ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಈತ ನಮಗೆ ಗೊತ್ತಿರುವ ಬೌಲರ್ ಅಲ್ಲ ಎಂದ ಪಾಕಿಸ್ತಾನ ಮಾಜಿ ಕ್ರಿಕೆಟರ್ ವಕಾರ್ ಯೂನಿಸ್

Former Pakistan Cricketer Questions Shaheen Afridi Selection in T20 World Cup Squad

ಪಾಕಿಸ್ತಾನದ ಸ್ಟಾರ್ ವೇಗದ ಬೌಲರ್ ಶಾಹೀನ್ ಶಾ ಆಫ್ರಿದಿ ಮೊಣಕಾಲಿನ ಗಾಯದಿಂದ ಚೇತರಿಸಿಕೊಂಡಿದ್ದಾರೆಯೇ ಎಂಬ ಬಗ್ಗೆ ಅನುಮಾನ ವ್ಯಕ್ತವಾಗುತ್ತಿದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮತ್ತು ಅದರ ವೈದ್ಯಕೀಯ ಸಮಿತಿಗೆ ಈ ಬಗ್ಗೆ ಹಲವಾರು ಪ್ರಶ್ನೆಗಳು ಎದುರಾಗಿವೆ.

ಮಾಜಿ ವೇಗದ ಬೌಲಿಂಗ್ ದಿಗ್ಗಜರಾದ ವಾಸಿಂ ಅಕ್ರಮ್ ಮತ್ತು ವಕಾರ್ ಯೂನಿಸ್, ಮಾಜಿ ನಾಯಕ ಮಿಸ್ಬಾ-ಉಲ್-ಹಕ್ ಮತ್ತು ಲಾಹೋರ್ ಕ್ಲಾಂಡರ್ಸ್ ಮುಖ್ಯ ಕೋಚ್ ಆಕಿಬ್ ಜಾವೇದ್ ಈ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಮೆಲ್ಬೋರ್ನ್‌ನಲ್ಲಿ ಭಾನುವಾರ ಭಾರತದ ವಿರುದ್ಧ ಆಡುವಾಗ ಶಾಹೀನ್ ಅಫ್ರಿದಿ ಫಿಟ್‌ನೆಸ್ ಮತ್ತು ಅಭ್ಯಾಸದ ಕೊರತೆಯನ್ನು ಎದುರಿಸುವಂತೆ ಕಂಡು ಬಂದಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಆತನಿಲ್ಲದೆ ಟೀಂ ಇಂಡಿಯಾವನ್ನ ಊಹಿಸಲು ಸಾಧ್ಯವಿಲ್ಲ: ಕಪಿಲ್ ದೇವ್ ಹೀಗೆ ಹೇಳಿದ್ದು ಯಾರ ಬಗ್ಗೆ?ಆತನಿಲ್ಲದೆ ಟೀಂ ಇಂಡಿಯಾವನ್ನ ಊಹಿಸಲು ಸಾಧ್ಯವಿಲ್ಲ: ಕಪಿಲ್ ದೇವ್ ಹೀಗೆ ಹೇಳಿದ್ದು ಯಾರ ಬಗ್ಗೆ?

"ಈತ ನಮಗೆ ತಿಳಿದಿರುವ ಶಾಹೀನ್ ಅಫ್ರಿದಿ ಅಲ್ಲ. ಆತನ ಬೌಲಿಂಗ್‌ನಲ್ಲಿ ಮೊದಲಿನ ಲಯ ಇರಲಿಲ್ಲ. ಅದೇ ಕಾರಣಕ್ಕೆ ಹಲವು ಪ್ರಶ್ನೆಗಳನ್ನು ಕೇಳಲಾಗುತ್ತಿದೆ. ಆತ ಸಂಪೂರ್ಣವಾಗಿ ಚೇತರಿಸಿಕೊಳ್ಳುವ ಮೊದಲೇ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ ಮತ್ತು ಅವರು ಈಗ ಅಂತಹ ದೊಡ್ಡ ಪಂದ್ಯಾವಳಿಗೆ ಸರಿಹೊಂದುತ್ತಾರೆಯೇ?" ವಕಾರ್ ಯೂನಿಸ್ ಪ್ರಶ್ನೆ ಮಾಡಿದ್ದಾರೆ.

ಮೊಣಕಾಲಿನ ಗಾಯಕ್ಕೆ ತುತ್ತಾಗಿದ್ದ ಶಾಹೀನ್

ಮೊಣಕಾಲಿನ ಗಾಯಕ್ಕೆ ತುತ್ತಾಗಿದ್ದ ಶಾಹೀನ್

ಜುಲೈ ತಿಂಗಳಲ್ಲಿ ಗಾಲೆಯಲ್ಲಿ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಫೀಲ್ಡಿಂಗ್ ಮಾಡುವಾಗ ಮೊಣಕಾಲಿನ ಗಾಯಕ್ಕೆ ಒಳಗಾದ ಶಾಹೀನ್, ನಂತರ ಇಂಗ್ಲೆಂಡ್‌ನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಇಂಗ್ಲೆಂಡ್‌ನಲ್ಲಿಯೇ ಗಾಯದಿಂದ ಚೇತರಿಸಿಕೊಂಡ ಶಾಹೀನ್ ನೇರವಾಗಿ ಆಸ್ಟ್ರೇಲಿಯಾಕ್ಕೆ ಪ್ರಯಾಣ ಮಾಡಿದ್ದರು.

ಟಿ20 ವಿಶ್ವಕಪ್ ಆರಂಭಕ್ಕೆ ಮುನ್ನ ಬ್ರಿಸ್ಬೇನ್‌ನಲ್ಲಿ ನಡೆದ ಎರಡು ಅಭ್ಯಾಸ ಪಂದ್ಯಗಳಲ್ಲಿ ಕೇವಲ 6 ಓವರ್‌ಗಳನ್ನು ಬೌಲಿಂಗ್ ಮಾಡಿದ್ದರು. ನಂತರ ಭಾನುವಾರ ಭಾರತದ ವಿರುದ್ಧ ನಿರ್ಣಾಯಕ ಪಂದ್ಯದಲ್ಲಿ ಬೌಲಿಂಗ್ ಮಾಡಿದರು.

ಆತನಿಲ್ಲದೆ ಟೀಂ ಇಂಡಿಯಾವನ್ನ ಊಹಿಸಲು ಸಾಧ್ಯವಿಲ್ಲ: ಕಪಿಲ್ ದೇವ್ ಹೀಗೆ ಹೇಳಿದ್ದು ಯಾರ ಬಗ್ಗೆ?

ಶಾಹೀನ್ ಅಫ್ರಿದಿ ಫಿಟ್ನೆಸ್ ಬಗ್ಗೆ ಅನುಮಾನ

ಶಾಹೀನ್ ಅಫ್ರಿದಿ ಫಿಟ್ನೆಸ್ ಬಗ್ಗೆ ಅನುಮಾನ

ವಿಶ್ವಕಪ್‌ಗೆ ಮುನ್ನ ತ್ರಿಕೋನ ಸರಣಿಗಾಗಿ ತಂಡವು ನ್ಯೂಜಿಲೆಂಡ್‌ನಲ್ಲಿದ್ದಾಗ, ಶಾಹೀನ್ ಫಿಟ್‌ನೆಸ್ ಕುರಿತು ಪಾಕಿಸ್ತಾನ ನಾಯಕ ಬಾಬರ್ ಅಜಮ್, ಸಕ್ಲೇನ್ ಮುಷ್ತಾಕ್ ಮತ್ತು ತಂಡದ ವೈದ್ಯರೊಂದಿಗೆ ಮಾತನಾಡಿದ್ದೆ ಎಂದು ಪಾಕಿಸ್ತಾನದ ಮಾಜಿ ನಾಯಕ ಮತ್ತು ಮುಖ್ಯ ಕೋಚ್ ಹೇಳಿದ್ದಾರೆ.

ಈ ಬಗ್ಗೆ ಮಾತನಾಡಿರುವ ವಕಾರ್ ಯೂನಿಸ್, "ಶಾಹಿನ್ ಅಫ್ರಿದಿ ಚೇತರಿಕೆ ಬಗ್ಗೆ ನಾನು ಅವರ ಬಳಿ ಮಾತನಾಡಿದೆ. ಅವರು ನೆಟ್ಸ್‌ನಲ್ಲಿ ಎಷ್ಟೇ ಬೌಲ್ ಮಾಡಿದರು ಎಂದು ಕೇಳಿದೆ. ಆದರೆ, ವಿಶ್ವಕಪ್ ಪಂದ್ಯದಲ್ಲಿ ಆಡುವುದು ಸಂಪೂರ್ಣವಾಗಿ ವಿಭಿನ್ನವಾದ ಪರಿಸ್ಥಿತಿಯಾಗಿದೆ" ಎಂದು ಹೇಳಿದ್ದಾರೆ.

ನ್ಯೂಜಿಲೆಂಡ್‌ನಲ್ಲಿ ಅವರನ್ನು ಆಡಿಸಲು ಕೇಳಿದ್ದೆ

ನ್ಯೂಜಿಲೆಂಡ್‌ನಲ್ಲಿ ಅವರನ್ನು ಆಡಿಸಲು ಕೇಳಿದ್ದೆ

"ಅವರ ರಿಹ್ಯಾಬ್ ಚೆನ್ನಾಗಿ ನಡೆಯುತ್ತಿದೆಯೇ ಎಂದು ನಾನು ಕೋಚ್ ಮತ್ತು ನಾಯಕನ ಬಳಿ ಕೇಳಿದೆ, ನಂತರ ವಿಶ್ವಕಪ್‌ಗಾಗಿ ಕಾಯುವ ಬದಲು ತ್ರಿಕೋನ ಸರಣಿಯಲ್ಲಿ ಅವರನ್ನು ಏಕೆ ಆಡಿಸಬಾರದು ಎಂದು ಕೇಳಿದ್ದೆ, ಅದಕ್ಕೆ ಅಕ್ರಂ ಸಹ ಒಪ್ಪಿಕೊಂಡರು, ಆದರೆ ಅವರನ್ನು ಆಡಿಸಲಿಲ್ಲ. ಶಾಹೀನ್ ಭಾರತದ ವಿರುದ್ಧದ ಪಂದ್ಯದಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ" ಎಂದು ಹೇಳಿದರು.

"ಅವರ ಬೌಲಿಂಗ್‌ನಲ್ಲಿ ಮೊದಲಿನ ಮೊನಚು ಇದ್ದಂತೆ ಕಾಣಲಿಲ್ಲ. ಅದು ಅರ್ಥವಾಗುವಂತಹದ್ದಾಗಿದೆ ಏಕೆಂದರೆ ಮೊಣಕಾಲಿನ ಗಾಯದಿಂದ ಹಿಂತಿರುಗಿದ ಯಾವುದೇ ವೇಗದ ಬೌಲರ್ ಮೊದಲು ಫ್ಲಾಟ್ ಔಟ್ ಆಗುವುದರ ಬಗ್ಗೆ ಕಾಳಜಿ ವಹಿಸುತ್ತಾರೆ. ಅವರು ಎಷ್ಟು ಬೇಗನೆ ಸಂಪೂರ್ಣ ಮ್ಯಾಚ್ ಫಿಟ್ನೆಸ್ ಗಳಿಸುತ್ತಾರೆ ಎಂದು ನೋಡೋಣ," ಎಂದು ಅವರು ಹೇಳಿದರು.

ಶಾಹೀನ್ ಮೊದಲಿನಂತೆ ಫಿಟ್ ಆಗಿಲ್ಲ

ಶಾಹೀನ್ ಮೊದಲಿನಂತೆ ಫಿಟ್ ಆಗಿಲ್ಲ

ಲಾಹೋರ್ ಕ್ಲಾಂಡರ್ಸ್ ಫ್ರಾಂಚೈಸ್‌ನಲ್ಲಿ ಶಾಹೀನ್‌ನೊಂದಿಗೆ ನಿಕಟವಾಗಿ ಕೆಲಸ ಮಾಡಿದ ಆಕಿಬ್, ಶಾಹೀನ್ ಭಾರತದ ವಿರುದ್ಧ ಬೌಲಿಂಗ್ ಮಾಡುವಾಗ ಮೊದಲಿಂತೆ ಇರಲಿಲ್ಲ ಎಂದು ಹೇಳಿದರು.

"ಮೊಣಕಾಲಿನ ಗಾಯದಿಂದ ಹಿಂತಿರುಗುತ್ತಿರುವಾಗ ಬೆನ್ನು ಬಗ್ಗಿಸಲು ಸಾಧ್ಯವಾಗುವುದಿಲ್ಲ. ಅವರು ಬೇಗನೆ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳಿದ್ದಾರೆಯೇ ಎಂದು ನಾನು ಆಶ್ಚರ್ಯ ಪಡುತ್ತೇನೆ," ಎಂದು ಮಾಜಿ ಟೆಸ್ಟ್ ಬೌಲರ್ ಹೇಳಿದರು.

ಶಾಹೀನ್ ಅಫ್ರಿದಿ ಭಾರತದ ವಿರುದ್ಧದ ಪಂದ್ಯದಲ್ಲಿ ತಮ್ಮ ಕೊನೆಯ ಓವರ್ ನಲ್ಲಿ ಅವರು 19 ರನ್ ಬಿಟ್ಟುಕೊಟ್ಟಿದ್ದರು. ಪಾಕಿಸ್ತಾನದ ಮಾಜಿ ಮಿಸ್ಬಾ ಉಲ್ ಹಕ್ 100 ಪ್ರತಿಶತದಷ್ಟು ಫಿಟ್ ಆಗಿರುವ ಆಟಗಾರನನ್ನು ಮಾತ್ರ ಕಣಕ್ಕಿಳಿಸಬೇಕು ಎಂದು ಹೇಳಿದ್ದಾರೆ. "ಪಂದ್ಯದ ಅಭ್ಯಾಸದಲ್ಲಿ ಕಡಿಮೆ ಇರುವ ಬೌಲರ್‌ನೊಂದಿಗೆ ಆಡುವುದು ಅಪಾಯಕಾರಿ" ಎಂದು ಅವರು ಹೇಳಿದರು.

Story first published: Tuesday, October 25, 2022, 20:33 [IST]
Other articles published on Oct 25, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X