ಅನಿಲ್ ಕುಂಬ್ಳೆಯಲ್ಲ, ರಾಹುಲ್ ದ್ರಾವಿಡ್ ಅಲ್ಲ, ಭಾರತೀಯ ಕ್ರಿಕೆಟ್‌ನಲ್ಲಿ ಅತೀ ವಿದ್ಯಾವಂತ ಕ್ರಿಕೆಟರ್ ಯಾರು ಗೊತ್ತಾ?!

ನವದೆಹಲಿ: ಭಾರತದಂತಕ ರಾಷ್ಟ್ರಗಳಲ್ಲಿ ಕ್ರಿಕೆಟ್‌ ಬಗ್ಗೆ ಪ್ರೀತಿಯಿರುವ ಲಕ್ಷಾಂತರ ಕ್ರೀಡಾಪಟುಗಳಿದ್ದಾರೆ. ಅದರಲ್ಲಿ ಅವರವರ ರಾಷ್ಟ್ರೀಯ ತಂಡ ಪ್ರತಿನಿಧಿಸೋಕೆ ಅವಕಾಶ ಸಿಗೋದು ಕೆಲವೇ ಕೆಲವು ಆಟಗಾರರಿಗೆ ಮಾತ್ರ. ಸಿಕ್ಕ ಆ ಅವಕಾಶಗಳನ್ನು ಮುಂದುವರೆಸಿ ಬೆಳೆದು ನಿಲ್ಲೋದೂ ಒಂದಿಷ್ಟು ಮಂದಿ ಮಾತ್ರ. ಇನ್ನು ಕೆಲವರು ವಿದ್ಯಾಭ್ಯಾಸ, ಬೇರೆ ಕೆಲಸ ಹೀಗೆ ಕ್ರಿಕೆಟ್‌ಗಿಂತ ಹೊರತಾಗಿ ಬದುಕಿನ ಬೇರೆ ದಾರಿಗಳಲ್ಲಿ ನಡೆಯುತ್ತಾರೆ.

ಟೋಕಿಯೋ ಒಲಿಂಪಿಕ್ ಪದಕ ವಿಜೇತೆ ಮೀರಾಬಾಯಿಗೆ ಹೊಸ ಕಾರು ಗಿಫ್ಟ್!ಟೋಕಿಯೋ ಒಲಿಂಪಿಕ್ ಪದಕ ವಿಜೇತೆ ಮೀರಾಬಾಯಿಗೆ ಹೊಸ ಕಾರು ಗಿಫ್ಟ್!

ಕ್ರೀಡಾ ಕ್ಷೇತ್ರದಲ್ಲಿ ದೊಡ್ಡ ಸಾಧನೆ ಮಾಡಿದ ಕ್ರೀಡಾಪಟುಗಳಲ್ಲಿ ನಮಗೆ ದೊಡ್ಡ ಮಟ್ಟದಲ್ಲಿ ವಿದ್ಯಾಭ್ಯಾಸ ಮಾಡಿರುವವರು ಸಿಗೋದು ಬಲು ಅಪರೂಪ. ಹೆಚ್ಚಿನವರು ಕ್ರೀಡೆಯ ಕಾರಣ ವಿದ್ಯಾಭ್ಯಾಸವನ್ನು ಅರ್ಧಕ್ಕೆ ನಿಲ್ಲಿಸಿರುತ್ತಾರೆ. ಇನ್ನು ಕೆಲವರು ವಿದ್ಯಾಭ್ಯಾಸದ ಕಾರಣ ಕ್ರೀಡಾ ಕ್ಷೇತ್ರ ತೊರೆದಿರುತ್ತಾರೆ. ಆದರೂ ಕ್ರಿಕೆಟ್‌ನಲ್ಲೂ ದೊಡ್ಡ ಸಾಧನೆ ಮಾಡಿರುವ ದೊಡ್ಡ ಮಟ್ಟಿನಲ್ಲಿ ವಿದ್ಯಾಭ್ಯಾಸವೂ ಮುಗಿಸಿರುವ ಒಂದಿಷ್ಟು ಮಂದಿ ಕ್ರಿಕೆಟಿಗರಿದ್ದಾರೆ.

ಜಾಸ್ತಿ ಓದಿದ ಕ್ರಿಕೆಟರ್‌ಗಳು ಯಾರು ಯಾರು?

ಜಾಸ್ತಿ ಓದಿದ ಕ್ರಿಕೆಟರ್‌ಗಳು ಯಾರು ಯಾರು?

ಭಾರತದಲ್ಲಿ ಜಾಸ್ತಿ ಓದಿರುವ ಕ್ರಿಕೆಟರ್‌ಗಳಲ್ಲಿ ಕಾಣ ಸಿಗುವವರು ಕೆಲವೇ ಕೆಲವು ಮಂದಿ. ಈಗ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಅಧ್ಯಕ್ಷರಾಗಿರುವ ಸೌರವ್ ಗಂಗೂಲಿ ಪದವಿ ವಿದ್ಯಾಭ್ಯಾಸ ಮಾಡಿದ್ದಾರೆ. ಇನ್ನು ಟೀಂ ಇಂಡಿಯಾದ ಮಾಜಿ ನಾಯಕ, ಕನ್ನಡಿಗ ರಾಹುಲ್ ದ್ರಾವಿಡ್ ಮಾಸ್ಟರ್ ಆಫ್ ಬ್ಯುಸಿನೆಸ್ ಅಡ್ಮಿನಿಸ್ಟ್ರೇಷನ್ (ಎಂಬಿಎ) ಅಧ್ಯಯನ ಮುಗಿಸಿದ್ದಾರೆ, ಕರ್ನಾಟಕದ ಮತ್ತೊಬ್ಬ ಕ್ರಿಕೆಟರ್ ಜಾವಗಲ್ ಶ್ರೀನಾಥ್ ಇಂಜಿನಿಯರಿಂಗ್‌ನಲ್ಲಿ ಪದವೀಧರ, ಅನಿಲ್ ಕುಂಬ್ಳೆ ಕೂಡ ಮೆಕಾನಿಕಲ್ ಇಂಜಿನಿಯರಿಂಗ್ ಪದವೀಧರ, ವೀರೇಂದ್ರ ಸೆಹ್ವಾಗ್ ಪದವಿ ಶಿಕ್ಷಣ ಮುಗಿಸಿದ್ದಾರೆ, ಮುರಳಿ ವಿಜಯ್ ಅರ್ಥ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ್ದಾರೆ, ಗೌತಮ್ ಗಂಭೀರ್ ಪದವಿ ಮುಗಿಸಿದ್ದಾರೆ. ಇನ್ನು ವೇಗಿ ಝಹೀರ್ ಖಾನ್ ಇಂಜಿನಿಯರಿಂಗ್ ಪದವಿಯನ್ನು ಅರ್ಧಕ್ಕೆ ಮೊಟಕುಗೊಳಿಸಿದ್ದರು. ಉಳಿದಂತೆ ಭಾರತದ ನಾಯಕ ವಿರಾಟ್ ಕೊಹ್ಲಿ, ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್, ಶಿಖರ್ ಧವನ್, ವಿವಿಎಸ್ ಲಕ್ಷ್ಮಣ್, ಜಸ್‌ಪ್ರೀತ್‌ ಬೂಮ್ರಾ, ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ ಎಲ್ಲರೂ ಹೈಸ್ಕೂಲು ಅಥವಾ ದ್ವಿತೀಯ ಪಿಯುಸಿ ಒಳಗೆ ವಿದ್ಯಾಭ್ಯಾಸ ಮುಗಿಸಿದವರು.

ಅತೀ ಹೆಚ್ಚು ವಿದ್ಯಾಭ್ಯಾಸ ಮಾಡಿರುವ ಭಾರತೀಯ ಕ್ರಿಕೆಟರ್

ಅತೀ ಹೆಚ್ಚು ವಿದ್ಯಾಭ್ಯಾಸ ಮಾಡಿರುವ ಭಾರತೀಯ ಕ್ರಿಕೆಟರ್

ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಅತೀ ಹೆಚ್ಚು ವಿದ್ಯಾಭ್ಯಾಸ ಮಾಡಿರುವ ಕ್ರಿಕೆಟರ್ ಯಾರು ಗೊತ್ತಾ? ಆವಿಷ್ಕಾರ್ ಸಲ್ವಿ. ಮೂಲತಃ ಮುಂಬೈಯವರಾದ ಸಲ್ವಿ ಆ್ಯಸ್ಟ್ರೋಫಿಸಿಕ್ಸ್‌ನಲ್ಲಿ ಪಿಎಚ್‌ಡಿ ಪದವಿ ಪಡೆದಿದ್ದಾರೆ. ಬಲಗೈ ವೇಗದ ಬೌಲರ್ ಆಗಿದ್ದ ಸಲ್ವಿ ಟೀಮ್ ಇಂಡಿಯಾ ಪರ ನಾಲ್ಕು ಏಕದಿನ ಪಂದ್ಯಗಳನ್ನಾಡಿದ್ದರು. ಇದರಲ್ಲಿ ನಾಲ್ಕು ರನ್, 4 ವಿಕೆಟ್‌ ದಾಖಲೆ ಹೊಂದಿದ್ದಾರೆ. 2003ರಲ್ಲಿ ಬಾಂಗ್ಲಾದೇಶ ವಿರುದ್ಧದ ಪಂದ್ಯದ ಮೂಲಕ ಆವಿಷ್ಕರ್ ಸಲ್ವಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಬಾಂಗ್ಲಾದೇಶ, ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ಈ ತ್ರಿಕೋನ ಸರಣಿ ಬಾಂಗಾಬಂದು ರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದಿತ್ತು. ಸಲ್ವಿ ಕೊನೇ ಏಕದಿನ ಪಂದ್ಯ ಆಡಿದ್ದೆಂದರೆ, 2003ರಲ್ಲೇ ಕೋಲ್ಕತ್ತಾದ ಈಡನ್ ಗಾರ್ಡನ್‌ನಲ್ಲಿ ನಡೆದಿದ್ದ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ. ಇದೂ ಕೂಡ ಆಸ್ಟ್ರೇಲಿಯಾ, ಭಾರತ ಮತ್ತು ನ್ಯೂಜಿಲೆಂಡ್ ನಡುವಿ ತ್ರಿಕೋನ ಸರಣಿಯಾಗಿತ್ತು.

ಆ್ಯಸ್ಟ್ರೋಫಿಸಿಕ್ಸ್‌ ಅಂದ್ರೆ ಅದ್ಯಾವ ಸಬ್ಜೆಕ್ಟ್?

ಆ್ಯಸ್ಟ್ರೋಫಿಸಿಕ್ಸ್‌ ಅಂದ್ರೆ ಅದ್ಯಾವ ಸಬ್ಜೆಕ್ಟ್?

ಈಗ 39ರ ಹರೆಯದವರಾಗಿರುವ ಆವಿಷ್ಕಾರ್ ಸಲ್ವಿ ಭಾರತೀಯ ಕ್ರಿಕೆಟ್ ಇತಿಹಾಸದಲ್ಲೇ ಅತೀ ಹೆಚ್ಚು ವಿದ್ಯಾಭ್ಯಾಸ ಮಾಡಿರುವ ಕ್ರಿಕೆಟರ್ ಆಗಿ ಗುರುತಿಸಿಕೊಂಡಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಸಲ್ವಿ ಡೆಲ್ಲಿ ಕ್ಯಾಪಿಟಲ್ಸ್ (ಹಿಂದಿನ ಡೆಲ್ಲಿ ಡೇರ್ ಡೆವಿಲ್ಸ್) ಪದ 7 ಪಂದ್ಯಗಳನ್ನಾಡಿದ್ದಾರೆ. ಏಳು ಪಂದ್ಯಗಳಲ್ಲಿ 7 ವಿಕೆಟ್ ದಾಖಲೆ ಹೊಂದಿದ್ದಾರೆ. ಅದು ಬಿಟ್ಟರೆ ಪ್ರಥಮದರ್ಜೆ ಕ್ರಿಕೆಟ್‌ನಲ್ಲಿ ಮುಂಬೈ ತಂಡದ ಪರ ಸಲ್ವಿ ಆಡುತ್ತಿದ್ದರು. ಕ್ರಿಕೆಟ್ ವೇಳೆ ಗಂಭೀರ ಗಾಯಗೊಂಡ ಸಲ್ವಿ ಆ ಬಳಿಕ ಕ್ರಿಕೆಟ್‌ ಕ್ಷೇತ್ರದಿಂದ ದೂರ ಉಳಿಯಬೇಕಾಗಿ ಬಂದಿತ್ತು. ಅಂದ್ಹಾಗೆ, ಆ್ಯಸ್ಟ್ರೋಫಿಸಿಕ್ಸ್‌ನಲ್ಲಿ ಸಲ್ವಿ ಪಿಎಚ್‌ಡಿ ಪದವಿ ಪಡೆದಿದ್ದಾರೆ ಅಂದೆವಲ್ಲ, ಈ ವಿದ್ಯಾಭ್ಯಾಸ ಮುಗಿಸಿದವರು ಎಲ್ಲಿ ಕೆಲಸ ಮಾಡಬಹುದು ಗೊತ್ತೆ? ಇಂಡಿಯನ್ ಸ್ಪೇಸ್ ರಿಸರ್ಚ್ ಆರ್ಗನೈಸೇಶನ್ (ಇಸ್ರೋ) ಅಥವಾ ನ್ಯಾಷನಲ್ ಆ್ಯಸ್ಟ್ರೊನಾಟ್ಸ್ ಆ್ಯಂಡ್ ಸ್ಪೇಸ್ ರೀಸರ್ಚ್ ಅಡ್ಮಿನಿಸ್ಟ್ರೇಶನ್ (ನಾಸಾ)ನಲ್ಲಿ ಸಲ್ವಿ ಕೆಲಸ ಮಾಡಲು ಅರ್ಹರು. ಅಂದರೆ ಯಾರಿಗೆಲ್ಲ ಸ್ಪೇಸ್ ವಿದ್ಯಾಭ್ಯಾಸದಲ್ಲಿ ಆಸಕ್ತಿಯಿದೆಯೋ ಅವರು ಆ್ಯಸ್ಟ್ರೋಫಿಸಿಕ್ಸ್ ಅಭ್ಯಾಸ ಮಾಡಬಹುದು.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Thursday, August 19, 2021, 16:11 [IST]
Other articles published on Aug 19, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X