರೋಬ್ಬರಿ 1095 ದಿನಗಳ ನಂತರ ಚೆನ್ನೈ ಸೂಪರ್ ಕಿಂಗ್ಸ್ ತಂಡ ಚೆನ್ನೈನಲ್ಲಿ ಐಪಿಎಲ್ ಪಂದ್ಯ ಆಡುತ್ತಿದೆ.

ಬೆಟ್ಟಿಂಗ್ ಹಗರಣದಿಂದಾಗಿ ಎರಡು ವರ್ಷ ನಿಷೇಧಕ್ಕೆ ಒಳಗಾಗಿದ್ದ ಚೆನ್ನೈ ತಂಡವು ತವರು ನೆಲದಲ್ಲಿ ತನ್ನ ಕೊನೆಯ ಪಂದ್ಯವನ್ನು ಮೇ 10, 2015ರಂದು ಆಡಿತ್ತು.

ಇಂದು (ಏಪ್ರಿಲ್ 10)ರಂದು ಚೆನ್ನೈನ ಚಿದಂಬರಂ ಸ್ಟೇಡಿಯಂನಲ್ಲಿ ಕೊತ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಎದುರಿಸಲಿದೆ. ಐಪಿಎಲ್‌ನಲ್ಲಿ ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಚೆನ್ನೈ ತಂಡ ತವರಿನ ಅಭಿಮಾನಿಗಳ ಎರಡು ವರ್ಷದ ಕಾಯುವಿಕೆಗೆ ಗೆಲುವಿನಿಂದ ಋಣ ತೀರಿಸಲು ಶತಪ್ರಯತ್ನ ಮಾಡಲಿದ್ದಾರೆ.

ಇತ್ತಂಡಗಳು ಈಗಾಗಲೇ ಒಂದೊಂದು ಪಂದ್ಯ ಆಡಿದ್ದು, ಎರಡೂ ಪಂದ್ಯಗಳು ಜಯಗಳಿಸಿವೆ. ಮೇಲ್ನೋಟಕ್ಕೆ ಚೆನ್ನೈ ತಂಡ ಹೆಚ್ಚು ಶಕ್ತವಾಗಿ ಅನುಭವಯುಕ್ತವಾಗಿ ಕಾಣುತ್ತಿದೆ ಆದರೂ, ಕೆಕೆಆರ್ ತಂಡ ಯುವ ಮತ್ತು ಪ್ರತಿಭಾನ್ವಿತ ತಂಡವಾಗಿದೆ.

ಚೆನ್ನೈ ತಂಡ ಫೇವರೇಟ್

ಚೆನ್ನೈ ತಂಡ ಫೇವರೇಟ್

ಚೆನ್ನೈ ತಂಡವು ತವರಿನಲ್ಲಿ ಆಡಿರುವ ಶೇ.75 ಪಂದ್ಯಗಳನ್ನು ಗೆದ್ದಿದ್ದು, ಇಂದೂ ಸಹ ಗೆಲ್ಲುವ ಫೇವರೇಟ್ ತಂಡ ಅದೇ ಆಗಿದೆ. ಇನ್ನೊಂದು ಕಡೆ ತಮಿಳುನಾಡಿನ ಆಟಗಾರರೇ ಆಗಿರುವ ದಿನೇಶ್ ಕಾರ್ತಿಕ್ ಕೆಕೆಆರ್ ತಂಡವನ್ನು ಮುನ್ನಡೆಸಲಿದ್ದು, ಚೆನ್ನೈ ಪಿಚ್‌ನ ಮರ್ಮ ಚೆನ್ನಾಗಿಯೇ ಅರಿತಿದ್ದಾರೆ, ಹಾಗಾಗಿ ಉತ್ತಮ ಹಣಾಹಣಿಯ ಪಂದ್ಯವನ್ನೇ ನಿರೀಕ್ಷಿಸಬಹುದಾಗಿದೆ.

ಚೆನ್ನೈಗೆ ನರೇನ್ ಚಿಂತೆ

ಚೆನ್ನೈಗೆ ನರೇನ್ ಚಿಂತೆ

ಚೆನ್ನೈ ತಂಡದ ಬ್ಯಾಟಿಂಗ್ ಬಲ ಉತ್ತಮವಾಗಿದೆಯಾದರೂ ಕೆಕೆಆರ್‌ನ 'ಮಿಸ್ಟರಿ ಬೌಲರ್‌' ಸುನಿಲ್ ನರೇನ್ ಅವರ ಭಯ ಅವರನ್ನು ಕಾಡುತ್ತಿದೆ. ಕಳೆದ ಆರ್‌ಸಿಬಿ ಪಂದ್ಯದಲ್ಲಿ ಸುನಿಲ್ ಅವರು ಬಾಲ್‌ನಿಂದ ಮಾತ್ರವಲ್ಲದೆ ಬ್ಯಾಟಿಂಗ್‌ನಲ್ಲಿಯೂ ಅತ್ಯುತ್ತಮ ಪ್ರದರ್ಶನ ತೋರಿ ಪಂದ್ಯ ಗೆಲ್ಲಿಸಿಕೊಟ್ಟಿದ್ದರು. ಧೋನಿ ಅಂತೂ ನರೇನ್‌ ಅವರ ಬೌಲಿಂಗ್‌ನಲ್ಲಿ 5 ವರ್ಷದಲ್ಲಿ ಗಳಿಸಿರುವುದು ಕೇವಲ 12ರನ್ ಅಷ್ಟೆ.

ಕೆಕೆಆರ್‌ ವಿರುದ್ಧ ರೈನಾ ಸರಾಸರಿ

ಕೆಕೆಆರ್‌ ವಿರುದ್ಧ ರೈನಾ ಸರಾಸರಿ

ಕೆಕೆಆರ್ ತಂಡದ ವಿರುದ್ಧ ಚೆನ್ನೈ ಸುರೇಶ್ ರೈನಾ ಅವರು ಅತ್ಯುತ್ತಮ ಆಟ ಆಡಿದ್ದು, ಅದೊಂದೆ ತಂಡದ ವಿರುದ್ಧ ಅವರು 8 ಅರ್ಧಶತಕ ಮತ್ತು ಒಂದು ಶತಕ ಗಳಿಸಿದ್ದಾರೆ ಅದೂ ಕೇವಲ 20 ಪಂದ್ಯಗಳಲ್ಲಿ, ಇಂದು ಅವರು ಸಿಡಿದು ನಿಂತರೆ ಪಂದ್ಯ ಚೆನ್ನೈ ಪಾಲಾಗುತ್ತದೆ.

ಈ ಹಿಂದೆ ಏನಾಗಿತ್ತು

ಈ ಹಿಂದೆ ಏನಾಗಿತ್ತು

ಕೆಕೆಆರ್ ತಂಡದ ವಿರುದ್ಧ ಚೆನ್ನೈ ಹೆಚ್ಚು ಬಾರಿ ಗೆದ್ದಿದೆ. ಚಿದಂಬರಂ ಅಂಗಳದಲ್ಲಿ ಇವೆರಡು ತಂಡಗಳು ಆಡಿರುವ 7 ಪಂದ್ಯಗಳಲ್ಲಿ 5 ರಲ್ಲಿ ಚೆನ್ನೈ ಗೆದ್ದಿದ್ದರೆ 2 ಬಾರಿ ಕೊಲ್ಕತ್ತ ಗೆದ್ದಿದೆ.

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Tuesday, April 10, 2018, 17:23 [IST]
Other articles published on Apr 10, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ