ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಡೆಲ್ಲಿ vs ಪಂಜಾಬ್ ಗೆಲುವು ಯಾರಿಗೆ? ಪಂದ್ಯದ ಮುನ್ನೋಟ

ಮೊಹಾಲಿ, ಏಪ್ರಿಲ್ 01: ದೆಹಲಿ ಮತ್ತು ಪಂಜಾಬ್ ನಡುವೆ ಇಂದು ಐಪಿಎಲ್‌ 2019 ರ 13ನೇ ಪಂದ್ಯ ಮೊಹಾಲಿಯಲ್ಲಿ ನಡೆಯಲಿದೆ. ಪಂಜಾಬ್, ಡೆಲ್ಲಿ ಎರಡೂ ತಂಡಗಳು ಸಮಾನ ಯಶಸ್ಸನ್ನು ಈವರೆಗೆ ಪಂದ್ಯಾವಳಿಯಲ್ಲಿ ಪಡೆದಿದ್ದು, ಈ ಪಂದ್ಯ ಎರಡೂ ತಂಡಗಳಿಗೆ ಮಹತ್ವದ್ದಾಗಿದೆ.

ಐಪಿಎಲ್ 2019 ಆರಂಭಿಕ ಹಂತ ದಾಟಿ ನಡುವಿನ ಹಂತಕ್ಕೆ ಕಾಲಿಡುತ್ತಿದ್ದು, ಡೆಲ್ಲಿ-ಪಂಜಾಭ್ ಎರಡೂ ತಂಡಗಳಿಗೆ ಇದು ನಾಲ್ಕನೇ ಪಂದ್ಯವಾಗಿದೆ. ಎರಡೂ ತಂಡಗಳು ತಲಾ ಎರಡು ಪಂದ್ಯ ಗೆದ್ದಿದ್ದು, ಒಂದು ಪಂದ್ಯಗಳಲ್ಲಿ ಸೋತಿವೆ.

ಪಂಜಾಬ್ ವಿರುದ್ಧ ಡೆಲ್ಲಿ ಬಿರುಸಿನ ಆಟ ನಿರೀಕ್ಷೆ, ಸಂಭಾವ್ಯ XI ಪಂಜಾಬ್ ವಿರುದ್ಧ ಡೆಲ್ಲಿ ಬಿರುಸಿನ ಆಟ ನಿರೀಕ್ಷೆ, ಸಂಭಾವ್ಯ XI

ಕಳೆದ ಪಂದ್ಯದಲ್ಲಿ ಸೂಪರ್ ಓವರ್ ಮುಖಾಂತರ ಡೆಲ್ಲಿ ತಂಡವು ಕೊಲ್ಕತ್ತ ವಿರುದ್ಧ ಗೆದ್ದಿದ್ದರೆ, ಪಂಜಾಬ್ ತಂಡವು ಬಲಿಷ್ಠ ಮುಂಬೈ ಎದುರು ಭರ್ಜರಿ ಅಂತರದಿಂದ ಗೆಲುವು ಸಾಧಿಸಿದೆ. ಎರಡೂ ತಂಡಗಳು ಗೆಲುವಿನ ದಾಖಲೆಯೊಂದಿಗೆ ಇಂದಿನ ಪಂದ್ಯದಲ್ಲಿ ಮುಖಾ-ಮುಖಿ ಆಗಲಿವೆ.

1
45769

ಎರಡೂ ತಂಡಗಳು ಸಮಾನ ಪ್ರಬಲವಾಗಿದ್ದು, ಇಂದಿನ ಪಂದ್ಯ ಏಕಪಕ್ಷೀಯವಾಗಿಯಂತೂ ಇರುವುದಿಲ್ಲ ಎಂಬುದು ಖಚಿತ. ತವರಿನಲ್ಲಿ ಪಂದ್ಯವಾಡುತ್ತಿರುವ ಪಂಜಾಬ್‌ಗೆ ಗೆಲ್ಲುವ ಅವಕಾಶ ತುಸು ಹೆಚ್ಚೆ ಇದೆ ಎನ್ನಬಹುದು.

ಎರಡೂ ತಂಡಗಳ ಬ್ಯಾಟಿಂಗ್ ಬಲಶಾಲಿ

ಎರಡೂ ತಂಡಗಳ ಬ್ಯಾಟಿಂಗ್ ಬಲಶಾಲಿ

ಕಳೆದ ಪಂದ್ಯದಲ್ಲಿ ಎರಡೂ ತಂಡದ ಓಪನರ್‌ಗಳು ಉತ್ತಮ ಪ್ರದರ್ಶನ ತೋರಿರುವುದು ಎರಡೂ ತಂಡಗಳಿಗೆ ಆತ್ಮವಿಶ್ವಾಸ ಹೆಚ್ಚಿಸಿದೆ. ಕೆ.ಎಲ್.ರಾಹುಲ್ ಮುಂಬೈ ವಿರುದ್ಧ ಉತ್ತಮ ಆಟವಾಡಿದ್ದರೆ, ಪೃಥ್ವಿ ಶಾ 55 ಎಸೆತಕ್ಕೆ 99 ರನ್ ಗಳಿಸಿ ಮಿಂಚಿದ್ದಾರೆ. ದೆಹಲಿ ತಂಡಕ್ಕೆ ಸ್ಪೋಟಕ ಬ್ಯಾಟ್ಸ್‌ಮನ್ ರಿಷಬ್ ಪಂಥ್ ಬಲವಿದ್ದರೆ, ಪಂಜಾಬ್‌ಗೆ ಗೇಯ್ಲ್‌ ಬಲವಿದೆ. ಇಬ್ಬರೂ ಫಾರ್ಮ್‌ನಲ್ಲಿದ್ದಾರೆ.

ದೆಹಲಿಗೆ ರಬಾಡಾ ಬಲ

ದೆಹಲಿಗೆ ರಬಾಡಾ ಬಲ

ಎರಡೂ ತಂಡಗಳ ಬೌಲಿಂಗ್ ಅನ್ನು ಅಕ್ಕ-ಪಕ್ಕದಲ್ಲಿಟ್ಟು ನೋಡಿದರೆ ದೆಹಲಿ ಬೌಲಿಂಗ್ ತುಸು ಹೆಚ್ಚು ಸತ್ವ ಹೊಂದಿದೆ ಎನಿಸುತ್ತದೆ. ಅದಕ್ಕೆ ಕಾರಣ ಯುವ ಬೌಲರ್ ಕಗಿಸೋ ರಬಾಡಾ. ಕಳೆದ ಪಂದ್ಯದ ಸೂಪರ್ ಓವರ್‌ನಲ್ಲಿ ಕೇವಲ 10 ರನ್‌ಗಳ ಗುರಿಯನ್ನು ಎದುರಾಳಿಗಳು ತಲುಪಲು ಬಿಟ್ಟಿರಲಿಲ್ಲ ಅವರು. ಪಂಜಾಬ್‌ ಕಡೆ ರವಿಚಂದ್ರನ್ ಅಶ್ವಿನ್, ಮೊಹಮ್ಮದ್ ಶಮಿ, ಆಂಡ್ರ್ಯು ಟೈ ಪ್ರಮುಖ ಬೌಲರ್‌ಗಳಾಗಿದ್ದಾರೆ. ಪಂಜಾಬ್ ಅನುಭವಿ ಬೌಲರ್‌ಗಳ ಪಡೆ ಹೊಂದಿದೆ.

ಆಕರ್ಷಕ ಕ್ಯಾಚ್‌ನಿಂದ ಕ್ರಿಸ್‌ಲಿನ್ ವಿಕೆಟ್ ಮುರಿದ ರಿಷಬ್ ಪಂತ್: ವಿಡಿಯೋ

ಮೊದಲು ಬ್ಯಾಟಿಂಗ್ ಮಾಡಿದವರು ಗೆದ್ದದ್ದು ಹೆಚ್ಚು

ಮೊದಲು ಬ್ಯಾಟಿಂಗ್ ಮಾಡಿದವರು ಗೆದ್ದದ್ದು ಹೆಚ್ಚು

ಮೊಹಾಲಿ ಪಿಚ್‌ನಲ್ಲಿ ಟಾಸ್ ಗೆದ್ದವರು ಬ್ಯಾಟಿಂಗ್ ಆಯ್ಕೆ ಮಾಡಿಕೊಳ್ಳುವವರೆ ಹೆಚ್ಚು, 2014 ರಿಂದ ಇಲ್ಲಿ ನಡೆದ ಹದಿನಾಲ್ಕು ಪಂದ್ಯಗಳಲ್ಲಿ ಮೊದಲು ಬ್ಯಾಟ್ ಮಾಡಿದ ಹತ್ತು ತಂಡಗಳು ಗೆಲುವು ಸಾಧಿಸಿವೆ ಎಂದು ಅಂಕಿ-ಅಂಶ ಹೇಳುತ್ತವೆ. ರಾತ್ರಿ ಪಂದ್ಯ ಆಗಿರುವ ಕಾರಣ ಸಮಯ ಕಳೆದಷ್ಟು ಬ್ಯಾಟಿಂಗ್ ಕಷ್ಟವಾಗಲಿದೆ ಎನ್ನುತ್ತಿವೆ ಪಿಚ್ ರಿಪೋರ್ಟ್‌.

ಮಯಾಂಕ್ ಅಗರ್ವಾಲ್‌ ಉತ್ತಮ ಫಾರ್ಮ್‌ನಲ್ಲಿ

ಮಯಾಂಕ್ ಅಗರ್ವಾಲ್‌ ಉತ್ತಮ ಫಾರ್ಮ್‌ನಲ್ಲಿ

ಮಯಾಂಕ್ ಅಗರ್ವಾಲ್ ಅವರು ಉತ್ತಮ ಫಾರ್ಮ್‌ನಲ್ಲಿರುವುದು ಪಂಜಾಬ್ ತಂಡಕ್ಕೆ ಆಶಾದಾಯಕ. ಕರ್ನಾಟಕದ ಕರುಣ್ ನಾಯರ್ ಸಹ ಪಂಜಾಬ್ ತಂಡದಲ್ಲಿದ್ದಾರೆ, ಕೆ.ಎಲ್.ರಾಹುಲ್ ಸೇರಿ ಮೂರು ಆಟಗಾರರು ಪಂಜಾಬ್‌ನಲ್ಲಿದ್ದಾರೆ.

Story first published: Monday, April 1, 2019, 13:32 [IST]
Other articles published on Apr 1, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X