ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ವಿಂಡೀಸ್ 2ನೇ ಏಕದಿನ: ಕುಸಿದಿದ್ದ ಭಾರತಕ್ಕೆ ರಾಹುಲ್, ಸೂರ್ಯ ಆಸರೆ; ವಿಂಡೀಸ್‌ಗೆ 238 ರನ್ ಗುರಿ

IND vs WI second ODI: India have given the target of 238 runs to West Indies

ಭಾರತ ಪ್ರವಾಸವನ್ನು ಕೈಗೊಂಡಿರುವ ವೆಸ್ಟ್ ಇಂಡೀಸ್ ಟೀಂ ಇಂಡಿಯಾ ವಿರುದ್ಧ 3 ಪಂದ್ಯಗಳ ಏಕದಿನ ಸರಣಿ ಹಾಗೂ 3 ಪಂದ್ಯಗಳ ಟಿ ಟ್ವೆಂಟಿ ಸರಣಿಯಲ್ಲಿ ಭಾಗವಹಿಸುತ್ತಿದೆ. ಇತ್ತಂಡಗಳ ನಡುವೆ ಮೊದಲಿಗೆ ಏಕದಿನ ಸರಣಿ ಆರಂಭವಾಗಿದ್ದು ಕಳೆದ ಭಾನುವಾರದಂದು ಗುಜರಾತಿನ ನರೇಂದ್ರ ಮೋದಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಮೊದಲನೇ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧ 6 ವಿಕೆಟ್‍ಗಳ ಭರ್ಜರಿ ಜಯ ಸಾಧಿಸುವುದರ ಮೂಲಕ ಸರಣಿಯಲ್ಲಿ ಶುಭಾರಂಭವನ್ನು ಮಾಡಿತ್ತು.

ಹೀಗೆ ಮೊದಲನೇ ಪಂದ್ಯದಲ್ಲಿ ಹೀನಾಯವಾಗಿ ಸೋಲುವುದರ ಮೂಲಕ ಸರಣಿಯಲ್ಲಿ ಕಳಪೆ ಆರಂಭವನ್ನು ಪಡೆದುಕೊಂಡ ವೆಸ್ಟ್ ಇಂಡೀಸ್ ಇದೀಗ ಟೀಮ್ ಇಂಡಿಯಾ ವಿರುದ್ಧದ ದ್ವಿತೀಯ ಏಕದಿನ ಪಂದ್ಯದಲ್ಲಿ ಕಣಕ್ಕಿಳಿದಿದೆ. ಇಂದು ( ಫೆಬ್ರವರಿ 9ರ ಬುಧವಾರ ) ಗುಜರಾತಿನ ನರೇಂದ್ರ ಮೋದಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದ ವೆಸ್ಟ್ ಇಂಡೀಸ್ ತಂಡದ ನಾಯಕ ನಿಕೋಲಸ್ ಪೂರನ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದು ಎದುರಾಳಿ ಟೀಮ್ ಇಂಡಿಯಾವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು.

ಆರ್‌ಸಿಬಿ ಪರ ಕೆಟ್ಟ ಪ್ರದರ್ಶನ: ನಿಮ್ಮಪ್ಪನ ಜೊತೆ ಆಟೋ ಓಡಿಸು ಎಂದಿದ್ರು, ಸಹಾಯ ಮಾಡಿದ್ದು ಧೋನಿ: ಸಿರಾಜ್ಆರ್‌ಸಿಬಿ ಪರ ಕೆಟ್ಟ ಪ್ರದರ್ಶನ: ನಿಮ್ಮಪ್ಪನ ಜೊತೆ ಆಟೋ ಓಡಿಸು ಎಂದಿದ್ರು, ಸಹಾಯ ಮಾಡಿದ್ದು ಧೋನಿ: ಸಿರಾಜ್

ಹೀಗೆ ಟಾಸ್ ಸೋಲುವುದರ ಮೂಲಕ ಬ್ಯಾಟಿಂಗ್ ಆರಂಭಿಸಿದ ಟೀಮ್ ಇಂಡಿಯಾ ಆರಂಭಿಕ ಆಟಗಾರರನ್ನಾಗಿ ರೋಹಿತ್ ಶರ್ಮಾ ಮತ್ತು ರಿಷಭ್ ಪಂತ್ ಜೋಡಿಯನ್ನು ಕಣಕ್ಕಿಳಿಸುವುದರ ಮೂಲಕ ಪ್ರಯೋಗವೊಂದನ್ನು ಮಾಡಿತು. ಆದರೆ ಈ ಪ್ರಯೋಗ ಟೀಮ್ ಇಂಡಿಯಾಗೆ ದೊಡ್ಡ ಫಲ ನೀಡುವಲ್ಲಿ ವಿಫಲವಾಗಿದೆ. ಆರಂಭಿಕ ಆಟಗಾರರಾದ ರೋಹಿತ್ ಶರ್ಮಾ 8 ರನ್ ಗಳಿಸಿ ಔಟ್ ಆದರೆ, ರಿಷಭ್ ಪಂತ್ 18 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು. ಇನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ ಕೂಡ 18 ರನ್ ಕಲೆಹಾಕಿ ವಿಕೆಟ್ ಒಪ್ಪಿಸಿದರು. ಹೀಗೆ 12 ಓವರ್‌ಗಳಿಗೆ ತಂಡದ ಮೂವರು ಪ್ರಮುಖ ಆಟಗಾರರ ವಿಕೆಟ್ ಕಳೆದುಕೊಂಡ ಟೀಮ್ ಇಂಡಿಯಾ ಕೇವಲ 43 ರನ್ ಗಳಿಸಿತ್ತು. ಈ ಸಂದರ್ಭದಲ್ಲಿ ಜತೆಯಾದ ಕೆಎಲ್ ರಾಹುಲ್ ಮತ್ತು ಸೂರ್ಯಕುಮಾರ್ ಯಾದವ್ 91 ರನ್‌ಗಳ ಜತೆಯಾಟವನ್ನು ಆಡುವುದರ ಮೂಲಕ ತಂಡವನ್ನು ಉತ್ತಮ ಸ್ಥಿತಿಯತ್ತ ಕೊಂಡೊಯ್ದರು. ಕೆಎಲ್ ರಾಹುಲ್ 49 ರನ್ ಗಳಿಸಿದ್ದಾಗ ರನ್ ಔಟ್ ಆದರೆ ಸೂರ್ಯಕುಮಾರ್ ಯಾದವ್ 64 ರನ್ ಕಲೆಹಾಕಿ ತಂಡಕ್ಕೆ ಆಪತ್ಬಾಂಧವರಾದರು. ಇನ್ನುಳಿದಂತೆ ವಾಷಿಂಗ್ಟನ್ ಸುಂದರ್ 24, ದೀಪಕ್ ಹೂಡಾ 29, ಶಾರ್ದೂಲ್ ಠಾಕೂರ್ 8, ಮೊಹಮ್ಮದ್ ಸಿರಾಜ್ 3, ಯುಜುವೇಂದ್ರ ಚಾಹಲ್ ಅಜೇಯ 11 ಹಾಗೂ ಪ್ರಸಿದ್ಧ್ ಕೃಷ್ಣ ಔಟ್ ಆಗದೆ 0 ರನ್ ಕಲೆಹಾಕಿದರು. ಈ ಮೂಲಕ ಟೀಮ್ ಇಂಡಿಯಾ 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 237 ರನ್ ಕಲೆಹಾಕಿದ್ದು ಎದುರಾಳಿ ವೆಸ್ಟ್ ಇಂಡೀಸ್ ತಂಡಕ್ಕೆ ಗೆಲ್ಲಲು 238 ರನ್‌ಗಳ ಗುರಿಯನ್ನು ನೀಡಿದೆ.

ಅತ್ತ ವೆಸ್ಟ್ ಇಂಡೀಸ್ ತಂಡದ ಪರ ಅಲ್ಜಾರಿ ಜೋಸೆಫ್ 2 ವಿಕೆಟ್ ಮತ್ತು ಓಡಿಯನ್ ಸ್ಮಿತ್‌ 2 ವಿಕೆಟ್ ಪಡೆದರೆ, ಕೆಮರ್ ರೋಚ್, ಜೇಸನ್ ಹೋಲ್ಡರ್, ಅಕೈನ್ ಹುಸೇನ್ ಮತ್ತು ಫ್ಯಾಬಿಯನ್ ಅಲೆನ್ ತಲಾ 1 ವಿಕೆಟ್ ಪಡೆದರು.

ಭಾರತ ಟೆಸ್ಟ್ ತಂಡದ ನಾಯಕ ಸ್ಥಾನಕ್ಕೆ ಮೂವರ ಹೆಸರು: ರೋಹಿತ್ ನಾಯಕನಾಗಲು ಇದೊಂದೇ ಅಡ್ಡಿ!ಭಾರತ ಟೆಸ್ಟ್ ತಂಡದ ನಾಯಕ ಸ್ಥಾನಕ್ಕೆ ಮೂವರ ಹೆಸರು: ರೋಹಿತ್ ನಾಯಕನಾಗಲು ಇದೊಂದೇ ಅಡ್ಡಿ!

ದ್ವಿತೀಯ ಏಕದಿನ ಪಂದ್ಯದ ಆಡುವ ಬಳಗಗಳು

ಭಾರತ ಆಡುವ ಬಳಗ: ರೋಹಿತ್ ಶರ್ಮಾ(ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ರಿಷಭ್ ಪಂತ್(ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್, ಯುಜ್ವೇಂದ್ರ ಚಾಹಲ್, ಪ್ರಸಿದ್ಧ್ ಕೃಷ್ಣ

ವೆಸ್ಟ್ ಇಂಡೀಸ್‌ ಆಡುವ ಬಳಗ: ಶಾಯ್ ಹೋಪ್ (ವಿಕೆಟ್ ಕೀಪರ ), ಬ್ರಾಂಡನ್ ಕಿಂಗ್, ಡ್ಯಾರೆನ್ ಬ್ರಾವೋ, ಶಮರ್ ಬ್ರೂಕ್ಸ್, ನಿಕೋಲಸ್ ಪೂರನ್ (ನಾಯಕ), ಜೇಸನ್ ಹೋಲ್ಡರ್, ಓಡಿಯನ್ ಸ್ಮಿತ್, ಅಕೇಲ್ ಹೊಸೈನ್, ಫ್ಯಾಬಿಯನ್ ಅಲೆನ್, ಅಲ್ಜಾರಿ ಜೋಸೆಫ್, ಕೆಮರ್ ರೋಚ್

Story first published: Wednesday, February 9, 2022, 17:30 [IST]
Other articles published on Feb 9, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X