ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

KL Rahul: ಕೆಎಲ್ ರಾಹುಲ್ ಕಳಪೆ ಬ್ಯಾಟಿಂಗ್ ಫಾರ್ಮ್ ಟೀಕಿಸಿದ ದಿನೇಶ್ ಕಾರ್ತಿಕ್!

Dinesh Karthik Criticizes KL Rahuls Poor Batting Form Against Bangladesh

ಢಾಕಾದಲ್ಲಿ ನಡೆದ ಎರಡನೇ ಟೆಸ್ಟ್‌ನಲ್ಲಿ ಬಾಂಗ್ಲಾದೇಶ ತಂಡವನ್ನು ಮೂರು ವಿಕೆಟ್‌ಗಳಿಂದ ಸೋಲಿಸುವ ಮೂಲಕ ಭಾರತವು 2022ರ ವರ್ಷವನ್ನು ಗೆಲುವಿನೊಂದಿಗೆ ಕೊನೆಗೊಳಿಸಿದರೂ, ಹಂಗಾಮಿ ನಾಯಕ ಕೆಎಲ್ ರಾಹುಲ್ ಅವರ ಬ್ಯಾಟಿಂಗ್ ಪ್ರದರ್ಶನ ತಂಡವನ್ನು ಚಿಂತೆಗೀಡು ಮಾಡಿದೆ.

ಬಾಂಗ್ಲಾದೇಶ ವಿರುದ್ಧ 2-0 ಸರಣಿಯ ಗೆಲುವಿನ ಉದ್ದಕ್ಕೂ ಕೆಎಲ್ ರಾಹುಲ್ ಕೇವಲ 14.25 ಸರಾಸರಿ ನಾಲ್ಕು ಟೆಸ್ಟ್ ಇನ್ನಿಂಗ್ಸ್‌ಗಳಲ್ಲಿ 22, 23, 10 ಮತ್ತು 2 ರನ್ ಗಳಿಸಿದರು.

IND vs SL: ಶ್ರೀಲಂಕಾ ವಿರುದ್ಧದ ತವರಿನ ಸರಣಿಗೆ ರೋಹಿತ್- ರಾಹುಲ್ ಅಲಭ್ಯ?; ಇಲ್ಲಿದೆ ಕಾರಣ

2014ರಲ್ಲಿ ತನ್ನ ಚೊಚ್ಚಲ ಪಂದ್ಯದಿಂದ 45 ಟೆಸ್ಟ್‌ಗಳನ್ನು ಆಡಿದರೂ, ಕೇವಲ 34.26ರಷ್ಟಿರುವ ಕೆಎಲ್ ರಾಹುಲ್ ಅವರ ಟೆಸ್ಟ್ ಕ್ರಿಕೆಟ್ ಸರಾಸರಿಯು ಕ್ರಿಕೆಟ್‌ನ ಸುದೀರ್ಘ ಸ್ವರೂಪದಲ್ಲಿ ಆರಂಭಿಕ ಆಟಗಾರನಿಗೆ ತೃಪ್ತಿ ನೀಡುವಂತದ್ದಲ್ಲ ಎಂದು ಭಾರತದ ಹಿರಿಯ ವಿಕೆಟ್‌ಕೀಪರ್- ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ ಅಭಿಪ್ರಾಯಪಟ್ಟಿದ್ದಾರೆ.

ಎರಡು ಟೆಸ್ಟ್ ಪಂದ್ಯಗಳನ್ನು ನೀಡುವಂತೆ ಬಿಸಿಸಿಐಗೆ ಸಲಹೆ

ಎರಡು ಟೆಸ್ಟ್ ಪಂದ್ಯಗಳನ್ನು ನೀಡುವಂತೆ ಬಿಸಿಸಿಐಗೆ ಸಲಹೆ

"ನಾನು ಕೆಎಲ್ ರಾಹುಲ್‌ಗೆ ಇನ್ನು ಎರಡು ಟೆಸ್ಟ್ ಪಂದ್ಯಗಳನ್ನು ನೀಡುವಂತೆ ಬಿಸಿಸಿಐಗೆ ಸಲಹೆ ನೀಡುತ್ತೇನೆ. ಪರಿಸ್ಥಿತಿಗಳು ಕೆಎಲ್ ರಾಹುಲ್ ಅವರ ಪರವಾಗಿ ನಡೆಯದಿದ್ದರೆ, ತಂಡದಿಂದ ಕೈಬಿಡಬಹುದು," ಎಂದು ದಿನೇಶ್ ಕಾರ್ತಿಕ್ ಹೇಳಿದ್ದಾರೆ.

"ಕೆಎಲ್ ರಾಹುಲ್‌ 40 ಟೆಸ್ಟ್‌ಗಳನ್ನು ಆಡಿದ್ದಾರೆ ಮತ್ತು ಅವರ ಸರಾಸರಿ ಕೇವಲ 30ರ ಆಸುಪಾಸಿನಲ್ಲಿದೆ. ಅದು ಇದು ಆರಂಭಿಕ ಬ್ಯಾಟ್ಸ್‌ಮನ್‌ಗೆ ಸ್ವೀಕಾರಾರ್ಹವಲ್ಲ. ಇದು ಖಚಿತವಾಗಿ 35 ಟೆಸ್ಟ್ ಪಂದ್ಯಗಳನ್ನು ಆಡಿರುವ ಭಾರತೀಯ ಆಟಗಾರರಲ್ಲಿ ಅತ್ಯಂತ ಕೆಳಮಟ್ಟದ ಆಟಗಾರರಲ್ಲಿ ಒಬ್ಬರು," ಎಂದು ದಿನೇಶ್ ಕಾರ್ತಿಕ್ ಕ್ರಿಕ್‌ಬಜ್‌ನಲ್ಲಿ ತಿಳಿಸಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿ

ಆಸ್ಟ್ರೇಲಿಯಾ ವಿರುದ್ಧದ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿ

ಫೆಬ್ರವರಿ 3ರಿಂದ ನಾಗ್ಪುರದಲ್ಲಿ ಪ್ರಾರಂಭವಾಗುವ ಆಸ್ಟ್ರೇಲಿಯಾ ವಿರುದ್ಧದ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತದ ಮುಂದಿನ ಕಾರ್ಯಯೋಜನೆಯು ನಡೆಯಲಿದೆ.

ಬಾರ್ಡರ್-ಗವಾಸ್ಕರ್ ಟ್ರೋಫಿಗಾಗಿ ಆಡುವ ಸರಣಿಯು ಕೆಎಲ್ ರಾಹುಲ್‌ಗೆ ಮಾಡು ಇಲ್ಲವೇ ಮಡಿ ಎಂದು ಕಾರ್ತಿಕ್ ಅಭಿಪ್ರಾಯಪಟ್ಟಿದ್ದಾರೆ ಮತ್ತು ಬಲಗೈ ಆಟಗಾರ ನಾಲ್ಕು ಪಂದ್ಯಗಳಲ್ಲಿ ದೊಡ್ಡ ರನ್‌ಗಳನ್ನು ದಾಖಲಿಸಲು ವಿಫಲವಾದರೆ, ಭಾರತೀಯ ತಂಡ ಇತರ ಆರಂಭಿಕರನ್ನು ಪರಿಗಣಿಸಬೇಕು ಎಂದು ಹೇಳಿದ್ದಾರೆ.

ಚೊಚ್ಚಲ ಟೆಸ್ಟ್ ಶತಕ ಗಳಿಸಿದ ಶುಭಮನ್ ಗಿಲ್

ಚೊಚ್ಚಲ ಟೆಸ್ಟ್ ಶತಕ ಗಳಿಸಿದ ಶುಭಮನ್ ಗಿಲ್

ಕೆಎಲ್ ರಾಹುಲ್ ಮತ್ತು ಕಾಯಂ ನಾಯಕ ರೋಹಿತ್ ಶರ್ಮಾ ಅವರ ಮೊದಲ ಆಯ್ಕೆಯ ಜೋಡಿಯನ್ನು ಹೊರತುಪಡಿಸಿ, ಬಾಂಗ್ಲಾದೇಶದ ವಿರುದ್ಧ ತಮ್ಮ ಚೊಚ್ಚಲ ಟೆಸ್ಟ್ ಶತಕ ಗಳಿಸಿದ ಶುಭಮನ್ ಗಿಲ್ ಇದ್ದಾರೆ. ಬಂಗಾಳದ ಆರಂಭಿಕ ಆಟಗಾರ ಅಭಿಮನ್ಯು ಈಶ್ವರನ್ ಅವರು ಭಾರತ ಎ ಪರ ತಮ್ಮ ಹೆಚ್ಚಿನ ರನ್‌ಗಳನ್ನು ಪರಿಗಣಿಸಿದರೆ ಮತ್ತೊಂದು ಆಯ್ಕೆಯಾಗಿದ್ದಾರೆ. ಯಶಸ್ವಿ ಜೈಸ್ವಾಲ್ ಕೂಡ ದೇಶೀಯ ಕ್ರಿಕೆಟ್‌ನಲ್ಲಿ ದೊಡ್ಡ ರನ್ ಗಳಿಸಿದ್ದಾರೆ ಎಂದು ದಿನೇಶ್ ಕಾರ್ತಿಕ್ ವಿವರಿಸಿದರು.

"ಕೆಎಲ್ ರಾಹುಲ್ ಖಂಡಿತವಾಗಿಯೂ ಭಾರತೀಯ ಟೆಸ್ಟ್ ತಂಡದಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಬೇಕಾದರೆ, ಅವನು ಆಸ್ಟ್ರೇಲಿಯಾ ವಿರುದ್ಧ ಒಂದೆರಡು ಶತಕಗಳನ್ನು ಗಳಿಸಬೇಕು. ಇಲ್ಲದಿದ್ದರೆ, ನೀವು ಖಂಡಿತವಾಗಿಯೂ ಬದಲಾವಣೆಯನ್ನು ನೋಡಬಹುದು. ಶುಭ್‌ಮನ್ ಗಿಲ್ ತುಂಬಾ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ," ಎಂದು ದಿನೇಶ್ ಕಾರ್ತಿಕ್ ತಿಳಿಸಿದರು.

WTC ಅಂಕಪಟ್ಟಿಯಲ್ಲಿ ಭಾರತ ತಂಡ ಎರಡನೇ ಸ್ಥಾನ

WTC ಅಂಕಪಟ್ಟಿಯಲ್ಲಿ ಭಾರತ ತಂಡ ಎರಡನೇ ಸ್ಥಾನ

ಬಾಂಗ್ಲಾದೇಶದ ವಿರುದ್ಧದ 2-0 ಸರಣಿಯ ಗೆಲುವು ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯೂಟಿಸಿ) ಅಂಕಪಟ್ಟಿಯಲ್ಲಿ ಭಾರತ ತಂಡ ಎರಡನೇ ಸ್ಥಾನವನ್ನು ಗಟ್ಟಿಗೊಳಿಸಲು ಸಹಾಯ ಮಾಡಿತು. ಭಾರತವು ಈಗ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ಆಸ್ಟ್ರೇಲಿಯಾದ ನಂತರದ ಸ್ಥಾನದಲ್ಲಿದೆ.

ಭಾರತ ಮುಂದಿನ ಎರಡು ಅಥವಾ ಮೂರು ಟೆಸ್ಟ್‌ಗಳನ್ನು ಗೆದ್ದರೆ ಮತ್ತು ಆಸ್ಟ್ರೇಲಿಯಾ ವಿರುದ್ಧ ಉಳಿದ ಎರಡು ಪಂದ್ಯಗಳನ್ನು ಡ್ರಾ ಮಾಡಿಕೊಳ್ಳಲು ದಕ್ಷಿಣ ಆಫ್ರಿಕಾ ಯಶಸ್ವಿಯಾದರೆ, ಭಾರತ ತಂಡ ಬ್ಯಾಕ್-ಟು-ಬ್ಯಾಕ್ ಫೈನಲ್‌ನಲ್ಲಿ ಕಾಣಿಸಿಕೊಳ್ಳಲಿದೆ.

Story first published: Monday, December 26, 2022, 19:02 [IST]
Other articles published on Dec 26, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X