ಲೈಂಗಿಕ ಕಿರುಕುಳ ಆರೋಪ: ಕ್ಷಮೆ ಯಾಚಿಸಿದ ಇಮಾಮ್ ಉಲ್ ಹಕ್

ಇಸ್ಲಮಾಬಾದ್, ಜುಲೈ 30: ಏಕಕಾಲದಲ್ಲಿ ನಾಲ್ಕೈದು ಹುಡುಗಿಯರೊಟ್ಟಿಗೆ ವಾಟ್ಸ್‌ಆ್ಯಪ್ ಚಾಟಿಂಗ್ ನಡೆಸಿ ವಿವಾದಕ್ಕೆ ಗುರಿಯಾಗಿದ್ದ ಪಾಕಿಸ್ತಾನ ತಂಡದ ಆರಂಭಿಕ ಬ್ಯಾಟ್ಸ್ಮನ್ ಇಮಾಮ್ ಉಲ್ ಹಕ್, ಪ್ರಕರಣಕ್ಕೆ ಸಂಬಂಧಿಸಿ ಬೇಷರತ್ ಕ್ಷಮೆ ಯಾಚಿಸಿದ್ದಾರೆ. ಪಿಸಿಬಿ ಇದನ್ನು ತಿಳಿಸಿದೆ.
ಪಾಕಿಸ್ತಾನ ಕ್ರಿಕೆಟ್ ದಂತಕತೆ ಇಂಝಮಾಮ್ ಉಲ್ ಹಕ್ ಅವರ ಸೋದರಳಿಯ ಆಗಿರುವ ಇಮಾಮ್ ಉಲ್ ಹಕ್, ಇತ್ತೀಚೆಗೆ ಹಲವಾರು ಹುಡುಗಿಯರೊಟ್ಟಿಗೆ ಏಕಕಾಲದಲ್ಲಿ ವಾಟ್ಸ್‌ಆ್ಯಪ್ ಪೋಲಿ ಚಾಟಿಂಗ್ ನಡೆಸಿ ಸಿಕ್ಕಿಬಿದ್ದಿದ್ದರು. ಕೆಲ ಮಹಿಳೆಯರು ಇಮಾಮ್ ಚಾಟ್ ಮಾಡಿರುವ ಮೆಸೇಜ್‌ನ ಸ್ಕ್ರೀನ್‌ಶಾಟ್ ತೆಗೆದು ಟ್ವಿಟರ್‌ನಲ್ಲಿ ಹರಿಯಬಿಟ್ಟಿದ್ದರು.
'ಘಟನೆಯ ಬಗ್ಗೆ ಇಮಾಮ್‌ಗೆ ಪಶ್ಚಾತಾಪವಾಗಿದೆ. ನಡೆದಿರುವುದಕ್ಕೆ ಇಮಾಮ್ ಕ್ಷಮೆಯಾಚಿಸಿದ್ದಾರೆ. ಇದು ಆತನ ವೈಯಕ್ತಿಯ ಬದುಕಿನ ವಿಚಾರವಾದರೂ ನಮಗೆ ನಮ್ಮ ಆಟಗಾರನ ಶಿಸ್ತು, ನೀತಿ ಮುಖ್ಯ. ಹೀಗಾಗಿ ಆತನಿಗೆ ಸ್ಪಷ್ಟವಾಗಿ ಎಚ್ಚರಿಕೆ ನೀಡಿದ್ದೇವೆ,' ಎಂದು ಪಿಸಿಬಿ ಎಂಡಿ ವಾಸಿಮ್ ಖಾನ್ ಸೋಮವಾರ (ಜುಲೈ 29) ಹೇಳಿದ್ದಾರೆ.
ಪಾಕ್ ಕ್ರಿಕೆಟ್ ಬೋರ್ಡ್, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಇಮಾಮ್ ಅವರಲ್ಲಿ ಮಾತನಾಡಿದೆ ಎಂದು ತಿಳಿಸಿದ ವಾಸಿಮ್, 'ಆಟಗಾರರ ವೈಯಕ್ತಿಯ ವ್ಯವಹಾರ ಬಗ್ಗೆ ಕಾಮೆಂಟ್ ಮಾಡಲು ನಾವು ಬಯಸುವುದಿಲ್ಲ. ಆದರೂ ಆಟಗಾರರು ನಮ್ಮ ಕ್ರಿಕೆಟ್ ಬೋರ್ಡ್ ಮತ್ತು ಪಾಕಿಸ್ತಾನದ ರಾಯಭಾರಿಗಳಾಗಿರುವುದರಿಂದ ಅವರಿಗೆ ಜವಾಬ್ದಾರಿಗಳಿವೆ. ಅದನ್ನು ನಾವು ಅವರಿಂದ ನಿರೀಕ್ಷಿಸುತ್ತೇವೆ' ಎಂದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications