ಐಪಿಎಲ್ : ಜಿಯೋ ಟಿವಿಯಲ್ಲಿ ಆಟವಾಡಿ, ಬಹುಮಾನ ಗೆಲ್ಲಿ

Posted By:
IPL 2018 : Jio Cricket festival season pack announced

ಮುಂಬೈ, ಏಪ್ರಿಲ್ 07: ಭಾರತವು ಮತ್ತೊಂದು ಐಪಿಎಲ್ ಕ್ರಿಕೆಟ್ ಋತುವಿಗೆ ಸಜ್ಜಾಗುತ್ತಿದ್ದು, ಕ್ಷಣಗಣನೆ ಮಾಡುತ್ತಿದೆ. ಇಂತಹ ಸಂದರ್ಭದಲ್ಲೇ ನಿಮ್ಮ ನೆಚ್ಚಿನ ಜಿಯೋ 'ಜಿಯೋ ಕ್ರಿಕೆಟ್ ಪ್ಲೇ ಅಲಾಂಗ್' ಎನ್ನುವ ವಿಶ್ವದ ಅತ್ಯಂತ ದೊಡ್ಡ ಲೈವ್ ಮೊಬೈಲ್ ಗೇಮ್ ಅನ್ನು ಬಿಡುಗಡೆ ಮಾಡುವ ಮೂಲಕ ಇನ್ನೊಂದು 'ಸಿಕ್ಸರ್' ಬಾರಿಸಿದೆ!

ಮೈಖೇಲ್ ನಲ್ಲಿ ಫ್ಯಾಂಟಸಿ ಲೀಗ್ ಆಡಿ, ಬಹುಮಾನ ಗೆಲ್ಲಿ!

ಈ ಆನ್‍ಲೈನ್ ಆಟವನ್ನು ಆಡುವವರು ಕೋಟ್ಯಂತರ ಮೊತ್ತದ ಬಹುಮಾನಗಳನ್ನು ಗೆಲ್ಲುವ ಅವಕಾಶವಿದೆ. ಜತೆಗೆ, ಜಿಯೋ ಕಂಪನಿಯು ಕ್ರಿಕೆಟ್ ಆಟದೊಂದಿಗೆ ಹಾಸ್ಯ ರಸಾಯನವನ್ನು ಹದವಾಗಿ ಬೆರೆಸಿರುವ 'ಜಿಯೋ ಧನ್‍ ಧನಾ ಧನ್‍ ಲೈವ್‍' ಎಂಬ ಕ್ರಿಕೆಟ್‍ ಮತ್ತು ಹಾಸ್ಯ ರಸಾಯನವಿರುವ ಕಾಮಿಡಿ ಶೋವನ್ನು ಕೂಡ ಪ್ರಸಾರ ಮಾಡಲಿದೆ. ಇದು ಕೂಡ ತುಂಬಾ ವಿಶಿಷ್ಟವಾಗಿದ್ದು, ಈ ಬಗೆಯ ಮೊಟ್ಟಮೊದಲ ಶೋ ಆಗಿದೆ!

ಜಿಯೋ ಧನ್‍ ಧನಾ ಧನ್ ಲೈವ್- ಸದಾ ನೀವು ನಗುತಿರಿ!

ಮೈಜಿಯೋಆ್ಯಪ್‍ನಲ್ಲಿ ನೀವು ವೀಕ್ಷಿಸಬಹುದಾದ ಜಿಯೋ ಧನ್‍ ಧನಾ ಧನ್‍ ಲೈವ್‍ ಕಾರ್ಯಕ್ರಮವು ಜಿಯೋ ಬಳಕೆದಾರರು ಮತ್ತು ಉಳಿದ ಮೊಬೈಲ್‍ ಬಳಕೆದಾರರಿಗೆಲ್ಲ 2018ರ ಏಪ್ರಿಲ್ 7ರ ರಾತ್ರಿ 7.30ಕ್ಕೆ ಉಚಿತವಾಗಿ ಸಿಗಲಿದೆ. ಮೂಲ ಲೈವ್ ಎಪಿಸೋಡ್‍ಗಳನ್ನು ಹೊಂದಿರುವ ಇವುಗಳನ್ನು ಪ್ರತೀ ಶುಕ್ರವಾರ, ಶನಿವಾರ ಮತ್ತು ಭಾನುವಾರಗಳಂದು ಬಿಡುಗಡೆ ಮಾಡಲಾಗುವುದು.

 ಸುನೀಲ್‍ ಗ್ರೋವರ್ ಹಾಸ್ಯ

ಸುನೀಲ್‍ ಗ್ರೋವರ್ ಹಾಸ್ಯ

ಭಾರತದ ಅತ್ಯಂತ ಪ್ರೀತಿಪಾತ್ರ ಹಾಸ್ಯ ನಟ ಸುನೀಲ್‍ ಗ್ರೋವರ್ ಮತ್ತು ಜನಪ್ರಿಯ ಕ್ರೀಡಾ ಕಾರ್ಯಕ್ರಮ ನಿರೂಪಕ ಸಮೀರ್ ಕೊಚ್ಚಾರ್ ನಡೆಸಿಕೊಡಲಿರುವ ಈ ವಿಶಿಷ್ಟ ಕಾರ್ಯಕ್ರಮ ವೀಕ್ಷಿಸಿ.

ಜಿಯೋ ಧನ್‍ ಧನಾ ಧನ್ ಲೈವ್ ಕಾರ್ಯಕ್ರಮವು `ಮೈಜಿಯೋ ಆ ಪ್ ಬಳಕೆದಾರರಿಗೆ' ಕ್ರಿಕೆಟ್‍ ಅಂಕಣದಾಚೆಗಿನ ಅಪರಿಚಿತ ಮುಖಗಳ ಪರಿಚಯವನ್ನು ಮಾಡಿಕೊಡಲಿದೆ. ಇದರಲ್ಲಿ ಬಾಯ್ತುಂಬಾ ನಗು ಮತ್ತು ಕ್ರಿಕೆಟ್‍ ಪರಿಣತರ ಹಾಗೂ ಸೆಲೆಬ್ರಿಟಿ ಅತಿಥಿಗಳಿಂದ ವಿಶೇಷವಾದ ಟೀಕೆಟಿಪ್ಪಣಿಗಳು ಇರಲಿವೆ.

ಸೆಲೆಬ್ರಿಟಿ ಅತಿಥಿಗಳು ಕಾಣಿಸಿಕೊಳ್ಳಲಿದ್ದಾರೆ.

ಸೆಲೆಬ್ರಿಟಿ ಅತಿಥಿಗಳು ಕಾಣಿಸಿಕೊಳ್ಳಲಿದ್ದಾರೆ.

ಸುನೀಲ್ ಮತ್ತು ಸಮೀರ್ ಅವರ ಜೊತೆಗೆ ಈ ಕಾರ್ಯಕ್ರಮದಲ್ಲಿ ಹೆಸರಾಂತ ಕ್ರಿಕೆಟ್ ಆಟಗಾರರು, ಸೆಲೆಬ್ರಿಟಿ ಅತಿಥಿಗಳು ಕಾಣಿಸಿಕೊಳ್ಳಲಿದ್ದು, ಇವರೆಲ್ಲರೂ ಲೋಕಾಭಿರಾಮವಾಗಿ, ಹಾಸ್ಯದ ಧಾಟಿಯಲ್ಲಿ ಸಂಭಾಷಣೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಪ್ರಸಿದ್ಧ ಹಾಸ್ಯ ನಟ-ನಟಿಯರಾದ ಶಿಲ್ಪಾ ಶಿಂಧೆ, ಅಲಿ ಅಸ್ಗರ್, ಸುಗಂಧಾ ಮಿಶ್ರ, ಸುರೇಶ್ ಮೆನನ್, ಪರೇಶ್‍ ಗಣತ್ರಾ, ಶಿವಾನಿ ದಾಂಡೇಕರ್ ಮತ್ತು ಅರ್ಚನಾ ವಿಜಯ್ ಅವರು ಕೂಡ ಕಾಣಿಸಿಕೊಳ್ಳಲಿದ್ದಾರೆ. ಅಲ್ಲದೆ, ವಿಖ್ಯಾತ ಕ್ರಿಕೆಟ್ ದಂತಕತೆಗಳಾದ ಕಪಿಲ್‍ ದೇವ್‍ ಮತ್ತು ವೀರೇಂದ್ರ ಸೆಹ್ವಾಗ್ ಕೂಡ ಪರದೆಯ ಮೇಲೆ ಬರಲಿದ್ದಾರೆ.

ಜೀತೋ ಧನ್ ಧನಾ ಧನ್

ಜೀತೋ ಧನ್ ಧನಾ ಧನ್

ಜಿಯೋ ಕ್ರಿಕೆಟ್ ಪ್ಲೇ ಅಲಾಂಗ್ ಆನ್‍ಲೈನ್‍ ಆಟವು ಭಾರತದ ಎಲ್ಲಾ ಸ್ಮಾರ್ಟ್‍ಫೋನ್‍ ಬಳಕೆದಾರರಿಗೂ ಲಭ್ಯವಾಗಲಿದ್ದು, ಒಟ್ಟು 11 ಭಾಷೆಗಳಲ್ಲಿ ಈ ಆಟವನ್ನು ಆಡಬಹುದು. ಒಟ್ಟು 7 ವಾರಗಳ ಕಾಲ ನಡೆಯಲಿರುವ 60 ಪಂದ್ಯಗಳ ಐಪಿಎಲ್‍ ಋತುವಿನಲ್ಲಿ ಈ ಆಟವನ್ನು ಮೊಬೈಲ್‍ ಪರದೆಯಲ್ಲಿ ಹೇಗೆ ನೋಡಿ, ಆನಂದಿಸಬಹುದು ಎನ್ನುವುದಕ್ಕೆ ಜಿಯೋ ಕಂಪನಿಯು ಹೊಸ ಭಾಷ್ಯವನ್ನೇ ಬರೆದಿದೆ. ಪಂದ್ಯಗಳು ನಡೆಯುತ್ತಿರುವಾಗಲೇ ಸಂವಾದವನ್ನು ನಡೆಸುವ ಮೂಲಕ ಈ ಆಟವು ವಿನೂತನ ಅನುಭವವನ್ನು ಕ್ರಿಕೆಟ್‍ಪ್ರಿಯರಿಗೆ ಕೊಡಲಿದೆ.

ಕೋಟ್ಯಂತರ ಕಿಮ್ಮತ್ತಿನ ಬಹುಮಾನಗಳು!

ಕೋಟ್ಯಂತರ ಕಿಮ್ಮತ್ತಿನ ಬಹುಮಾನಗಳು!

ಈ ಬಾರಿಯ ಕ್ರಿಕೆಟ್ ಋತುವು ಎಂದಿನಂತೆ ಕೇವಲ ಕ್ರಿಕೆಟ್ ವೀಕ್ಷಣೆಗಷ್ಟೇ ಸೀಮಿತವಾಗಿಲ್ಲ. ಬದಲಿಗೆ ಇದು `ಹಸೋ, ಖೇಲೋ, ಜೀತೋ' (ನಗುತಾ, ಆಡುತಾ, ಗೆಲ್ಲಿರಿ!) ಎಂಬ ಹೊಸ ಮಂತ್ರವನ್ನೇ ಒಳಗೊಂಡಿದೆ. ಆಟವೆಂದಮೇಲೆ ಸೋಲು, ಗೆಲುವು ಸಹಜ. ಆದರೆ, `ಜಿಯೋ ಕ್ರಿಕೆಟ್ ಪ್ಲೇ ಅಲಾಂಗ್' ಆನ್‍ಲೈನ್ ಆಟವನ್ನು ಆಡುವ ಪ್ರತಿಯೊಬ್ಬರೂ ಗೆಲ್ಲಲೇಬೇಕು ಎನ್ನುವುದು ಜಿಯೋದ ಕನಸಾಗಿದೆ. ಹೀಗಾಗಿ, ಜಿಯೋ ಕಂಪನಿಯು ನೀವು ಮೂಗಿನ ಮೇಲೆ ಬೆರಳಿಟ್ಟುಕೊಂಡು, ಆಶ್ಚರ್ಯವನ್ನು ವ್ಯಕ್ತಪಡಿಸುವಂತಹ ಭಾರೀ ಮೊತ್ತದ ಮತ್ತು ಆಕರ್ಷಕ ಬಹುಮಾನಗಳನ್ನು ಘೋಷಿಸಿದೆ.

ಜಿಯೋ ಕ್ರಿಕೆಟ್ ಸೀಸನ್ ಪ್ಯಾಕ್

ಜಿಯೋ ಕ್ರಿಕೆಟ್ ಸೀಸನ್ ಪ್ಯಾಕ್

ಜಿಯೋ ಈ ಬಾರಿ ಇನ್ನೊಂದು ಹೊಸ ಉಪಕ್ರಮವನ್ನು ಕೈಗೊಂಡಿದೆ. ಅದೇನೆಂದರೆ, ಕ್ರಿಕೆಟ್‍ ಅಭಿಮಾನಿಗಳು ಸುಲಭವಾಗಿ ತಮ್ಮ ಅಚ್ಚುಮೆಚ್ಚಿನ ಪಂದ್ಯಗಳನ್ನು ನೋಡುವಂಥ ಸದವಕಾಶ! ಇದಕ್ಕೆಂದೇ ಜಿಯೋ ಕ್ರಿಕೆಟ್‍ ಸೀಸನ್ ಪ್ಯಾಕ್ ಅನ್ನು ಘೋಷಿಸಿದೆ. ಇದು 51 ದಿನಗಳ ಕಾಲಾವಧಿಯನ್ನು ಒಳಗೊಂಡಿದ್ದು, ಕೇವಲ 251 ರೂಪಾಯಿಗಳಿಗೆ 102 ಜಿಬಿ ಡೇಟಾವನ್ನು ಕೊಡಲಾಗುತ್ತಿದೆ. ಜಗತ್ತಿನ ಬೇರಾವ ಕಂಪನಿಯೂ ಇಂಥ ಆಕರ್ಷಕ ಯೋಜನೆಯನ್ನು ಇದುವರೆಗೆ ರೂಪಿಸಿಲ್ಲ!

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Saturday, April 7, 2018, 14:04 [IST]
Other articles published on Apr 7, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ