ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೊಹ್ಲಿ ಮತ್ತೊಂದು ದಾಖಲೆ ಮುರಿದ ಹಶೀಂ ಆಮ್ಲಾ

By Kiran B Hegde

ಡರ್ಬಾನ್, ಜ. 17: ಟೀಂ ಇಂಡಿಯಾ ಉಪನಾಯಕ ವಿರಾಟ್ ಕೊಹ್ಲಿ ಅವರ ಮತ್ತೊಂದು ವಿಶ್ವ ದಾಖಲೆಯನ್ನು ದಕ್ಷಿಣ ಆಫ್ರಿಕಾ ದಾಂಡಿಗ ಹಶೀಂ ಆಮ್ಲಾ ಮುರಿದಿದ್ದಾರೆ.

ಆಮ್ಲಾ ಅವರು ಶುಕ್ರವಾರ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಏಕ ದಿನ ಪಂದ್ಯದಲ್ಲಿ 10 ಬೌಂಡರಿ ಮೂಲಕ 66 ರನ್ ಗಳಿಸುವ ಮೂಲಕ ಅತ್ಯಂತ ವೇಗವಾಗಿ 5,000 ರನ್ ಗಳಿಸಿದ ಆಟಗಾರ ಎಂಬ ಕೀರ್ತಿಗೆ ಭಾಜನರಾದರು. [ಭಾರತ ವಿಶ್ವಕಪ್ ತಂಡಕ್ಕೆ ಪರಿಸರ ಪ್ರೇಮದ ಜರ್ಸಿ]

ಆಮ್ಲಾ ಅವರು 5,000 ರನ್‌ಗಳನ್ನು 101 ಇನ್ನಿಂಗ್ಸ್‌ಗಳಲ್ಲಿ (104 ಪಂದ್ಯಗಳು) ತಲುಪಿದರು.

hashim

ಮೊದಲು ಈ ದಾಖಲೆ ಭಾರತದ ವಿರಾಟ್ ಕೊಹ್ಲಿ ಹಾಗೂ ವೆಸ್ಟ್ ಇಂಡೀಸ್‌ನ ವಿವಿಯನ್ ರಿಚರ್ಡ್ಸನ್ ಹೆಸರಲ್ಲಿತ್ತು. ಇಬ್ಬರೂ 114 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದರು. [ಕೊಹ್ಲಿ ಮರೆಯಲಾಗದ ದಿನ]

ಹಶೀಂ ಆಮ್ಲಾ ದಾಖಲೆ ಮಾಡಿದ ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವು 61 ರನ್‌ಗಳಿಂದ ಡಕ್‌ವರ್ಥ್ / ಲೂಯಿಸ್ ವಿಧಾನದಲ್ಲಿ ಗೆಲುವು ಸಾಧಿಸಿತು.

ಕೇವಲ ಎರಡು ತಿಂಗಳ ಹಿಂದಷ್ಟೇ ಹಶೀಂ ಆಮ್ಲಾ ಅವರು 98 ಇನ್ನಿಂಗ್ಸ್‌ಗಳಲ್ಲಿ 17 ಶತಕಗಳನ್ನು ಗಳಿಸಿದ್ದರು. ವಿರಾಟ್ ಕೊಹ್ಲಿ 17 ಶತಕ ದಾಖಲಿಸಲು 112 ಇನ್ನಿಂಗ್ಸ್‌ ಪಡೆದಿದ್ದರು. [ಭಾರತ ಮತ್ತೆ ವಿಶ್ವಕಪ್ ಗೆಲ್ಲುತ್ತೆ]

ಅತ್ಯಂತ ವೇಗವಾಗಿ 5,000 ರನ್ ಗಡಿ ದಾಟಿದವರು...

  • ಹಾಶಿಂ ಆಮ್ಲಾ - 101 ಇನ್ನಿಂಗ್ಸ್
  • ವಿರಾಟ್ ಕೊಹ್ಲಿ, ವಿವಿಯನ್ ರಿಚರ್ಡ್ಸ್ - 114
  • ಬ್ರಿಯಾನ್ ಲಾರಾ - 118
  • ಗಾರ್ಡನ್ ಗ್ರೀನಿಡ್ಜ್ - 121
  • ಎಬಿ ಡೆ ವಿಲ್ಲಿಯರ್ಸ್ - 124

Story first published: Wednesday, January 3, 2018, 10:12 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X