ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

''ಭಾರತ ನಮ್ಮ ಶತ್ರುವಲ್ಲ'' ಎಂದು ಶಾಹಿದ್ ಅಫ್ರಿದಿ ವಿರುದ್ಧ ಕಿಡಿಕಾರಿದ ಕನೇರಿಯಾ

Danish kaneria

ಶಾಹಿದ್ ಅಫ್ರಿದಿ ತಾನು ಹಿಂದೂ ಎಂಬ ಕಾರಣಕ್ಕಾಗಿ ತನಗೆ ಹೆಚ್ಚು ಆಡುವ ಅವಕಾಶ ನೀಡದೇ ತಂಡದಿಂದ ಹೊರಗಿಟ್ಟು ಬೆಂಚ್ ಕಾಯುವಂತೆ ಮಾಡಿದ್ದರು ಎಂಬ ಗಂಭೀರ ಆರೋಪವನ್ನು ಮಾಡಿದ್ದ ಪಾಕ್ ಮಾಜಿ ಕ್ರಿಕೆಟಿಗ ಡ್ಯಾನಿಶ್ ಕನೇರಿಯಾ, ಅಫ್ರಿದಿ ಮತ್ತೊಂದು ಟಕ್ಕರ್ ನೀಡಿದ್ದಾರೆ. ಈ ಮೂಲಕ ಶಾಹಿದ್ ಅಫ್ರಿದಿ ಮತ್ತೊಂದು ವಿವಾದಕ್ಕೆ ಸಿಲುಕಿದ್ದಾರೆ.

ಒಳ್ಳೆಯದಾಗಲಿ, ಕೆಟ್ಟದಾಗಲಿ ಪಾಕ್‌ನ ಮಾಜಿ ಕ್ರಿಕೆಟ್ ನಾಯಕ ಶಾಹಿದ್ ಅಫ್ರಿದಿ ಒಂದಿಲ್ಲೊಂದು ಸುದ್ದಿಯಾಗುತ್ತಿದ್ದರು. ಆದ್ರೀಗ ಡ್ಯಾನೀಶ್ ಕನೇರಿಯಾ ಮಾಡಿರುವ ಗಂಭೀರ ಆರೋಪವು ಅಫ್ರಿದಿಯನ್ನ ಸುತ್ತಿಕೊಂಡಿದೆ.

ಬ್ಯಾಟಿಂಗ್‌ಗೂ ಮುಂಚೆ ಬ್ಯಾಟ್‌ ಅನ್ನು ತಿನ್ನುವ ಧೋನಿ! ಕಾರಣ ತಿಳಿಸಿದ ಅಮಿತ್ ಮಿಶ್ರಾಬ್ಯಾಟಿಂಗ್‌ಗೂ ಮುಂಚೆ ಬ್ಯಾಟ್‌ ಅನ್ನು ತಿನ್ನುವ ಧೋನಿ! ಕಾರಣ ತಿಳಿಸಿದ ಅಮಿತ್ ಮಿಶ್ರಾ

ಕನೇರಿಯಾ ಮಾಡಿದ್ದ ಆರೋಪಕ್ಕೆ ಶಾಹಿದ್ ಅಫ್ರಿದಿ ಕೂಡ ಉತ್ತರ ನೀಡಿದ್ರು. ದನೀಶ್ ಕನೇರಿಯಾ ಹೇಳಿದ್ದೆಲ್ಲಾ ಸುಳ್ಳು ಎಂದಿದ್ದರು. ದನೀಶ್ ಕನೇರಿಯಾ ನನ್ನ ಸೋದರನ ಹಾಗೆ ಹಾಗೂ ಇಬ್ಬರೂ ಸಹ ಒಂದೇ ವಿಭಾಗದಲ್ಲಿ ಹಲವಾರು ವರ್ಷಗಳ ಕಾಲ ಆಟವನ್ನಾಡಿದ್ದೇವೆ' ಎಂದು ಹೇಳಿಕೆ ನೀಡಿದ್ದಾರೆ. ಹಾಗೂ ಇದೇ ಸಂದರ್ಭದಲ್ಲಿ ದನೀಶ್ ಕನೇರಿಯಾ ವಿರುದ್ಧ ತನ್ನ ಕೋಪವನ್ನು ಹೊರಹಾಕಿದ ಶಾಹಿದ್ ಅಫ್ರಿದಿ ನನ್ನ ಚಾರಿತ್ರದ ಬಗ್ಗೆ ಮಾತನಾಡುವ ವ್ಯಕ್ತಿ ಮೊದಲು ತನ್ನ ಚಾರಿತ್ರವನ್ನು ನೋಡಿಕೊಳ್ಳಬೇಕಿದೆ ಎಂದಿದ್ದರು.

ಇಷ್ಟಕ್ಕೆ ನಿಲ್ಲಿಸದ ಅಫ್ರಿದಿ ''ಹಣ ಮತ್ತು ಅಗ್ಗದ ಖ್ಯಾತಿಗಾಗಿ ಕನೇರಿಯಾ ಇದನ್ನು ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ. ಅವರ ಚಾರಿತ್ರ್ಯದ ಬಗ್ಗೆ ಎಲ್ಲರಿಗೂ ಗೊತ್ತು, ನನ್ನ ವರ್ತನೆ ಕೆಟ್ಟದಾಗಿದ್ದರೆ, ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಥವಾ ಅವರು ಆಡುತ್ತಿರುವ ಇಲಾಖೆಗೆ ಏಕೆ ದೂರು ನೀಡಲಿಲ್ಲ, ಅವರು ನಮ್ಮ ಶತ್ರು ದೇಶಕ್ಕೆ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಸಂದರ್ಶನಗಳನ್ನು ನೀಡುತ್ತಿದ್ದಾರೆ'' ಎಂದು ಆಫ್ರಿದಿ ಮಾಜಿ ಸ್ಪಿನ್ನರ್‌ನನ್ನು ಪ್ರಶ್ನಿಸಿದ್ದಾರೆ.

ಆದ್ರೀಗ ಇದಕ್ಕೆ ತಕ್ಕ ಉತ್ತರ ನೀಡಿರುವ ಕನೇರಿಯಾ ''ಭಾರತ ನಮ್ಮ ಶತ್ರುವಲ್ಲ. ಧರ್ಮದ ಹೆಸರಿನಲ್ಲಿ ಜನರನ್ನು ಪ್ರಚೋದಿಸುವವರೇ ನಮ್ಮ ಶತ್ರುಗಳು'' ಎಂದು ಅಫ್ರಿದಿಗೆ ಪ್ರತ್ಯುತ್ತರ ನೀಡಿದ್ದಾರೆ.

'' ನೀವು ಭಾರತವನ್ನು ನಿಮ್ಮ ಶತ್ರು ಎಂದು ಪರಿಗಣಿಸಿದರೆ, ಯಾವುದೇ ಭಾರತೀಯ ಮಾಧ್ಯಮ ಚಾನಲ್‌ಗಳಿಗೆ ಎಂದಿಗೂ ಹೋಗಬೇಡಿ @SAfridiOfficial'' ಎಂದು ಡ್ಯಾನಿಶ್ ಕನೇರಿಯಾ ಟ್ವೀಟ್ ಮಾಡಿದ್ದಾರೆ.

ಇನ್ನು ಕ್ರಿಕೆಟ್ ಬೋರ್ಡ್‌ಗೆ ಏಕೆ ದೂರು ನೀಡಲಿಲ್ಲ ಎಂದು ಅಫ್ರಿದಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಕನೇರಿಯಾ ''ಬಲವಂತದ ಮತಾಂತರದ ವಿರುದ್ಧ ನಾನು ಧ್ವನಿ ಎತ್ತಿದಾಗ, ನನ್ನ ವೃತ್ತಿಜೀವನ ನಾಶವಾಗುತ್ತದೆ ಎಂದು ನನಗೆ ಬೆದರಿಕೆ ಹಾಕಲಾಯಿತು" ಎಂಬ ಗಂಭೀರ ಆರೋಪ ಮಾಡಿದ್ದಾರೆ.

ಟೆಸ್ಟ್ ಕ್ರಿಕೆಟ್‌ನಲ್ಲಿ ಪಾಕಿಸ್ತಾನ ಪರ ಅತಿ ಹೆಚ್ಚು ವಿಕೆಟ್ ಪಡೆದ ಸ್ಪಿನ್ನರ್ ಆಗಿರುವ ಕನೇರಿಯಾ 61 ಪಂದ್ಯಗಳಿಂದ 261 ವಿಕೆಟ್ ಪಡೆದಿದ್ದಾರೆ. 18 ಏಕದಿನ ಪಂದ್ಯಗಳಲ್ಲಿ 15 ವಿಕೆಟ್ ಬೇಟೆಯಾಡಿರುವ ಈ ಸ್ಪಿನ್ನರ್ 2010ರ ನಂತರದಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಆಡಿಲ್ಲ. ಇನ್ನು ಶಾಹಿದ್ ಅಫ್ರಿದಿ 2017ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ರು. 2022ರಲ್ಲಿ ಪಾಕಿಸ್ತಾನ್‌ ಸೂಪರ್ ಲೀಗ್‌ನಿಂದ ಹೊರಬಂದರು.

Story first published: Tuesday, May 10, 2022, 9:34 [IST]
Other articles published on May 10, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X