ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿರಾಟ್ ಕೊಹ್ಲಿ ಆಕ್ರಮಣಕಾರಿ ವರ್ತನೆಗೆ ಮಿತಿ ಬೇಕು ಎಂದ ಮಾಜಿ ಕ್ರಿಕೆಟಿಗ

Farokh Engineer said Virat Kohlis aggression should be within limits
ವಿರಾಟ್ ಹೀಗೆ ಎಗರಾಡೋದನ್ನ ಕಮ್ಮಿ ಮಾಡ್ಲಿಲ್ಲ ಅಂದ್ರೆ ಅಷ್ಟೆ ಕಥೆ! | Oneindia Kannada

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯಲ್ಲಿ ವಿರಾಟ್ ಕೊಹ್ಲಿ ಪಡೆ ಆತಿಥೇಯ ತಂಡದ ವಿರುದ್ಧ ಮೇಲುಗೈ ಸಾಧಿಸಿದೆ. ಪ್ರದರ್ಶನದ ಬಳಿಕ ಭಾರತದ ಮಾಜಿ ಕ್ರಿಕೆಟಿಗ ಫಾರೂಕ್ ಇಂಜೀನಿಯರ್ ಪ್ರತಿಕ್ರಿಯಿಸಿದ್ದಾರೆ. ಎದುರಾಳಿಯ ವಿರುದ್ಧ ಭಾರತದ ನಾಯಕ ವಿರಾಟ್ ಕೊಹ್ಲಿ ಕೆಚ್ಚೆಗೆಯ ಸಾಮರ್ಥ್ಯವನ್ನು ಪ್ರದರ್ಶಿಸಿದ್ದಕ್ಕೆ ಅವರು ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ. ಲಾರ್ಡ್ಸ್ ಮೈದಾನದಲ್ಲಿ ಭಾರತ ಅದ್ಭುತವಾದ ಹೋರಾಟದ ಮನೋಭಾವ ಪ್ರದರ್ಶಿಸುವ ಮೂಲಕ ಸಾಧಿಸಿದ ಐತಿಹಾಸಿಕ ಜಯವನ್ನು ಫಾರೂಕ್ ಇಂಜೀನಿಯರ್ ಉಲ್ಲೇಖಿಸಿದ್ದಾರೆ.

ಸ್ಪೋರ್ಟ್ಸ್ ತಕ್ ಜೊತೆಗೆ ಮಾತನಾಡಿದ 83ರ ಹರೆಯದ ಭಾರತದ ಮಾಜಿ ಕ್ರಿಕೆಟಿಗ ಫಾರೂಕ್ ಇಂಜೀನಿಯರ್ ಎದುರಾಳಿಗಳ ಆಕ್ರಮಣಕಾರಿ ಮನೋಭಾವಕ್ಕೆ ಅದೇ ದಾಟಿಯಲ್ಲಿ ಪ್ರತಿಕ್ರಿಯೆ ನೀಡುವ ಮೂಲಕ ಗೌರವ್ ಸಂಪಾದಿಸುವವರಲ್ಲಿ ನಾನು ಮೊದಲಿಗನಾಗಿದ್ದೇನೆ ಎಂದಿದ್ದಾರೆ. ಇದೇ ಸಂದರ್ಣದಲ್ಲಿ ಅವರು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಎದುರಾಳಿ ತಂಡಗಳ ವಿರುದ್ಧ ಮಾತಿನ ಚಕಮಕಿಯಲ್ಲಿ ತೊಡಗಿಸಿಕೊಳ್ಳುವಾದ ಎಚ್ಚರ ವಹಿಸಿಕೊಳ್ಳುವಂತೆ ತಿಳಿಸಿದ್ದಾರೆ.

ಐಪಿಎಲ್‌ನಲ್ಲಿ ಆರ್‌ಸಿಬಿ ಪರ ವಿಶೇಷ ದಾಖಲೆ ಬರೆಯಲಿದ್ದಾರೆ ಟಿಮ್ ಡೇವಿಡ್ಐಪಿಎಲ್‌ನಲ್ಲಿ ಆರ್‌ಸಿಬಿ ಪರ ವಿಶೇಷ ದಾಖಲೆ ಬರೆಯಲಿದ್ದಾರೆ ಟಿಮ್ ಡೇವಿಡ್

ಲಾರ್ಡ್ಸ್ ಟೆಸ್ಟ್‌ನಲ್ಲಿ ವಿರಾಟ್ ಕೊಹ್ಲಿ ಹೆಚ್ಚು ಆಕ್ರಮಣಕಾರಿಯಾಗಿ ಕಂಡುಬಂದಿದ್ದರು. ಅದರಲ್ಲೂ ವೇಗಿ ಜಸ್ಪ್ರೀತ್ ಬೂಮ್ರಾ ಹಾಗೂ ಜೇಮ್ಸ್ ಆಂಡರ್ಸನ್ ಮಧ್ಯೆ ನಡೆದ ಮಾತಿನ ಚಕಮಕಿ ಕೊಹ್ಲಿಯನ್ನು ಮತ್ತಷ್ಟು ಕೆರಳಿಸಿತ್ತು. ಇದಕ್ಕೆ ತಕ್ಕನಾಗಿ ಇಂಗ್ಲೆಂಡ್ ಆಟಗಾರರ ವಿರುದ್ಧ ಆಕ್ರಮಣಕಾರಿ ಮನೋಭಾವ ಪ್ರದರ್ಶಿಸಲು ಆಟಗಾರರಿಗೆ ನಾಯಕ ಕೊಹ್ಲಿ ಹುರಿದುಂಬಿಸಿದ್ದರು.

ಅಂತಿಮ ದಿನದಾಟದಲ್ಲಿ ಟೀಮ್ ಇಂಡಿಯಾ ಪರವಾಗಿ ಕ್ರೀಸ್‌ನಲ್ಲಿದ್ದ ಸ್ಪೆಶಲಿಸ್ಟ್ ಬ್ಯಾಟ್ಸ್‌ಮನ್ ಅಂದರೆ ರಿಷಭ್ ಪಂತ್ ಮಾತ್ರ. ಆದರೆ ಪಂತ್ ಕೊನೆಯ ದಿನ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲು ಸಾಧ್ಯವಾಗದೇ ಬೇಗನೆ ಫೆವಿಲಿಯನ್‌ಗೆ ಮರಳಿದ್ದರು. ಆದರೆ ನಂತರ ಕ್ರೀಸ್‌ಗಿಳಿದ ಮೊಹಮ್ಮದ್ ಶಮಿ ಹಾಗೂ ಜಸ್ಪ್ರೀತ್ ಬೂಮ್ರಾ ಇಂಗ್ಲೆಂಡ್ ಬೌಲರ್‌ಗಳನ್ನು ಸಂಪೂರ್ಣವಾಗಿ ಬೆವರಿಸಿದ್ದರು. ಮುರಿಯದ 9ನೇ ವಿಕೆಟ್‌ಗೆ ಈ ಜೋಡಿ 89 ರನ್‌ಗಳ ಜೊತೆಯಾಟವನ್ನು ನೀಡಿತ್ತು. ಈ ಮೂಲಕ ಇಂಗ್ಲೆಂಡ್‌ಗೆ 271 ರನ್‌ಗಳ ಗುರಿಯನ್ನು ನಿಗದಿಪಡಿಸಿತ್ತು ಭಾರತ. ಬಳಿಕ ಬೌಲಿಂಗ್‌ ದಾಳಿಯನ್ನು ಇಂಗ್ಲೆಂಡ್ ತಂಡವನ್ನು ಕೇವಲ 120 ರನ್‌ಗಳಿಗೆ ಆಲೌಟ್ ಮಾಡುವಲ್ಲಿ ಯಶಸ್ವಿಯಾಗಿತ್ತು. ಈ ಮೂಲಕ 151 ರನ್‌ಗಳಿಂದ ಲಾರ್ಡ್ಸ್ ಪಂದ್ಯವನ್ನು ಗೆದ್ದ ವಿರಾಟ್ ಕೊಹ್ಲಿ ಬಳಗ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು 1-0 ಅಂತರದಿಂದ ಮುನ್ನಡೆಪಡೆದಿತ್ತು.

"ವಿರಾಟ್ ಕೊಹ್ಲಿಯ ಆಕ್ರಮಣಕಾರಿ ಮನೋಭಾವವನ್ನು ನಾನು ಪ್ರಶಂಸಿಸುತ್ತೇನೆ. ಆತನೀರ್ವ ಆಕ್ರಮಣಕಾರಿ ನಾಯಕ. ಅದು ತುಂಬಾ ಒಳ್ಳೆಯದು. ಆದರೆ ಖಂಡಿತವಾಗಿಯೂ ಅದು ಒಂದು ಸೀಮಿತ ರೇಖೆಯನ್ನು ದಾಟಬಾರದು. ಇಲ್ಲವಾದರೆ ಮ್ಯಾಚ್ ರೆಫ್ರೀ ಅಥವಾ ಅಂಪಾಯರ್‌ಗಳು ಮಧ್ಯಪ್ರವೇಶಿಸಬೇಕಾಗುತ್ತದೆ" ಎಂದಿದ್ದಾರೆ ಫಾರೂಕ್ ಇಂಜೀನಿಯರ್.

"ಬಹುಶಃ ಕೆಲ ಬಾರಿ ಆತ ತನ್ನ ಆಕ್ರಮಣಕಾರಿ ಆಟವನ್ನು ಕಡಿಮೆಗೊಳಿಸಬೇಕು. ಕೆಲ ಸಂದರ್ಭಗಳಲ್ಲಿ ಆತ ಅದನ್ನು ಹೆಚ್ಚು ಕಾಲ ಎಳೆಯುತ್ತಾ ಸಾಗುತ್ತಾನೆ. ಆದರೆ ನಾನು ಆತನ ಆಕ್ರಮಣಕಾರಿತ್ವವನ್ನು ಇಷ್ಟಪಡುತ್ತೇನೆ. ಆತ ಉತ್ತಮ ನಾಯಕ. ಅದಕ್ಕಾಗಿ ನಾನು ಆತನಿಗೆ ಬೆಂಬಲವನ್ನು ನೀಡುತ್ತೇನೆ. ನನ್ನ ಪ್ರಕಾರ ಆತ ವಿಶ್ವ ಕ್ರಿಕೆಟ್‌ನ ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬ" ಎಂದಿದ್ದಾರೆ ಫಾರೂಕ್ ಇಂಜೀನಿಯರ್.

ಐಪಿಎಲ್ 2021 ದ್ವಿತೀಯ ಹಂತ: ರಾಜಸ್ಥಾನ್ ರಾಯಲ್ಸ್ ಪರ ಜೋಸ್ ಬಟ್ಲರ್ ಆಡಲ್ಲಐಪಿಎಲ್ 2021 ದ್ವಿತೀಯ ಹಂತ: ರಾಜಸ್ಥಾನ್ ರಾಯಲ್ಸ್ ಪರ ಜೋಸ್ ಬಟ್ಲರ್ ಆಡಲ್ಲ

"ಅವರು ಕೂಡ ಆಕ್ರಮಣವನ್ನು ಮಾಡುತ್ತಾರೆ. ಹೀಗಾಗಿ ನಿಮ್ಮ ಬ್ಯಾಟ್ಸ್‌ಮನ್‌ಗಳು ಆತ್ಮವಿಶ್ವಾಸವನ್ನು ಪಳೆದುಕೊಳ್ಳಬಹುದು. ಆದರೆ ಮೊಹಮ್ಮದ್ ಶಮಿ ಹಾಗೂ ಬೂಮ್ರಾ ತಮ್ಮದೇ ಶೈಲಿಯಲ್ಲಿ ಅದ್ಭುತವಾಗಿ ಪ್ರತ್ಯುತ್ತರವನ್ನು ನೀಡಿದರು. ಅವರು ಉತ್ತಮವಾಗಿ ಬ್ಯಾಟಿಂಗ್ ಮಾಡಬಲ್ಲರು. ಅದರೆ ಅವರು ಹೇಗೆ ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳಬೇಕೆಂದು ಅರಿತುಕೊಂಡಿದ್ದರು. ಅವರು ಸಾಕಷ್ಟು ರನ್‌ಗಳನ್ನು ಗಳಿಸುವ ಮೂಲಕ ನಾಯಕ ವಿರಾಟ್ ಕೊಹ್ಲಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಳ್ಳಲು ಸಾಧ್ಯವಾಯಿತು. ಇಲ್ಲಿಂದ ಇಂಗ್ಲೆಂಡ್ ತಂಡಕ್ಕೆ ಅವಮಾನ ಆರಂಭವಾಗಿತ್ತು" ಎಂದಿದ್ದಾರೆ ಫಾರೂಕ್ ಇಂಜೀನಿಯರ್.

Story first published: Sunday, August 22, 2021, 16:01 [IST]
Other articles published on Aug 22, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X