ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ, ಆಸ್ಟ್ರೇಲಿಯಾ ಸರಣಿಗಳಿಂದ ವೇಗಿ ಕಾಗಿಸೊ ರಬಾಡ ಹೊರಕ್ಕೆ

Injured Kagiso Rabada out of Australia and India series

ಕೇಪ್‌ಟೌನ್, ಫೆಬ್ರವರಿ 29: ಶನಿವಾರ (ಫೆಬ್ರವರಿ 29) ಆರಂಭಗೊಳ್ಳಲಿರುವ ದಕ್ಷಿಣ ಆಫ್ರಿಕಾ-ಆಸ್ಟ್ರೇಲಿಯಾ ಏಕದಿನ ಸರಣಿಯಿಂದ ದಕ್ಷಿಣ ಆಫ್ರಿಕಾ ತಂಡದ ವೇಗಿ ಕಾಗಿಸೊ ರಬಾಡ ಹೊರ ಬಿದ್ದಿದ್ದಾರೆ. ಮುಂಬರಲಿರುವ ಭಾರತದ ಪ್ರವಾಸ ಸರಣಿಯಲ್ಲೂ ರಬಾಡಗೆ ಆಡಲಾಗುತ್ತಿಲ್ಲ.

ಸಚಿನ್‌ಗಿಂತ ಇನ್ನೊಬ್ಬ ಲೆಜೆಂಡ್‌ಗೆ ಬೌಲಿಂಗ್‌ ಕಷ್ಟ ಎಂದ ಮೆಕ್‌ಗ್ರಾಥ್ಸಚಿನ್‌ಗಿಂತ ಇನ್ನೊಬ್ಬ ಲೆಜೆಂಡ್‌ಗೆ ಬೌಲಿಂಗ್‌ ಕಷ್ಟ ಎಂದ ಮೆಕ್‌ಗ್ರಾಥ್

ಬುಧವಾರ (ಫೆಬ್ರವರಿ 26) ಕೇಪ್‌ಪೌನ್‌ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಮತ್ತು ಕೊನೆಯ ಟಿ20ಐ ಪಂದ್ಯದಲ್ಲಿ ಕಾಗಿಸೊ ರಬಾಡ ಗ್ರೊಯಿನ್ ಸ್ಟ್ರೇನ್ (ತೊಡೆ ನೋವು)ಗೆ ತುತ್ತಾಗಿದ್ದರು. ಗಾಯಕ್ಕೀಡಾಗಿರುವುದರಿಂದಾಗಿ ಅವರು ಎರಡು ಸರಣಿಗಳಿಂದ ಹೊರಗಿರಬೇಕಾಗಿ ಬಂದಿದೆ.

ದಕ್ಷಿಣ ಆಫ್ರಿಕಾ vs ಆಸ್ಟ್ರೇಲಿಯಾ, 1ನೇ ಏಕದಿನ, Live ಸ್ಕೋರ್‌ಕಾರ್ಡ್

1
46051

ದಕ್ಷಿಣ ಆಫ್ರಿಕಾ ತಂಡದ ವೈದ್ಯಾಧಿಕಾರಿ ಡಾ. ಶುಯೈಬ್ ಮಂಜ್ರಾ, ಗಾಯಕ್ಕೀಡಾಗಿರುವ ರಬಾಡ ಸಂಪೂರ್ಣ ಚೇತರಿಸಿಕೊಳ್ಳಲು ನಾಲ್ಕು ವಾರಗಳು ಬೇಕು ಎಂದಿದ್ದಾರೆ. ದಕ್ಷಿಣ ಆಫ್ರಿಕಾ-ಆಸ್ಟ್ರೇಲಿಯಾ ಮೂರು ಪಂದ್ಯಗಳ ಏಕದಿನ ಸರಣಿ ಮಾರ್ಚ್ 7ಕ್ಕೆ ಅಂತ್ಯಗೊಂಡರೆ, ಭಾರತ-ದಕ್ಷಿಣ ಆಫ್ರಿಕಾ ಮೂರು ಪಂದ್ಯಗಳ ಏಕದಿನ ಸರಣಿ ಮಾರ್ಚ್ 12ರಿಂದ 18ರ ವರೆಗೆ ನಡೆಯಲಿದೆ.

ಪೂಜಾರ, ಗವಾಸ್ಕರ್ ದಾಖಲೆ ಸರಿಗಟ್ಟಲಿದ್ದಾರೆ ಮಯಾಂಕ್ ಅಗರ್ವಾಲ್ಪೂಜಾರ, ಗವಾಸ್ಕರ್ ದಾಖಲೆ ಸರಿಗಟ್ಟಲಿದ್ದಾರೆ ಮಯಾಂಕ್ ಅಗರ್ವಾಲ್

ಸದ್ಯ ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ದಕ್ಷಿಣ ಆಫ್ರಿಕಾ ತಂಡ, ಮೂರು ಪಂದ್ಯಗಳ ಟಿ20ಐ ಸರಣಿಯಲ್ಲಿ 2-1ರ ಹಿನ್ನಡೆ ಅನುಭವಿಸಿದೆ. ಮಾರ್ಚ್ 29ರಿಂದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆರಂಭವಾಗಲಿದ್ದು, ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿರುವ ರಬಾಡ ಪಂದ್ಯದ ವೇಳೆ ಚೇತರಿಸಿಕೊಳ್ಳುವ ನಿರೀಕ್ಷೆಯಿದೆ.

Story first published: Saturday, February 29, 2020, 10:10 [IST]
Other articles published on Feb 29, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X