ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ರಾಜಸ್ಥಾನ್ ವಿರುದ್ಧ ಸುಲಭ ಜಯ ದಾಖಲಿಸಿದ ಕೆಕೆಆರ್

By Mahesh
IPL 2018: Kolkata Knight Riders breach Rajasthan Royals fortress

ಜೈಪುರ, ಏಪ್ರಿಲ್ 17: ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು 7 ವಿಕೆಟ್ ಗಳ ಸುಲಭ ಜಯ ದಾಖಲಿಸಿದೆ. ಸವಾಯಿ ಮಾನ್ ಸಿಂಗ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಅತಿಥೇಯ ತಂಡ ರಾಜಸ್ಥಾನ್ 20 ಓವರ್ ಗಳಲ್ಲಿ 160/8 ಸ್ಕೋರ್ ಮಾಡಿತ್ತು. ಕೆಕೆಆರ್ ತಂಡವು ಈ ಗುರಿಯನ್ನು 18.5 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು ಸುಲಭವಾಗಿ ಮುಟ್ಟಿ, ಜಯಭೇರಿ ಬಾರಿಸಿತು.

ಈ ಗೆಲುವಿನ ಮೂಲಕ ಐಪಿಎಲ್ 2018ರ ಅಂಕ ಪಟ್ಟಿಯಲ್ಲಿ ಕೆಕೆಆರ್ ತಂಡವು ಅಗ್ರಸ್ಥಾನಕ್ಕೇರಿದೆ. ಕೆಕೆಆರ್ ಪರ ಸುನೀಲ್ ನರೇನ್ ನಿತೀಶ್ ರಾಣಾ, ರಾಬಿನ್ ಉತ್ತಪ್ಪ, ದಿನೇಶ್ ಕಾರ್ತಿಕ್ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು.

ಪಂದ್ಯದ ಸ್ಕೋರ್ ಕಾರ್ಡ್

161ರನ್ ಗಳನ್ನು ಚೇಸ್ ಮಾಡಲು ಬಂದ ಕೆಕೆಆರ್ ಗೆ ಮೊದಲ ಓವರ್ ನಲ್ಲೇ ಆಘಾತವಾಯಿತು. ಕರ್ನಾಟಕ ಮೂಲದ ರಾಜಸ್ಥಾನ್ ಪರ ಆಡುತ್ತಿರುವ ಸ್ಪಿನ್ನರ್ ಕೃಷ್ಣಪ್ಪ ಗೌತಮ್ ಅವರು ಸ್ಫೋಟಕ ಬ್ಯಾಟ್ಸ್ ಮನ್ ಕ್ರಿಸ್ ಲಿನ್ ಅವರನ್ನು ಶೂನ್ಯಕ್ಕೆ ಕ್ಲೀನ್ ಬೋಲ್ಡ್ ಮಾಡಿದರು. ಇನ್ನೊಂದೆಡೆ ಸುನೀಲ್ ನರೇನ್ ವಿಕೆಟ್ ಕಾಯ್ದುಕೊಂಡು 25 ಎಸೆತಗಳಲ್ಲಿ 35ರನ್ ಗಳಿಸಿದರು.

ಅಂಕಪಟ್ಟಿ

ಕನ್ನಡಿಗ ರಾಬಿನ್ ಉತ್ತಪ್ಪ 36 ಎಸೆತಗಳಲ್ಲಿ 48ರನ್ ಸಿಡಿಸಿದರು. 6 ಬೌಂಡರಿ, 2 ಸಿಕ್ಸರ್ ಬಾರಿಸಿದರು. ಕೊನೆಗೆ ರಾಬಿನ್ ಕೂಡಾ ಗೌತಮ್ ಗೆ ವಿಕೆಟ್ ಒಪ್ಪಿಸಿದರು. ಇದಕ್ಕೂ ಮುನ್ನ ಸುನೀಲ್ ರನೌಟ್ ಆಗಿದ್ದರು. ಅಷ್ಟರಲ್ಲಿ ಗೆಲ್ಲುವ ಹಾದಿಯಲ್ಲಿದ್ದ ಕೆಕೆಆರ್ ಗೆ ನಿತೀಶ್ ರಾಣಾ 35ರನ್ ಹಾಗೂ ನಾಯಕ ದಿನೇಶ್ ಕಾರ್ತಿಕ್ 42ರನ್ ಗಳಿಸಿ ಅಜೇಯರಾಗಿ ಉಳಿದು ತಂಡಕ್ಕೆ ಅರ್ಹ ಜಯ ತಂದರು.

ರಾಜಸ್ಥಾನ ಪರ ಅಜಿಂಕ್ಯ ರಹಾನೆ 36, ಶಾರ್ಟ್ 44, ಬಟ್ಲರ್ 24ರನ್ ಗಳಿಸಿ ತಂಡದ ಮೊತ್ತವನ್ನು 160/8 ಏರಿಸುವಲ್ಲಿ ಸುಸ್ತಾಗಿಬಿಟ್ಟರು. ಕೆಕೆ ಆರ್ ಪರ ಸುನೀಲ್ ಹೊರತುಪಡಿಸಿ ಎಲ್ಲಾ ಸ್ಪಿನ್ನರ್ ಗಳು ಪಿಯೂಷ್, ಕುಲದೀಪ್, ನಿತೀಶ್ ಉತ್ತಮ ಬೌಲಿಂಗ್ ಪ್ರದರ್ಶಿಸಿದರು. ನಿತೀಶ್, ಟಾಮ್ ಕರಣ್ ತಲಾ 2 ವಿಕೆಟ್ ಕಿತ್ತರು.

Story first published: Thursday, April 19, 2018, 0:37 [IST]
Other articles published on Apr 19, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X