ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಸಿಸಿ Ranking: ಟೆಸ್ಟ್‌ನಲ್ಲಿ ಭಾರತ ಫಸ್ಟು, ಟಿ20ಯಲ್ಲಿ ಪಾಕಿಸ್ತಾನ ಬೆಸ್ಟು!

ಟೆಸ್ಟ್‌ನಲ್ಲಿ ಭಾರತ ಫಸ್ಟು, ಟಿ20ಯಲ್ಲಿ ಪಾಕಿಸ್ತಾನ ಬೆಸ್ಟು..! | Oneindia Kannada
ICC Rankings: New Zealand face probability of slip in ODIs

ನವದೆಹಲಿ, ಜನವರಿ 2: ಟೆಸ್ಟ್, ಏಕದಿನ, ಟಿ20ಗೆ ಸಂಬಂಧಿಸಿ ಐಸಿಸಿ ನೂತನ ರ್ಯಾಂಕಿಂಗ್‌ ಪಟ್ಟಿ ಪ್ರಕಟಿಸಿದೆ. ಇದರಲ್ಲಿ ಪುರುಷರ ಟೆಸ್ಟ್‌ ಕ್ರಿಕೆಟ್‌ನಲ್ಲಿ ಭಾರತ ಅಗ್ರ ಸ್ಥಾನದಲ್ಲಿದ್ದರೆ, ಏಕದಿನದಲ್ಲಿ ಇಂಗ್ಲೆಂಡ್, ಟಿ20ಯಲ್ಲಿ ಪಾಕಿಸ್ತಾನ ಮೊದಲ ಸ್ಥಾನ ಪಡೆದುಕೊಂಡಿವೆ.

ಸಿಡ್ನಿ ಟೆಸ್ಟ್ ಪಂದ್ಯಕ್ಕಾಗಿ ಟೀಂ ಇಂಡಿಯಾದ ಸಂಭಾವ್ಯ XIಸಿಡ್ನಿ ಟೆಸ್ಟ್ ಪಂದ್ಯಕ್ಕಾಗಿ ಟೀಂ ಇಂಡಿಯಾದ ಸಂಭಾವ್ಯ XI

ಟೆಸ್ಟ್ ಮತ್ತು ಏಕದಿನದಲ್ಲಿ ನ್ಯೂಜಿಲ್ಯಾಂಡ್ 3ನೇ ಶ್ರೇಯಾಂಕದಲ್ಲಿದ್ದು, ಜನವರಿ 3ರಂದು ಆರಂಭಗೊಳ್ಳಲಿರುವ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯ ಬಳಿಕ ಮತ್ತೆ ರ್ಯಾಂಕಿಂಗ್‌ನಲ್ಲಿ ನ್ಯೂಜಿಲ್ಯಾಂಡ್ ಏರಿಳಿತ ಕಾಣುವ ಸಂಭವವಿದೆ. ಟೆಸ್ಟ್ ಬ್ಯಾಟಿಂಗ್‌ ರ್ಯಾಂಕಿಂಗ್‌ನಲ್ಲಿ ಆಸೀಸ್ ನಿಷೇಧಿತ ಆಟಗಾರ ಸ್ಟೀವ್ ಸ್ಮಿತ್ ಈಗಲೂ 3ನೇ ಸ್ಥಾನದಲ್ಲಿ ಉಳಿದುಕೊಂಡಿದ್ದಾರೆ.

ಭಾರತ vs ಆಸ್ಟ್ರೇಲಿಯಾ: ಭಾರತದ ನಾಯಕ ಕೊಹ್ಲಿಗೆ ಗಾಯದ ಭಯ!ಭಾರತ vs ಆಸ್ಟ್ರೇಲಿಯಾ: ಭಾರತದ ನಾಯಕ ಕೊಹ್ಲಿಗೆ ಗಾಯದ ಭಯ!

ಐಸಿಸಿ ನೂತನ ರ್ಯಂಕ್ ಪಟ್ಟಿಯಲ್ಲಿರುವಂತೆ ಟೆಸ್ಟ್, ಏಕದಿನ ಮತ್ತು ಟಿ20 ಕ್ರಿಕೆಟ್‌ನಲ್ಲಿ ಟಾಪ್‌ ಟೆನ್ ದೇಶಗಳು ಮತ್ತು ವೈಯಕ್ತಿಕ ಆಟಗಾರರ ಸ್ಥಿತಿ-ಗತಿಗಳ ಕಿರು ಮಾಹಿತಿ ಇಲ್ಲಿದೆ.

ಟೀಮ್ ಇಂಡಿಯಾ ಫಸ್ಟ್

ಟೀಮ್ ಇಂಡಿಯಾ ಫಸ್ಟ್

ಹೊಸ ರ್ಯಾಂಕ್ ಪಟ್ಟಿಯಲ್ಲಿ ಟೆಸ್ಟ್‌ನಲ್ಲಿ 116 ರೇಟಿಂಗ್‌ ಪಾಯಿಂಟ್ಸ್ ಗಳಿಸಿರುವ ಭಾರತ ಮೊದಲ ಸ್ಥಾನದಲ್ಲಿದೆ. 108 ಪಾಯಿಂಟ್‌ ಗಳಿಸಿರುವ ಇಂಗ್ಲೆಂಡ್ ದ್ವಿತೀಯ ಸ್ಥಾನದಲ್ಲಿ, ನ್ಯೂಜಿಲ್ಯಾಂಡ್, ಸೌತ್ ಆಫ್ರಿಕಾ, ಆಸ್ಟ್ರೇಲಿಯಾ, ಶ್ರೀಲಂಕಾ, ಪಾಕಿಸ್ತಾನ, ವೆಸ್ಟ್ ಇಂಡೀಸ್, ಬಾಂಗ್ಲಾದೇಶ, ಜಿಂಬಾಬ್ವೆ ಅನಂತರ ಸ್ಥಾನಗಳಲ್ಲಿವೆ.

ಏಕದಿನದಲ್ಲಿ ಇಂಗ್ಲೆಂಡ್‌ಗೆ ಅಗ್ರಸ್ಥಾನ

ಏಕದಿನದಲ್ಲಿ ಇಂಗ್ಲೆಂಡ್‌ಗೆ ಅಗ್ರಸ್ಥಾನ

ಏಕದಿನದಲ್ಲಿ 126 ರೇಟಿಂಗ್‌ ಪಾಯಿಂಟ್ ಕಲೆ ಹಾಕಿರುವ ಆಂಗ್ಲರು ಮೊದಲ ಸ್ಥಾನ ಆವರಿಸಿಕೊಂಡಿದ್ದಾರೆ. ಭಾರತ, ನ್ಯೂಜಿಲ್ಯಾಂಡ್, ಸೌತ್ ಆಫ್ರಿಕಾ, ಪಾಕಿಸ್ತಾನ, ಆಸ್ಟ್ರೇಲಿಯಾ, ಬಾಂಗ್ಲಾದೇಶ, ಶ್ರೀಲಂಕಾ, ವೆಸ್ಟ್ ಇಂಡೀಸ್ ಮತ್ತು ಅಫ್ಘಾನಿಸ್ತಾನ ಮೊದಲ 10ರೊಳಗೆ ಸ್ಥಾನ ಪಡೆದುಕೊಂಡಿವೆ.

ಟಿ20ಯಲ್ಲಿ ಪಾಕ್‌ ಸ್ಟಾರ್

ಟಿ20ಯಲ್ಲಿ ಪಾಕ್‌ ಸ್ಟಾರ್

ವೇಗದ ಆಟ ಟಿ20ಯಲ್ಲಿ ಪಾಕಿಸ್ತಾನ ನಂ.1 ಸ್ಥಾನ ಅಲಂಕರಿಸಿಕೊಂಡಿದೆ. ಪಾಕ್ ಖಾತೆಯಲ್ಲಿ 138 ರೇಟಿಂಗ್‌ ಪಾಯಿಂಟ್‌ಗಳಿವೆ. ಇನ್ನುಳಿದಂತೆ 2ನೇ ಸ್ಥಾನದಲ್ಲಿ ಭಾರತ, ಅನಂತರದ ಸ್ಥಾನಗಳಲ್ಲಿ ಇಂಗ್ಲೆಂಡ್, ಆಸ್ಟ್ರೇಲಿಯಾ, ಸೌತ್ ಆಫ್ರಿಕಾ, ನ್ಯೂಜಿಲ್ಯಾಂಡ್, ವೆಸ್ಟ್ ಇಂಡೀಸ್, ಅಫ್ಘಾನ್, ಶ್ರೀಲಂಕಾ ಮತ್ತು ಬಾಂಗ್ಲಾ ದೇಶಗಳಿವೆ.

ಟೆಸ್ಟ್, ಏಕದಿನದಲ್ಲಿ ಕೊಹ್ಲಿ ಕಿಂಗ್

ಟೆಸ್ಟ್, ಏಕದಿನದಲ್ಲಿ ಕೊಹ್ಲಿ ಕಿಂಗ್

ಟೆಸ್ಟ್ ಕ್ರಿಕೆಟ್‌ ಬ್ಯಾಟಿಂಗ್‌ ನಲ್ಲಿ ಭಾರತದ ವಿರಾಟ್ ಕೊಹ್ಲಿ, ಕೇನ್‌ ವಿಲಿಯಮ್ಸ್‌ನ್ (ನ್ಯೂಜಿಲ್ಯಾಂಡ್), ಸ್ಟೀವ್ ಸ್ಮಿತ್ (ಆಸೀಸ್) ಅಗ್ರ ಮೂರು ಸ್ಥಾನಗಳಲ್ಲಿದ್ದಾರೆ. ಚೇತೇಶ್ವರ ಪೂಜಾರ 4ನೇ ಸ್ಥಾನದಲ್ಲಿದ್ದಾರೆ. ಟೆಸ್ಟ್ ಬೌಲಿಂಗ್‌ ನಲ್ಲಿ ಸೌತ್ ಆಫ್ರಿಕಾ ಸ್ಟಾರ್ ಕಾಗಿಸೋ ರಬಾಡ, ಟೆಸ್ಟ್ ಆಲ್‌ ರೌಂಡರ್‌ ಯಾದಿಯಲ್ಲಿ ಶಕೀಬ್ ಅಲ್ ಹಸನ್ (ಬಾಂಗ್ಲಾ) ಮೊದಲಿಗರು.

ಕೊಹ್ಲಿ ಬೆನ್ನಲ್ಲಿ ಶರ್ಮಾ

ಕೊಹ್ಲಿ ಬೆನ್ನಲ್ಲಿ ಶರ್ಮಾ

ಏಕದಿನ ಬ್ಯಾಟಿಂಗ್‌ ರ್ಯಾಂಕಿಂಗ್‌ನಲ್ಲಿ ಕೊಹ್ಲಿ, ರೋಹಿತ್ ಶರ್ಮಾ, ರಾಸ್ ಟೇಲರ್ (ನ್ಯೂಜಿಲ್ಯಾಂಡ್) ಅಗ್ರ 3ರಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಜಸ್‌ ಪ್ರೀತ್‌ ಬೂಮ್ರಾ, ರಶೀದ್ ಖಾನ್ (ಅಫ್ಘಾನ್), ಕುಲದೀಪ್ ಯಾದವ್ ಬೌಲಿಂಗ್‌ನಲ್ಲಿ ಮೊದಲ 3 ಸ್ಥಾನಗಳಲ್ಲಿದ್ದಾರೆ. ಅಫ್ಘಾನ್ ಸ್ಟಾರ್ ರಶೀದ್ ಖಾನ್ ಆಲ್‌ ರೌಂಡರ್‌ ಅಗ್ರ ಆಟಗಾರ. ಟಿ20 ಬ್ಯಾಟಿಂಗ್ ನಲ್ಲಿ ಬಾಬರ್ ಅಝಾಮ್ (ಪಾಕ್), ಬೌಲಿಂಗ್‌ನಲ್ಲಿ ರಶೀದ್ ಖಾನ್ (ಅಫ್ಘಾನ್), ಆಲ್‌ ರೌಂಡರ್‌ ಪಟ್ಟಿಯಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಮೊದಲ ಸ್ಥಾನದಲ್ಲಿದ್ದಾರೆ.

Story first published: Wednesday, January 2, 2019, 16:56 [IST]
Other articles published on Jan 2, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X