ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IND vs WI 1st ODI: ಜಸ್ಪ್ರೀತ್ ಬುಮ್ರಾ vs ನಿಕೋಲಸ್ ಪೂರನ್; 'ಪ್ಲೇಯರ್ ಬ್ಯಾಟಲ್'ನ ವಿಜೇತರಾರು?

IND vs WI 1st ODI: Jasprit Bumrah vs Nicholas Pooran; Who is Winner of the Player Battle?

ಶಿಖರ್ ಧವನ್ ನಾಯಕತ್ವದ ಟೀಂ ಇಂಡಿಯಾ ಶುಕ್ರವಾರ ಟ್ರಿನಿಡಾಡ್‌ನ ಪೋರ್ಟ್ ಆಫ್ ಸ್ಪೇನ್‌ನ ಕ್ವೀನ್ಸ್ ಪಾರ್ಕ್ ಓವಲ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯವನ್ನು ಎದುರಿಸಲು ಸಜ್ಜಾಗಿದೆ.

ಮೊದಲ ಏಕದಿನ ಪಂದ್ಯಕ್ಕೂ ಮುನ್ನ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡವು ಸರಣಿಯಲ್ಲಿ ಪ್ರಮುಖ ಯುದ್ಧಗಳಲ್ಲಿ ವಿಜೇತರನ್ನು ಭವಿಷ್ಯ ನುಡಿದಿದೆ. 'ಸಿಕ್ಸ್ ಅಥವಾ ಔಟ್' ಎಂಬ ರಸಪ್ರಶ್ನೆಯಲ್ಲಿ ವಿಂಡೀಸ್ ತಂಡದ ಆಟಗಾರರನ್ನು ವೆಸ್ಟ್ ಇಂಡೀಸ್‌ನ ಸೀಮಿತ ಓವರ್‌ಗಳ ನಾಯಕ ನಿಕೋಲಸ್ ಪೂರನ್ ವಿರುದ್ಧ ಭಾರತದ ಪ್ರೀಮಿಯರ್ ಬೌಲರ್ ಜಸ್ಪ್ರೀತ್ ಬುಮ್ರಾ ಬೌಲ್ ಮಾಡಿದರೆ ಅದು ಸಿಕ್ಸರ್ ಅಥವಾ ವಿಕೆಟ್ ಆಗಬಹುದೇ ಎಂದು ಊಹಿಸಲು ಕೇಳಲಾಯಿತು.

IND vs WI: ಶಿಖರ್ ಧವನ್ ಜೊತೆಗೂಡಿ ಈತ ODI ಕ್ರಿಕೆಟ್‌ಗೆ ಪದಾರ್ಪಣೆ ಮಾಡಬೇಕು: ವಾಸಿಂ ಜಾಫರ್IND vs WI: ಶಿಖರ್ ಧವನ್ ಜೊತೆಗೂಡಿ ಈತ ODI ಕ್ರಿಕೆಟ್‌ಗೆ ಪದಾರ್ಪಣೆ ಮಾಡಬೇಕು: ವಾಸಿಂ ಜಾಫರ್

ಐವರಲ್ಲಿ ಮೂವರು ಆಟಗಾರರು ಔಟ್ ಎಂದು ಆಯ್ಕೆ ಮಾಡಿದ್ದು, ಹೀಗಾಗಿ ವೆಸ್ಟ್ ಇಂಡೀಸ್ ನಾಯಕನ ಮೇಲೆ ಜಸ್ಪ್ರೀತ್ ಬುಮ್ರಾ ಮೇಲುಗೈ ಸಾಧಿಸುತ್ತಾರೆ ಎಂದು ಭವಿಷ್ಯ ನುಡಿದರು.

ವಿಡಿಯೋದಲ್ಲಿ ವೆಸ್ಟ್ ಇಂಡೀಸ್‌ನ ಐವರು ಕ್ರಿಕೆಟಿಗರು 'ಸಿಕ್ಸ್ ಆರ್ ಔಟ್' ರಸಪ್ರಶ್ನೆಯಲ್ಲಿ ಭಾಗವಹಿಸುತ್ತಿರುವುದನ್ನು ನೋಡಬಹುದು. ನಿಕೋಲಸ್ ಪೂರನ್, ಶಾಯ್ ಹೋಪ್, ರೋವ್‌ಮನ್ ಪೊವೆಲ್, ಅಲ್ಜಾರಿ ಜೋಸೆಫ್ ಮತ್ತು ಅಕೇಲ್ ಹೊಸೈನ್ ಮುಂಬರುವ ಭಾರತ ಸರಣಿಗಾಗಿ ವೆಸ್ಟ್ ಇಂಡೀಸ್ ತಂಡದ ಭಾಗವಾಗಿದ್ದಾರೆ.

'ಬೇರೆ ಯಾರಾದರೂ ಔಟ್ ಆಫ್ ಫಾರ್ಮ್ ಆಟಗಾರನಾಗಿದ್ದರೆ...': ಕೊಹ್ಲಿ ಬಗ್ಗೆ ಸೈಯದ್ ಕಿರ್ಮಾನಿ ಮಾತು'ಬೇರೆ ಯಾರಾದರೂ ಔಟ್ ಆಫ್ ಫಾರ್ಮ್ ಆಟಗಾರನಾಗಿದ್ದರೆ...': ಕೊಹ್ಲಿ ಬಗ್ಗೆ ಸೈಯದ್ ಕಿರ್ಮಾನಿ ಮಾತು

ಸ್ವತಃ ನಿಕೋಲಸ್ ಪೂರನ್ ಮತ್ತು ಪೊವೆಲ್ ಔಟ್ ಆಯ್ಕೆಯೊಂದಿಗೆ ಹೋದರೆ, ಜೋಸೆಫ್ ಮತ್ತು ಹೊಸಿಯಾನ್ ಇದು ಸಿಕ್ಸರ್ ಆಗಲಿದೆ ಎಂದು ಹೇಳಿದರು. ಮತ್ತೊಂದೆಡೆ ಹೋಪ್ ಮೊದಲ ಐದು ಎಸೆತಗಳಲ್ಲಿ ಸಿಕ್ಸರ್ ಮತ್ತು ಕೊನೆಯ ಎಸೆತದಲ್ಲಿ ಒಂದು ವಿಕೆಟ್‌ನೊಂದಿಗೆ ಆಸಕ್ತಿದಾಯಕ ಆಯ್ಕೆ ಮಾಡಿದರು.

ಜಸ್ಪ್ರೀತ್ ಬುಮ್ರಾ 120 ಪಂದ್ಯಗಳಲ್ಲಿ 145 ವಿಕೆಟ್‌

ಜಸ್ಪ್ರೀತ್ ಬುಮ್ರಾ 120 ಪಂದ್ಯಗಳಲ್ಲಿ 145 ವಿಕೆಟ್‌

ಈವರೆಗಿನ ಕ್ರಿಕೆಟ್‌ನಲ್ಲಿ ನಿಕೋಲಸ್ ಪೂರನ್ ಅವರು ಜಸ್ಪ್ರೀತ್ ಬುಮ್ರಾ ಅವರ 15 ಎಸೆತಗಳಲ್ಲಿ 13 ರನ್ ಗಳಿಸುವಲ್ಲಿ ಯಶಸ್ವಿಯಾಗಿದ್ದರೆ, ಜಸ್ಪ್ರೀತ್ ಬುಮ್ರಾ ಪೂರನ್‌ರನ್ನು 2 ಬಾರಿ ಔಟ್ ಮಾಡಿದ್ದಾರೆ. ಇನ್ನು ನಿಕೋಲಸ್ ಪೂರನ್ 44 ಇನ್ನಿಂಗ್ಸ್‌ಗಳಿಂದ 23.38 ಸರಾಸರಿಯಲ್ಲಿ 912 ರನ್ ಗಳಿಸಿದ್ದಾರೆ. ಏತನ್ಮಧ್ಯೆ ಭಾರತ ಜಸ್ಪ್ರೀತ್ ಬುಮ್ರಾ 120 ಪಂದ್ಯಗಳಲ್ಲಿ 145 ವಿಕೆಟ್‌ಗಳನ್ನು ಹೊಂದಿದ್ದಾರೆ.

ಆದರೆ ವೇಗಿ ಜಸ್ಪ್ರೀತ್ ಬುಮ್ರಾ ಅವರು ವೆಸ್ಟ್ ವಿಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಆಡುತ್ತಿಲ್ಲ. ಏಕೆಂದರೆ ಅವರಿಗೆ ಇಂಗ್ಲೆಂಡ್ ಸರಣಿಯ ನಂತರ ಬಿಸಿಸಿಐ ವಿಶ್ರಾಂತಿ ನೀಡಿದ್ದು, ಅವೇಶ್ ಖಾನ್, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್ ಮತ್ತು ಅರ್ಷದೀಪ್ ಸಿಂಗ್‌ರಂತಹ ನಾಲ್ಕು ವೇಗದ ಬೌಲಿಂಗ್ ಆಯ್ಕೆಗಳನ್ನು ಭಾರತ ಹೊಂದಿದೆ. ಅರ್ಷದೀಪ್ ಸಿಂಗ್ ಇನ್ನೂ ತನ್ನ ಚೊಚ್ಚಲ ಏಕದಿನ ಪಂದ್ಯಕ್ಕೆ ಪದಾರ್ಪಣೆ ಮಾಡಿಲ್ಲ.

ODI ಮತ್ತು ಟಿ20 ಸರಣಿಯ ಪೂರ್ಣ ವೇಳಾಪಟ್ಟಿ ಮತ್ತು ಪಂದ್ಯದ ಸಮಯ

ODI ಮತ್ತು ಟಿ20 ಸರಣಿಯ ಪೂರ್ಣ ವೇಳಾಪಟ್ಟಿ ಮತ್ತು ಪಂದ್ಯದ ಸಮಯ

* 1ನೇ ಏಕದಿನ: ಕ್ವೀನ್ಸ್ ಪಾರ್ಕ್ ಓವಲ್, ಪೋರ್ಟ್ ಆಫ್ ಸ್ಪೇನ್, ಟ್ರಿನಿಡಾಡ್, ಜುಲೈ 22 - 7 PM IST

* 2 ನೇ ಏಕದಿನ: ಕ್ವೀನ್ಸ್ ಪಾರ್ಕ್ ಓವಲ್, ಪೋರ್ಟ್ ಆಫ್ ಸ್ಪೇನ್, ಟ್ರಿನಿಡಾಡ್, 24 ಜುಲೈ - 7 PM IST

* 3ನೇ ಏಕದಿನ: ಕ್ವೀನ್ಸ್ ಪಾರ್ಕ್ ಓವಲ್, ಪೋರ್ಟ್ ಆಫ್ ಸ್ಪೇನ್, ಟ್ರಿನಿಡಾಡ್, 27 ಜುಲೈ- 7 PM IST

* 1ನೇ ಟಿ20: ಬ್ರಿಯಾನ್ ಲಾರಾ ಸ್ಟೇಡಿಯಂ, ತರೌಬಾ, ಟ್ರಿನಿಡಾಡ್, 29 ಜುಲೈ- 8 PM IST

* 2ನೇ ಟಿ20: ವಾರ್ನರ್ ಪಾರ್ಕ್, ಬಾಸ್ಸೆಟೆರೆ, ಸೇಂಟ್ ಕಿಟ್ಸ್, 1 ಆಗಸ್ಟ್- 8 PM IST

* 3ನೇ ಟಿ20: ವಾರ್ನರ್ ಪಾರ್ಕ್, ಬಾಸ್ಸೆಟೆರೆ, ಸೇಂಟ್ ಕಿಟ್ಸ್, 2 ಆಗಸ್ಟ್- 8 PM IST

* 4ನೇ ಟಿ20: ಸೆಂಟ್ರಲ್ ಬ್ರೋವರ್ಡ್ ರೀಜನಲ್ ಪಾರ್ಕ್ ಸ್ಟೇಡಿಯಂ ಟರ್ಫ್ ಗ್ರೌಂಡ್, ಲಾಡರ್ಹಿಲ್, ಫ್ಲೋರಿಡಾ, 6 ಆಗಸ್ಟ್- 8 PM IST

* 5ನೇ ಟಿ20: ಸೆಂಟ್ರಲ್ ಬ್ರೋವರ್ಡ್ ರೀಜನಲ್ ಪಾರ್ಕ್ ಸ್ಟೇಡಿಯಂ ಟರ್ಫ್ ಗ್ರೌಂಡ್, ಲಾಡರ್ಹಿಲ್, ಫ್ಲೋರಿಡಾ, 7 ಆಗಸ್ಟ್- 8 PM IST

ಏಕದಿನ ಸರಣಿಗೆ ಭಾರತ vs ವೆಸ್ಟ್ ಇಂಡೀಸ್ ಸಂಭಾವ್ಯ ತಂಡಗಳು

ಏಕದಿನ ಸರಣಿಗೆ ಭಾರತ vs ವೆಸ್ಟ್ ಇಂಡೀಸ್ ಸಂಭಾವ್ಯ ತಂಡಗಳು

ಭಾರತ ತಂಡ: ಶಿಖರ್ ಧವನ್ (ನಾಯಕ), ರುತುರಾಜ್ ಗಾಯಕ್ವಾಡ್, ಶುಭಮನ್ ಗಿಲ್, ದೀಪಕ್ ಹೂಡಾ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ (ಉಪನಾಯಕ), ಶಾರ್ದೂಲ್ ಠಾಕೂರ್, ಯುಜ್ವೇಂದ್ರ ಚಹಾಲ್, ಅಕ್ಷರ್ ಪಟೇಲ್, ಅವೇಶ್ ಖಾನ್, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್, ಅರ್ಷದೀಪ್ ಸಿಂಗ್.

ವೆಸ್ಟ್ ಇಂಡೀಸ್ ತಂಡ: ನಿಕೋಲಸ್ ಪೂರನ್ (ನಾಯಕ), ಶಮರ್ ಬ್ರೂಕ್ಸ್, ಬ್ರಾಂಡನ್ ಕಿಂಗ್, ರೋವ್‌ಮನ್ ಪೊವೆಲ್, ಕೀಸಿ ಕಾರ್ಟಿ, ಕೈಲ್ ಮೇಯರ್ಸ್, ಜೇಸನ್ ಹೋಲ್ಡರ್, ಗುಡಕೇಶ್ ಮೋಟಿ, ಕೀಮೋ ಪಾಲ್, ಶಾಯ್ ಹೋಪ್, ಅಕೇಲ್ ಹೊಸೈನ್, ಅಲ್ಜಾರಿ ಜೋಸೆಫ್, ಜೇಡನ್ ಸೀಲ್ಸ್.

ವೆಸ್ಟ್ ಇಂಡೀಸ್ ವಿರುದ್ಧ ಭಾರತ ಟಿ20 ತಂಡ

ವೆಸ್ಟ್ ಇಂಡೀಸ್ ವಿರುದ್ಧ ಭಾರತ ಟಿ20 ತಂಡ

ರೋಹಿತ್ ಶರ್ಮಾ (ನಾಯಕ), ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ದೀಪಕ್ ಹೂಡಾ, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಇಶಾನ್ ಕಿಶನ್, ಕೆಎಲ್ ರಾಹುಲ್, ದಿನೇಶ್ ಕಾರ್ತಿಕ್, ರಿಷಭ್ ಪಂತ್ (ವಿಕೆಟ್ ಕೀಪರ್), ರವಿ ಬಿಷ್ಣೋಯ್, ಭೂದೀಪ್ ಯಾದವ್, ಕುಲ್‌ದೀಪ್ ಯಾದವ್, ಭುವನೇಶ್ವರ್ ಕುಮಾರ್, ಅವೇಶ್ ಖಾನ್, ಹರ್ಷಲ್ ಪಟೇಲ್, ಅರ್ಷದೀಪ್ ಸಿಂಗ್

Story first published: Thursday, July 21, 2022, 18:03 [IST]
Other articles published on Jul 21, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X