ಐಸಿಸಿ ಟೆಸ್ಟ್‌ ಶ್ರೇಯಾಂಕದಲ್ಲಿ ಕುಸಿತ ಕಂಡ ಜಡೇಜ, ಕೊಹ್ಲಿ

Posted By:

ನವದೆಹಲಿ, ಸೆಪ್ಟೆಂಬರ್ 11 : ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ (ಐಸಿಸಿ) ಟೆಸ್ಟ್‌ ಬೌಲರ್‌ ಗಳ ಶ್ರೇಯಾಂಕ ಪಟ್ಟಿಯಲ್ಲಿ ಭಾರತ ತಂಡದ ಎಡಗೈ ಸ್ಪಿನ್ನರ್‌ ರವೀಂದ್ರ ಜಡೇಜ ಅಗ್ರಸ್ಥಾನದಿಂದ ಕುಸಿದಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ 3 ಏಕದಿನ ಪಂದ್ಯಗಳಿಗೆ ಭಾರತ ತಂಡ ಪ್ರಕಟ

ಐಸಿಸಿ ಬಿಡುಗಡೆ ಮಾಡಿದ ಬೌಲಿಂಗ್ ಶ್ರೇಯಾಂಕದಲ್ಲಿ ಅಗ್ರಸ್ಥಾನದಲ್ಲಿದ್ದ ರವೀಂದ್ರ ಜಡೇಜ ಅವರನ್ನು ಇಂಗ್ಲೆಂಡ್‌ನ ವೇಗಿ ಜೇಮ್ಸ್‌ ಅಂಡರ್ ಸನ್‌ ಹಿಂದಿಕ್ಕಿ ಮೊದಲನೇ ಸ್ಥಾನಕ್ಕೇರಿದ್ದಾರೆ.

ICC Test rankings: Jadeja loses top spot to Anderson; Warner displaces Kohli from top five

ಮೊದಲ ಸ್ಥಾನದಿಂದ ಎರಡನೇ ಸ್ಥಾನಕ್ಕೆ ಕುಸಿದಿದ್ದು, ಆಫ್ ಸ್ಪಿನ್ನರ್ ರವಿಚಂದ್ರನ್‌ ಅಶ್ವಿನ್ ಮೂರನೇ ಸ್ಥಾನಕ್ಕೇರಿದ್ದಾರೆ. 35 ವರ್ಷದ ಅಂಡರ್ ಸನ್‌ ಟೆಸ್ಟ್‌ ಕ್ರಿಕೆಟ್‌ನಲ್ಲಿ 500 ವಿಕೆಟ್‌ ಗಳಿಸಿದ ಇಂಗ್ಲೆಂಡ್‌ ನ ಮೊದಲ ಬೌಲರ್‌ ಎಂಬ ಖ್ಯಾತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಟೆಸ್ಟ್ ಬ್ಯಾಟ್ಸ್ ಮನ್‌ಗಳ ಪೈಕಿ ಕೆ.ಎಲ್‌.ರಾಹುಲ್ ಮತ್ತು ಅಜಿಂಕ್ಯ ರಹಾನೆ ತಲಾ ಒಂದೊಂದು ಸ್ಥಾನ ಏರಿಕೆ ಕಂಡಿದ್ದಾರೆ. ಚೇತೇಶ್ವರ ಪೂಜಾರ ನಾಲ್ಕನೇ ಸ್ಥಾನದಲ್ಲಿದ್ದು, ನಾಯಕ ವಿರಾಟ್ ಕೊಹ್ಲಿ 6ನೇ ಸ್ಥಾನಕ್ಕೆ ಕುಸಿದಿದ್ದಾರೆ.

ರಾಹುಲ್‌ ಮತ್ತು ರಹಾನೆ ಕ್ರಮವಾಗಿ 9 ಮತ್ತು 10ನೇ ಸ್ಥಾನ ಗಳಿಸಿದ್ದಾರೆ. ಮೊದಲ ಸ್ಥಾನವನ್ನು ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್‌ ಮುಂದುವರಿದಿದ್ದಾರೆ.

ಆಲ್‌ರೌಂಡರ್ ಗಳ ಪಟ್ಟಿಯಲ್ಲಿ ರವೀಂದ್ರ ಜಡೇಜ ಮತ್ತು ರವಿಚಂದ್ರನ್ ಅಶ್ವಿನ್ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನವನ್ನು ಮರಳಿದ್ದಾರೆ.

Story first published: Monday, September 11, 2017, 13:03 [IST]
Other articles published on Sep 11, 2017
Read in English:

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ