ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಚಹರ್-ಭುವನೇಶ್ವರ್ ಮ್ಯಾಚ್ ವಿನ್ನಿಂಗ್ ಜೊತೆಯಾಟದ ಬಗ್ಗೆ ನಾಯಕ ಧವನ್ ಹೇಳಿದ್ದಿಷ್ಟು!

India vs Sri lanka: captain Shikhar Dhawan praises Chahar and Bhuvneshwar

ಕೊಲಂಬೋ, ಜುಲೈ 21: ಭಾರತ ತಂಡದ ಮುಂದೆ ಇದ್ದದ್ದು 276 ರನ್‌ಗಳ ಗುರಿ. ಆದರೆ 36 ಓವರ್‌ಗಳ ವೇಳೆಗೆ ಭಾರತ 193 ರನ್‌ಗಳಿಗೆ 7 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಸ್ಪೆಶಲಿಸ್ಟ್ ಬ್ಯಾಟ್ಸ್‌ಮನ್‌ಗಳೆಲ್ಲರೂ ಪೆವಿಲಿಯನ್ ಸೇರಿಯಾಗಿತ್ತು. ಗೆಲುವಿನ ಕನಸು ಕಾಣುವುದು ಅಸಾಧ್ಯವಾಗಿತ್ತು. ಆದರೆ ಬಳಿಕ ಯಾರೂ ಊಹಿಸದ ಫಲಿತಾಂಶ ಬಂದಿತ್ತು. ದೀಪಕ್ ಚಾಹರ್ ಗೆಲುವಿನ ಹೀರೋ ಆಗಿ ಮಿಂಚಿದರು. ಉಪ ನಾಯಕ ಭುವನೇಶ್ವರ್ ಕುಮಾರ್ ಮತ್ತೊಂದು ತುದಿಯಲ್ಲಿ ನಿಂತು ಜವಾಬ್ಧಾರಿಯುತ ಜೊತೆಯಾಟವನ್ನು ನೀಡಿದರು. ಭಾರತ 3 ವಿಕೆಟ್‌ಗಳ ಗೆಲುವು ಸಾಧಿಸಿ ಸರಣಿಯನ್ನು ವಶಕ್ಕೆ ಪಡೆದಿತ್ತು.

ಈ ರೋಮಾಂಚನಕಾರಿ ಗೆಲುವಿನ ನಂತರ ಭಾರತ ತಂಡದ ನಾಯಕ ಶಿಖರ್ ಧವನ್ ಪ್ರತಿಕ್ರಿಯಿಸಿ ಸಂತಸವನ್ನು ವ್ಯಕ್ತಪಡಿಸಿದ್ದಾರೆ. ಅದರಲ್ಲೂ ದೀಪಕ್ ಚಹರ್ ಹಾಗೂ ಭುವನೇಶ್ವರ್ ಜೊತೆಯಾಟವನ್ನು 'ಪ್ರಚಂಡ ಪ್ರದರ್ಶನ' ಎಂದು ಬಣ್ಣಿಸಿದ್ದಾರೆ. ಪಂದ್ಯದ ಮುಕ್ತಾಯದ ನಂತರ ಮಾತನಾಡಿದ ಧವನ್ "ಚಹರ್ ಮತ್ತು ಭುವಿ ಪ್ರದರ್ಶನ ಅದ್ಭುತವಾಗಿತ್ತು" ಎಂದಿದ್ದಾರೆ.

 ಟೀಮ್ ಇಂಡಿಯಾ ಗೆಲುವಿನ ಸ್ಟಾರ್ ದೀಪಕ್ ಚಾಹರ್ ಹೊಸ ದಾಖಲೆ! ಟೀಮ್ ಇಂಡಿಯಾ ಗೆಲುವಿನ ಸ್ಟಾರ್ ದೀಪಕ್ ಚಾಹರ್ ಹೊಸ ದಾಖಲೆ!

"ಚಹರ್ ನೆಟ್‌ನಲ್ಲಿ ಬ್ಯಾಟಿಂಗ್ ಮೇಲೆಯೂ ಸಾಕಷ್ಟು ಕಠಿಣ ಪರಿಶ್ರಮವನ್ನು ಪಡುತ್ತಿದ್ದರು ಎಂಬುದು ನಮಗೆ ಗೊತ್ತಿದೆ. ಆತನ ಸಂದರ್ಭಕ್ಕೆ ತಕ್ಕ ಮನಸ್ಥಿತಿ ಹಾಗೂ ಲೆಗ್‌ಸ್ಪಿನ್ನರ್‌ ದಾಳಿಗೆ ನೀಡಿದ ಪ್ರತ್ಯುತ್ತರ ಅದ್ಭುತವಾಗಿತ್ತು. ಅಂತಿಕ ನಾಲ್ಕು ಓವರ್‌ಗಳಲ್ಲಿ ಅವರು ಲೆಗ್ ಸ್ಪಿನ್ನರ್ ಮೇಲೆ ಹೆಚ್ಚಿನ ದಾಳಿ ನಡೆಸಲು ಮುಂದಾಗಿರಲಿಲ್ಲ. ಯಾಕೆಂದರೆ ಬೌಲರ್ ಆ ಸಂದರ್ಭದಲ್ಲಿ ಸಾಕಷ್ಟು ಮಾರಕವಾಗಿ ಪರಿಣಮಿಸಿದ್ದರು.

"ನನ್ನ ಪ್ರಕಾರ ಇಂದು ಕಳೆದ ಪಂದ್ಯಕ್ಕೆ ಹೋಲಿಸಿದರೆ ಪಿಚ್ ಉತ್ತಮವಾಗಿತ್ತು. ನಾವು ಅವರನ್ನು ಉತ್ತಮ ಮೊತ್ತಕ್ಕೆ ಕಟ್ಟಿಹಾಕಿದ್ದೆವು. ಬೌಲರ್‌ಗಳು ಲೈನ್‌ ಮತ್ತು ಲೆಂತ್‌ನಲ್ಲಿ ನಿಜಕ್ಕೂ ಉತ್ತಮವಾದ ನಿಯಂತ್ರಣವನ್ನು ಸಾಧಿಸಿದ್ದರು. ನಾವು ಈ ಮೊತ್ತವನ್ನು ಬೆನ್ನಟ್ಟುವ ವಿಶ್ವಾಸವನ್ನು ಹೊಂದಿದ್ದೆವು. ಆದರೆ ಆರಂಭದಲ್ಲಿಯೇ ವಿಕೆಟ್ ಕಳೆದುಕೊಂಡ ಕಾರಣ ಹಿನ್ನೆಡೆ ಅನುಭವಿಸಿದೆವು ಎಂದಿದ್ದಾರೆ ಶಿಖರ್ ಧವನ್

Manish Pandey ಅವರ ಟೈಮ್ ಯಾಕೋ ಸರಿ ಇಲ್ಲ | Oneindia Kannada

"ಯುವ ಆಟಗಾರರಗೆ ಇದು ನಿಜಕ್ಕೂ ಉತ್ತಮ ಪಾಠವಾಗಿದೆ. ಯಾಕೆಂದರೆ ಎಲ್ಲಾ ದಿನವೂ ಒಂದೇ ರಿತಿಯಾಗಿರುವುದಿಲ್ಲ. ಇಂತಾ ಪರಿಸ್ಥಿತಿಗಳನ್ನು ಹೇಗೆ ಎದುರಿಸಬೇಕು ಹೇಗೆ ಹೊಸ ರಣತಂತ್ರಗಳನ್ನು ಅಳವಡಿಸಿಕೊಳ್ಳಬೇಕು ಎಂದು ಅವರು ಅರ್ಥ ಮಾಡಿಕೊಳ್ಳುತ್ತಾರೆ. ಪ್ರತಿ ಪಂದ್ಯದಲ್ಲಿಯೂ ನಾವು ಗೆಲುವು ಸಾಧಿಸಿದರೈ ಅಥವಾ ಸೋಲು ಕಂಡರೂ ಅದೊಂದು ಪಾಠವಾಗಿರುತ್ತದೆ. ನಾವು ಮತ್ತಷ್ಟು ಉತ್ತಮವಾಗುವತ್ತ ಮುನ್ನಡೆಯುತ್ತೇವೆ" ಎಂದು ನಾಯಕ ಶಿಖರ್ ಧವನ್ ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ನಾಯಕ ಧವನ್ ಮಧ್ಯಮ ಕ್ರಮಾಂಕದಲ್ಲಿ ಉತ್ತಮ ಪ್ರದರ್ಶನ ನೀಡಿದ ಮನೀಶ್ ಪಾಂಡೆ, ಸೂರ್ಯಕುಮಾರ್ ಯಾದವ್ ಹಾಗೂ ಕೃನಾಲ್ ಪಾಂಡ್ಯ ಪ್ರದರ್ಶನದ ಬಗ್ಗೆಯೂ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Story first published: Wednesday, July 21, 2021, 9:07 [IST]
Other articles published on Jul 21, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X