ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಚೇತೇಶ್ವರ ಪೂಜಾರ 2.0: ತನ್ನ ವೇಗದ ಬ್ಯಾಟಿಂಗ್‌ಗೆ CSK ಕಾರಣ ಎಂದ ಪೂಜಾರ

Cheteshwar Pujara

ಚೇತೇಶ್ವರ ಪೂಜಾರ ಸಾಮಾನ್ಯವಾಗಿ ರಕ್ಷಣಾತ್ಮಕ ಆಟಗಾರ ಎಂದು ಹೇಳಲಾಗುತ್ತದೆ. ಭಾರತದ ಟೆಸ್ಟ್ ತಂಡದಲ್ಲಿ ಮಾತ್ರ ಸಕ್ರಿಯವಾಗಿರುವ ಪೂಜಾರ, ವಿಕೆಟ್ ಕಳೆದುಕೊಳ್ಳದೆ ಸುದೀರ್ಘ ಕಾಲ ಕ್ರೀಸ್‌ನಲ್ಲಿ ನಿಂತು ಆಡುವ ಆಟಗಾರ. ಭಾರತ ಕ್ರಿಕೆಟ್ ತಂಡದ ಗೋಡೆ ಖ್ಯಾತಿಯ ರಾಹುಲ್ ದ್ರಾವಿಡ್ ನಿವೃತ್ತಿಯ ಬಳಿಕ ಟೆಸ್ಟ್ ಫಾರ್ಮೆಟ್‌ನಲ್ಲಿ 3ನೇ ಕ್ರಮಾಂಕದಲ್ಲಿ ಹೆಚ್ಚು ಕಾಲ ಕ್ರೀಸ್‌ನಲ್ಲಿ ನಿಂತು ಆಡುವ ಸಾಮರ್ಥ್ಯ ಈ ಪೂಜಾರಗಿದೆ.

ಭಾರತದ ಶ್ರೇಷ್ಠ ಬ್ಯಾಟ್ಸ್‌ಮನ್ ಚೇತೇಶ್ವರ ಪೂಜಾರ ಸಾಮಾನ್ಯವಾಗಿ ಸ್ಲೋ ಬ್ಯಾಟ್ಸ್‌ಮನ್ ಆಗಿರುವ ಕಾರಣ, ಈ ಹಿಂದೆ ಭಾರತದ ಸೀಮಿತ ಓವರ್‌ಗಳಲ್ಲಿ ಹೆಚ್ಚಿನ ಅವಕಾಶವನ್ನು ನೀಡಲಾಗಿಲ್ಲ. ಹೀಗಾಗಿಯೇ ಇವರು ಐಪಿಎಲ್‌ನಲ್ಲೂ ಕೆಲವು ಪಂದ್ಯಗಳನ್ನು ಆಡುವಲ್ಲಿ ಯಶಸ್ವಿಯಾಗಿದ್ದಾರೆ.

ಸೀಮಿತ ಓವರ್‌ಗಳಲ್ಲಿ ಮಿಂಚದ ಪೂಜಾರಗೆ ಹಿನ್ನಡೆ

ಸೀಮಿತ ಓವರ್‌ಗಳಲ್ಲಿ ಮಿಂಚದ ಪೂಜಾರಗೆ ಹಿನ್ನಡೆ

ಸೀಮಿತ ಓವರ್‌ಗಳಲ್ಲಿ ಪೂಜಾರ ಅವರನ್ನು ಭರವಸೆಯ ಆಟಗಾರ ಎಂದು ಬಣ್ಣಿಸಲು ಸಾಧ್ಯವಿಲ್ಲ. ಆದ್ರೆ ಇಷ್ಟು ವರ್ಷಗಳ ಎಲ್ಲಾ ಲೆಕ್ಕಾಚಾರಗಳನ್ನು ಈ ವರ್ಷ ಪೂಜಾರ ಬುಡಮೇಲು ಮಾಡಿದ್ದಾರೆ. ಇಂಗ್ಲೆಂಡ್‌ನ ದೇಶೀಯ ಕ್ರಿಕೆಟ್ ಟೂರ್ನಮೆಂಟ್ ರಾಯಲ್ ಲಂಡನ್ ಏಕದಿನ ಕಪ್‌ನಲ್ಲಿ ಪೂಜಾರ ಬ್ಯಾಟಿಂಗ್ ಈ ಎಲ್ಲ ಕಲ್ಪನೆಗಳನ್ನು ತಲೆಕೆಳಗಾಗಿ ಮಾಡಿದೆ.

ಶತಕಗಳ ಸರಮಾಲೆ ತೊಟ್ಟ ಚೇತೇಶ್ವರ ಪೂಜಾರ

ಶತಕಗಳ ಸರಮಾಲೆ ತೊಟ್ಟ ಚೇತೇಶ್ವರ ಪೂಜಾರ

ಶತಕ ಹಿಂದೆ ಶತಕ ಸಿಡಿಸುವ ಮೂಲಕ ಯಶಸ್ಸಿನ ಆಟವಾಡಿದ ಪೂಜಾರ 9 ಪಂದ್ಯಗಳಿಂದ 624 ರನ್ ಗಳಿಸಿದ್ದಾರೆ, ಇದರಲ್ಲಿ ಮೂರು ಶತಕಗಳು ಮತ್ತು ಎರಡು ಅರ್ಧಶತಕಗಳು ಸೇರಿವೆ. ಪೂಜಾರ ಬ್ಯಾಟಿಂಗ್ ಸರಾಸರಿ 90ಕ್ಕಿಂತ ಹೆಚ್ಚಿದೆ. ಪೂಜಾರ ಅವರ ಪ್ರಮುಖ ಪ್ರದರ್ಶನಗಳು 107, 174, 49, 66 ಮತ್ತು 132 ಆಗಿತ್ತು. ಈ ಎಲ್ಲಾ ಪಂದ್ಯಗಳಲ್ಲಿ ಪೂಜಾರ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಭಾರತದ ಏಕದಿನ ತಂಡಕ್ಕೆ ಪರಿಗಣಿಸಬಹುದಾಗಿದ್ದಂತಹ ಬ್ಯಾಟಿಂಗ್ ಪ್ರದರ್ಶನವನ್ನು ಪೂಜಾರ ತೋರಿದ್ದಾರೆ ಎನ್ನಬಹುದು.

ಟಿ20 ವಿಶ್ವಕಪ್‌ಗೆ ಭಾರತ ತಂಡದಲ್ಲಿ ಬುಮ್ರಾಗೆ ಸರಿಸಮ ಈತ‌, ಆಯ್ಕೆಯಾಗದೇ ಇರುವುದು ದುರಂತ: ಮ್ಯಾಥ್ಯೂ ಹೇಡನ್

ಪೂಜಾರ ಬ್ಯಾಟಿಂಗ್ ಶೈಲಿ ಬದಲಾವಣೆಗೆ ಸಿಎಸ್‌ಕೆ ಕಾರಣ?

ಪೂಜಾರ ಬ್ಯಾಟಿಂಗ್ ಶೈಲಿ ಬದಲಾವಣೆಗೆ ಸಿಎಸ್‌ಕೆ ಕಾರಣ?

ಪೂಜಾರ ಅವರು ತಮ್ಮ ಸ್ಫೋಟಕ ಪ್ರದರ್ಶನದಿಂದ CSK ಅವರಿಗೆ ಹೇಗೆ ಸಹಾಯ ಮಾಡಿದರು ಎಂಬುದರ ಕುರಿತು ಈಗ ಬಿಚ್ಚಿಟ್ಟಿದ್ದಾರೆ. ಪೂಜಾರ ಅವರನ್ನು ಐಪಿಎಲ್‌ನಲ್ಲಿ ಸಿಎಸ್‌ಕೆ ಆಯ್ಕೆ ಮಾಡಿತ್ತು ಆದರೆ ಆಡಲಿಲ್ಲ. "ಇದು ನನಗೆ ವಿಭಿನ್ನ ಆಟವಾಗಿದೆ. ಅದರಲ್ಲಿ ಯಾವುದೇ ಸಂದೇಹವಿಲ್ಲ. ಅದು ಸಮತಟ್ಟಾದ ಪಿಚ್ ಆಗಿತ್ತು. ಆದ್ದರಿಂದ, ಹೆಚ್ಚಿನ ಸ್ಟ್ರೈಕ್ ರೇಟ್‌ನಲ್ಲಿ ಆಡುವುದು ಅವಶ್ಯಕ'' ಎಂದು ಪೂಜಾರ ಹೇಳಿದರು.

ಭಾರತ ಈ ಟೂರ್ನಿ ಗೆಲ್ಲದಿದ್ರೆ, ಟಿ20 ವಿಶ್ವಕಪ್ ಗೆಲ್ಲಲ್ಲ: ಗೌತಮ್ ಗಂಭೀರ್‌ ಶಾಕಿಂಗ್ ಹೇಳಿಕೆ

ಸ್ಫೋಟಕ ಬ್ಯಾಟಿಂಗ್ ಕುರಿತು ಬಿಚ್ಚಿಟ್ಟ ಪೂಜಾರ

ಸ್ಫೋಟಕ ಬ್ಯಾಟಿಂಗ್ ಕುರಿತು ಬಿಚ್ಚಿಟ್ಟ ಪೂಜಾರ

''ಕಳೆದ ಐಪಿಎಲ್‌ನಲ್ಲಿ ನಾನು ಸಿಎಸ್‌ಕೆ ಭಾಗವಾಗಿದ್ದೆ. ಆದರೆ ಒಂದೇ ಒಂದು ಪಂದ್ಯ ಆಡುವ ಅವಕಾಶ ಸಿಕ್ಕಿರಲಿಲ್ಲ. ಇದರೊಂದಿಗೆ ನಾನು ಸೀಮಿತ ಓವರ್‌ಗಳ ಪಂದ್ಯಗಳಲ್ಲಿ ಆಡಲು ಬಯಸುತ್ತೇನೆ ಎಂದು ಹೇಳಿಕೊಂಡೆ. ಸೀಮಿತ ಓವರ್‌ಗಳಲ್ಲಿ ನಾನು ಅದನ್ನು ಸಾಬೀತುಪಡಿಸಬೇಕಾಗಿತ್ತು'' ಎಂದು ಪೂಜಾರ ಹೇಳಿದರು. ಭಾರತದ ಟೆಸ್ಟ್ ಪಟುವಾಗಿದ್ದರೂ, ಸೀಮಿತ ಓವರ್‌ಗಳಲ್ಲಿ ದ್ರಾವಿಡ್‌ನಷ್ಟು ದೊಡ್ಡ ವೃತ್ತಿಜೀವನವನ್ನು ರಚಿಸಲು ಪೂಜಾರಗೆ ಸಾಧ್ಯವಾಗಲಿಲ್ಲ.

ಇತ್ತೀಚಿನ ದಿನಗಳಲ್ಲಿ ಪೂಜಾರ ಅವರ ಸ್ಥಿರತೆಯ ವಿರುದ್ಧ ದೊಡ್ಡ ಪ್ರಶ್ನೆ ಎದ್ದಿದೆ. ಕಳಪೆ ಫಾರ್ಮ್ ಪೂಜಾರ ಟೆಸ್ಟ್ ತಂಡದಲ್ಲಿ ಸ್ಥಾನ ಕಳೆದುಕೊಂಡರು. ಆದರೆ ಪೂಜಾರ ಕೌಂಟಿ ಕ್ರಿಕೆಟ್ ಆಡುವ ಮೂಲಕ ಭರ್ಜರಿ ಪುನರಾಗಮನ ಮಾಡಿದರು. ಶತಕ ಹಾಗೂ ದ್ವಿಶತಕ ಬಾರಿಸಿದ ಪೂಜಾರ ಹಿಂದೆಂದಿಗಿಂತಲೂ ಬಲಿಷ್ಠವಾಗಿ ಭಾರತದ ಟೆಸ್ಟ್ ತಂಡಕ್ಕೆ ಮರಳಿದರು.


"ನಾನು ರಾಯಲ್ ಲಂಡನ್ ಕಪ್‌ಗೆ ಮುಂಚಿತವಾಗಿ ತಯಾರಿ ನಡೆಸುತ್ತಿದ್ದೆ. ಶಾಟ್‌ಗಳ ಬಗ್ಗೆ ಕೋಚ್ ಜೊತೆ ಚರ್ಚೆ ನಡೆಸಿದ್ದೇನೆ. ಅಭ್ಯಾಸದ ಸಮಯದಲ್ಲಿ ನಾನು ದೊಡ್ಡ ಹೊಡೆತಗಳನ್ನು ಆಡಲು ಪ್ರಯತ್ನಿಸಿದೆ. ಇದನ್ನು ನೋಡಿದ ಕೋಚ್ ಸಾಕಷ್ಟು ಬೆಂಬಲ ನೀಡಿ ಆತ್ಮವಿಶ್ವಾಸ ಹೆಚ್ಚಿಸಿದರು. ಇನ್ನೂ ಕೆಲವು ದುರ್ಬಲ ಹೊಡೆತಗಳನ್ನು ಸುಧಾರಿಸಲು ಪ್ರಯತ್ನಿಸುತ್ತಿದ್ದಾರೆ. ಇದು ನನಗೆ ಹೆಚ್ಚು ಸಹಾಯಕವಾಯಿತು. ಸೀಮಿತ ಓವರ್‌ಗಳಲ್ಲಿಯೂ ಮಿಂಚಬಲ್ಲೆ ಎಂಬ ವಿಶ್ವಾಸ ಮೂಡಿಸಿದೆ'' ಎಂದು ಪೂಜಾರ ಸೇರಿಸಿದರು.

ಪೂಜಾರ ಭಾರತ ಪರ 96 ಟೆಸ್ಟ್‌ಗಳಲ್ಲಿ 6792 ರನ್ ಗಳಿಸಿದ್ದಾರೆ. ಇದರಲ್ಲಿ 18 ಶತಕಗಳು, ಮೂರು ದ್ವಿಶತಕಗಳು ಮತ್ತು 33 ಅರ್ಧಶತಕಗಳು ಸೇರಿವೆ. ಗರಿಷ್ಠ ಸ್ಕೋರ್ 206 ರನ್ ಆಗಿದೆ.

Story first published: Sunday, September 18, 2022, 17:50 [IST]
Other articles published on Sep 18, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X