ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್ 2015 ಹಿಂದಕ್ಕೆ ದೂಡಿದ ಐಪಿಎಲ್ ಹಬ್ಬ

By Mahesh

ಬೆಂಗಳೂರು, ಏ.17: ಇಂಡಿಯನ್ ಪ್ರಿಮಿಯರ್ ಲೀಗ್ ವರ್ಷದಿಂದ ವರ್ಷಕ್ಕೆ ಜನಪ್ರಿಯತೆ ಹೆಚ್ಚಿಸಿಕೊಳ್ಳುತ್ತಲೇ ಇದೆ. ಹತ್ತು ಹಲವು ವಿವಾದಗಳ ನಡುವೆಯೂ ಹೆಚ್ಚೆಚ್ಚು ಜನರನ್ನು ತಲುಪುವಲ್ಲಿ ಯಶಸ್ವಿಯಾಗಿದೆ. ಐಸಿಸಿ ವಿಶ್ವಕಪ್ 2015ರ ಜನಪ್ರಿಯತೆಯನ್ನು ಐಪಿಎಲ್ 2015 ಹಿಂದಿಕ್ಕಿ ಮುಂದೆ ನುಗ್ಗಿದೆ.

2008ರಿಂದ ಇಲ್ಲಿ ತನಕ ಟ್ರೆಂಡ್ಸ್ ಲೆಕ್ಕ ಹಾಕಿದ ಗೂಗಲ್, ಕಳೆದ ಆರು ಐಪಿಎಲ್ ನಲ್ಲಿ ಕ್ರೇಜ್ ಹೆಚ್ಚಿದೆ. ಅದರಲ್ಲೂ 2014ರಲ್ಲಿ ಹೆಚ್ಚಿನ ಕ್ರೇಜ್ ಕಂಡು ಬಂದಿತು. ರಾಜಸ್ಥಾನ್ ರಾಯಲ್ಸ್ 2008ರಲ್ಲಿ ಮೊಟ್ಟ ಮೊದಲ ಬಾರಿಗೆ ಐಪಿಎಲ್ ಟ್ರೋಫಿ ಎತ್ತಿ ಹಿಡಿದ ಕ್ಷಣದಿಂದ ಐಪಿಎಲ್ ಬಗ್ಗೆ ಆನ್ ಲೈನ್ ನಲ್ಲಿ ಸರ್ಚ್ ಹೆಚ್ಚಾಗತೊಡಗಿತು ಎಂದು ಗೂಗಲ್ ಹೇಳಿದೆ.

[47 ದಿನ, 60 ಪಂದ್ಯ, ಫುಲ್ ಟೈಂ ಟೇಬಲ್] | [8 ತಂಡಗಳ ನೂರೆಂಟು ಆಟಗಾರರು] | [ಐಪಿಎಲ್ 2015: ಫ್ಯಾನ್ಸಿಗೆ ಗೈಡ್]

ಚೆನ್ನೈ ಸೂಪರ್ ಕಿಂಗ್ ತಂಡದ ಬಗ್ಗೆ ಹೆಚ್ಚಿನ ಹುಡುಕಾಟ ಕಂಡು ಬಂದಿದೆ. ಎರಡು ಬಾರಿ ಐಪಿಎಲ್ ಕಪ್ ಎತ್ತಿರುವ ಸಿಎಸ್ ಕೆ ಜನಪ್ರಿಯತೆ ಹೆಚ್ಚಲು ಟೀಂ ಇಂಡಿಯಾ ನಾಯಕ ಎಂಎಸ್ ಧೋನಿ ಅವರು ಕೂಡಾ ಕಾರಣರಾಗಿದ್ದಾರೆ. ನಂತರದ ಸ್ಥಾನದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವಿದೆ. ಕೆಕೆಆರ್ ಮಾಲೀಕ ಶಾರುಖ್ ಖಾನ್ ಅವರ ಜನಪ್ರಿಯತೆ ತಂಡಕ್ಕೆ ಪ್ಲಸ್ ಪಾಯಿಂಟ್ ಆಗಿದೆ.

Google search: 10-day IPL 2015 eclipses World Cup 2015

ಸಚಿನ್ ಇದ್ದ ಕಾಲದಿಂದಲೂ ಮುಂಬೈ ಇಂಡಿಯನ್ಸ್ ಜನಪ್ರಿಯತೆ ಉಳಿಸಿಕೊಂಡಿದೆ. ನಂತರದ ಸ್ಥಾನದಲ್ಲಿ ಕಿಂಗ್ಸ್ ‍XI ಪಂಜಾಬ್ ಇದೆ. ಗುಳಿಕೆನ್ನೆ ಚೆಲುವೆ ಪ್ರೀತಿ ಜಿಂಟಾ ಬಲದಿಂದ ಪಂಜಾಬ್ ಕಳೆದ ಬಾರಿ ಉತ್ತಮ ಅಟ ಪ್ರದರ್ಶಿಸಿತ್ತು.

ಡೆಲ್ಲಿ ಡೇರ್ ಡೆವಿಲ್ಸ್, ರಾಜಸ್ಥಾನ ರಾಯಲ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್ ರೈಸರ್ಸ್ ಹೈದರಾಬಾದ್ ನಂತರದ ಸ್ಥಾನಗಳಲ್ಲಿವೆ.

ಐಪಿಎಲ್ 2015ರಲ್ಲಿ ಇಲ್ಲಿ ತನಕ ಅತಿ ಹೆಚ್ಚು ಸರ್ಚ್ ಮಾಡಿದ ಪಂದ್ಯ ಚೆನ್ನೈನಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಡೆಲ್ಲಿ ಡೆರ್ ಡೇವಿಲ್ಸ್ ಪಂದ್ಯವಾಗಿದೆ. ಡೆಲ್ಲಿ ತಂಡವನ್ನು ಏಕೈಕ ರನ್ ನಿಂದ ಚೆನ್ನೈ ಸೋಲಿಸಿತ್ತು.

ಊರುಗಳ ಪೈಕಿ ಪಶ್ಚಿಮ ಬಂಗಾಲ ಪಟ್ಟಿಯಲ್ಲಿ ಟಾಪ್ ನಲ್ಲಿದೆ. ನಂತರ ಅಚ್ಚರಿಯೆಂಬಂತೆ ಪಾಂಡಿಚೇರಿ ಸ್ಥಾನ ಪಡೆದುಕೊಂಡಿದೆ. ಕರ್ನಾಟಕ, ತಮಿಳುನಾಡು ನಂತರದ ಸ್ಥಾನಗಳಲ್ಲಿವೆ.

ಒಟ್ಟಾರೆ ಐಪಿಎಲ್ ಈಗ ಸೋನಿ ಟಿವಿ ಚಾನೆಲ್ ದಾಟಿ ಮೊಬೈಲ್ ಗಳಲ್ಲಿ ಹಾಟ್ ಸ್ಟಾರ್ ಮೂಲಕ ಲಭ್ಯವಾಗಿದ್ದು ಜನಪ್ರಿಯತೆ ಇನ್ನಷ್ಟು ಹೆಚ್ಚಿಸಿದೆ. ಇತ್ತೀಚೆಗೆ ಟ್ವಿಟ್ಟರ್ ಕೂಡಾ ಮಿಸ್ಡ್ ಕಾಲ್ ನೀಡಿ ಪಂದ್ಯದ ಅಪ್ಡೇಟ್ ಪಡೆಯುವ ಸೌಲಭ್ಯ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು. (ಒನ್ ಇಂಡಿಯಾ ಸುದ್ದಿ)

Story first published: Wednesday, January 3, 2018, 10:02 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X