ಭಾರತದ ವೇಗಿ ಮೊಹಮ್ಮದ್ ಸಿರಾಜ್ ವಿರುದ್ಧ ಮತ್ತೆ ಪ್ರೇಕ್ಷಕರಿಂದ ದುರ್ವರ್ತನೆ!

ಲೀಡ್ಸ್: ಟೀಮ್ ಇಂಡಿಯಾದ ವೇಗಿ ಮೊಹಮ್ಮದ್ ಸಿರಾಜ್ ವಿರುದ್ಧ ಸ್ಟೇಡಿಯಂನಲ್ಲಿದ್ದ ಪ್ರೇಕ್ಷಕರು ದುರ್ವರ್ತನೆ ತೋರಿರುವ ಘಟನೆ ವರದಿಯಾಗಿದೆ. ಇಂಗ್ಲೆಂಡ್‌ ಪ್ರವಾಸದಲ್ಲಿರುವ ವಿರಾಟ್ ಕೊಹ್ಲಿ ಪಡೆ ಲೀಡ್ಸ್‌ನ ಹೆಡಿಂಗ್ಲಿಯಲ್ಲಿ ಆತಿಥೇಯ ಇಂಗ್ಲೆಂಡ್ ವಿರುದ್ಧ ತೃತೀಯ ಟೆಸ್ಟ್‌ ಪಂದ್ಯ ಆಡುತ್ತಿದೆ. ಪಂದ್ಯ ವೇಳೆ ಹೆಡಿಂಗ್ಲಿ ಪ್ರೇಕ್ಷಕರು ದುರ್ವರ್ತನೆ ತೋರಿರುವುದಾಗಿ ತಿಳಿದು ಬಂದಿದೆ. ಆಸ್ಟ್ರೇಲಿಯಾದಲ್ಲೂ ಒಮ್ಮೆ ಸಿರಾಜ್ ಹೀಗೇ ಜನಾಂಗೀಯ ನಿಂದನೆಗೆ ಒಳಗಾಗಿದ್ದರು.

ಭಾರತ vs ಇಂಗ್ಲೆಂಡ್: ಟೆಸ್ಟ್‌ ಕ್ರಿಕೆಟ್‌ನಲ್ಲಿ ಬೇಡದ ದಾಖಲೆ ಬರೆದ ವಿರಾಟ್ ಕೊಹ್ಲಿಭಾರತ vs ಇಂಗ್ಲೆಂಡ್: ಟೆಸ್ಟ್‌ ಕ್ರಿಕೆಟ್‌ನಲ್ಲಿ ಬೇಡದ ದಾಖಲೆ ಬರೆದ ವಿರಾಟ್ ಕೊಹ್ಲಿ

ಪಂದ್ಯ ನಡೆಯುತ್ತಿದ್ದಾಗ ಕಿಡಿಗೇಡಿ ಪ್ರೇಕ್ಷಕರು ಮೊಹಮ್ಮದ್ ಸಿರಾಜ್ ಅವರತ್ತ ಚೆಂಡು ಎಸೆಯುತ್ತಿದ್ದರು ಎಂದು ಭಾರತದ ಯುವ ಬ್ಯಾಟ್ಸ್‌ಮನ್‌ ಕಮ್ ವಿಕೆಟ್ ಕೀಪರ್ ರಿಷಭ್ ಪಂತ್ ಹೇಳಿದ್ದಾರೆ. ಇಂಗ್ಲೆಂಡ್ ಆರಂಭಿಕ ಇನ್ನಿಂಗ್ಸ್‌ನಲ್ಲಿ ಬೌಂಡರಿ ಲೈನ್‌ನಲ್ಲಿ ಫೀಲ್ಡಿಂಗ್‌ ಮಾಡುತ್ತಿದ್ದಾಗ ವೀಕ್ಷಕರು ದುರ್ವರ್ತನೆ ತೋರಿದ್ದಾಗಿ ಹೇಳಲಾಗಿದೆ.

ವಿರಾಟ್ ಕೊಹ್ಲಿ ಸಿಟ್ಟಾಗಿದ್ದ ವಿಡಿಯೋ ಸೆರೆ

ವಿರಾಟ್ ಕೊಹ್ಲಿ ಸಿಟ್ಟಾಗಿದ್ದ ವಿಡಿಯೋ ಸೆರೆ

ಪಂದ್ಯದ ವೇಳೆ ಭಾರತದ ನಾಯಕ ವಿರಾಟ್ ಕೊಹ್ಲಿ ಅವರು ವೇಗಿ ಮೊಹಮ್ಮದ್ ಸಿರಾಜ್ ಜೊತೆಗೆ ಸಿಟ್ಟಾಗಿ ಮಾತನಾಡುತ್ತಿದ್ದುದು ವಿಡಿಯೋದಲ್ಲಿ ಸೆರೆಯಾಗಿತ್ತು. ಸಿರಾಜ್ ಅವರತ್ತ ವೀಕ್ಷಕರು ಏನೋ ವಸ್ತು ಎಸೆದಿದ್ದಾಗಿ ಕೊಹ್ಲಿ ನಡೆಯಲ್ಲೂ ಕಾಣುತ್ತಿತ್ತು. ಆರಂಭಿಕ ದಿನದಾಟ ಮುಗಿದ ಬಳಿಕ ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ರಿಷಭ್ ಪಂತ್ ಅವರಲ್ಲಿ ಕೇಳಿದಾಗ ಪಂತ್ ಇದರ ಬಗ್ಗೆ ಮಾತನಾಡಿದ್ದಾರೆ. "ನನಗನ್ನಿಸುತ್ತದೆ, ಪ್ರೇಕ್ಷಕರ ಗುಂಪಿನಿಂದ ಯಾರೋ ಸಿರಾಜ್ ಅವರತ್ತ ಚೆಂಡು ಎಸೆದಿದ್ದರು. ಹೀಗಾಗಿ ವಿರಾಟ್ ಸಿಟ್ಟಾಗಿದ್ದರು. ಆಟ ನಡೆಯುತ್ತಿರುವಾಗ ನೀವು ಬೇಕಾದರೆ ಏನಾದರೂ ಹೇಳಿ, ಏನಾದರೂ ಕಿರುಚಿ. ಅದನ್ನಾದರೂ ಸಹಿಸಿಕೊಳ್ಳಬಹುದು. ಆದರೆ ಫೀಲ್ಡರ್ಸ್ ಕಡೆಗೆ ವಸ್ತುಗಳನ್ನು ಎಸೆಯೋದು ಒಳ್ಳೆಯದಲ್ಲ. ಕ್ರಿಕೆಟ್‌ಗೂ ಇದು ಒಳ್ಳೆಯದಲ್ಲ," ಎಂದು ಪಂತ್ ಹೇಳಿದ್ದಾರೆ.

ಮೊಹಮ್ಮದ್ ಸಿರಾಜ್ ಅವರೇ ಯಾಕೆ ಟಾರ್ಗೆಟ್

ಮೊಹಮ್ಮದ್ ಸಿರಾಜ್ ಅವರೇ ಯಾಕೆ ಟಾರ್ಗೆಟ್

27ರ ಹರೆಯದ ಮೊಹಮ್ಮದ್ ಸಿರಾಜ್ ಅವರೇ ಮತ್ತೆ ಪ್ರೇಕ್ಷಕರ ಕಿರುಕುಳಕ್ಕೆ ಒಳಗಾಗಿದ್ದಾರೆ ಎನ್ನುವ ಪ್ರಶ್ನೆ ಮೂಡಬಹುದು. ಇದಕ್ಕೊಂದು ಕಾರಣವಿದೆ. ದ್ವಿತೀಯ ಟೆಸ್ಟ್‌ನಲ್ಲಿ ಸಿರಾಜ್ ಉತ್ತಮ ಪ್ರದರ್ಶನ ನೀಡಿದ್ದರು. ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ 4, ದ್ವಿತೀಯ ಇನ್ನಿಂಗ್ಸ್‌ನಲ್ಲಿ 4 ವಿಕೆಟ್‌ ಪಡೆದಿದ್ದರು. ಆ ಪಂದ್ಯದಲ್ಲಿ ಇಂಗ್ಲೆಂಡ್ 151 ರನ್‌ಗಳ ಹೀನಾಯ ಸೋಲು ಕಂಡಿತ್ತು. ಐದು ಪಂದ್ಯಗಳ ಈ ಟೆಸ್ಟ್‌ ಸರಣಿಯಲ್ಲಿ 1-0ಯ ಹಿನ್ನಡೆಯೂ ಕಂಡಿತ್ತು. ಇದೇ ಕಾರಣಕ್ಕೆ ಸಿರಾಜ್ ವಿರುದ್ಧ ಆಂಗ್ಲ ಪ್ರೇಕ್ಷಕರು ದುರ್ವರ್ತನೆ ತೋರಿರಬಹುದು. ಇದಕ್ಕೂ ಮುನ್ನ ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಟೆಸ್ಟ್‌ ಪಂದ್ಯದ ವೇಳೆ ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ ಪ್ರೇಕ್ಷಕರು ಸಿರಾಜ್ ವಿರುದ್ಧ ಜನಾಂಗೀಯ ನಿಂದನೆ ಮಾಡಿದ್ದರು. ಆ ವೇಳೆ ಆಟ ಕ್ಷಣ ಕಾಲ ನಿಲ್ಲಿಸಲಾಗಿತ್ತಲ್ಲದೆ ಕೆಲ ಪ್ರೇಕ್ಷಕರನ್ನು ಮೈದಾನದಿಂದ ಹೊರಗೆ ಕಳುಹಿಸಲಾಗಿತ್ತು.

50 ಇನ್ನಿಂಗ್ಸ್ ಕಳೆದ್ರೂ ವಿರಾಟ್ ಬ್ಯಾಟ್ ನಿಂದ ಶತಕ ದಾಖಲಾಗಿಲ್ಲ ಯಾಕೆ? | Oneindia Kannada
ಭಾರತದ ಆರಂಭಿಕ ಇನ್ನಿಂಗ್ಸ್‌ನಲ್ಲಿ ಕಳಪೆ ಬ್ಯಾಟಿಂಗ್

ಭಾರತದ ಆರಂಭಿಕ ಇನ್ನಿಂಗ್ಸ್‌ನಲ್ಲಿ ಕಳಪೆ ಬ್ಯಾಟಿಂಗ್

ತೃತೀಯ ಟೆಸ್ಟ್‌ನಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿರುವ ಭಾರತ ಆರಂಭಿಕ ಇನ್ನಿಂಗ್ಸ್‌ನಲ್ಲಿ ಕಳಪೆ ಬ್ಯಾಟಿಂಗ್‌ ಪ್ರದರ್ಶಿಸಿದೆ. ಆರಂಭಿಕ ಬ್ಯಾಟ್ಸ್‌ಮನ್‌ ಕೆಎಲ್ ರಾಹುಲ್, ರೋಹಿತ್ ಶರ್ಮಾ, ಮಧ್ಯಮ ಕ್ರಮಾಂಕದ ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ ಮತ್ತು ಚೇತೇಶ್ವರ್ ಪೂಜಾರ, ಕೆಳ ಕ್ರಮಾಂಕದ ರಿಷಭ್ ಪಂತ್, ರವೀಂದ್ರ ಜಡೇಜಾ ಹೀಗೆ ಎಲ್ಲರೂ ಬೆರಳೆಣಿಕೆಯ ರನ್‌ಗೆ ವಿಕೆಟ್‌ ನೀಡಿದ್ದಾರೆ. ಇಂಗ್ಲೆಂಡ್‌ನ ಜೇಮ್ಸ್ ಆ್ಯಂಡರ್ಸನ್ ಮತ್ತು ಕ್ರೆಗ್ ಓವರ್‌ಟನ್ ಮಾರಕ ಬೌಲಿಂಗ್‌ ನಡೆಸಿದ್ದಾರೆ. ಆ್ಯಂಡರ್ಸನ್ 6 ರನ್‌ಗೆ 3 ವಿಕೆಟ್‌ ಮುರಿದರೆ, ಓವರ್‌ಟನ್ 14 ರನ್‌ಗೆ 3 ವಿಕೆಟ್ ಕೆಡವಿದ್ದಾರೆ. ಇನ್ನು ಆಲಿ ರಾಬಿನ್ಸನ್ 16 ರನ್‌ಗೆ 2, ಸ್ಯಾಮ್ ಕರನ್ 27 ರನ್‌ಗೆ 2 ವಿಕೆಟ್‌ ಪಡೆದು ಪಾರಮ್ಯ ಮೆರೆದರು. ಬುಧವಾರ (ಆಗಸ್ಟ್ 25) ಆರಂಭಿಕ ದಿನದಾಟದ ಅಂತ್ಯಕ್ಕೆ ಭಾರತ 40.4 ಓವರ್‌ಗೆ ಎಲ್ಲಾ ವಿಕೆಟ್‌ ಕಳೆದು 78 ರನ್ ಗಳಿಸಿತ್ತು. ಆರಂಭಿಕ ಇನ್ನಿಂಗ್ಸ್‌ಗೆ ಇಳಿದಿದ್ದ ಇಂಗ್ಲೆಂಡ್ ವಿಕೆಟ್ ನಷ್ಟವಿಲ್ಲದೆ 42 ಓವರ್‌ಗಳಲ್ಲಿ 120 ರನ್ ಬಾರಿಸಿ 42 ರನ್ ಮುನ್ನಡೆಯಲ್ಲಿತ್ತು. ರೋರಿ ಬರ್ನ್ಸ್, ಹಸೀಬ್ ಹಮೀದ್ ತಲಾ ಅರ್ಧ ಶತಕ ಬಾರಿಸಿ ಆಡುತ್ತಿದ್ದರು. ಹೀಗಾಗಿ ಆರಂಭಿಕ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ಭರ್ಜರಿ ಮುನ್ನಡೆ ಪಡೆಯುವ ನಿರೀಕ್ಷೆಯಿದೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Thursday, August 26, 2021, 12:31 [IST]
Other articles published on Aug 26, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X