ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ದಿನೇಶ್ ಕಾರ್ತಿಕ್ ಫಿನಿಷರ್ ಅಲ್ವೇ ಅಲ್ಲ: ಕೃಷ್ಣಮಾಚಾರಿ ಶ್ರೀಕಾಂತ್

Dinesh karthik

ಐಪಿಎಲ್ 2022ರ ಸೀಸನ್‌ನಲ್ಲಿ ಆರ್‌ಸಿಬಿ ಫಿನಿಷರ್ ಆಗಿ ಮಿಂಚಿದ್ದಲ್ಲದೆ, ಟೀಂ ಇಂಡಿಯಾಗೆ ಕಂಬ್ಯಾಕ್ ಮಾಡಿದ ಅನುಭವಿ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಭಾರತದ ಪರ ಪ್ರಮುಖ ಪಾತ್ರವಹಿಸುತ್ತಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಸರಣಿ, ಐರ್ಲೆಂಡ್ ಹಾಗೂ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿ ಜೊತೆಗೆ, ವೆಸ್ಟ್‌ ಇಂಡೀಸ್‌ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಬೊಂಬಾಟ್ ಆಟವಾಡಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ರು.

ಐಸಿಸಿ 2019ರ ವಿಶ್ವಕಪ್ ಆಡಿದ ಬಳಿಕ ಟೀಂ ಇಂಡಿಯಾದಿಂದ ಹೊರಬಿದ್ದಿದ್ದ ವಿಕೆಟ್ ಕೀಪರ್ ಬ್ಯಾಟರ್ ದಿನೇಶ್ ಕಾರ್ತಿಕ್ ಮೂರು ವರ್ಷಗಳ ಬಳಿಕ ಟೀಂ ಇಂಡಿಯಾಗೆ ಕಂಬ್ಯಾಕ್ ಆಗಲು ಯಶಸ್ವಿಯಾದರು. ಹೀಗಿರುವಾಗ ಕೆರಿಬಿಯನ್ ನಾಡಲ್ಲಿ ಉತ್ತಮ ಆಟವಾಡ್ತಿರುವ ಕಾರ್ತಿಕ್‌ ಕುರಿತು ಮಾಜಿ ಕ್ರಿಕೆಟಿಗ ಕೃಷ್ಣಮಾಚಾರಿ ಶ್ರೀಕಾಂತ್ ಅಚ್ಚರಿಕೆಯ ಹೇಳಿಕೆ ನೀಡಿದ್ದಾರೆ.

ವಿಂಡೀಸ್ ವಿರುದ್ಧ ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಡೆದ ಕಾರ್ತಿಕ್

ವಿಂಡೀಸ್ ವಿರುದ್ಧ ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಡೆದ ಕಾರ್ತಿಕ್

ತನ್ನ 37ನೇ ವಯಸ್ಸಿನಲ್ಲಿ ಬೊಂಬಾಟ್ ಆಟವಾಡ್ತಿರುವ ದಿನೇಶ್ ಕಾರ್ತಿಕ್ ವಿಂಡೀಸ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ 19 ಎಸೆತಗಳಲ್ಲಿ ಅಜೇಯ 41ರನ್ ಕಲೆಹಾಕುವ ಮೂಲಕ ಅಬ್ಬರಿಸಿದ್ರು. ಇವರ ಆಟದಿಂದಾಗಿಯೇ ಭಾರತ 190 ರನ್ ಕಲೆಹಾಕಿ ಪಂದ್ಯದಲ್ಲಿ ಗೆದ್ದು ಬೀಗಿತು.

ಏಜ್ ಇಸ್ ಜಸ್ಟ ನಂಬರ್ ಎಂಬಂತೆ ಉತ್ತಮ ಆಟವಾಡ್ತಿರುವ ಕಾರ್ತಿಕ್ ಟಿ20 ವಿಶ್ವಕಪ್‌ ಸ್ಕ್ವಾಡ್‌ನಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಹೆಚ್ಚಿದೆ. ಆದ್ರೆ ತಮಿಳುನಾಡು ಮೂಲದ ಮಾಜಿ ಕ್ರಿಕೆಟ್ ಕ್ರಿಸ್ ಶ್ರೀಕಾಂತ್ ಕಾರ್ತಿಕ್ ಫಿನಿಷರ್ ಅಲ್ಲ ಎಂಬ ಅಚ್ಚರಿಕೆಯ ಮಾತನಾಡಿದ್ದಾರೆ.

ಏಷ್ಯಾ ಕಪ್ 2022: ಭಾರತದ ಸಂಭಾವ್ಯ ಸ್ಕ್ವಾಡ್‌ ಇಲ್ಲಿದೆ

ದಿನೇಶ್ ಕಾರ್ತಿಕ್ ಫಿನಿಷರ್ ಅಲ್ವೇ ಅಲ್ಲ: ಕೃಷ್ಣಮಾಚಾರಿ ಶ್ರೀಕಾಂತ್

ದಿನೇಶ್ ಕಾರ್ತಿಕ್ ಫಿನಿಷರ್ ಅಲ್ವೇ ಅಲ್ಲ: ಕೃಷ್ಣಮಾಚಾರಿ ಶ್ರೀಕಾಂತ್

ದಿನೇಶ್ ಕಾರ್ತಿಕ್ ಭಾರತೀಯ ತಂಡಕ್ಕೆ ಮರಳಿದ ನಂತರ, ಅನುಭವಿ ವಿಕೆಟ್‌ಕೀಪರ್-ಬ್ಯಾಟರ್ ಉತ್ತಮ ಆಟವಾಡ್ತಿದ್ದಾರೆ. ಆದ್ರೆ ಒಬ್ಬ ಫಿನಿಶರ್ ಮಾಡಬೇಕಾದ ಕೆಲಸವನ್ನು ಕಾರ್ತಿಕ್ ಮಾಡುತ್ತಿಲ್ಲ ಎಂದು ಭಾರತದ ಮಾಜಿ ನಾಯಕ ಕೃಷ್ಣಮಾಚಾರಿ ಶ್ರೀಕಾಂತ್ ಅಭಿಪ್ರಾಯಪಟ್ಟಿದ್ದಾರೆ.

ಅಂತಿಮ ನಾಲ್ಕು ಓವರ್‌ಗಳಲ್ಲಿ ದಿನೇಶ್ ಕಾರ್ತಿಕ್‌ನ ಅಬ್ಬರದ ಆಟವಾಡಿದ್ರೂ ಸಹ ಆತನು ಫಿನಿಷರ್ ಅಲ್ಲ. ಏಕೆಂದರೆ ಯಾವುದೇ ಕ್ರಮಾಂಕದಲ್ಲಿ ಹೋಗಿ ಆಟವನ್ನು ಗೆಲ್ಲುವವನು ಫಿನಿಶರ್ ಎಂದು ಶ್ರೀಕಾಂತ್ ನಂಬಿದ್ದಾರೆ. 20 ಓವರ್ ಸ್ವರೂಪವು ಕ್ರೀಡೆಯ ಡೈನಾಮಿಕ್ಸ್ ಅನ್ನು ಬದಲಾಯಿಸಿರಬಹುದು ಎಂದು ಶ್ರೀಕಾಂತ್ ಹೇಳಿದ್ದಾರೆ.

"ಫಿನಿಶರ್‌ನ ನಿಮ್ಮ ವ್ಯಾಖ್ಯಾನವು ತಪ್ಪಾಗಿದೆ. ಹೌದು, ದಿನೇಶ್ ತುಂಬಾ ಚೆನ್ನಾಗಿ ಮಾಡ್ತಿದ್ದಾರೆ. ಅವರು ಐಪಿಎಲ್ ಮತ್ತು ಇಲ್ಲಿನ ಕೆಲವು ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಆದರೆ ಅವರು ಫಿನಿಶರ್ ಅಲ್ಲ! 8 ಅಥವಾ 9 ನೇ ಓವರ್‌ನಿಂದ ಪಂದ್ಯವನ್ನು ತೆಗೆದುಕೊಂಡು ಅದನ್ನು ಮುಗಿಸುವ ಆಟಗಾರನನ್ನು ಫಿನಿಶರ್ ಎಂದು ಕರೆಯಬಹುದು. ದಿನೇಶ್ ಮಾಡುತ್ತಿರುವುದನ್ನು ಅಂತಿಮ ಸ್ಪರ್ಶ ಎನ್ನಬಹುದು ಎಂದಿದ್ದಾರೆ.

IND vs WI: 3ನೇ ಟಿ20ಯಲ್ಲಿ ಮಿಂಚಿದ ಬೆನ್ನಲ್ಲೇ ದುಬಾರಿ ಕಾರು ಖರೀದಿಸಿದ ಸೂರ್ಯಕುಮಾರ್ ಯಾದವ್! ಬೆಲೆ ಎಷ್ಟು?

ಸೂರ್ಯಕುಮಾರ್ ಯಾದವ್ ಫಿನಿಷರ್ ಎಂದ ಕ್ರಿಸ್‌

ಸೂರ್ಯಕುಮಾರ್ ಯಾದವ್ ಫಿನಿಷರ್ ಎಂದ ಕ್ರಿಸ್‌

ಒಬ್ಬನೇ ಇಡೀ ಪಂದ್ಯದ ದಿಕ್ಕನ್ನ ಬದಲಿಸಿ ತಂಡವನ್ನ ಗೆಲ್ಲಿಸಿಕೊಡುವ ಸಾಮರ್ಥ್ಯ ಹೊಂದಿರುವವನು ಫಿನಿಷರ್ ಎಂದಿರುವ ಕ್ರಿಸ್ ಶ್ರೀಕಾಂತ್, ಸೂರ್ಯಕುಮಾರ್ ಯಾದವ್ ಅವರನ್ನು ತೆಗೆದುಕೊಳ್ಳಿ. ಅವರು ಇಂಗ್ಲೆಂಡ್‌ನಲ್ಲಿ ನಡೆದ ಪಂದ್ಯವನ್ನು ಬಹುತೇಕ ಏಕಾಂಗಿಯಾಗಿ ಗೆದ್ದಿರುವುದನ್ನು ನಾವು ನೋಡಿದ್ದೇವೆ ಎಂದಿದ್ದಾರೆ.

ಹಾರ್ದಿಕ್ ಪಾಂಡ್ಯ, ರಿಷಭ್ ಪಂತ್ ಫಿನಿಶರ್‌ಗಳು. ಜೊತೆಗೆ ನಮ್ಮ ನಾಯಕ (ರೋಹಿತ್) ಖಾತೆ ತೆರೆದು 17 ನೇ ಓವರ್‌ನವರೆಗೂ ಆಡಬಹುದು ಹೀಗಾಗಿ ಇವರೆಲ್ಲಾ ಫಿನಿಶರ್ ಆಗಿದ್ದಾರೆ, "ಎಂದು ಶ್ರೀಕಾಂತ್ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೂರನೇ ಟಿ 20 ಪಂದ್ಯದ ಸಮಯದಲ್ಲಿ ಫ್ಯಾನ್‌ಕೋಡ್‌ನಲ್ಲಿ ಹೇಳಿದ್ದಾರೆ.

Story first published: Wednesday, August 3, 2022, 15:49 [IST]
Other articles published on Aug 3, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X