ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IND vs SL: ಕೊಹ್ಲಿ, ರೋಹಿತ್ ಭರ್ಜರಿ ಬ್ಯಾಟಿಂಗ್; ಶ್ರೀಲಂಕಾದ ಕಳಪೆ ಬೌಲಿಂಗ್ ಎಂದ ಗಂಭೀರ್!

IND vs SL: Former Cricketer Gautam Gambhir Called Sri Lankas Poor Bowling Performance Against India

ಮಂಗಳವಾರ, ಜನವರಿ 10ರಂದು ಗುವಾಹಟಿಯಲ್ಲಿ ಶ್ರೀಲಂಕಾ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಭಾರತದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಭರ್ಜರಿ ಶತಕ ಬಾರಿಸಿದರು ಮತ್ತು ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ತಮ್ಮ ಅತ್ಯುತ್ತಮ ಫಾರ್ಮ್ ಅನ್ನು ಮುಂದುವರೆಸಿದ್ದಾರೆ.

ಕಳೆದ ಏಕದಿನ ಸರಣಿಯ ಅಂತಿಮ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಶತಕ ಬಾರಿಸಿದ್ದ ವಿರಾಟ್ ಕೊಹ್ಲಿ, ಇದೀಗ ತಮ್ಮ 45ನೇ ಏಕದಿನ ಶತಕ ಮತ್ತು ಒಟ್ಟಾರೆ 73ನೇ ಅಂತಾರಾಷ್ಟ್ರೀಯ ಶತಕ ಗಳಿಸಿ ಮಿಂಚಿದರು. ಭಾರತ ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 373 ರನ್ ಗಳಿಸಲು ಸಾಧ್ಯವಾಯಿತು.

IND vs SL: 45ನೇ ಏಕದಿನ ಶತಕ ಗಳಿಸಿ ದಾಖಲೆ ಮೇಲೆ ದಾಖಲೆ ಬರೆದ ವಿರಾಟ್ ಕೊಹ್ಲಿIND vs SL: 45ನೇ ಏಕದಿನ ಶತಕ ಗಳಿಸಿ ದಾಖಲೆ ಮೇಲೆ ದಾಖಲೆ ಬರೆದ ವಿರಾಟ್ ಕೊಹ್ಲಿ

ಟಿ20 ಸರಣಿಯಿಂದ ವಿಶ್ರಾಂತಿ ಪಡೆದು ಏಕದಿನ ಸರಣಿಗೆ ಹಿಂದಿರುಗಿದ ನಂತರ, ವಿರಾಟ್ ಕೊಹ್ಲಿ 87 ಎಸೆತಗಳನ್ನು ಎದುರಿಸಿ 12 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ 113 ರನ್ ಗಳಿಸಿದರೆ, ನಾಯಕ ರೋಹಿತ್ ಶರ್ಮಾ 67 ಎಸೆತಗಳಲ್ಲಿ 9 ಬೌಂಡರಿ ಮತ್ತು 3 ಸಿಕ್ಸರ್‌ಗಳ ನೆರವಿನಿಂದ ಅಮೂಲ್ಯ 83 ರನ್ ಬಾರಿಸಿದರು.

ಬೃಹತ್ ಮೊತ್ತ ದಾಖಲಿಸುವಲ್ಲಿ ಭಾರತದ ಬ್ಯಾಟರ್‌ಗಳು ಯಶಸ್ವಿ

ಬೃಹತ್ ಮೊತ್ತ ದಾಖಲಿಸುವಲ್ಲಿ ಭಾರತದ ಬ್ಯಾಟರ್‌ಗಳು ಯಶಸ್ವಿ

ಈ ಇಬ್ಬರು ಹಿರಿಯ ಆಟಗಾರರ ಅತ್ಯುತ್ತಮ ಬ್ಯಾಟಿಂಗ್ ನಡುವೆ, ಭಾರತದ ಮಾಜಿ ಆರಂಭಿಕ ಆಟಗಾರ ಗೌತಮ್ ಗಂಭೀರ್ ಅವರು ಶ್ರೀಲಂಕಾ ಬೌಲಿಂಗ್ ಪ್ರದರ್ಶನದ ಬಗ್ಗೆ ಕಿಡಿಕಾರಿದ್ದಾರೆ. ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಶ್ರೀಲಂಕಾ ತಂಡದ ಕಳಪೆ ಬೌಲಿಂಗ್ ದಾಳಿ ಎಂದು ಜರಿದಿದ್ದಾರೆ.

ಗುವಾಹಟಿಯಲ್ಲಿ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡ ಶ್ರೀಲಂಕಾ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತಕ್ಕೆ 373 ರನ್‌ಗಳನ್ನು ಬಿಟ್ಟುಕೊಟ್ಟರು. ಬೃಹತ್ ಮೊತ್ತ ದಾಖಲಿಸುವಲ್ಲಿ ಭಾರತದ ಬ್ಯಾಟರ್‌ಗಳು ಯಶಸ್ವಿಯಾದರೆ, ಕಳಪೆ ಬೌಲಿಂಗ್‌ನಿಂದ ಶ್ರೀಲಂಕಾ ಬೌಲರ್‌ಗಳು ದಂಡಿಸಿಕೊಂಡರು.

ರೋಹಿತ್, ಗಿಲ್ ರನ್ ಗಳಿಸಿರುವುದು ನನಗೆ ಆಶ್ಚರ್ಯ

ರೋಹಿತ್, ಗಿಲ್ ರನ್ ಗಳಿಸಿರುವುದು ನನಗೆ ಆಶ್ಚರ್ಯ

ಸ್ಟಾರ್ ಸ್ಪೋರ್ಟ್ಸ್‌ನೊಂದಿಗೆ ಮಾತನಾಡಿದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್, ಶ್ರೀಲಂಕಾ ಹೇಗೆ ಬೌಲಿಂಗ್ ಮಾಡಿತು ಎಂಬುದನ್ನು ಹೇಳಲು ಆಘಾತಕಾರಿಯಾಗಿದೆ ಮತ್ತು ದಸುನ್ ಶನಕ ನಾಯಕತ್ವದ ತಂಡವು ಭಾರತೀಯ ಬ್ಯಾಟರ್‌ಗಳಿಗೆ ರನ್ ಗಳಿಸಲು ಸುಲಭವಾಗಿ ದಾರಿಮಾಡಿಕೊಟ್ಟರು ಎಂದು ಟೀಕಿಸಿದರು.

"ಇದು ತೀರಾ ಕಳಪೆ ಬೌಲಿಂಗ್ ಆಗಿತ್ತು. ಭಾರತೀಯ ಬ್ಯಾಟಿಂಗ್ ಲೈನ್‌ಅಪ್‌ನ ಅಗ್ರ ಮೂವರು ಬ್ಯಾಟ್ಸ್‌ಮನ್‌ಗಳು ಹೆಚ್ಚಿನ ರನ್ ಗಳಿಸಿದರು. ನಿಸ್ಸಂಶಯವಾಗಿ, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಶುಭ್‌ಮನ್ ಸಹ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹೆಚ್ಚು ರನ್ ಗಳಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಆದರೆ, ಇಂದು ರೋಹಿತ್ ಮತ್ತು ಶುಭ್‌ಮನ್ ಗಿಲ್ ರನ್ ಗಳಿಸಿರುವುದು ನನಗೆ ಆಶ್ಚರ್ಯ ತಂದಿದೆ. ಶ್ರೀಲಂಕಾದ ಬೌಲಿಂಗ್ ಪ್ರದರ್ಶನ ನನಗೆ ತುಂಬಾ ನಿರಾಶಾದಾಯಕವಾಗಿತ್ತು," ಎಂದು ಗೌತಮ್ ಗಂಭೀರ್ ತಿಳಿಸಿದರು.

ತಂಡಕ್ಕೆ ನನ್ನ ಶೇ.100ರಷ್ಟು ಸಾಮರ್ಥ್ಯವನ್ನು ನೀಡಲು ಸಿದ್ಧ

ತಂಡಕ್ಕೆ ನನ್ನ ಶೇ.100ರಷ್ಟು ಸಾಮರ್ಥ್ಯವನ್ನು ನೀಡಲು ಸಿದ್ಧ

ವಿರಾಟ್ ಕೊಹ್ಲಿ ತಮ್ಮ ಎರಡು ಜೀವದಾನಗಳ ಮೂಲಕ ಅದೃಷ್ಟವನ್ನು ಶತಕದತ್ತ ಮುನ್ನಡೆಸಿದರು. ಕೆಲವು ಸೊಗಸಾದ ಶಾಟ್‌ಗಳ ಮೂಲಕ ಕ್ರೀಡಾಂಗಣದಲ್ಲಿ ನೆರೆದಿದ್ದ ಅಪಾರ ಅಭಿಮಾನಿಗಳನ್ನು ಖುಷಿಪಡಿಸಿದರು.

3 ಪಂದ್ಯಗಳ ಏಕದಿನ ಸರಣಿಗೆ ಮುಂಚಿತವಾಗಿ ವಿರಾಟ್ ಕೊಹ್ಲಿ ತನ್ನ ಸಿದ್ಧತೆಯ ಬಗ್ಗೆ ಮಾತನಾಡಿ, ಉತ್ತಮ ಫಿಟ್‌ನೆಸ್ ಕಾಪಾಡಿಕೊಳ್ಳಲು ಪೌಷ್ಟಿಕಾಂಶ ಆಹಾರವು ಪ್ರಮುಖವಾಗಿದೆ ಎಂದು ಹೇಳಿದರು.

"ಟಿ20 ಸರಣಿಯಿಂದ ನನಗೆ ವಿರಾಮವಿತ್ತು. ಆದರೆ ನಾನು ಏನು ತಿನ್ನುತ್ತೇನೆ ಎಂಬುದರ ಬಗ್ಗೆ ನನಗೆ ಅರಿವಿದೆ. ನನ್ನ ವಯಸ್ಸಿನಲ್ಲಿ ಆಹಾರವು ತುಂಬಾ ಮುಖ್ಯವಾಗಿದ್ದು, ಆಟಕ್ಕೆ ಹಿಂತಿರುಗಿದಾಗ ದೈಹಿಕ ಕೆಲಸವು ನೀವು ಇನ್ನೂ ಉತ್ತಮಗೊಳಿಸುತ್ತದೆ. ಆದರೆ ದೇಹದ ಪೋಷಣೆ ಕೂಡ ಬಹಳ ಮುಖ್ಯವಾಗಿದೆ. ಮಾನಸಿಕವಾಗಿ ನಾನು ಯಾವಾಗಲೂ ಲಭ್ಯವಿದ್ದೇನೆ ಮತ್ತು ತಂಡಕ್ಕೆ ನನ್ನ ಶೇ.100ರಷ್ಟು ಸಾಮರ್ಥ್ಯವನ್ನು ನೀಡಲು ಸಿದ್ಧನಿದ್ದೇನೆ," ಎಂದು ಶತಕ ಗಳಿಸಿದ ನಂತರ ವಿರಾಟ್ ಕೊಹ್ಲಿ ತಿಳಿಸಿದರು.

Story first published: Tuesday, January 10, 2023, 19:03 [IST]
Other articles published on Jan 10, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X