ಐತಿಹಾಸಿಕ ಪಿಂಕ್‌ ಬಾಲ್‌ ಟೆಸ್ಟ್‌ನಲ್ಲಿ ವಿರಾಟ್ ಕೊಹ್ಲಿ ಹೊಸ ಮೈಲಿಗಲ್ಲು

ಕೋಲ್ಕತ್ತಾ, ನವೆಂಬರ್ 23: ಕ್ರಿಕೆಟ್‌ ಜಗತ್ತಿನಲ್ಲಿ ಸಾಲು ಸಾಲಾಗಿ ದಾಖಲೆಗಳನ್ನು ನಿರ್ಮಿಸುತ್ತ, ಹಳೆ ದಾಖಲೆಗಳನ್ನು ಮುರಿಯುತ್ತ ಬರುತ್ತಿರುವ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಕೋಲ್ಕತ್ತಾದಲ್ಲಿ ನಡೆಯುತ್ತಿರುವ ಐತಿಹಾಸಿಕ ಪಿಂಕ್‌ ಬಾಲ್ ಟೆಸ್ಟ್‌ನಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ.

ಭಾರತ ತಂಡದಿಂದ ರಿಷಬ್ ಪಂತ್ ಬಿಡುಗಡೆ ಮಾಡಿದ ಆಯ್ಕೆ ಸಮಿತಿ

ಭಾರತ-ಬಾಂಗ್ಲಾದೇಶ ಚೊಚ್ಚಲ ಡೇ-ನೈಟ್ ಟೆಸ್ಟ್‌ನಲ್ಲಿ ಶತಕ ಬಾರಿಸಿದ ಮೊದಲ ಬ್ಯಾಟ್ಸ್‌ಮನ್‌ ಆಗಿ ಕೊಹ್ಲಿ ದಾಖಲೆ ಪುಟ ಸೇರಿದ್ದಾರೆ. ಶನಿವಾರ (ನವೆಂಬರ್ 23) ನಡೆದ 2ನೇ ದಿನದಾಟದಲ್ಲಿ ಶತಕ ಬಾರಿಸಿದ ವಿರಾಟ್ ಈ ವಿಶೇಷ ದಾಖಲೆಗೆ ಕಾರಣರಾದರು. ಅಲ್ಲದೆ ಇದು ಕೊಹ್ಲಿ ಬಾರಿಸಿದ 27ನೇ ಟೆಸ್ಟ್ ಶತಕ ಕೂಡ.

ಭಾರತ vs ಬಾಂಗ್ಲಾದೇಶ, ಡೇ-ನೈಟ್ ಟೆಸ್ಟ್, Live ಸ್ಕೋರ್‌ಕಾರ್ಡ್

1
46120

ಟಾಸ್‌ ಗೆದ್ದು ಬ್ಯಾಟಿಂಗ್‌ಗೆ ಇಳಿದ ಬಾಂಗ್ಲಾ ಕೇವಲ 30.3ನೇ ಓವರ್‌ಗೆ 106 ರನ್ ಬಾರಿಸಿ ಮೊದಲ ಇನ್ನಿಂಗ್ಸ್ ಮುಗಿಸಿತ್ತು. ಈ ವೇಳೆ ಇಶಾಂತ್ ಶರ್ಮಾ 5, ಉಮೇಶ್ ಯಾದವ್ 3, ಮೊಹಮ್ಮದ್ ಶಮಿ 2 ವಿಕೆಟ್ ಪಡೆದಿದ್ದರು. ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ ಚೇತೇಶ್ವರ ಪೂಜಾರ 55, ಅಜಿಂಕ್ಯ ರಹಾನೆ 51, ಕೊಹ್ಲಿ ಶತಕದೊಂದಿಗೆ ಮುನ್ನಡೆ ಸಾಧಿಸಿದೆ.

ಐತಿಹಾಸಿಕ ಪಿಂಕ್‌ ಬಾಲ್ ಟೆಸ್ಟ್‌ನಲ್ಲಿ ವಿಶ್ವದಾಖಲೆ ಬರೆದ ವಿರಾಟ್ ಕೊಹ್ಲಿ

ಟೆಸ್ಟ್‌ ಕ್ರಿಕೆಟ್‌ನಲ್ಲಿ 141 ಇನ್ನಿಂಗ್ಸ್ ಆಡಿರುವ ಕೊಹ್ಲಿ 7196* ರನ್, 27 ಶತಕ, 7 ದ್ವಿಶತಕ, 22 ಅರ್ಧ ಶತಕಗಳನ್ನು ಬಾರಿಸಿದ್ದಾರೆ. ಅಲ್ಲದೆ ನಾಯಕನಾಗಿದ್ದುಕೊಂಡು ಟೆಸ್ಟ್‌ ಕ್ರಿಕೆಟ್‌ನಲ್ಲಿ 5000 ರನ್ ಮಾಡಿದ ಭಾರತದ ಮೊದಲ ಆಟಗಾರನಾಗಿ, ವಿಶ್ವದ 6ನೇ ಆಟಗಾರನಾಗಿ ಕೊಹ್ಲಿ ಗುರುತಿಸಿಕೊಂಡಿದ್ದಾರೆ.

For Quick Alerts
ALLOW NOTIFICATIONS
For Daily Alerts

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Saturday, November 23, 2019, 15:35 [IST]
Other articles published on Nov 23, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X