ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಬಾಂಗ್ಲಾ: ಪಂದ್ಯಗಳ ದಿನಾಂಕ, ಸಮಯ, ಸಂಪೂರ್ಣ ಮಾಹಿತಿ

India vs Bangladesh full schedule: Date and time of all the matches

ನವದೆಹಲಿ, ಅಕ್ಟೋಬರ್ 30: ತವರಿನಲ್ಲಿನ ಪಂದ್ಯಗಳಲ್ಲಿ ಪಾರಮ್ಯ ಮೆರೆಯುತ್ತಿರುವ ಟೀಮ್ ಇಂಡಿಯಾ, ಮುಂಬರಲಿರುವ ಬಾಂಗ್ಲಾದೇಶ ವಿರುದ್ಧದ ಸರಣಿಯಲ್ಲೂ ಭರ್ಜರಿ ಫಾರ್ಮ್ ಮುಂದುವರೆಸುವುದನ್ನು ನಿರೀಕ್ಷಿಸಲಾಗಿದೆ. ಭಾರತಕ್ಕೆ ಪ್ರವಾಸ ಕೈಗೊಳ್ಳುತ್ತಿರುವ 'ಬಾಂಗ್ಲಾ ಟೈಗರ್ಸ್' ಆತಿಥೇಯರ ವಿರುದ್ಧ ನವೆಂಬರ್ 3ರಿಂದ 3 ಟಿ20, 2 ಟೆಸ್ಟ್‌ ಪಂದ್ಯಗಳನ್ನಾಡಲಿದೆ.

ವಿರಾಟ್ ಕೊಹ್ಲಿ, ಭಾರತ ಕ್ರಿಕೆಟ್ ತಂಡಕ್ಕೆ ಭಯೋತ್ಪಾದನಾ ಬೆದರಿಕೆ!ವಿರಾಟ್ ಕೊಹ್ಲಿ, ಭಾರತ ಕ್ರಿಕೆಟ್ ತಂಡಕ್ಕೆ ಭಯೋತ್ಪಾದನಾ ಬೆದರಿಕೆ!

ಭಾರತಕ್ಕೆ ಬಾಂಗ್ಲಾ ಪ್ರವಾಸ ವಿಶೇಷ ಅನ್ನಿಸಲು ಮತ್ತೊಂದು ಕಾರಣವೆಂದರೆ ಡೇ-ನೈಟ್ ಟೆಸ್ಟ್ ಪಂದ್ಯ. ಭಾರತ ಇದೇ ಮೊದಲ ಬಾರಿಗೆ ಬಾಂಗ್ಲಾ ಎದುರು ಡೇ-ನೈಟ್ ಟೆಸ್ಟ್‌ನಲ್ಲಿ ಪಾಲ್ಗೊಳ್ಳಲಿದೆ. ಅಂದರೆ ಟೆಸ್ಟ್‌ ಸರಣಿಯ ಎರಡು ಪಂದ್ಯಗಳಲ್ಲಿ ಎರಡನೇ ಪಂದ್ಯ ಡೇ-ನೈಟ್ ಟೆಸ್ಟ್ ಆಗಿರಲಿದೆ.

ಧೋನಿ ನಿವೃತ್ತಿ ಬಗ್ಗೆ ಮತ್ತೆ ಹಬ್ಬಿದೆ ಗಾಳಿ ಸುದ್ದಿ, ಟ್ವಿಟ್ಟರಲ್ಲಿ ಟ್ರೆಂಡೋ ಟ್ರೆಂಡ್!ಧೋನಿ ನಿವೃತ್ತಿ ಬಗ್ಗೆ ಮತ್ತೆ ಹಬ್ಬಿದೆ ಗಾಳಿ ಸುದ್ದಿ, ಟ್ವಿಟ್ಟರಲ್ಲಿ ಟ್ರೆಂಡೋ ಟ್ರೆಂಡ್!

ಭಾರತ vs ಬಾಂಗ್ಲಾದೇಶ ಸರಣಿಗಳ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ.

ಭಾರತ vs ಬಾಂಗ್ಲಾದೇಶ, ಟಿ20ಐ ಸರಣಿ

ಭಾರತ vs ಬಾಂಗ್ಲಾದೇಶ, ಟಿ20ಐ ಸರಣಿ

1. ನವೆಂಬರ್ 3, ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ 1ನೇ ಟಿ20ಐ ಪಂದ್ಯ (7:00 pm)
2. ನವೆಂಬರ್ 7: ರಾಜ್‌ಕೋಟ್‌ನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್ ಕ್ರೀಡಾಂಗಣದಲ್ಲಿ 2ನೇ ಟಿ20ಐ ಪಂದ್ಯ (7:00 pm)
3. ನವೆಂಬರ್ 10: ನಾಗ್ಪುರದ ವಿದರ್ಭ ಕ್ರಿಕೆಟ್ ಅಸೋಸಿಯೇಶನ್ ಕ್ರೀಡಾಂಗಣದಲ್ಲಿ 3ನೇ ಟಿ20ಐ ಪಂದ್ಯ (7:00 pm).

ಭಾರತ vs ಬಾಂಗ್ಲಾ, ಟೆಸ್ಟ್ ಕ್ರಿಕೆಟ್ ಸರಣಿ

ಭಾರತ vs ಬಾಂಗ್ಲಾ, ಟೆಸ್ಟ್ ಕ್ರಿಕೆಟ್ ಸರಣಿ

1. ನವೆಂಬರ್ 14-18: ಇಂದೋರ್‌ನ ಹೋಲ್ಕರ್ ಕ್ರಿಕೆಟ್ ಕ್ರೀಡಾಂಗಣದಲ್ಲಿ 1ನೇ ಟೆಸ್ಟ್ (9:30 am)
2. ನವೆಂಬರ್ 22-26: ಕೋಲ್ಕತ್ತಾದ ಈಡನ್ ಗಾರ್ಡನ್‌ನಲ್ಲಿ 2ನೇ ಟೆಸ್ಟ್-ಡೇ-ನೈಟ್‌ ಟೆಸ್ಟ್ (2:30 pm, ಆರಂಭದ ಸಮಯ 1:30 pmಗೆ ಬದಲಾಗುವ ಸಾಧ್ಯತೆಯಿದೆ).

ಪ್ರಸಾರ ಯಾವುದರಲ್ಲಿ?

ಪ್ರಸಾರ ಯಾವುದರಲ್ಲಿ?

ಬಾಂಗ್ಲಾ vs ಭಾರತ ಸರಣಿಯ ನೇರಪ್ರಸಾರ ಎಂದಿನಂತೆ ಸ್ಟಾರ್ ಸ್ಪೋರ್ಟ್ಸ್‌ ನೆಟ್ವರ್ಕ್ಸ್ ಚಾನೆಲ್‌ಗಳಲ್ಲಿ (ಹಿಂದಿ, ಇಂಗ್ಲಿಷ್), ಜಿಯೋ ಟಿವಿ ಮತ್ತು ಹಾಟ್‌ಸ್ಟಾರ್‌ ನಲ್ಲಿ ಲಭ್ಯವಾಗಲಿದೆ. ಇನ್ನು 'ಮೈಖೇಲ್ ಕನ್ನಡ'ದಲ್ಲೂ ನಿಮಗೆ ಪಂದ್ಯಗಳ Live ಸ್ಕೋರ್‌, ಸ್ಕೋರ್‌ಕಾರ್ಡ್, ಅಪ್‌ಡೇಟ್ಸ್ ಲಭಿಸಲಿದೆ.

ಡೇ-ನೈಟ್‌ ಟೆಸ್ಟ್ ಟಿಕೆಟ್‌ ದರ

ಡೇ-ನೈಟ್‌ ಟೆಸ್ಟ್ ಟಿಕೆಟ್‌ ದರ

ಮೊದಲ ಬಾರಿಗೆ ಭಾರತ ಡೇ ನೈಟ್‌ ಟೆಸ್ಟ್‌ನಲ್ಲಿ ಪಾಲ್ಗೊಳ್ಳುತ್ತಿರುವುದರಿಂದ ಕೋಲ್ಕತ್ತಾದ ಈಡನ್ ಗಾರ್ಡನ್‌ ಸ್ಟೇಡಿಯಂ ಹೌಸ್ ಫುಲ್‌ ಮಾಡಲು ಕ್ರಿಕೆಟ್ ಅಸೋಸಿಯೇಷನ್ ಆಫ್‌ ಬೆಂಗಾಲ್ (ಸಿಎಬಿ) ಮುಂದಡಿಯಿಟ್ಟಿದೆ. 68,000 ಜನರು ಕುಳಿತುಕೊಳ್ಳಲು ಅವಕಾಶವಿರುವ ಈಡನ್ ಗಾರ್ಡನ್‌ ಸ್ಟೇಡಿಯಂನಲ್ಲಿ ನಡೆಯುವ ಈ ಡೇ ನೈಟ್‌ ಟೆಸ್ಟ್‌ನ ಐದೂ ದಿನ ದಿನವೊಂದಕ್ಕೆ 50 ರೂ.ನಂತೆ ಟಿಕೆಟ್ ಬೆಲೆಯಿರಲಿದೆ.

Story first published: Wednesday, October 30, 2019, 23:12 [IST]
Other articles published on Oct 30, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X