ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ರಾಹುಲ್ ಬ್ಯಾಟಿಂಗ್ ಅಬ್ಬರಕ್ಕೆ ಶರಣಾಯ್ತು ರಾಯಲ್ಸ್

Rahul heroics, Mujeebs 3-for help Punjab get back to winning ways

ಇಂದೋರ್, ಮೇ 7: ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಕೆಎಲ್ ರಾಹುಲ್ ಬ್ಯಾಟಿಂಗ್ ಆರ್ಭಟಕ್ಕೆ ರಾಜಸ್ಥಾನ್ ರಾಯಲ್ಸ್ ತಲೆ ಬಾಗಿದೆ. ರವಿವಾರ ನಡೆದ ಐಪಿಎಲ್ 38ನೇ ಸೆಣಸಾಟದಲ್ಲಿ ಪಂಜಾಬ್ ತಂಡ ರಾಜಸ್ಥಾನ್ ವಿರುದ್ಧ 6 ವಿಕೆಟ್ ಗೆಲುವು ದಾಖಲಿಸಿದೆ.

ರಾಜಸ್ಥಾನ್ ನೀಡಿದ್ದ 153 ರನ್ ಗುರಿ ಬೆನ್ನಟ್ಟಿದ ಪಂಜಾಬ್ 18.4 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 155 ರನ್ ಕಲೆ ಹಾಕುವುದರೊಂದಿಗೆ ರಾಜಸ್ಥಾನ್ ಗೆ ಸೋಲುಣಿಸಿತು.

ಸ್ಕೋರ್ ಕಾರ್ಡ್

ಟಾಸ್ ಸೋತು ಬ್ಯಾಟಿಂಗ್ ಇಳಿದ ರಾಜಸ್ಥಾನ್ ರಾಯಲ್ಸ್ ಬ್ಯಾಟಿಂಗ್ ವೈಫಲ್ಯದ ನಡುವೆಯೂ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 152 ರನ್ ಪೇರಿಸಿ ಪಂಜಾಬ್ ಗೆ 153 ರನ್ ಸುಲಭ ಗುರಿ ನೀಡಿತ್ತು.

ರಾಜಸ್ಥಾನ್ ತಂಡದ ಪರ ಹೋರಾಟ ನಡೆಸಿದ್ದು ಜೋಸ್ ಬಟ್ಲರ್ ಒಬ್ಬರೆ. ಆರಂಭಿಕರಾಗಿ ಇಳಿದ ಬಟ್ಲರ್ 39 ಎಸೆತಗಳನ್ನು ಎದುರಿಸಿ 51 ರನ್ ಪೇರಿಸಿದರು. 14.1 ಓವರ್ ವರೆಗೂ ತಂಡದ ಪರ ಬ್ಯಾಟ್ ಬೀಸಿದ ಅವರು ಮುಜೀರ್ ಓವರ್ ನಲ್ಲಿ ತಿವಾರಿಗೆ ಕ್ಯಾಚಿತ್ತು ನಿರ್ಗಮಿಸಿದರು.

ಮುಂದಿನ ಸಲ ಕಪ್ ನಮ್ದೇ-ಆರ್ ಸಿಬಿ ಪರ ಟ್ರಾಲ್ ಪುಟಗಳ ಬ್ಯಾಟಿಂಗ್ ! ಮುಂದಿನ ಸಲ ಕಪ್ ನಮ್ದೇ-ಆರ್ ಸಿಬಿ ಪರ ಟ್ರಾಲ್ ಪುಟಗಳ ಬ್ಯಾಟಿಂಗ್ !

ಸಂಜು ಸ್ಯಾಮ್ಸನ್ 28 (23), ಬೆನ್ ಸ್ಟೋಕ್ 12 (9), ರಾಹುಲ್ ತ್ರಿಪಾಠಿ 11 (13), ಶ್ರೇಯಸ್ ಗೋಪಾಲ್ 24 (16) ರನ್ ಕೊಡುಗೆ ಬಿಟ್ಟರೆ ಉಳಿದೆಲ್ಲ ರಾಜಸ್ಥಾನ್ ಆಟಗಾರರೂ 6ರೊಳಗಿನ ರನ್ ನೊಂದಿಗೆ ನಿರ್ಗಮಿಸಿ ಕೆಟ್ಟ ಬ್ಯಾಟಿಂಗ್ ಗೆ ಸಾಕ್ಷಿ ಹೇಳಿದರು.

ರಾಜಸ್ಥಾನ್ ನಲ್ಲಿ ಅಜೇಯರಾಗಿ ಉಳಿದವರು ಉನಾದ್ಕತ್ 6 (7) ಒಬ್ಬರೇ. ಮೊದಲೇ ಅಂಕಪಟ್ಟಿಯಲ್ಲಿ ತಳ ಸೇರಿದ್ದ ರಾಜಸ್ಥಾನ್ ಎಚ್ಚರಿಕೆ ಆಟವಾಡುವಲ್ಲಿ ಎಡವಿದ್ದು ಸೋಲಿಗೆ ದಾರಿಯಾಯಿತು.

ಚೇಸಿಂಗ್ ಗೆ ಇಳಿದ ಪಂಜಾಬ್ ನಿಂದಲೂ ಅಂಥದ್ದೇನೂ ಬ್ಯಾಟಿಂಗ್ ಆರ್ಭಟ ಕಂಡು ಬರಲಿಲ್ಲ. ಗೇಲ್ 8 (11), ಮಾಯಂಕ್ ಅಗರ್ವಾಲ್ 2 (3), ಅಕ್ಸರ್ ಪಟೇಲ್ 4 (5) ರನ್ ನೊಂದಿಗೆ ನಿರ್ಗಮಿಸಿದರು. ಕರುಣ್ ನಾಯರ್ 31 (23) ರನ್ ನೊಂದಿಗೆ ತಕ್ಕ ಮಟ್ಟಿಗೆ ಪಂಜಾಬ್ ತಂಡಕ್ಕೆ ಸಾಥ್ ನೀಡಿದರು.

ಆದರೆ ಆರಂಭಿಕರಾಗಿ ಇಳಿದಿದ್ದ ಕೆಎಲ್ ರಾಹುಲ್ 84 (54) ಒಬ್ಬರೇ ಪಂಜಾಬ್ ಪರ ಕೊಸರಾಡಿದರು. ರಾಹುಲ್ ನೊಂದಿಗೆ ಜೊತೆಯಾಗಿ ನಿಂತ ಮರ್ಕ್ಯುಸ್ ಸ್ಟಾಯ್ನ್ಸ್ 23/16 ಪಂಜಾಬ್ ತಂಡವನ್ನು ಗೆಲುವಿನ ದಡ ಸೇರಿಸಿದರು.

Story first published: Monday, May 7, 2018, 0:17 [IST]
Other articles published on May 7, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X