ಅವರು ಪಾಕಿಸ್ತಾನ ಹಾಗೂ ಭಾರತದಂತೆ ಆಡಿಲ್ಲ, ಹಾಗಾಗಿ ಫೈನಲ್‌ಗೇರಿದರು: ಇನ್ಜಮಾಮ್ ಉಲ್ ಹಕ್

ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಸಾಕಷ್ಟು ನಿರೀಕ್ಷೆ ಮೂಡಿಸಿದ್ದ ಏಷ್ಯಾದ ಎರಡು ತಂಡಗಳಾದ ಭಾರತ ಹಾಗೂ ಪಾಕಿಸ್ತಾನ ಫೈನಲ್‌ಗೇರುವಲ್ಲಿ ವಿಫಲವಾಗಿದೆ. ಟೂರ್ನಿಗೂ ಮುನ್ನ ಫೇರೀಟ್ ತಮಡವಾಗಿದ್ದ ಭಾರತ ಸೂಪರ್ 12 ಹಂತದಿಂದಲೇ ನಿರ್ಗನಿಸಿದ್ದರೆ ಪಾಕಿಸ್ತಾನ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡುವ ಮೂಲಕ ವುಶ್ವಕಪ್ ಗೆಲ್ಲುವ ಭರವಸೆ ಮೂಡಿಸಿತ್ತು. ಆದರೆ ಪಾಕಿಸ್ತಾನದ ಹೋರಾಟ ಸೆಮಿಫೈನಲ್‌ಗೆ ಅಂತ್ಯವಾಗಿತ್ತು. ಆಸ್ಟ್ರೇಲಿಯಾ ವಿರುದ್ಧ ಸೆಮಿಫೈನಲ್‌ನಲ್ಲಿ ಸೋಲು ಕಾಣುವ ಮೂಲಕ ಪಾಕಿಸ್ತಾನ ಟೂರ್ನಿಯಿಂದ ಹೊರಬಿದ್ದಿದೆ.

ಆದರೆ ಒಶೇನಿಯಾದ ಎರಡು ಪ್ರಮುಖ ದೇಶಗಳಾದ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ತಂಡಗಳು ಈ ಬಾರಿಯ ಟಿ20 ವಿಶ್ವಕಪ್‌ನ ಫೈನಲ್‌ಗೇರುವಲ್ಲಿ ಯಶಸ್ವಿಯಾಗಿದೆ. ಈ ಬಗ್ಗೆ ಪಾಕಿಸ್ತಾನ ತಂಡದ ಮಾಜಿ ನಾಯಕ ಕ್ರಿಕೆಟ್ ವಿಶ್ಲೇಷಕ ಇನ್ಜಮಾಮ್ ಉಲ್ ಹಕ್ ಪ್ರತಿಕ್ರಿಯೆ ನೀಡಿದ್ದಾರೆ. ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ತಂಡಗಳು ಪಾಕಿಸ್ತಾನ ಹಾಘೂ ಭಾರತ ಸೇರಿದಂತೆ ಇತರ ಏಷ್ಯಾದ ದೇಶಗಳು ಆಡಿದಂತೆ ಆಡಿಲ್ಲ. ಹೀಗಾಗಿಯೇ ಟೂರ್ನಿಯಲ್ಲಿ ಯಶಸ್ಸು ಗಳಿಸಿದ ಈ ತಂಡಗಳು ಫೈನಲ್‌ಗೆ ಪ್ರವೇಶ ಪಡೆದುಕೊಂಡಿದೆ ಎಂದಿದ್ದಾರೆ. ಇನ್ಜಮಾಮ್ ಉಲ್ ಹಕ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ವಿಶ್ಲೇಷಣೆ ಮಾಡುತ್ತಾ ಈ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ಟಿ20 ವಿಶ್ವಕಪ್, ಆಸ್ಟ್ರೇಲಿಯಾ vs ನ್ಯೂಜಿಲೆಂಡ್: ಫೈನಲ್ ಪಂದ್ಯಕ್ಕೂ ಮುನ್ನ ತಿಳಿದುಕೊಳ್ಳಬೇಕಾದ ಮಾಹಿತಿಟಿ20 ವಿಶ್ವಕಪ್, ಆಸ್ಟ್ರೇಲಿಯಾ vs ನ್ಯೂಜಿಲೆಂಡ್: ಫೈನಲ್ ಪಂದ್ಯಕ್ಕೂ ಮುನ್ನ ತಿಳಿದುಕೊಳ್ಳಬೇಕಾದ ಮಾಹಿತಿ

ಪಾಕಿಸ್ತಾನ ಭಾರತದಂತೆ ಆಡಿಲ್ಲ

ಪಾಕಿಸ್ತಾನ ಭಾರತದಂತೆ ಆಡಿಲ್ಲ

ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಫೈನಲ್ ಹಂತಕ್ಕೇರಿರುವ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ತಂಡಗಳ ಪ್ರದರ್ಶನವನ್ನು ಇನ್ಜಮಾಮ್ ಉಲ್ ಹಕ್ ಕೊಂಡಾಡಿದ್ದಾರೆ. ಈ ವಿಶ್ವಕಪ್‌ಗಾಗಿ ಈ ಎರಡು ತಂಡಗಳು ಮಾಡಿಕೊಂಡಿರುವ ಸಿದ್ಧತೆಗಳನ್ನು ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಪ್ರಶಂಸಿಸಿದ್ದಾರೆ.

"ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ತಂಡಗಳು ಪಾಕಿಸ್ತಾನ ಹಾಗೂ ಇತರ ಏಷ್ಯಾ ಉಪ ಖಂಡದ ದೇಶಗಳಂತೆ ಆಡಿಲ್ಲ. ಅವರು ಅದ್ಭುತವಾದ ಯೋಜನೆಯನ್ನು ಹಾಕಿಕೊಂಡಿದ್ದರು ಹಾಗೂ ಎದುರಾಳಿಯ ವಿರುದ್ಧ ಯಾವ ರೀತಿಯಲ್ಲಿ ದಾಳಿ ನಡೆಸಬೇಕೆಂದು ಸಂಪೂರ್ಣವಾದ ಸಿದ್ಧತೆಯನ್ನು ಮಾಡಿಕೊಂಡಿದ್ದರು. ಅವರ ಬಳಿ ಪ್ಲ್ಯಾನ್ ಎ, ಪ್ಲ್ಯಾನ್ ಬಿ ಹಾಗೂ ಪ್ಲ್ಯಾನ್ ಸಿ ಸಿದ್ಧವಾಗಿತ್ತು. ಹೀಗಾಗಿಯೇ ನಿರ್ಣಾಯಕ ಪಂದ್ಯಗಳಲ್ಲಿ ಅವರು ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾದರು" ಎಂದಿದ್ದಾರೆ ಇನ್ಜಮಾಮ್ ಉಲ್ ಹಕ್.

ಆಸಿಸ್ ಕಿವೀಸ್ ತಂಡಗಳನ್ನು ಪ್ರಶಂಸಿಸಿದ ಹಕ್

ಆಸಿಸ್ ಕಿವೀಸ್ ತಂಡಗಳನ್ನು ಪ್ರಶಂಸಿಸಿದ ಹಕ್

ಇನ್ನು ಇದೇ ಸಂದರ್ಭದಲ್ಲಿ ಇನ್ಜಮಾಮ್ ಉಲ್ ಹಕ್ ಫೈನಲ್‌ನಂತಾ ದೊಡ್ಡ ಪಂದ್ಯಗಳಲ್ಲಿ ಯೋಜನೆಗಳು ಮಾತ್ರವೇ ಮುಖ್ಯವಾಗುವುದಿಲ್ಲ. ಆಟಗಾರರ ಮಾನಸಿಕ ಸಾಮರ್ಥ್ಯ ಕೂಡ ಇಲ್ಲಿ ಸಾಕಷ್ಟು ಪಾತ್ರವಹಿಸುತ್ತದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. "ದೊಡ್ಡ ಪಂದ್ಯಗಳಲ್ಲಿ ಯೋಜನೆಗಳ ಜೊತೆಗೆ ನಿಮ್ಮ ಸಾಮ್ರ್ಥ್ಯವೂ ವಿಶಾಲವಾಗಿರಬೇಕು. ಸೆಮಿಫೈನಲ್‌ನಲ್ಲಿ ಎರಡು ತಂಡಗಳು ಕೂಡ ಇದನ್ನು ಪ್ರದರ್ಶಿಸಿತ್ತು. ಆಸ್ಟ್ರೇಲಿಯಾ ತಂಡ ತನ್ನ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿದ್ದರೂ ದೊಡ್ಡ ಹೊಡೆತಗಳನ್ನು ಬಾರಿಸುತ್ತಾ ಮುನ್ನುಗ್ಗಿತ್ತು. ಮ್ಯಾಥ್ಯೂ ವೇಡ್ ನೀಡಿದ ಪ್ರದರ್ಶನ ನೋಡಿದರೆ ಅವರಲ್ಲಿ ಯಾಬುದೇ ಭಯವೂ ಇರಲಿಲ್ಲ. ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ಕೂಡ ಇದೇ ಪ್ರದರ್ಶನ ನೀಡಿತ್ತು. ಇಂಗ್ಲೆಂಡ್ ವಿರುದ್ಧ ನ್ಯೂಜಿಲೆಂಡ್ ತಂಡದ ಇಬ್ಬರು ಪ್ರಮುಖ ಆಟಗಾರರಾದ ಮಾರ್ಟಿನ್ ಗಪ್ಟಿಲ್ ಹಾಗೂ ಖೇನ್ ವಿಲಿಯಮ್ಸನ್ ಕನಿಷ್ಠ ರನ್‌ಗೆ ವಿಕೆಟ್ ಕಳೆದುಕೊಂಡಿದ್ದರು. ಆದರೆ ಅಲ್ಲಿಗೆ ಕೈಕಟ್ಟಿ ಕೂರಲಿಲ್ಲ. ಇದುವೇ ಈ ತಂಡಗಳ ಅತ್ಯತ್ತಮವಾದ ಸಾಮರ್ಥ್ಯವಾಗಿದೆ ಎಂದಿದ್ದಾರೆ ಇನ್ಜಮಾಮ್ ಉಲ್ ಹಕ್.

ನ್ಯೂಜಿಲೆಂಡ್ ಗೆಲ್ಲಿವ ಫೇವರೀಟ್ ಎಂದ ಇನ್ಜಿ

ನ್ಯೂಜಿಲೆಂಡ್ ಗೆಲ್ಲಿವ ಫೇವರೀಟ್ ಎಂದ ಇನ್ಜಿ

ಇತಿಹಾಸದ ಅಂಕಿಅಂಶಗಳನ್ನು ನೋಡಿದಾಗ ಈ ಬಾರಿಯ ಟಿ20 ವಿಶ್ವಕಪ್‌ನ ಫೈನಲ್ ಪಂದ್ಯದಲ್ಲಿ ಆಡುವ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ತಂಡಗಳ ಪೈಕಿ ನ್ಯೂಜಿಲೆಂಡ್‌ಗಿಂತ ಆಸ್ಟ್ರೇಲಿಯಾ ಗೆಲ್ಲುವ ನೆಚ್ಚಿನ ತಂಡ ಎನಿಸಿಕೊಳ್ಳುತ್ತದೆ. ಆದರೆ ಇನ್ಜಮಾಮ್ ಉಲ್ ಹಕ್ ಆಸ್ಟ್ರೇಲಿಯಾ ಬದಲಿಗೆ ನ್ಯೂಜಿಲೆಂಡ್ ತಂಡವೇ ಈ ಬಾರಿ ಗೆಲ್ಲುವ ಫೇವರೀಟ್ ತಂಡ ಎಂದು ಊಹಿಸಿದ್ದಾರೆ. ಇದಕ್ಕೆ ನ್ಯೂಜಿಲೆಂಡ್ ಕ್ರಿಕೆಟ್ ತಂಡ ಇತ್ತೀಚೆಗೆ ಪ್ರದರ್ಶಿಸುತ್ತಿರುವ ಬ್ರ್ಯಾಂಡ್ ಆಫ್ ಕ್ರಿಕೆಟ್ ಕಾರಣ ಎಂದಿದ್ದಾರೆ ಇನ್ಜಮಾಮ್ ಉಲ್ ಹಕ್.

ಕೇನ್ ವಿಲಿಯಮ್ಸನ್ ಬಗ್ಗೆ ಇನ್ಜಿ ಪ್ರಶಂಸೆ

ಕೇನ್ ವಿಲಿಯಮ್ಸನ್ ಬಗ್ಗೆ ಇನ್ಜಿ ಪ್ರಶಂಸೆ

"ಆಸ್ಟ್ರೇಲಿಯಾ ತಂಡಕ್ಕೆ ಈ ಪಂದ್ಯವನ್ನು ಗೆಲ್ಲುವ ಉತ್ತಮ ಸಾಮರ್ಥ್ಯವಿದೆ. ಅದಕ್ಕೆ ಕಾರಣ ಅವರಿಗೆ ದೊಡ್ಡ ಕ್ರಿಕೆಟ್ ಪಂದ್ಯವನ್ನು ಆಡುವ ಉತ್ತಮ ಅನುಭವವಿದೆ. ಅವರು ಮಾನಸಿಕವಾಗಿ ಸಾಮಕಷ್ಟು ಬಲಿಷ್ಠವಾಗಿದ್ದಾರೆ. ಆದರೆ ಕೇನ್ ವಿಲಿಯಮ್ಸನ್ ನಾಯಕತ್ವದಲ್ಲಿ ನ್ಯೂಜಿಲೆಂಡ್ ತಂಡ ಆಟದ ಶೈಲಿಯನ್ನು ಉತ್ತಮವಾಗಿ ಬದಲಾಯಿಸಿಕೊಂಡಿದೆ. ನ್ಯೂಜಿಲೆಂಡ್ ತಂಡದ ಬ್ರ್ಯಾಂಡ್‌ಅನ್ನು ಬದಲಾಯಿಸಿದರು ಕೇನ್ ವಿಲಿಯಮ್ಸನ್" ಎಂದಿದ್ದಾರೆ ಇನ್ಜಮಾಮ್ ಉಲ್ ಹಕ್.

ಈ ಬಾರಿ ನ್ಯೂಜಿಲೆಂಡ್ ಗೆಲ್ಲುತ್ತದೆ

ಈ ಬಾರಿ ನ್ಯೂಜಿಲೆಂಡ್ ಗೆಲ್ಲುತ್ತದೆ

"ಅವರು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಚಾಂಪಿಯನ್ ಆಗಿದ್ದು 2019ರ ಏಕದಿನ ವಿಶ್ವಕಪ್‌ನ ಫೈನಲ್‌ನಲ್ಲಿ ಆಡಿದ್ದಾರೆ. ಈ ಬಾರಿಯ ವಿಶ್ವಕಪ್‌ನ ಫೈನಲ್‌ನಲ್ಲಿ ಗೆಲ್ಲುವ ತಂಡ ಕೂಡ ನ್ಯೂಜಿಲೆಂಡ್ ಆಗಿದೆ. ಅದಕ್ಕೆ ಕಾರಣ ಅವರು ಆಡುತ್ತಾ ಬಂದಿರುವ ಬ್ರ್ಯಾಂಡ್ ಆಫ್ ಕ್ರಿಕೆಟ್" ಎಂದು ಇನ್ಜಮಾಮ್ ಉಲ್ ಹಕ್ ಹೇಳಿದ್ದಾರೆ.

ಎರಡು ತಂಡಗಳ ಸಂಪೂರ್ಣ ಬಳಗ

ಎರಡು ತಂಡಗಳ ಸಂಪೂರ್ಣ ಬಳಗ

ನ್ಯೂಜಿಲೆಂಡ್ ತಂಡ: ಕೇನ್ ವಿಲಿಯಮ್ಸನ್ (ನಾಯಕ), ಟಿಮ್ ಸೀಫರ್ಟ್ (ವಿಕೆಟ್ ಕೀಪರ್), ಮಾರ್ಟಿನ್ ಗಪ್ಟಿಲ್, ಡೇರಿಲ್ ಮಿಚೆಲ್, ಗ್ಲೆನ್ ಫಿಲಿಪ್ಸ್, ಜೇಮ್ಸ್ ನೀಶಮ್, ಮಿಚೆಲ್ ಸ್ಯಾಂಟ್ನರ್, ಆಡಮ್ ಮಿಲ್ನೆ, ಟಿಮ್ ಸೌಥಿ, ಇಶ್ ಸೋಧಿ, ಟ್ರೆಂಟ್ ಬೌಲ್ಟ್, ಟಾಡ್ ಆಸ್ಟಲ್, ಕೈಲ್ ಜೇಮಿಸನ್, ಮಾರ್ಕ್ ಚಾಪ್ಮನ್

ಆಸ್ಟ್ರೇಲಿಯಾ ತಂಡ: ಆರನ್ ಫಿಂಚ್ (ನಾಯಕ), ಮ್ಯಾಥ್ಯೂ ವೇಡ್ (ವಿಕೆಟ್ ಕೀಪರ್), ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ಸ್ಟೀವನ್ ಸ್ಮಿತ್, ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕಸ್ ಸ್ಟೊಯಿನಿಸ್, ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್, ಆಡಮ್ ಝಂಪಾ, ಜೋಶ್ ಹ್ಯಾಜಲ್‌ವುಡ್, ಕೇನ್ ರಿಚರ್ಡ್ಸನ್, ಆಶ್ಟನ್ ಅಗರ್, ಮಿಚೆಲ್ ಸ್ವೆಪ್ಸನ್ , ಜೋಶ್ ಇಂಗ್ಲಿಸ್

T20 ವಿಶ್ವಕಪ್ ಕಿರೀಟ ಆಸ್ಟ್ರೇಲಿಯಾ ಮುಡಿಗೆ: ಕಿವೀಸ್ ಗೆ ನಿರಾಸೆ | Oneindia Kannada

For Quick Alerts
ALLOW NOTIFICATIONS
For Daily Alerts
Story first published: Sunday, November 14, 2021, 17:41 [IST]
Other articles published on Nov 14, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X