ಸ್ಟಾರ್ ಸ್ಪೋರ್ಟ್ಸ್‌ ವಿರುದ್ಧ ಸಿಟ್ಟಾದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ

ಭಾರತ ತಂಡದ ನಾಯಕ ರೋಹಿತ್ ಶರ್ಮಾ ಸ್ಟಾರ್ ಸ್ಪೋರ್ಟ್ಸ್‌ ವಾಹಿನಿ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಶತಕ ಗಳಿಸಿದ ರೋಹಿತ್ ಶರ್ಮಾ ಸ್ಟಾರ್ ಸ್ಪೋರ್ಟ್ಸ್‌ ವಾಹಿನಿ ಅದನ್ನು ಬಿಂಬಿಸಿದ ರೀತಿಯಿಂದಾಗಿ ಅಸಮಾಧಾನ ವ್ಯಕ್ತಪಡಿಸಿದರು.

ಮಂಗಳವಾರ ಇಂದೋರ್ ನ ಹೋಲ್ಕರ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ರೋಹಿತ್ ಶರ್ಮಾ ಅತ್ಯುತ್ತಮ ಫಾರ್ಮ್ ಪ್ರದರ್ಶಿಸಿದರು. ಅವರು ಶತಕ ಬಾರಿಸಿದ ನಂತರ ಸ್ಟಾರ್ ಸ್ಪೋರ್ಟ್ಸ್ ಮೂರು ವರ್ಷಗಳ ನಂತರ ರೋಹಿತ್ ಶರ್ಮಾ ಶತಕ ಬಾರಿಸಿದ್ದಾರೆ ಎಂದು ತೋರಿಸಿತು ಇದೇ ವಿಚಾರಕ್ಕೆ ರೋಹಿತ್ ಶರ್ಮಾ ಸಿಟ್ಟಾಗಿದ್ದಾರೆ.

ಮೂರು ವರ್ಷಗಳ ನಂತರ ಶತಕ ಹೊಡಿದ್ದೇನೆ ಎಂದು ಅವರು ಹೇಳಿದ್ದಾರೆ. ಆದರೆ ಅವರು ಸರಿಯಾಗಿ ಮಾಹಿತಿ ನೀಡಬೇಕು. ಈ ಮೂರು ವರ್ಷಗಳಲ್ಲಿ ನಾನು ಎಷ್ಟು ಏಕದಿನ ಪಂದ್ಯಗಳನ್ನು ಆಡಿದ್ದೇನೆ ಎನ್ನುವುದು ಸಹ ಮುಖ್ಯವಾಗುತ್ತದೆ ಅಲ್ಲವೇ ಎಂದು ಪ್ರಶ್ನೆ ಮಾಡಿದ್ದಾರೆ.

ಈ ರೋಹಿತ್ ಶರ್ಮಾನನ್ನು ನಾನು ಇಷ್ಟ ಪಡುತ್ತೇನೆ: ಟೀಮ್ ಇಂಡಿಯಾ ನಾಯಕನ ಬಗ್ಗೆ ಮಂಜ್ರೇಕರ್ ಪ್ರಶಂಸೆಈ ರೋಹಿತ್ ಶರ್ಮಾನನ್ನು ನಾನು ಇಷ್ಟ ಪಡುತ್ತೇನೆ: ಟೀಮ್ ಇಂಡಿಯಾ ನಾಯಕನ ಬಗ್ಗೆ ಮಂಜ್ರೇಕರ್ ಪ್ರಶಂಸೆ

ಮಂಗಳವಾರ ಏಕದಿನ ಕ್ರಿಕೆಟ್‌ನಲ್ಲಿ ರೋಹಿತ್ ಶರ್ಮಾ ತಮ್ಮ 30 ನೇ ಶತಕ ಸಿಡಿಸಿದರು. 85 ಎಸೆತೆಗಳಲ್ಲಿ 101 ರನ್ ಗಳಿಸಿದ ಅವರು, ತಂಡ ಬೃಹತ್ ಮೊತ್ತ ಕಲೆಹಾಕಲು ಸಹಾಯಕವಾದರು. ಸ್ಟಾರ್ ಸ್ಪೋರ್ಟ್ಸ್ ಮೂರು ವರ್ಷಗಳ ಬಳಿಕ ರೋಹಿತ್ ಶರ್ಮಾ ಶತಕ ಸಿಡಿಸಿದ್ದಾರೆ ಎಂದು ಪ್ರಸಾರ ಮಾಡಿದ್ದನ್ನು ಗಮನಿಸಿದ್ದಾರೆ. ವೀಕ್ಷಕರಿಗೆ ಸರಿಯಾದ ಮಾಹಿತಿ ನೀಡುವಂತೆ ಕೇಳಿಕೊಂಡಿದ್ದಾರೆ.

 12 ಏಕದಿನ ಪಂದ್ಯಗಳನ್ನಷ್ಟೇ ಆಡಿದ್ದೇನೆ

12 ಏಕದಿನ ಪಂದ್ಯಗಳನ್ನಷ್ಟೇ ಆಡಿದ್ದೇನೆ

"ಮೂರು ವರ್ಷಗಳ ಬಳಿಕ ಶತಕ ಗಳಿಸಿದ್ದೇನೆ ಎಂದು ದೊಡ್ಡದಾಗಿ ತೋರಿಸಲಾಗಿದೆ, ಇದು ತಪ್ಪು ಸಂದೇಶವನ್ನು ತಲುಪಿಸುತ್ತದೆ. ಈ ಮೂರು ವರ್ಷಗಳಲ್ಲಿ ನಾನು ಆಡಿರುವುದು ಕೇವಲ 12 ಏಕದಿನ ಪಂದ್ಯಗಳನ್ನು ಮಾತ್ರ. ಆ ವಿಚಾರವನ್ನು ನೀವು ಪ್ರಸಾರ ಮಾಡಬೇಕು" ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.

ರೋಹಿತ್ ಶರ್ಮಾ 2020ರಲ್ಲಿ ಜನವರಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಪಂದ್ಯದಲ್ಲಿ 29ನೇ ಶತಕ ಬಾರಿಸಿದ್ದರು. ಅದಾದ ನಂತರ ಅವರು ಹೆಚ್ಚಿನದಾಗಿ ಟಿ20 ಪಂದ್ಯಗಳತ್ತ ಗಮನ ನೀಡಿದ್ದರಿಂದ ಹೆಚ್ಚಿನ ಏಕದಿನ ಪಂದ್ಯಗಳನ್ನು ಆಡಿರಲಿಲ್ಲ.

ಶತಕ ಬಾರಿಸಿದರೂ ಅಪ್ಪನಿಗೆ ಪೂರ್ತಿ ಖುಷಿಯಾಗಿಲ್ಲ: ಆಸಕ್ತಿಕರ ವಿಚಾರ ಹಂಚಿಕೊಂಡ ಶುಭಮನ್ ಗಿಲ್

 ಸರಿಯಾಗಿ ಗಮನಿಸಿ ಎಂದ ರೋಹಿತ್

ಸರಿಯಾಗಿ ಗಮನಿಸಿ ಎಂದ ರೋಹಿತ್

"ಏನಾಗುತ್ತಿದೆ ಎಂದು ಪ್ರಸಾರಕರು ತಿಳಿದಿರಬೇಕು. ನೀವು ಪ್ರಸಾರ ಮಾಡಿದ್ದನ್ನು ನಾನು ಗಮನಿಸಿದ್ದೇನೆ. ಸರಿಯಾದ ವಿಚಾರಗಳನ್ನು ನೀವು ತೋರಿಸಬೇಕಾಗುತ್ತದೆ. 2022ರಲ್ಲಿ ನಾವು ಸಂಪೂರ್ಣವಾಗಿ ಏಕದಿನ ಕ್ರಿಕೆಟ್ ಆಡಲಿಲ್ಲ. ಟಿ20 ಪಂದ್ಯಗಳತ್ತ ಹೆಚ್ಚು ಗಮನ ಹರಿಸಿದ್ದೇವೆ. ಮೂರು ವರ್ಷ ಎನ್ನುವುದು ಬಹಳ ದೊಡ್ಡದು ಎನಿಸುತ್ತದೆ. ಇದರ ಬಗ್ಗೆ ನೀವು ಗಮನಿಸಬೇಕು" ಎಂದು ವರದಿಗಾರರಿಗೆ ತಿರುಗೇಟು ಕೊಟ್ಟಿದ್ದಾರೆ.

ಏಕದಿನ ವಿಶ್ವಕಪ್‌ಗಾಗಿ ಟೀಂ ಇಂಡಿಯಾ ಸಿದ್ಧವಾಗುತ್ತಿರುವ ಸಂದರ್ಭದಲ್ಲೇ ರೋಹಿತ್ ಶರ್ಮಾ ಫಾರ್ಮ್‌ಗೆ ಮರಳಿರುವುದು ಟೀಂ ಇಂಡಿಯಾ ಪಾಳಯದಲ್ಲಿ ಸಂತಸಕ್ಕೆ ಕಾರಣವಾಗಿದೆ.

 ರಿಕಿಪಾಂಟಿಂಗ್ ದಾಖಲೆ ಸರಿಗಟ್ಟಿದ ರೋಹಿತ್

ರಿಕಿಪಾಂಟಿಂಗ್ ದಾಖಲೆ ಸರಿಗಟ್ಟಿದ ರೋಹಿತ್

ನ್ಯೂಜಿಲೆಂಡ್ ವಿರುದ್ಧ ರೋಹಿತ್ ಶರ್ಮಾ ಶತಕ ಗಳಿಸಿದ ನಂತರ ಆಸ್ಟ್ರೇಲಿಯಾದ ಆಟಗಾರ ರಿಕಿ ಪಾಂಟಿಂಗ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ರಿಕಿ ಪಾಂಟಿಂಗ್ ಕೂಡ 30 ಏಕದಿನ ಶತಕಗಳನ್ನು ಗಳಿಸಿದ್ದಾರೆ. ಕ್ರಿಕೆಟ್‌ ದಿಗ್ಗಜ ಸಚಿನ್ ತೆಂಡುಲ್ಕರ್ ಏಕದಿನ ಕ್ರಿಕೆಟ್‌ನಲ್ಲಿ 49 ಶತಕ ಗಳಿಸುವ ಮೂಲಕ ಅಗ್ರಸ್ಥಾನದಲ್ಲಿದ್ದರೆ, ಕೊಹ್ಲಿ 46 ಶತಕ ಗಳಿಸಿ ಎರಡನೇ ಸ್ಥಾನದಲ್ಲಿದ್ದಾರೆ.

ಏಕದಿನ ಕ್ರಿಕೆಟ್‌ನಲ್ಲಿ 272 ಸಿಕ್ಸರ್ ಸಿಡಿಸುವ ಮೂಲಕ ಶ್ರೀಲಂಕಾದ ಸನತ್ ಜಯಸೂರ್ಯ ಅವರ ದಾಖಲೆಯನ್ನು ಹಿಂದಿಕ್ಕಿ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದವರ ಪಟ್ಟಿಯಲ್ಲಿ 3ನೇ ಸ್ಥಾನಕ್ಕೆ ಜಿಗಿದಿದ್ದಾರೆ. ಜಯಸೂರ್ಯ 270 ಸಿಕ್ಸರ್ ಸಿಡಿಸಿದ್ದಾರೆ. ಪಾಕಿಸ್ತಾನದ ಶಾಹಿದ್ ಅಫ್ರಿದಿ ಮೊದಲನೇ ಸ್ಥಾನದಲ್ಲಿದ್ದು, ವೆಸ್ಟ್ ಇಂಡೀಸ್‌ನ ಕ್ರಿಸ್‌ಗೇಲ್ ಎರಡನೇ ಸ್ಥಾನದಲ್ಲಿದ್ದಾರೆ.

For Quick Alerts
ALLOW NOTIFICATIONS
For Daily Alerts
Story first published: Wednesday, January 25, 2023, 13:08 [IST]
Other articles published on Jan 25, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X