ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪಾಕ್ ಆಯ್ಕೆ ಸಮಿತಿ ಹಾಗೂ ಮ್ಯಾನೇಜ್‌ಮೆಂಟ್ ವಿರುದ್ಧ ಕನೇರಿಯಾ ಕಿಡಿ: "ಥರ್ಡ್ ಕ್ಲಾಸ್" ಎಂದ ಮಾಜಿ ಆಟಗಾರ

Danish Kaneria critisises Pakistans selection committee and team management said they are third-class

ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯ 2ನೇ ಪಂದ್ಯ ಕರಾಚಿಯಲ್ಲಿ ನಡೆಯುತ್ತಿದ್ದು ಪಾಕಿಸ್ತಾನದ ವಿರುದ್ಧ ಕಿವೀಸ್ ಪಡೆ ಉತ್ತಮ ಪ್ರದರ್ಶನ ನೀಡಿದೆ. ಮೊದಲಿಗೆ ಬ್ಯಾಟಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ಪ್ರವಾಸಿ ನ್ಯೂಜಿಲೆಂಡ್ ಬಳಿಕ ಬೌಲಿಂಗ್‌ನಲ್ಲಿಯೂ ಭರವಸೆ ಮೂಡಿಸಿದೆ. ಈ ಸಂದರ್ಭದಲ್ಲಿ ಪಾಕಿಸ್ತಾನದ ಮಾಜಿ ಆಟಗಾರ ದಾನಿಶ್ ಕನೇರಿಯಾ ಪ್ರತಿಕ್ರಿಯೆ ನೀಡಿದ್ದು ಪಾಕಿಸ್ತಾನ ಟೀಮ್ ಮ್ಯಾನೇಜ್‌ಮೆಂಟ್ ವಿರುದ್ಧ ಕಿಡಿಕಾರಿದ್ದಾರೆ.

ದಾನಿಶ್ ಕನೇರಿಯಾ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ್ದು ಆಯ್ಕೆ ಸಮಿತಿ ಹಾಗೂ ಟೀಮ್ ಮ್ಯಾನೇಜ್‌ಮೆಂಟ್‌ನ ಅಸಮರ್ಥತೆಯ ಕಾರಣದಿಂದಾಗಿ ಪಾಕಿಸ್ತಾನ ತಂಡ ಬಳಲುತ್ತಿದೆ. ಹೀಗಾಗಿ ನಾಯಕ ಬಾಬರ್ ಅಜಮ್ ಅವರನ್ನು ಮಾತ್ರವೇ ಜವಾಬ್ಧಾರರನ್ನಾಗಿಸುವುದು ಸರಿಯಲ್ಲ. ಯಾಕೆಂದರೆ ಈ ನಿರ್ಧಾರಗಳಿಗೆ ಅವರು ಹೊಣೆಯಲ್ಲ ಎಂದಿದ್ದಾರೆ ಪಾಕಿಸ್ತಾನದ ಮಾಜಿ ಸ್ಪಿನ್ನರ್ ದಾನಿಶ್ ಕನೇರಿಯಾ.

Hardik Pandya: ಹಾರ್ದಿಕ್ ಪಾಂಡ್ಯರನ್ನು ಖಾಯಂ ಟಿ20 ನಾಯಕನನ್ನಾಗಿ ಮಾಡುವ ಬಗ್ಗೆ ಮಾಜಿ ಕ್ರಿಕೆಟಿಗ ಎಚ್ಚರಿಕೆHardik Pandya: ಹಾರ್ದಿಕ್ ಪಾಂಡ್ಯರನ್ನು ಖಾಯಂ ಟಿ20 ನಾಯಕನನ್ನಾಗಿ ಮಾಡುವ ಬಗ್ಗೆ ಮಾಜಿ ಕ್ರಿಕೆಟಿಗ ಎಚ್ಚರಿಕೆ

ಆಯ್ಕೆ ಸಮಿತಿ ಹಾಗೂ ಟೀಮ್ ಮ್ಯಾನೇಜ್‌ಮೆಂಟ್ ಕಾರಣ

ಆಯ್ಕೆ ಸಮಿತಿ ಹಾಗೂ ಟೀಮ್ ಮ್ಯಾನೇಜ್‌ಮೆಂಟ್ ಕಾರಣ

"ಅಸಮರ್ಥ ಆಯ್ಕೆ ಸಮಿತಿ ಹಾಗೂ ಟೀಮ್ ಮ್ಯಾನೇಜ್‌ಮೆಂಟ್ 2ನೇ ಟೆಸ್ಟ್ ಪಂದ್ಯಕ್ಕೆ ಇಂಥಾ ತಂಡವನ್ನು ಆಯ್ಕೆ ಮಾಡುವ ಮೂಲಕ ಪಾಕಿಸ್ತಾನ ತಂಡವನ್ನು ಸಂಕಷ್ಟಕ್ಕೆ ತಳ್ಳುತ್ತಿದೆ. ನಮ್ಮ ಕ್ರಿಕೆಟ್ ಎತ್ತ ಸಾಗುತ್ತಿದೆ. ಅವರು ಇನ್ನು ಕೂಡ ಆಟಗಾರರನ್ನು ಸ್ನೇಹದ ಆಧಾರದಲ್ಲಿ ಆಯ್ಕೆ ಮಾಡುತ್ತಿದ್ದಾರೆ. ಇದಕ್ಕಾಗಿ ನಾನು ಬಾಬರ್ ಅಜಂ ಅವರನ್ನು ಟೀಕಿಸಲಾರೆ" ಎಂದು ಕಟುವಾಗಿ ಪಾಕಿಸ್ತಾನ ಆಯ್ಕೆ ಸಮಿತಿ ಹಾಗೂ ಮ್ಯಾನೇಜ್‌ಮೆಂಟ್ ವಿರುದ್ಧ ದಾನಿಶ್ ಕನೇರಿಯಾ ಟೀಕೆ ಮಾಡಿದ್ದಾರೆ.

ಥರ್ಡ್ ಕ್ಲಾಸ್ ಎಂದು ಕಿಡಿಕಾರಿದ ಮಾಜಿ ಸ್ಪಿನ್ನರ್

ಥರ್ಡ್ ಕ್ಲಾಸ್ ಎಂದು ಕಿಡಿಕಾರಿದ ಮಾಜಿ ಸ್ಪಿನ್ನರ್

ಇನ್ನು ಪಾಕಿಸ್ತಾನ ಆಯ್ಕೆ ಮಂಡಳಿ ಹಾಗೂ ಮ್ಯಾನೇಜ್‌ಮೆಂಟ್ ವಿರುದ್ಧ ದಾನಿಶ್ ಕನೆರಿಯಾ ಮತ್ತಷ್ಟು ಕಟು ಶಬ್ಧಗಳನ್ನು ಬಳಸಿ ಟೀಕಿಸಿದ್ದಾರೆ. "ಪಾಕಿಸ್ತಾನದ ಆಯ್ಕೆ ಸಮಿತಿ ಹಾಗೂ ತಂಡದ ಮ್ಯಾನೇಜ್‌ಮೆಂಟ್ ಥರ್ಡ್ ಕ್ಲಾಸ್. ಹಲವು ಕ್ಷುಲ್ಲಕ ವ್ಯಕ್ತಿಗಳು ಮತ್ತೆ ಬಂದಿದ್ದು ಪಾಕಿಸ್ತಾನ ಕ್ರಿಕೆಟ್ ಮಂಡಳಿಯಲ್ಲಿ ಅಗ್ರ ಸ್ಥಾನವನ್ನು ಪಡೆದುಕೊಂಡಿದ್ದಾರೆ" ಎಂದಿದ್ದಾರೆ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಸ್ಪಿನ್ನರ್ ದಾನಿಶ್ ಕನೆರಿಯಾ.

ಗಮನಾರ್ಹ ವಿಚಾರವೆಂದರೆ ಇತ್ತೀಚೆಗಷ್ಟೇ ಪಾಕಿಸ್ತಾನ ಕ್ರಿಕೆಟ್ ಮಂಡಳಿಯಲ್ಲಿ ಕಳೆದ ಡಿಸೆಂಬರ್‌ನಲ್ಲಿ ಪ್ರಮುಖ ಬದಲಾವಣೆಗಳು ನಡೆದಿದೆ. ರಮೀಜ್ ರಾಜಾ ಅವರನ್ನು ಅಧ್ಯಕ್ಷ ಸ್ಥಾನದಿಂದ ಪದಚ್ಯುತಗೊಳಿಸಿ ನಜಮ್ ಸೇಥಿ ನೇತೃತ್ವದ ಹೊಸ ಮಂಡಳಿಯನ್ನು ರಚಿಸಲಾಗಿದೆ. ಆ ಬಳಿಕ ಆಯ್ಕೆ ಸಮಿತಿಯಲ್ಲಿ ಕೂಡ ಬದಲಾವಣೆಯಾಗಿದ್ದು ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ಅವರನ್ನು ಆಯ್ಕೆ ಸಮಿತಿಯ ಮುಖ್ಯಸ್ಥರನ್ನಾಗಿ ಹಂಗಾಮಿಯಾಗಿ ನೇಮಿಸಲಾಗಿದೆ.

2ನೇ ಪಂದ್ಯದಲ್ಲಿ ಬೌಲಿಂಗ್‌ನಲ್ಲಿ ಮಿಂಚಲು ವಿಫಲವಾದ ಪಾಕ್

2ನೇ ಪಂದ್ಯದಲ್ಲಿ ಬೌಲಿಂಗ್‌ನಲ್ಲಿ ಮಿಂಚಲು ವಿಫಲವಾದ ಪಾಕ್

ಇನ್ನು ಪಾಕಿಸ್ತಾನ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಎರಡನೇ ಪಂದ್ಯ ಮೊದಲ ಇನ್ನಿಂಗ್ಸ್‌ನಲ್ಲಿ ಬೌಲಿಂಗ್‌ನಲ್ಲಿ ಪಾಕಿಸ್ತಾನ ನಿರೀಕ್ಷಿತ ಪ್ರದರ್ಶನ ವಿಫಲವಾಗಿದ್ದು ಹಿನ್ನಡೆ ಅನುಭವಿಸಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ನ್ಯೂಜಿಲೆಂಡ್ 449 ರನ್‌ಗಳನ್ನು ಗಳಿಸಿ ಆಲೌಟ್ ಆಗಿತ್ತು. ಇದೀಗ ಪಾಕಿಸ್ತಾನ ಬ್ಯಾಟಿಂಗ್ ಆರಂಭಿಸಿದ್ದು ಪೈಪೋಟಿಯ ಪ್ರದರ್ಶನ ನೀಡುವ ವಿಶ್ವಾಸದಲ್ಲಿದೆ.

Story first published: Tuesday, January 3, 2023, 18:22 [IST]
Other articles published on Jan 3, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X