ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನಿವೃತ್ತಿ ಘೋಷಿಸಿದ ಮಾಲಿಂಗಗೆ ಕೃತಜ್ಞತೆ ಸಲ್ಲಿಸಿದ ಕ್ರಿಕೆಟ್ ಜಗತ್ತು

Cricketing Fraternity Reacts to Lasith Malingas retirement from all formats of the cricket

ಈ ಹಿಂದೆ ಏಕದಿನ, ಟೆಸ್ಟ್ ಮತ್ತು ಫ್ರಾಂಚೈಸಿ ಲೀಗ್ ಕ್ರಿಕೆಟ್‍ಗಳಿಗೆ ನಿವೃತ್ತಿಯನ್ನು ಘೋಷಿಸಿದ್ದ ಶ್ರೀಲಂಕಾದ ಖ್ಯಾತ ವೇಗಿ ಲಸಿತ್ ಮಾಲಿಂಗ ಇಂದು ( ಸೆಪ್ಟೆಂಬರ್ 14 ) ಟಿ ಟ್ವೆಂಟಿ ಕ್ರಿಕೆಟ್‍ಗೆ ನಿವೃತ್ತಿಯನ್ನು ಘೋಷಿಸುವುದರ ಮೂಲಕ ಎಲ್ಲಾ ಮಾದರಿಯ ಕ್ರಿಕೆಟ್‍ನಿಂದ ದೂರ ಸರಿದಿದ್ದಾರೆ.

38 ವರ್ಷ ಹರೆಯದ ಲಸಿತ್ ಮಾಲಿಂಗ ಶ್ರೀಲಂಕಾ ತಂಡದ ಪರ 17 ವರ್ಷಗಳ ಕಾಲ ಅಂತರರಾಷ್ಟ್ರೀಯ ಕ್ರಿಕೆಟ್ ಅಡಿದ್ದಾರೆ. 2011 ರಲ್ಲಿಯೇ ಅಂತರರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‍ಗೆ ನಿವೃತ್ತಿಯನ್ನು ಘೋಷಣೆ ಮಾಡಿದ್ದ ಲಸಿತ್ ಮಾಲಿಂಗ 2019ರಲ್ಲಿ ಏಕದಿನ ಕ್ರಿಕೆಟ್‍ಗೂ ವಿದಾಯವನ್ನು ಘೋಷಿಸಿದ್ದರು. ಹೀಗೆ ಟೆಸ್ಟ್ ಮತ್ತು ಏಕದಿನ ಕ್ರಿಕೆಟ್‍ನಿಂದ ನಿವೃತ್ತಿಯನ್ನು ಘೋಷಿಸಿದ್ದ ಲಸಿತ್ ಮಲಿಂಗಾ ಟಿ ಟ್ವೆಂಟಿ ಕ್ರಿಕೆಟ್‍ನಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಆದರೆ ಇತ್ತೀಚೆಗೆ ಮುಂಬರಲಿರುವ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಗೆ ಶ್ರೀಲಂಕಾ ತಂಡ ಪ್ರಕಟವಾಗಿದ್ದು ಲಂಕಾದ ಹಿರಿಯ ಕ್ರಿಕೆಟಿಗನಾಗಿರುವ ಲಸಿತ್ ಮಾಲಿಂಗಗೆ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಗೆ ಪ್ರಕಟವಾಗಿರುವ ಶ್ರೀಲಂಕಾ ತಂಡದಲ್ಲಿ ಅವಕಾಶವನ್ನು ನೀಡದೆ ತಂಡದಿಂದ ಹೊರಗಿಡಲಾಗಿದೆ.

ಹೀಗೆ ಮುಂಬರಲಿರುವ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಗೆ ಪ್ರಕಟವಾಗಿರುವ ಶ್ರೀಲಂಕಾ ತಂಡದಲ್ಲಿ ಅವಕಾಶ ಸಿಗದ ಲಸಿತ್ ಮಾಲಿಂಗ ಸೆಪ್ಟೆಂಬರ್ 14ರ ಮಂಗಳವಾರದಂದು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಎಲ್ಲಾ ಮಾದರಿಯ ಕ್ರಿಕೆಟ್‍ಗೆ ನಿವೃತ್ತಿಯನ್ನು ಘೋಷಿಸುತ್ತಿರುವುದಾಗಿ ಟ್ವೀಟ್ ಮಾಡುವ ಮೂಲಕ ತಿಳಿಸಿದರು.

ಹೀಗೆ 17 ವರ್ಷಗಳ ಕಾಲ ಅಂತರರಾಷ್ಟ್ರೀಯ ಕ್ರಿಕೆಟ್ ಮತ್ತು ಫ್ರಾಂಚೈಸಿ ಕ್ರಿಕೆಟ್ ಲೀಗ್‌ಗಳಲ್ಲಿ ವಿವಿಧ ತಂಡಗಳ ಪರ ಆಡಿದ್ದ ದಿಗ್ಗಜ ಕ್ರಿಕೆಟಿಗ ಲಸಿತ್ ಮಾಲಿಂಗಗೆ ಹಲವಾರು ಕ್ರಿಕೆಟಿಗರು ಮತ್ತು ಕ್ರಿಕೆಟ್ ಅಭಿಮಾನಿಗಳು ಟ್ವಿಟರ್ ಖಾತೆಗಳಲ್ಲಿ ಟ್ವೀಟ್ ಮಾಡುವ ಮೂಲಕ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ. ಹೀಗೆ ಲಸಿತ್ ಮಾಲಿಂಗ ನಿವೃತ್ತಿಯನ್ನು ಘೋಷಿಸಿದ ನಂತರ ಹಲವಾರು ಕ್ರಿಕೆಟಿಗರು ಕೃತಜ್ಞತೆ ಸಲ್ಲಿಸಿದ್ದು ಅವುಗಳ ಒಂದು ಕಿರು ನೋಟ ಈ ಕೆಳಕಂಡಂತಿದೆ ನೋಡಿ..

ಮಾಲಿಂಗ ನಿವೃತ್ತಿ ಘೋಷಣೆ ಮಾಡಿದ ಬಳಿಕ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಮುಂಬೈ ಇಂಡಿಯನ್ಸ್ "ಬ್ಯಾಟ್ಸ್‌ಮನ್‌ಗಳ ಕಾಲ್ಬೆರಳನ್ನು ಪುಡಿ ಮಾಡುವುದರಿಂದ ಹಿಡಿದು ಭುಜದ ಮೇಲೆ ಕುಳ್ಳಿರಿಸಿಕೊಳ್ಳುವವರೆಗೆ ಲಸಿತ್ ಮಾಲಿಂಗ ಟಿ20 ಕ್ರಿಕೆಟ್‌ನಲ್ಲಿ ಎಲ್ಲವನ್ನೂ ಸಾಧಿಸಿದ್ದಾರೆ. ಅವರೀಗ ಟಿ20 ಕ್ರಿಕೆಟ್‌ಗೆ ನಿವೃತ್ತಿಯನ್ನು ಘೋಷಿಸಿದ್ದಾರೆ. ಈ ಸಂದರ್ಭದಲ್ಲಿ ನಾವು ಕೇವಲ ಮೂರು ಶಬ್ಧಗಳನ್ನು ಮಾತ್ರವೇ ಹೇಳುತ್ತೇವೆ. ಧನ್ಯವಾದಗಳು ನಿಮಗೆ ಮಾಲಿಂಗ" ಎಂದು ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದೆ.

ಭಾರತದ ಮಾಜಿ ಕ್ರಿಕೆಟಿಗ ಪ್ರಗ್ಯಾನ್ ಓಜಾ ಕೂಡ ಲಸಿತ್ ಮಲಿಂಗಾ ನಿವೃತ್ತಿ ಕುರಿತು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿದ್ದು, ಲಸಿತ್ ಮಾಲಿಂಗರ ಮುಂದಿನ ಯೋಜನೆಗಳಿಗೆ ಶುಭವಾಗಲಿ ಎಂದು ಹಾರೈಸಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್ ಫ್ರಾಂಚೈಸಿಗಳಲ್ಲಿ ಒಂದಾದ ಚೆನ್ನೈ ಸೂಪರ್ ಕಿಂಗ್ಸ್ ಕೂಡಾ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಲಸಿತ್ ಮಾಲಿಂಗ ನಿವೃತ್ತಿಯ ಕುರಿತು ಟ್ವೀಟ್ ಮಾಡಿದ್ದು ಇಷ್ಟು ವರ್ಷಗಳ ಕಾಲ ಕ್ರಿಕೆಟ್ ಸೇವೆ ಸಲ್ಲಿಸಿದ ಲಸಿತ್ ಮಾಲಿಂಗಗೆ ಕೃತಜ್ಞತೆಯನ್ನು ಸಲ್ಲಿಸಿದೆ.

IPL ನಲ್ಲಿ ಪಾಕ್ ಆಟಗಾರರಿಗೆ ಸಿಕ್ಕ ಸಕ್ಸಸ್ ವಿರಾಟ್ ಮತ್ತು ABD ಗೆ‌ ಇನ್ನೂ ಸಿಕ್ಕಿಲ್ಲ | Oneindia Kannada

ಬೆನ್ನ ಹಿಂದೆ 99, ಮೈದಾನದಲ್ಲಿ 100ಕ್ಕೆ 100 ಪ್ರದರ್ಶನವನ್ನು ನೀಡುತ್ತಿದ್ದ ಆಟಗಾರ, ತನ್ನ ಬಲಿಷ್ಠ ಯಾರ್ಕರ್ ಎಸೆತಗಳಿಂದ ಯಾರ್ಕರ್ ಕಿಂಗ್ ಎಂದು ಕರೆಸಿಕೊಳ್ಳುತ್ತಿದ್ದ ಲಸಿತ್ ಮಾಲಿಂಗ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿಯನ್ನು ಘೋಷಿಸಿದ್ದು ಕ್ರಿಕೆಟ್ ಜಗತ್ತು ಅವರ ಭಯಂಕರ ಯಾರ್ಕರ್ ಎಸೆತಗಳನ್ನು ಮಿಸ್ ಮಾಡಿಕೊಳ್ಳಲಿದೆ ಎಂದು ಪಂಜಾಬ್ ಕಿಂಗ್ಸ್ ತಂಡ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡುವ ಮೂಲಕ ಲಸಿತ್ ಮಾಲಿಂಗಗೆ ಕೃತಜ್ಞತೆಯನ್ನು ಸಲ್ಲಿಸಿದೆ.

Story first published: Tuesday, September 14, 2021, 22:34 [IST]
Other articles published on Sep 14, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X