ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭರ್ಜರಿ ಶತಕ ಸಿಡಿಸಿ ಭಾರತಕ್ಕೆ ಆಸರೆಯಾದ ರಿಷಭ್: ದ. ಆಫ್ರಿಕಾ ನೆಲದಲ್ಲಿ ನೂತನ ದಾಖಲೆ

Ind vs SA: Rishabh Pant hits Importent Century to help India extend lead in 3rd Test

ಭಾರತ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧದ ಅಂತಿಮ ಟೆಸ್ಟ್‌ನಲ್ಲಿ ಟೀಮ್ ಇಂಡಿಯಾ ಪರವಾಗಿ ಯುವ ಆಟಗಾರ ರಿಷಭ್ ಪಂತ್ ಮತ್ತೊಂದು ಅಮೋಘ ಇನ್ನಿಂಗ್ಸ್ ಆಡಿದ್ದಾರೆ. ಟೀಮ್ ಇಂಡಿಯಾದ ಇತರ ಎಲ್ಲಾ ಆಟಗಾರರು ಕೂಡ ರನ್‌ಗಳಿಸಲು ಪರದಾಡಿದ್ದರೆ ಪಂತ್ ಮಾತ್ರ ದಕ್ಷಿಣ ಆಫ್ರಿಕಾ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿದ್ದು ಅಮೋಘ ಶತಕ ಸಿಡಿಸಿದ್ದಾರೆ. ಏಕಾಂಕಿ ಹೋರಾಟ ನಡೆಸಿದ ಪಂತ್‌ಗೆ ನಾಯಕ ವಿರಾಟ್ ಕೊಹ್ಲಿ ಉತ್ತಮ ಸಾಥ್ ನೀಡಿದರು. ಪಂತ್ ನೀಡಿದ ಈ ಬ್ಯಾಟಿಂಗ್ ಪ್ರದರ್ಶನದಿಂದ ಭಾರತ ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡಕ್ಕೆ 211 ರನ್‌ಗಳ ಗುರಿಯನ್ನು ನಿಗದಿಪಡಿಸಿದೆ.

ರಿಷಭ್ ಪಂತ್ ನ್ಯೂಲ್ಯಾಂಡ್ಸ್ ಕ್ರೀಡಾಂಗಣದಲ್ಲಿ ಸಿಡಿಸಿದ ಈ ಶತಕದೊಮದಿಗೆ ವಿಶೇಷ ಸಾಧನೆಯೊಂದನ್ನು ಮಾಡಿದ್ದಾರೆ. ಭಾರತೀಯ ವಿಕೆಟ್‌ಕೀಪರ್ ಓರ್ವ ದಕ್ಷಿಣ ಆಫ್ರಿಕಾ ನೆಲದಲ್ಲಿ ಸಿಡಿಸಿದ ಪ್ರಥಮ ಶತಕ ಇದಾಗಿದೆ. ಇದಕ್ಕೂ ಮುನ್ನ ಭಾರತದ ಪರ ವಿಕೆಟ್ ಕೀಪರ್ ಓರ್ವ ದಕ್ಷಿಣ ಆಫ್ರಿಕಾ ನೆಲದಲ್ಲಿ ಅತಿ ಹೆಚ್ಚು ರನ್‌ಗಳಿಸಿದ ದಾಖಲೆ ಎಂಎಸ್ ಧೋನಿ ಹೆಸರಿನಲ್ಲಿತ್ತು 2010/11ರ ಪ್ರವಾಸದಲ್ಲಿ ಧೋನಿ 90 ರನ್‌ಗಳಿಸಿದ್ದು ಈವರೆಗಿನ ಅತಿ ಹೆಚ್ಚಿನ ಸ್ಕೋರ್ ಎನಿಸಿದೆ.

ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿದೆ IPL 15ನೇ ಸೀಸನ್‌? ಪ್ಲ್ಯಾನ್ ಬಿ ರೆಡಿ ಮಾಡಿಕೊಂಡಿರುವ BCCIದಕ್ಷಿಣ ಆಫ್ರಿಕಾದಲ್ಲಿ ನಡೆಯಲಿದೆ IPL 15ನೇ ಸೀಸನ್‌? ಪ್ಲ್ಯಾನ್ ಬಿ ರೆಡಿ ಮಾಡಿಕೊಂಡಿರುವ BCCI

ರಿಸಭ್ ಪಂತ್ ಕೇವಲ ದಕ್ಷಿಣ ಆಪ್ರಿಕಾದಲ್ಲಿ ಶತಕ ಸಿಡಿಸಿದ ಮೊದಲ ಭಾರತೀಯ ವಿಕೆಟ್ ಕೀಪರ್ ಮಾತ್ರವಲ್ಲ. ಏಷ್ಯಾದ ವಿಕೆಟ್ ಕೀಪರ್ ಸಿಡಿಸಿದ ಅತಿ ಹೆಚ್ಚಿನ ಸ್ಕೋರ್ ಕೂಡ ಇದೇ ಆಗಿದೆ. ಧೋನಿಯನ್ನು ಹೊರತುಪಡಿಸಿ 2002/03ರ ಪ್ರವಾಸದಲ್ಲಿ ಶ್ರೀಲಂಕಾದ ಕುಮಾರ್ ಸಂಗಕ್ಕರ 89 ರನ್ ಸಿಡಿಸಿದ್ದರು. ಇನ್ನು ಬಾಂಗ್ಲಾದೇಶದ ಲಿಟನ್ ದಾಸ್ 2017/18ರ ಪ್ರವಾಸದಲ್ಲಿ 70 ರನ್ ಸಿಡಿಸಿದ್ದರು.

ರಿಷಭ್ ಪಂತ್ ದಕ್ಷಿಣ ಆಫ್ರಿಕಾ ವಿರುದ್ಧ ಸಿಡಿಸಿದ ಈ ಶತಕ ತಂಡಕ್ಕೆ ಅತ್ಯಂತ ಅನಿವಾರ್ಯ ಸಂದರ್ಭದಲ್ಲಿ ಹಾಗೂ ಅತ್ಯಂತ ಸಂಕಷ್ಟ ದ ಸಂದರ್ಭದಲ್ಲಿ ಬಂದಿದೆ ಎಂಬುದು ಗಮನಾರ್ಹ ಸಂಗತಿ. ಮೂರನೇ ದಿನದಾಟದ ಮೂರು ಓವರ್‌ಗಳಾಗುವಷ್ಟರಲ್ಲಿ ಭಾರತ ಇಂದು ತನ್ನ ಮತ್ತೆರಡು ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಈ ಸಂದರ್ಭದಲ್ಲಿ ನಾಯಕ ವಿರಾಟ್ ಕೊಹ್ಲಿಗೆ ರಿಷಭ್ ಪಂತ್ ಸಾಥ್ ನೀಡಿದರು. ಈ ಜೋಡಿ ಭಾರತ ತಂಡದ ಕುಸಿತವನ್ನು ಒಂದು ಹಂತಕ್ಕೆ ತಡೆಯುವಲ್ಲಿ ಯಶಸ್ವಿಯಾಗಿತ್ತು. ರಿಷಭ್ ಪಂತ್ ಹಾಗೂ ವಿರಾಟ್ ಕೊಹ್ಲಿ ಜೋಡಿ 94 ರನ್‌ಗಳ ಜೊತೆಯಾಟವನ್ನು ನೀಡುವ ಮೂಲಕ ಟೀಮ್ ಇಂಡಿಯಾ ಆಸರೆಯಾದರು.

ಭಾರತ vs ದ.ಆಫ್ರಿಕಾ: ಮೈದಾನದಲ್ಲಿ ಮಯಾಂಕ್ ಕುರಿತು ಅಸಮಾಧಾನ ಹೊರಹಾಕಿದ ಕೊಹ್ಲಿಭಾರತ vs ದ.ಆಫ್ರಿಕಾ: ಮೈದಾನದಲ್ಲಿ ಮಯಾಂಕ್ ಕುರಿತು ಅಸಮಾಧಾನ ಹೊರಹಾಕಿದ ಕೊಹ್ಲಿ

ವಿರಾಟ್ ಕೊಹ್ಲಿ ವಿಕೆಟ್ ಕಳೆದುಕೊಂಡ ಬಳಿಕ ಕೆಲ ಕ್ರಮಾಂಕದ ಆಟಗಾರರಿಂದಲೂ ಉತ್ತಮ ಸಾಥ್ ದೊರೆಯದಿದ್ದರೂ ಹೆಚ್ಚು ಕಾಲ ಕ್ರೀಸ್ ಕಾಯ್ದುಕೊಳ್ಳವು ಪ್ರಯತ್ನ ನಡೆಸಿದ ಪಂತ್ ತಂಡದ ಮೊತ್ತವನ್ನು 200ರ ಸನಿಹಕ್ಕೆ ತಲುಪಿಸಿದರು. ಈ ಹಂತದಲ್ಲಿ ರಿಷಭ್ ಪಂತ್ ತಮ್ಮ ಶತಕವನ್ನು ಕೂಡ ಯಶಸ್ವಿಯಾಗಿ ಪೂರ್ಣಗೊಳಿಸಿದರು. ಈ ಮೂಲಕ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಸ್ಮರಣೀಯ ಇನ್ನಿಂಗ್ಸ್ ನೀಡಿದ್ದಾರೆ.

ದಕ್ಷಿಣ ಆಪ್ರಿಕಾ ಆಡುವ ಬಳಗ: ಡೀನ್ ಎಲ್ಗರ್ (ನಾಯಕ), ಐಡೆನ್ ಮಾರ್ಕ್ರಾಮ್, ಕೀಗನ್ ಪೀಟರ್ಸನ್, ರಾಸ್ಸಿ ವ್ಯಾನ್ ಡೆರ್ ಡುಸ್ಸೆನ್, ಟೆಂಬಾ ಬವುಮಾ, ಕೈಲ್ ವೆರ್ರೆನ್ನೆ (ವಾಕ್), ಮಾರ್ಕೊ ಜಾನ್ಸೆನ್, ಕಗಿಸೊ ರಬಾಡಾ, ಕೇಶವ್ ಮಹಾರಾಜ್, ಡುವಾನ್ನೆ ಒಲಿವಿಯರ್, ಲುಂಗಿ ಎನ್ಗಿಡಿ
ಬೆಂಚ್: ಪ್ರೆನೆಲನ್ ಸುಬ್ರಾಯೆನ್, ಸಿಸಂಡಾ ಮಗಾಲಾ, ಬ್ಯೂರಾನ್ ಹೆಂಡ್ರಿಕ್ಸ್, ಜಾರ್ಜ್ ಲಿಂಡೆ, ವಿಯಾನ್ ಮುಲ್ಡರ್, ಸರೆಲ್ ಎರ್ವೀ, ರಯಾನ್ ರಿಕೆಲ್ಟನ್, ಗ್ಲೆಂಟನ್ ಸ್ಟೌರ್ಮನ್

ಟೀಮ್ ಇಂಡಿಯಾ ಆಡುವ ಬಳಗ: ಕೆಎಲ್ ರಾಹುಲ್, ಮಯಾಂಕ್ ಅಗರ್ವಾಲ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ, ರಿಷಭ್ ಪಂತ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಉಮೇಶ್ ಯಾದವ್
ಬೆಂಚ್: ಜಯಂತ್ ಯಾದವ್, ಪ್ರಿಯಾಂಕ್ ಪಾಂಚಾಲ್, ಶ್ರೇಯಸ್ ಅಯ್ಯರ್, ಮೊಹಮ್ಮದ್ ಸಿರಾಜ್, ಹನುಮ ವಿಹಾರಿ,ವೃದ್ಧಿಮಾನ್ ಸಹಾ, ಇಶಾಂತ್ ಶರ್ಮಾ

Story first published: Thursday, January 13, 2022, 20:10 [IST]
Other articles published on Jan 13, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X