ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಜಿಂಬಾಬ್ವೆ: 3 ಪಂದ್ಯಗಳ ಏಕದಿನ ಸರಣಿ ವೇಳಾಪಟ್ಟಿ ಪ್ರಕಟ; ಇಲ್ಲಿದೆ ಮಾಹಿತಿ

India vs Zimbabwe 2022: Schedule for 3-match ODI series announced

ಮುಂದಿನ ಆಗಸ್ಟ್ ತಿಂಗಳಿನಲ್ಲಿ ಮೂರು ಪಂದ್ಯಗಳ ಏಕದಿನ ಸರಣಿಗಾಗಿ ಟೀಂ ಇಂಡಿಯಾ ಆರು ವರ್ಷಗಳ ನಂತರ ಮೊದಲ ಬಾರಿಗೆ ಜಿಂಬಾಬ್ವೆಗೆ ಪ್ರಯಾಣ ಬೆಳೆಸಲಿದೆ.

ಕಾಮನ್‌ವೆಲ್ತ್ ಗೇಮ್ಸ್ 2022: ಹೆಚ್ಚು ಆಕರ್ಷಣೆ ಪಡೆದ ಇಂಡೋ-ಪಾಕ್ ಮಹಿಳಾ ಕ್ರಿಕೆಟ್ ಹಣಾಹಣಿಕಾಮನ್‌ವೆಲ್ತ್ ಗೇಮ್ಸ್ 2022: ಹೆಚ್ಚು ಆಕರ್ಷಣೆ ಪಡೆದ ಇಂಡೋ-ಪಾಕ್ ಮಹಿಳಾ ಕ್ರಿಕೆಟ್ ಹಣಾಹಣಿ

ಮೂರು ಏಕದಿನ ಪಂದ್ಯಗಳು ಆಗಸ್ಟ್ 18, 20 ಮತ್ತು 22ರಂದು ಹರಾರೆಯಲ್ಲಿ ನಡೆಯಲಿದೆ ಎಂದು ಜಿಂಬಾಬ್ವೆ ಕ್ರಿಕೆಟ್ ಪ್ರಕಟಿಸಿದೆ. ಗಾಯದಿಂದ ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿರುವ ಕೆಎಲ್ ರಾಹುಲ್ ಭಾರತ ತಂಡವನ್ನು ಮುನ್ನಡೆಸುವ ನಿರೀಕ್ಷೆಯಿದೆ.

ಈ ಸರಣಿಯು ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ ಸೂಪರ್ ಲೀಗ್‌ನ ಭಾಗವಾಗಿದೆ, 13-ತಂಡಗಳ ಸ್ಪರ್ಧೆಯು ಮುಂದಿನ ವರ್ಷ ಭಾರತದಲ್ಲಿ ನಡೆಯಲಿರುವ 50-ಓವರ್‌ಗಳ ವಿಶ್ವಕಪ್‌ಗೆ ನೇರ ಅರ್ಹತೆಗಾಗಿ ಮುಖ್ಯ ಮಾರ್ಗವಾಗಿದೆ. ಜಿಂಬಾಬ್ವೆ ಪ್ರಸ್ತುತ 13 ತಂಡಗಳ ಪೂಲ್‌ನಲ್ಲಿ 15 ಪಂದ್ಯಗಳಲ್ಲಿ ಕೇವಲ ಮೂರು ಗೆಲುವುಗಳೊಂದಿಗೆ 12ನೇ ಸ್ಥಾನದಲ್ಲಿದೆ.

IND vs WI: ಕೊನೆಯ ಬಾರಿಯ ಸೆಣಸಾಟದಲ್ಲಿ ಫಲಿತಾಂಶ ಏನಾಗಿತ್ತು; ಅಂಕಿ-ಅಂಶಗಳೇನು?IND vs WI: ಕೊನೆಯ ಬಾರಿಯ ಸೆಣಸಾಟದಲ್ಲಿ ಫಲಿತಾಂಶ ಏನಾಗಿತ್ತು; ಅಂಕಿ-ಅಂಶಗಳೇನು?

ಮಹೇಂದ್ರ ಸಿಂಗ್ ಧೋನಿ ನೇತೃತ್ವದ ತಂಡವು ಜೂನ್-ಜುಲೈ 2016ರಲ್ಲಿ ಮೂರು ಏಕದಿನ ಪಂದ್ಯಗಳನ್ನು ಮತ್ತು ಅಷ್ಟೇ ಟಿ20 ಪಂದ್ಯಗಳನ್ನು ಆಡಿದಾಗ ಜಿಂಬಾಬ್ವೆಯಲ್ಲಿ ಕೊನೆಯ ಬಾರಿಗೆ "ಮೆನ್ ಇನ್ ಬ್ಲೂ' ಪ್ರವಾಸ ಕೈಗೊಂಡಿತ್ತು.

ಭಾರತ ವಿರುದ್ಧದ ಸರಣಿಗೂ ಮುನ್ನ ಜಿಂಬಾಬ್ವೆ ಬಾಂಗ್ಲಾದೇಶಕ್ಕೆ ಆತಿಥ್ಯ

ಭಾರತ ವಿರುದ್ಧದ ಸರಣಿಗೂ ಮುನ್ನ ಜಿಂಬಾಬ್ವೆ ಬಾಂಗ್ಲಾದೇಶಕ್ಕೆ ಆತಿಥ್ಯ

ಭಾರತವು ಇತ್ತೀಚೆಗೆ ಟಿ20 ಮತ್ತು ಏಕದಿನ ಪಂದ್ಯಗಳ ಸರಣಿ ವಿಜಯಗಳೊಂದಿಗೆ ಇಂಗ್ಲೆಂಡ್ ಪ್ರವಾಸವನ್ನು ಮುಗಿಸಿದ್ದು, ಶಿಖರ್ ಧವನ್ ನಾಯಕತ್ವದಲ್ಲಿ ಯುವ ಭಾರತೀಯ ತಂಡವು ವೆಸ್ಟ್ ಇಂಡೀಸ್ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದೆ ಮತ್ತು ನಂತರ ಆಗಸ್ಟ್ 7ರಂದು ಮುಕ್ತಾಯಗೊಳ್ಳುವ ಐದು ಟಿ20 ಪಂದ್ಯಗಳನ್ನು ಆಡಲಿದೆ.

ಭಾರತ ವಿರುದ್ಧದ ಸರಣಿಗೂ ಮುನ್ನ ಜಿಂಬಾಬ್ವೆ ಬಾಂಗ್ಲಾದೇಶಕ್ಕೆ ಜುಲೈ 30ರಿಂದ ಮೂರು ಟಿ20 ಪಂದ್ಯಗಳಿಗೆ ಆತಿಥ್ಯ ವಹಿಸಲಿದೆ. ಅವರು ಆಗಸ್ಟ್ 28ರಿಂದ ಮೂರು ಏಕದಿನ ಪಂದ್ಯಗಳಿಗೆ ವಿಶ್ವಕಪ್್ಗೆ ಮುಂಚಿತವಾಗಿ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದ್ದಾರೆ.

ವೆಸ್ಟ್ ಇಂಡೀಸ್ ವಿರುದ್ಧ ಏಕದಿನ ಸರಣಿ

ವೆಸ್ಟ್ ಇಂಡೀಸ್ ವಿರುದ್ಧ ಏಕದಿನ ಸರಣಿ

ಜುಲೈ 22ರಿಂದ 27ರ ಮಧ್ಯೆ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ಮೂರು ಪಂದ್ಯಗಳ ಏಕದಿನ ಸರಣಿ ಆಯೋಜನೆಯಾಗಿದೆ. ಏಕದಿನ ಸರಣಿಯ ಮೂರು ಪಂದ್ಯಗಳು ಕೂಡ ಟ್ರನಿಡಾಡ್‌ನ ಪೋರ್ಟ್ ಆಫ್ ಸ್ಪೈನ್‌ನಲ್ಲಿರುವ ಕ್ವೀನ್ಸ್ ಪಾರ್ಕ್ ಓವಲ್‌ನಲ್ಲಿ ನಡೆಯಲಿದೆ. ಭಾರತದ ಖಾಯಂ ನಾಯಕ ರೋಹಿತ್ ಶರ್ಮಾ ಅಲಭ್ಯತೆಯಲ್ಲಿ ಅನುಭವಿ ಶಿಖರ್ ಧವನ್ ಭಾರತ ತಂಡವನ್ನು ಮುನ್ನಡೆಸಲಿದ್ದು, ರವೀಂದ್ರ ಜಡೇಜಾ ಉಪನಾಯಕನಾಗಿ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ.

ಏಕದಿನ ಸರಣಿ ನಂತರ ಟಿ20 ಸರಣಿ

ಏಕದಿನ ಸರಣಿ ನಂತರ ಟಿ20 ಸರಣಿ

ಇನ್ನು, ಮೂರು ಪಂದ್ಯಗಳ ಏಕದಿನ ಸರಣಿಯ ಮುಕ್ತಾಯದ ಬಳಿಕ ಭಾರತ ಹಾಗೂ ವೆಸ್ಟ್ ಇಂಡೀಸ್ ತಂಡಗಳು ಐದು ಪಂದ್ಯಗಳ ಟಿ20 ಸರಣಿಯಲ್ಲಿಯೂ ಮುಖಾಮುಖಿಯಾಗಲಿದೆ. ಜುಲೈ 29ರಿಂದ ಆಗಸ್ಟ್ 7ರ ಮಧ್ಯೆ ಟಿ20 ಸರಣಿ ನಡೆಯಲಿದ್ದು, ಇದರಲ್ಲಿ ರೋಹಿತ್ ಶರ್ಮಾ, ರಿಷಭ್ ಪಂತ್ ಹಾಗೂ ಹಾರ್ದಿಕ್ ಪಾಂಡ್ಯ ತಂಡಕ್ಕೆ ಮರಳಲಿದ್ದಾರೆ. ವಿರಾಟ್ ಕೊಹ್ಲಿ, ಜಸ್ಪ್ರೀತ್ ಬೂಮ್ರಾ ಹಾಗೂ ಮೊಹಮ್ಮದ್ ಶಮಿಗೆ ಚುಟುಕು ಸರಣಿಯಿಂದಲೂ ವಿಶ್ರಾಂತಿ ನೀಡಲಾಗಿದೆ.

Jhulan Goswamiಯ ಬೆಂಕಿ ಬೌಲಿಂಗ್ ಗೆ KL Rahul ಬ್ಯಾಟ್ ಬೀಸಿದ್ದು ಫುಲ್ ವೈರಲ್ | *Cricket | OneIndia Kannada
ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಗೆ ಭಾರತ ತಂಡ

ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಗೆ ಭಾರತ ತಂಡ

ಶಿಖರ್ ಧವನ್ (ನಾಯಕ), ಋತುರಾಜ್ ಗಾಯಕ್ವಾಡ್, ಶುಭ್‌ಮನ್ ಗಿಲ್, ದೀಪಕ್ ಹೂಡಾ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ (ಉಪನಾಯಕ), ಶಾರ್ದೂಲ್ ಠಾಕೂರ್, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಅವೇಶ್ ಖಾನ್, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್, ಅರ್ಷದೀಪ್ ಸಿಂಗ್.

Story first published: Wednesday, July 20, 2022, 14:30 [IST]
Other articles published on Jul 20, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X