ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Ind vs WI: ಭಾರತದ ಪರ ಯಾರೂ ಮಾಡದ ಸಾಧನೆ ಮಾಡಿ ಇತಿಹಾಸ ಬರೆದ ಶಿಖರ್ ಧವನ್

Ind vs WI: Shikhar Dhawan 1st Indian captain won ODI series by clean sweep in Caribbean

ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯ ಅಂತಿಮ ಪಂದ್ಯದಲ್ಲಿ ಕೂಡ ಭಾರತ ಅಮೋಘ ಪ್ರದರ್ಶನ ನೀಡುವ ಮೂಲಕ ಗೆಲುವು ಸಾಧಿಸಿದೆ. ಈ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 3-0 ಅಂತರದಿಂದ ವಶಕ್ಕೆ ಪಡೆದುಕೊಂಡಿದ್ದು ವೆಸ್ಟ್ ಇಂಡೀಸ್ ನೆಲದಲ್ಲಿ ಪ್ರಪ್ರಥಮ ಬಾರಿಗೆ ಈ ಸಾಧನೆ ಮಾಡಿದೆ.

ಮಳೆಯಿಂದಾಗಿ ಅಡ್ಡಿಯುಂಟಾಗಿದ್ದ ಈ ಪಂದ್ಯದಲ್ಲಿ ಭಾರತ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಅದ್ಭುತ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಯಿತು. ಟಾಸ್ ಗೆದ್ದು ಮೊದಲಿಗೆ ಬ್ಯಾಟಿಂಗ್ ಮಾಡಿದ ಭಾರತದ ಪರವಾಗಿ ನಾಯಕ ಶಿಖರ್ ಧವನ್ ಹಾಗೂ ಯುವ ಆರಂಭಿಕ ಆಟಗಾರ ಶುಬ್ಮನ್ ಗಿಲ್ ಭರ್ಜರಿ ಆರಂಭ ನೀಡಿದರು. ಶತಕದ ಜೊತೆಯಾಟ ನಿಡಿದ ಈ ಜೋಡಿಯಿಂದಾಗಿ ಭಾರತ ಉತ್ತಮ ಮೊತ್ತ ಗಳಿಸುವತ್ತ ಸಾಗಿತ್ತು. ಮಳೆಯಿಂದಾಗಿ ಭಾರತದ ಇನ್ನಿಂಗ್ಸ್‌ಅನ್ನು ಸ್ಥಗಿತಗೊಳಿಸಿದ ಕಾರಣ ಶುಬ್ಮನ್ ಗಿಲ್ ತಮ್ಮ ಚೊಚ್ಚಲ ಶತಕಗಳಿಸುವ ಅವಕಾಶವನ್ನು ಕಳೆದುಕೊಂಡಿದ್ದಾರೆ.

ಹೊಸ ಇತಿಹಾಸ ಬರೆದ ಶಿಖರ್ ಧವನ್

ಹೊಸ ಇತಿಹಾಸ ಬರೆದ ಶಿಖರ್ ಧವನ್

ಕೆರಿಬಿಯನ್ ನಾಡಿನಲ್ಲಿ ಭಾರತ ಈವರೆಗೆ ಏಕದಿನ ಸರಣಿಯಲ್ಲಿ ವೈಟ್‌ವಾಶ್ ಮಾಡಿದ ಸಾಧನೆ ಮಾಡಲು ಸಾಧ್ಯವಾಗಿರಲಿಲ್ಲ. ಆದರೆ ಈ ಬಾರಿ ಶಿಖರ್ ಧವನ್ ನಾಯಕತ್ವದಲ್ಲಿ ಭಾರತ ಆ ಸಾಧನೆ ಮಾಡಿ ತೋರಿಸಿದೆ. ಈ ಮೂಲಕ ನಾಯಕನಾಗಿ ಶಿಖರ್ ಧವನ್ ಭಾರತದ ಪರವಾಗಿ ಈವರೆಗೆ ಯಾರಿಂದಲೂ ಸಾಧ್ಯವಾಗದ ಸಾಧನೆಯನ್ನು ಮಾಡಿದ್ದಾರೆ. ಈ ಮೂಲಕ ಇತಿಹಾಸದ ಪುಟ ಸೇರಿಕೊಂಡಿದ್ದಾರೆ ಶಿಖರ್ ಧವನ್.

ಒಂದೇ ವರ್ಷದಲ್ಲಿ ಎರಡು ಬಾರಿ ವೈಟ್‌ವಾಶ್

ಒಂದೇ ವರ್ಷದಲ್ಲಿ ಎರಡು ಬಾರಿ ವೈಟ್‌ವಾಶ್

ಭಾರತ ವೆಸ್ಟ್ ಇಂಡೀಸ್ ತಂಡವನ್ನು ಒಂದೇ ವರ್ಷದಲ್ಲಿ ಎರಡು ಬಾರಿ ವೈಟ್‌ವಾಶ್ ಮಾಡಿದ ವಿಶೇಷ ಸಾಧನೆಯನ್ನು ಕೂಡ ಮಾಡಿದೆ. ಕ್ಯಾಲೆಂಡರ್ ವರ್ಷವೊಂದರಲ್ಲಿ ಈ ಸಾಧನೆ ಮಾಡಿದ ಕೇವಲ ಮೂರನೇ ತಂಡ ಎಂಬ ಹೆಗ್ಗಳಿಕೆಗೂ ಭಾರತ ಪಾತ್ರವಾಗಿದೆ. ಇದಕ್ಕೂ ಹಿಂದೆ ಜಿಂಬಾಬ್ವೆ ಹಾಗೂ ಬಾಂಗ್ಲಾದೇಶ ತಂಡಗಳು ಇದೇ ಸಾಧನೆಯನ್ನು ಮಾಡಿತ್ತು. 2001ರಲ್ಲಿ ಜಿಂಬಾಬ್ವೆ ಬಾಂಗ್ಲಾದೇಶವನ್ನು ಒಂದು ವರ್ಷದಲ್ಲಿ ತವರಿನಲ್ಲಿ 4-0 ಅಂತರದಿಂದ ಮಣಿಸಿದ್ದರೆ ಅವೇ ಸರಣಿಯಲ್ಲಿ 3-0 ಅಂತರದಿಂದ ಕ್ಲೀನ್ ಸ್ವೀಪ್ ಸಾಧನೆ ಮಾಡಿತ್ತು. ಬಳಿಕ 2006ರಲ್ಲಿ ಬಾಂಗ್ಲಾದೇಶ ಕೀನ್ಯಾ ವಿರುದ್ಧ ತವರು ಹಾಗೂ ಅವೇ ಸರಣಿಯಲ್ಲಿ 3-0 ಅಂತರದಿಂದ ಗೆದ್ದು ಸಾಧನೆ ಮಾಡಿತ್ತು.

ವಿಂಡೀಸ್ ನಾಡಿನಲ್ಲಿ ಏಕದಿನ ಸರಣಿ ಗೆದ್ದ 5ನೇ ನಾಯಕ

ವಿಂಡೀಸ್ ನಾಡಿನಲ್ಲಿ ಏಕದಿನ ಸರಣಿ ಗೆದ್ದ 5ನೇ ನಾಯಕ

ವೆಸ್ಟ್ ಇಂಡೀಸ್ ತಂಡದ ವಿರುದ್ಧ ಅವರದ್ದೇ ನಾಡಿನಲ್ಲಿ ಭಾರತ ತಂಡವನ್ನು ಸರಣಿ ಗೆಲ್ಲಲು ಮುನ್ನಡೆಸಿದ ನೇ ನಾಯಕ ಎನಿಸಿಕೊಂಡಿದ್ದಾರೆ ಶಿಖರ್ ಧವನ್. ಖಾಯಂ ನಾಯಕ ರೋಹಿತ್ ಶರ್ಮಾ ಅಲಭ್ಯತೆಯಲ್ಲಿ ಶಿಖರ್ ಧವನ್ ತಂಡವನ್ನು ಮುನ್ನಡೆಸಿ ಈ ವಿಶೇಷ ಸಾಧನೆ ಮಾಡಿದ್ದಾರೆ. ಇದಕ್ಕೂ ಮುನ್ನ ಸೌರವ್ ಗಂಗೂಲಿ, ಎಂಎಸ್ ಧೋನಿ, ಸುರೇಶ್ ರೈನಾ ಹಾಗೂ ವಿರಾಟ್ ಕೊಹ್ಲಿ ಕೆರಿಬಿಯನ್ ನಾಡಿನಲ್ಲಿ ಸರಣಿ ಗೆದ್ದ ಭಾರತ ತಂಡದ ನಾಯಕರಾಗಿದ್ದಾರೆ.

ವೆಸ್ಟ್ ಇಂಡೀಸ್ ನಲ್ಲಿ ಭಾರತದ ಯಾವ ನಾಯಕನೂ ಮಾಡದ ಸಾಧನೆಯನ್ನು ಮಾಡಿದ ಶಿಖರ್ ಧವನ್ | OneIndia Kannada
ಸ್ಕ್ವಾಡ್ ಹೀಗಿದೆ

ಸ್ಕ್ವಾಡ್ ಹೀಗಿದೆ

ಭಾರತ: ಶಿಖರ್ ಧವನ್ (ನಾಯಕ), ಋತುರಾಜ್ ಗಾಯಕ್ವಾಡ್, ಶುಬ್ಮನ್ ಗಿಲ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್) ಶಾರ್ದೂಲ್ ಠಾಕೂರ್, ಯುಜ್ವೇಂದ್ರ ಚಾಹಲ್, ಅಕ್ಸರ್ ಪಟೇಲ್, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್,
ವೆಸ್ಟ್ ಇಂಡೀಸ್: ಶಾಯ್ ಹೋಪ್ (ವಿಕೆಟ್ ಕೀಪರ್), ಬ್ರಾಂಡನ್ ಕಿಂಗ್, ಕೀಸಿ ಕಾರ್ಟಿ, ನಿಕೋಲಸ್ ಪೂರನ್ (ನಾಯಕ), ಶಮರ್ ಬ್ರೂಕ್ಸ್, ಕೈಲ್ ಮೇಯರ್ಸ್, ಕೀಮೋ ಪಾಲ್, ಜೇಸನ್ ಹೋಲ್ಡರ್, ಅಕೇಲ್ ಹೋಸೇನ್, ಹೇಡನ್ ವಾಲ್ಷ್, ಜೇಡನ್ ಸೀಲ್ಸ್

Story first published: Thursday, July 28, 2022, 10:46 [IST]
Other articles published on Jul 28, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X