ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

17 ವರ್ಷಗಳ ಬಳಿಕ ಪಾಕಿಸ್ತಾನದಲ್ಲಿ ಕ್ರಿಕೆಟ್ ಆಡಲು ಆಗಮಿಸಿದ ಇಂಗ್ಲೆಂಡ್ ತಂಡ

17 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಇಂಗ್ಲೆಂಡ್ ತಂಡ ಪಾಕಿಸ್ತಾನಕ್ಕೆ ಪ್ರವಾಸ ಕೈಗೊಂಡಿದೆ. ಸೆಪ್ಟೆಂಬರ್ 20 ರಿಂದ ಸರಣಿ ಪ್ರಾರಂಭವಾಗಲಿದೆ. ಇಂಗ್ಲೆಂಡ್ ತಂಡ ಗುರುವಾರ ಕರಾಚಿಯನ್ನು ತಲುಪಿದೆ.

ಇಂಗ್ಲೆಂಡ್ ಕೊನೆಯದಾಗಿ 2005 ರಲ್ಲಿ ಪಾಕಿಸ್ತಾನದಲ್ಲಿ ಆಡಿತ್ತು. ಕಳೆದ ವರ್ಷವೇ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ಪಾಕಿಸ್ತಾನದಲ್ಲಿ ಸರಣಿ ಆಡಬೇಕಿತ್ತು. ಆದರೆ ಭದ್ರತೆಯ ಕಾರಣದಿಂದ ಎರಡೂ ತಂಡಗಳು ಪ್ರವಾಸದಿಂದ ಹಿಂದೆ ಸರಿದಿದ್ದವು. ಈ ಕ್ರಮವು ಪಾಕಿಸ್ತಾನ ಕ್ರಿಕೆಟ್ ಮಂಡಳಿಯನ್ನು (ಪಿಸಿಬಿ) ಕೆರಳಿಸಿತು, ಅವರು ಅದನ್ನು "ಅಗೌರವ" ಎಂದು ಕರೆದು ಅಸಮಾಧಾನ ವ್ಯಕ್ತಪಡಿಸಿತ್ತು.

ಟಿ 20 ವಿಶ್ವಕಪ್ ಪಾಕಿಸ್ತಾನ ತಂಡದಲ್ಲಿ ಶಾಹೀನ್ ಅಫ್ರಿದಿಗೆ ಸ್ಥಾನ, ಫಖರ್ ಜಮಾನ್ ಹೊರಕ್ಕೆಟಿ 20 ವಿಶ್ವಕಪ್ ಪಾಕಿಸ್ತಾನ ತಂಡದಲ್ಲಿ ಶಾಹೀನ್ ಅಫ್ರಿದಿಗೆ ಸ್ಥಾನ, ಫಖರ್ ಜಮಾನ್ ಹೊರಕ್ಕೆ

2009 ರಲ್ಲಿ ಲಾಹೋರ್‌ನಲ್ಲಿ ಶ್ರೀಲಂಕಾ ತಂಡದ ಬಸ್‌ನ ಮೇಲೆ ನಡೆದ ದಾಳಿಯ ನಂತರ, ಪಾಕಿಸ್ತಾನವು ಯುಎಇಯಂತಹ ತಟಸ್ಥ ಸ್ಥಳಗಳಲ್ಲಿ ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡುತ್ತಿತ್ತು. 2012 ಮತ್ತು 2015 ರಲ್ಲಿ ಇಂಗ್ಲೆಂಡ್‌ ಸರಣಿ ಯುಎಇಯಲ್ಲಿ ನಡೆದಿದ್ದವು.

ಕಳೆದ ಐದು ವರ್ಷಗಳಲ್ಲಿ ಪರಿಸ್ಥಿತಿ ಸುಧಾರಣೆಯಾಗುತ್ತಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳು ಪಾಕಿಸ್ತಾನದಲ್ಲಿ ಆಯೋಜನೆಯಾಗುತ್ತಿವೆ. 2022ರ ಆರಂಭದಲ್ಲಿ ಸುಮಾರು 25 ವರ್ಷಗಳ ನಂತರ ಆಸ್ಟ್ರೇಲಿಯಾ ಮೊದಲ ಬಾರಿಗೆ ಪಾಕಿಸ್ತಾನದಲ್ಲಿ ಕ್ರಿಕೆಟ್ ಆಡಿತ್ತು.

2022ರ ಟಿ20 ವಿಶ್ವಕಪ್‌ನ ಭಾರತ vs ಪಾಕಿಸ್ತಾನ ಪಂದ್ಯದ ಟಿಕೆಟ್‌ಗಳು ಸೋಲ್ಡ್ ಔಟ್2022ರ ಟಿ20 ವಿಶ್ವಕಪ್‌ನ ಭಾರತ vs ಪಾಕಿಸ್ತಾನ ಪಂದ್ಯದ ಟಿಕೆಟ್‌ಗಳು ಸೋಲ್ಡ್ ಔಟ್

 ಭಾರಿ ಭದ್ರತೆ ನೀಡಲಿರುವ ಪಾಕಿಸ್ತಾನ

ಭಾರಿ ಭದ್ರತೆ ನೀಡಲಿರುವ ಪಾಕಿಸ್ತಾನ

ಪಂದ್ಯದ ದಿನಗಳಲ್ಲಿ, ಇಂಗ್ಲೆಂಡ್ ತಂಡದ ಹೋಟೆಲ್ ಮತ್ತು ಕರಾಚಿಯ ರಾಷ್ಟ್ರೀಯ ಕ್ರೀಡಾಂಗಣದ ನಡುವಿನ ರಸ್ತೆಗಳನ್ನು ಮುಚ್ಚಲಾಗುತ್ತದೆ ಮತ್ತು ಸಶಸ್ತ್ರ ಕಾವಲುಗಾರರು ಭದ್ರತೆ ನೋಡಿಕೊಳ್ಳಲಿದ್ದಾರೆ. ಹೆಲಿಕಾಪ್ಟರ್ ಅವರ ಪ್ರಯಾಣವನ್ನು ಮೇಲ್ವಿಚಾರಣೆ ಮಾಡುತ್ತದೆ ಮತ್ತು ಕ್ರೀಡಾಂಗಣದ ವ್ಯಾಪ್ತಿಯ ಅಂಗಡಿಗಳು ಮತ್ತು ಕಚೇರಿಗಳನ್ನು ಮುಚ್ಚಲು ಆದೇಶಿಸಲಾಗುತ್ತದೆ.

ಕಳೆದ ಬಾರಿ ಇಂಗ್ಲೆಂಡ್ ಪಾಕಿಸ್ತಾನ ಪ್ರವಾಸ ಕೈಗೊಂಡಾಗ ಅಲ್ಲಿನ ಸರ್ಕಾರ ಉಗ್ರಗಾಮಿಗಳ ಜತೆ ಯುದ್ಧ ನಡೆಸಿತ್ತು. ಅಂದಿನಿಂದ ಭದ್ರತಾ ಪರಿಸ್ಥಿತಿಯು ಅಗಾಧವಾಗಿ ಸುಧಾರಿಸಿದೆ, ಆದರೆ ನೆರೆಯ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಮತ್ತೆ ಅಧಿಕಾರಕ್ಕೆ ಬಂದ ನಂತರ ದಾಳಿಗಳಲ್ಲಿ ಏರಿಕೆ ಕಂಡುಬಂದಿದೆ.

 ಪ್ರವಾಹದ ನಡುವೆಯೂ ಸರಣಿ ಆಯೋಜನೆ

ಪ್ರವಾಹದ ನಡುವೆಯೂ ಸರಣಿ ಆಯೋಜನೆ

ಪಾಕಿಸ್ತಾನವು ದುರಂತದ ಪ್ರವಾಹವನ್ನು ಎದುರಿಸುತ್ತಿರುವಾಗ ಪಾಕಿಸ್ತಾನ-ಇಂಗ್ಲೆಂಡ್ ಸರಣಿ ನಡೆಯುತ್ತಿದೆ. ಪ್ರವಾಹದಿಂದಾಗಿ ದೇಶದ ಮೂರನೇ ಒಂದು ಭಾಗ ಮುಳುಗಡೆಯಾಗಿದೆ, ಕನಿಷ್ಟ 33 ಮಿಲಿಯನ್ ಜನ ಪ್ರವಾಹದಿಂದ ತತ್ತರಿಸುತ್ತಿದ್ದಾರೆ.

ಕಳೆದ ತಿಂಗಳು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ECB) ಮಾನವೀಯ ದುರಂತದ ಹೊರತಾಗಿಯೂ ತಂಡವು ಪಾಕಿಸ್ತಾನದಲ್ಲಿ ಆಡಲು ನಿರ್ಧರಿಸಿದೆ ಎಂದು ಹೇಳಿದೆ.

"ನಾವು ಅಲ್ಲಿಗೆ ಹೋಗುವುದು ಮತ್ತು ಆಡುವುದು ಆ ದೇಶದ ಜನರಿಗೆ ಬಹಳ ದುಃಖಕರ ಸಮಯವಾಗಿದೆ ಎಂದು ನಾನು ಭಾವಿಸುತ್ತೇನೆ" ಎಂದು ಪುರುಷರ ಕ್ರಿಕೆಟ್‌ನ ವ್ಯವಸ್ಥಾಪಕ ನಿರ್ದೇಶಕ ರಾಬ್ ಕೀ ಹೇಳಿದರು.

 ಕರಾಚಿಗೆ ಬರುತ್ತಿದ್ದಂತೆ ಮೊಯಿನ್ ಅಲಿ ಟ್ವೀಟ್

ಕರಾಚಿಗೆ ಬರುತ್ತಿದ್ದಂತೆ ಮೊಯಿನ್ ಅಲಿ ಟ್ವೀಟ್

ಪಾಕಿಸ್ತಾನಕ್ಕೆ ಆಗಮಿಸಿದ ನಂತರ ಮಾಧ್ಯಮಗಳ ಜೊತೆ ಮಾತನಾಡಿರುವ ಇಂಗ್ಲೆಂಡ್ ತಂಡದ ನಾಯಕ ಜೋಸ್ ಬಟ್ಲರ್ ಸಂತಸ ವ್ಯಕ್ತವಪಡಿಸಿದ್ದಾರೆ. "ಇಷ್ಟು ಸುದೀರ್ಘ ಸಮಯದ ನಂತರ ನಾವು ಪಾಕಿಸ್ತಾನಕ್ಕೆ ಮರಳಲು ತುಂಬಾ ಸಂತೋಷವಾಗಿದೆ. ಜನರು ಪ್ರವಾಹದಿಂದ ಕಠಿಣ ಸಮಯವನ್ನು ಎದುರಿಸುತ್ತಿದ್ದಾರೆಂದು ನಮಗೆ ಚೆನ್ನಾಗಿ ತಿಳಿದಿದೆ. ಕ್ರೀಡೆಯು ಜನರನ್ನು ಒಂದುಗೂಡಿಸುವ ಶಕ್ತಿಯನ್ನು ಹೊಂದಿದೆ ಮತ್ತು ನಾವು ಉತ್ತಮ ಪ್ರದರ್ಶನವನ್ನು ನೀಡಲು ಬಯಸುತ್ತೇವೆ." ಎಂದು ಹೇಳಿದ್ದಾರೆ.

ಮತ್ತೊಬ್ಬ ಇಂಗ್ಲೆಂಡ್ ಆಟಗಾರ ಮೊಯಿನ್ ಅಲಿ ಟ್ವೀಟ್ ಮಾಡಿದ್ದು, ಶಾಂತಿಯುತ ಪಾಕಿಸ್ತಾನ ನೆಲಕ್ಕೆ ಕಾಲಿಡಲು ಸಂತಸವಾಗಿದೆ ಎಂದು ಹೇಳಿದ್ದಾರೆ.

 ಸೆಪ್ಟೆಂಬರ್ 20ರಿಂದ ಅಕ್ಟೋಬರ್ 2ರವರೆಗೆ ಸರಣಿ

ಸೆಪ್ಟೆಂಬರ್ 20ರಿಂದ ಅಕ್ಟೋಬರ್ 2ರವರೆಗೆ ಸರಣಿ

ಜೋಸ್ ಬಟ್ಲರ್ ನಾಯಕತ್ವದ 19 ಆಟಗಾರರ ಇಂಗ್ಲೆಂಡ್ ತಂಡವು ಕರಾಚಿ ಮತ್ತು ಲಾಹೋರ್‌ನಲ್ಲಿ ಸೆಪ್ಟೆಂಬರ್ 20 ರಿಂದ ಅಕ್ಟೋಬರ್ 2 ರವರೆಗೆ ಪಾಕಿಸ್ತಾನದ ವಿರುದ್ಧ ಏಳು ಟ್ವೆಂಟಿ 20 ಪಂದ್ಯಗಳನ್ನು ಆಡಲಿದ್ದು, ಮುಂದಿನ ತಿಂಗಳು ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗಾಗಿ ಎರಡೂ ತಂಡಗಳು ಸಿದ್ಧತೆ ನಡೆಸಲಿವೆ. ಮೂರು ಟೆಸ್ಟ್ ಪಂದ್ಯಗಳನ್ನು ಆಡಲು ಇಂಗ್ಲೆಂಡ್ ಡಿಸೆಂಬರ್‌ನಲ್ಲಿ ಮತ್ತೆ ಪಾಕಿಸ್ತಾನಕ್ಕೆ ಮರಳಲಿದೆ.

ಆಸ್ಟ್ರೇಲಿಯಾ ಸರಣಿಯು "ನಮ್ಮ ಈವೆಂಟ್ ಯೋಜನೆ ಮತ್ತು ಕಾರ್ಯಾಚರಣೆಯ ಕೌಶಲ್ಯಗಳನ್ನು ಪ್ರದರ್ಶಿಸಿದೆ" ಎಂದು ಪಿಸಿಬಿ ಹೇಳಿದೆ ಮತ್ತು ಇಂಗ್ಲೆಂಡ್ ಪಂದ್ಯಗಳು ಸಹ ಸುರಕ್ಷಿತವಾಗಿ ನಡೆಯುತ್ತವೆ ಎನ್ನುವ ವಿಶ್ವಾಸವನ್ನು ವ್ಯಕ್ತಪಡಿಸಿದೆ.

Story first published: Thursday, September 15, 2022, 17:55 [IST]
Other articles published on Sep 15, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X