ಆರಂಭಿಕನಿರಬೇಕಾದ ತಾಂತ್ರಿಕ ನೈಪುಣ್ಯತೆ ಆತನಲ್ಲಿಲ್ಲ: ಭಾರತೀಯ ಆಟಗಾರನ ಬಗ್ಗೆ ಆಕಾಶ್ ಚೋಪ್ರ ಮಾತು

ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಟೆಸ್ಟ್ ಪಂದ್ಯದಲ್ಲಿ ಮೊದಲ ದಿನದ ಗೌರವವನ್ನು ಭಾರತ ಪಡೆದುಕೊಂಡಿದೆ. 145 ರನ್‌ಗಳಿಗೆ ನಾಲ್ಕು ವಿಕೆಟ್ ಕಳೆದುಕೊಂಡಿದ್ದ ಭಾರತ ನಂತರ ಉತ್ತಮ ರೀತಿಯಲ್ಲಿ ಚೇತರಿಕೆ ಕಂಡಿದ್ದು ಶ್ರೇಯಸ್ ಐಯ್ಯರ್ ಹಾಗೂ ರವೀಂದ್ರ ಜಡೇಜಾ ಜೋಡಿ ಟೀಮ್ ಇಂಡಿಯಾ ಪರವಾಗಿ ಭರ್ಜರಿ ಜೊತೆಯಾಟವನ್ನು ನೀಡಿದೆ. ಈ ಜೋಡಿ ಮುರಿಯದ ಐದನೇ ವಿಕೆಟ್‌ಗೆ 113 ರನ್‌ಗಳ ಜೊತೆಯಾಟವನ್ನು ನೀಡಿದ್ದು ಎರಡನೇ ದಿನ ಆಟ ಮುಂದುವರಿಸಲಿದ್ದಾರೆ. ಪದಾರ್ಪಣಾಪಂದ್ಯದಲ್ಲಿ ಮಿಂಚಿರುವ ಶ್ರೇಯಸ್ ಐಯ್ಯರ್ 75 ರನ್‌ಗಳಿಸಿದ್ದರೆ ರವೀಂದ್ರ ಜಡೇಜಾ 50 ರನ್‌ಗಳಿಸಿ ಕ್ರೀಸ್‌ನಲ್ಲಿದ್ದಾರೆ.

ಆರಂಭಿಕ ಆಟಗಾರ ಶುಬ್ಮನ್ ಗಿಲ್ ಈ ಪಂದ್ಯದಲ್ಲಿ ಅರ್ಧ ಶತಕದ ಕೊಡುಗೆ ನೀಡಿ ಗಮನಸೆಳೆದಿದ್ದಾರೆ. ಆದರೆ ಮತ್ತೋರ್ವ ಆರಂಭಿಕ ಆಟಗಾರ ಮಯಾಂಕ್ ಅಗರ್ವಾಲ್ 13 ರನ್‌ಗಳಿಸಿ ವಿಕೆಟ್ ಕಳೆದುಕೊಂಡರೆ ಚೇತೇಶ್ವರ್ ಪೂಜಾರ 26 ರನ್ ಹಾಗೂ ಅಜಿಂಕ್ಯಾ ರಹಾನೆ 35 ರನ್‌ಗಳಿಸಿ ವಿಕೆಟ್ ಕಳೆದುಕೊಂಡಿದ್ದಾರೆ.

ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಶ್ರೇಯಸ್‌ ಅಯ್ಯರ್: ಐಸಿಸಿಯಿಂದ ಅಭಿನಂದನೆಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಶ್ರೇಯಸ್‌ ಅಯ್ಯರ್: ಐಸಿಸಿಯಿಂದ ಅಭಿನಂದನೆ

ಕಾನ್ಪುರ ಟೆಸ್ಟ್‌ನಲ್ಲಿ ಮೊದಲ ದಿನದಾಟದ ಬಳಿಕ ಟೀಮ್ ಇಂಡಿಯಾದ ಓರ್ವ ಆರಂಭಿಕ ಆಟಗಾರನ ತಾಂತ್ರಿಕ ಕೌಶಲ್ಯದ ಬಗ್ಗೆ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರ ಹೇಳಿಕೆ ನೀಡಿದ್ದಾರೆ. ಹಾಗಾದರೆ ಆಕಾಶ್ ಚೋಪ್ರ ಹೇಳಿದ್ದೇನು? ಯಾವ ಆಟಗಾರನ ಬಗ್ಗೆ ಚೋಪ್ರ ಈ ಮಾತನ್ನಾಡಿದ್ದಾರೆ? ಮುಂದೆ ಓದಿ..

ಅರ್ಧ ಶತಕ ಸಿಡಿಸಿದರೂ ಗಿಲ್ ಬಗ್ಗೆ ಚೋಪ್ರಗೆ ಅಸಮಾಧಾನ

ಅರ್ಧ ಶತಕ ಸಿಡಿಸಿದರೂ ಗಿಲ್ ಬಗ್ಗೆ ಚೋಪ್ರಗೆ ಅಸಮಾಧಾನ

ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾದ ಯುವ ಆರಂಭಿಕ ಆಟಗಾರ ಅರ್ಧ ಶತಕದ ಕೊಡುಗೆ ನೀಡಿದ್ದಾರೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಭಾಗವಹಿಸಿದ್ದ ಶುಬ್ಮನ್ ಗಿಲ್ ನಂತರ ಗಾಯದ ಕಾರಣದಿಂದಾಗಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್‌ನಿಂದ ಹೊರಗುಳಿದಿದ್ದರು. ಹೀಗಾಗಿ ಸುದೀರ್ಘ ಕಾಲದ ನಂತರ ಟೆಸ್ಟ್‌ನಲ್ಲಿ ಕಣಕ್ಕಿಳಿದ ಗಿಲ್ ಕಿವೀಸ್ ವಿರುದ್ಧದ ಮೊದಲ ಪಂದ್ಯದಲ್ಲಿ ಅರ್ಧ ಶತಕ ಸಿಡಿಸಿ ಮಿಂಚಿದ್ದಾರೆ. ಆದರೆ ಭೋಜನ ವಿರಾಮದ ನಂತರ ಕೈಲ್ ಜೇಮಿಸನ್ ಎಸೆತಕ್ಕೆ ಗಿಲ್ ಬೌಲ್ಡ್ ಆಗುವ ಮೂಲಕ ವಿಕೆಟ್ ಕಳೆದುಕೊಂಡಿದ್ದಾರೆ. ಆದರೆ ಶುಬ್ಮನ್ ಗಿಲ್ ಆರಂಭಿಕನಾಗಿ ನೀಡಿದ ಪ್ರದರ್ಶನದ ಬಗ್ಗೆ ಆಕಾಶ್ ಚೋಪ್ರ ಭಿನ್ನ ಹೇಳಿಕೆ ನೀಡಿದ್ದಾರೆ.

ಆರಂಭಿನಿರಬೇಕಾದ ಕೌಶಲ್ಯ ಇಲ್ಲ

ಆರಂಭಿನಿರಬೇಕಾದ ಕೌಶಲ್ಯ ಇಲ್ಲ

ಶುಬ್ಮನ್ ಗಿಲ್ ಕಿವೀಸ್ ವಿರುದ್ಧ ಉತ್ತಮವಾಗಿ ರನ್‌ಗಳಿಸಿದರು ಕೂಡ ಆಕಾಶ್ ಚೋಪ್ರ ಪ್ರಕಾರ ಗಿಲ್ ಬಳಿ ಆರಂಭಿಕ ಆಟಗಾರನಿಗೆ ಇರಬೇಕಾದ ತಾಂತ್ರಿಕ ಕೌಶಲ್ಯ ಇಲ್ಲವಂತೆ. ಶುಬ್ಮನ್ ಗಿಲ್ ಅವರ ನಿಜವಾದ ಆಟ ಮಧ್ಯದ ಓವರ್‌ಗಳಲ್ಲಿಯೇ ಆರಂಭವಾಗುತ್ತದೆ ಎಂದಿದ್ದಾರೆ ಆಕಾಶ್ ಚೋಪ್ರ. ಹೀಗಾಗಿ 22ರ ಹರೆಯದ ಯುವ ಆಟಗಾರ ಆರಂಭಿಕನ ಸ್ಥಾನಕ್ಕೆ ಸೂಕ್ತವಾಗುವುದಿಲ್ಲ ಎಂದಿದ್ದಾರೆ. "ನಾನು ಯಾವಾಗ ಆತನ ಆಟವನ್ನು ನೋಡಿದರೂ ಆತ ಟೆಸ್ಟ್‌ನ ಆರಂಭಿಕ ಆಟಗಾರ ಎನಿಸುವುದಿಲ್ಲ" ಎಂದಿದ್ದಾರೆ ಆಕಾಶ್ ಚೋಪ್ರ.

ಸ್ಪಿನ್ನರ್‌ಗಳ ಎಸೆತಕ್ಕೆ ಅದ್ಭುತ ಪ್ರದರ್ಶನ

ಸ್ಪಿನ್ನರ್‌ಗಳ ಎಸೆತಕ್ಕೆ ಅದ್ಭುತ ಪ್ರದರ್ಶನ

ಇನ್ನು ಇದೇ ಸಂದರ್ಭದಲ್ಲಿ ಆಕಾಶ್ ಚೋಪ್ರ ಶುಬ್ಮನ್ ಗಿಲ್ ಅವರು ಸ್ಪಿನ್ನರ್‌ಗಳ ವಿರುದ್ಧ ಹೊಂದಿರುವ ನೈಪುಣ್ಯತೆಯನ್ನು ಕೊಂಡಾಡಿದ್ದಾರೆ. "ಶುಬ್ಮನ್ ಗಿಲ್ ಸ್ಪಿನ್ನರ್‌ಗಳ ವಿರುದ್ಧ ಸೂಕ್ತವಾದ ತಾಂತ್ರಿಕತೆಯನ್ನು ಹೊಂದಿದ್ದಾರೆ. ಆತ ಸ್ಪಿನ್ನರ್‌ಗಳ ವಿರುದ್ಧ ಆಡುವಾಗ ಕಾಲುಗಳನ್ನು ಉತ್ತಮವಾಗಿ ಬಳಸುತ್ತಾರೆ. ಆತನ ಪಾದದ ಚಲನೆ ಅದ್ಭುತವಾಗಿದ್ದು ರಕ್ಷಣಾತ್ಮಕವಾಗಿಯೂ ಅತ್ಯುತ್ತಮವಾಗಿದ್ದಾರೆ. ಆತನ ಬ್ಯಾಟ್ ಯಾವಾಗಲೂ ಪ್ಯಾಡ್‌ನ ಮುಂದಿರುತ್ತದೆ" ಎಂದಿದ್ದಾರೆ ಆಕಾಶ್ ಚೋಪ್ರ.

ನನ್ನ ಪ್ರಕಾರ ಶುಬ್ಮನ್ ಗಿಲ್ ಮಧ್ಯಮ ಕ್ರಮಾಂಕದ ಆಟಗಾರ

ನನ್ನ ಪ್ರಕಾರ ಶುಬ್ಮನ್ ಗಿಲ್ ಮಧ್ಯಮ ಕ್ರಮಾಂಕದ ಆಟಗಾರ

ಇನ್ನು ಇದೇ ಸಂದರ್ಭದಲ್ಲಿ ಆಕಾಶ್ ಚೋಪ್ರ ಶುಬ್ಮನ್ ಗಿಲ್ ಅವರು ಮಧ್ಯಮ ಕ್ರಮಾಂಕಕ್ಕೆ ಸೂಕ್ತವೆನಿಸುವ ಆಟಗಾರ ಎಂದಿದ್ದಾರೆ. "ನನ್ನ ಅಭಿಪ್ರಾಯದ ಪ್ರಕಾರ ಶುಬ್ಮನ್ ಗಿಲ್ ಮಧ್ಯಮ ಕ್ರಮಾಂಕದ ಆಟಗಾರ. ಆತನನ್ನು ಆರಂಭಿಕ ಆಟಗಾರನನ್ನಾಗಿ ಮಾಡಲಾಗಿದೆ. ಆತ ಆರಂಭಿಕನಾಗಿಯೂ ಉತ್ತಮವಾಗಿ ಆಡಿದ್ದಾರೆ. ಆದರೆ ಆತನ ನೈಜ ಆಟ ಹಾಗೂ ನಿಜವಾದ ಫಾರ್ಮ್ ಮಧ್ಯಮ ಕ್ರಮಾಂಕದಲ್ಲಿ ವ್ಯಕ್ತವಾಗಲಿದೆ" ಎಂದಿದ್ದಾರೆ.

ಟೀಮ್ ಇಂಡಿಯಾ ಪ್ಲೇಯಿಂಗ್ XI: ಶುಬ್ಮನ್ ಗಿಲ್, ಮಯಾಂಕ್ ಅಗರ್ವಾಲ್, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ (ನಾಯಕ), ಶ್ರೇಯಸ್ ಅಯ್ಯರ್, ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಉಮೇಶ್ ಯಾದವ್, ಇಶಾಂತ್ ಶರ್ಮಾ,
ಬೆಂಚ್: ಪ್ರಸಿದ್ ಕೃಷ್ಣ, ಸೂರ್ಯಕುಮಾರ್ ಯಾದವ್, ಶ್ರೀಕರ್ ಭರತ್, ಜಯಂತ್ ಯಾದವ್, ಮೊಹಮ್ಮದ್ ಸಿರಾಜ್

ನ್ಯೂಜಿಲೆಂಡ್ ಪ್ಲೇಯಿಂಗ್ XI: ಟಾಮ್ ಲ್ಯಾಥಮ್, ವಿಲ್ ಯಂಗ್, ಕೇನ್ ವಿಲಿಯಮ್ಸನ್ (ನಾಯಕ), ರಾಸ್ ಟೇಲರ್, ಹೆನ್ರಿ ನಿಕೋಲ್ಸ್, ಟಾಮ್ ಬ್ಲಂಡೆಲ್ (ವಿಕೆಟ್ ಕೀಪರ್), ರಚಿನ್ ರವೀಂದ್ರ, ಕೈಲ್ ಜೇಮಿಸನ್, ಟಿಮ್ ಸೌಥಿ, ವಿಲಿಯಂ ಸೊಮರ್ವಿಲ್ಲೆ, ಅಜಾಜ್ ಪಟೇಲ್
ಬೆಂಚ್: ಮಿಚೆಲ್ ಸ್ಯಾಂಟ್ನರ್, ನೀಲ್ ವ್ಯಾಗ್ನರ್, ಗ್ಲೆನ್ ಫಿಲಿಪ್ಸ್, ಡೇರಿಲ್ ಮಿಚೆಲ್

ದೇಸೀ ಹುಡುಗಿಯರ ಮನಗೆದ್ದ ದ್ರಾವಿಡ್ ಎಂದೆಂದಿಗೂ ಲವರ್ ಬಾಯ್ | Oneindia Kannada

For Quick Alerts
ALLOW NOTIFICATIONS
For Daily Alerts
Story first published: Thursday, November 25, 2021, 20:54 [IST]
Other articles published on Nov 25, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X