ಐಪಿಎಲ್ 2018: ಡೆಲ್ಲಿ ವಿರುದ್ಧ ಕೆಕೆಆರ್ ಗೆ ಭರ್ಜರಿ ಜಯ

Posted By:
ipl 2018 match 13 kolkata knight riders delhi daredevils

ಕೋಲ್ಕತಾ, ಏಪ್ರಿಲ್ 16: ಐಪಿಎಲ್‌ 2018ರ 13ನೇ ಪಂದ್ಯ ಕೊಲ್ಕತ್ತ ನೈಟ್ ರೈಡರ್ಸ್ ಮತ್ತು ಡೆಲ್ಲಿ ಡೇರ್‌ಡೆವಿಲ್ಸ್‌ ನಡುವೆ ಕೊಲ್ಕತ್ತಾದ ಈಡನ್‌ ಗಾರ್ಡನ್‌ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದು, ಟಾಸ್ ಗೆದ್ದ ಡೆಲ್ಲಿ ತಂಡವು ಬೌಲಿಂಗ್ ಆಯ್ದುಕೊಂಡಿದೆ. ನಿಗದಿತ 20 ಓವರ್ ಗಳಲ್ಲಿ ಕೆಕೆಆರ್ ತಂಡವು 200/9 ಸ್ಕೋರ್ ಮಾಡಿತ್ತು. ರನ್ ಚೇಸ್ ಮಾಡಲು ಆಗದೆ ಡೆಲ್ಲಿ 129ಸ್ಕೋರಿಗೆ ಆಲೌಟ್ ಆಗಿ ಹೀನಾಯ ಸೋಲು ಕಂಡಿದೆ.

201ರನ್ ಗುರಿ ಬೆನ್ನು ಹತ್ತಿದ ಡೆಲ್ಲಿ ಆರಂಭಿಕ ಕುಸಿತದಿಂದ ಚೇತರಿಸಿಕೊಳ್ಳಲಿಲ್ಲ. ರಿಷಬ್ ಪಂತ್ 43 (26ಎಸೆತ, 7 ಬೌಂಡರಿ, 1 ಸಿಕ್ಸರ್), ಮ್ಯಾಕ್ಸ್ ವೆಲ್ 47 (22 ಎಸೆತ, 3 ಬೌಂಡರಿ, 4ಸಿಕ್ಸರ್) ಮಿಕ್ಕವರು ಎರಡಂಕಿ ದಾಟಲಿಲ್ಲ. ಕೋಲ್ಕತ್ತಾ ಪರ ಸುನೀಲ್ ನರೇನ್ 3, ಕುಲದೀಪ್ ಯಾದವ್ 3 ವಿಕೆಟ್ ಕಿತ್ತರು. 14.2 ಓವರ್ ಗಳಲ್ಲಿ ಡೆಲ್ಲಿ ಆಲೌಟ್ ಆಯಿತು.

ಇದಕ್ಕೂ ಮುನ್ನ ನಿತೀಶ್ ರಾಣಾ 59ರನ್ (35 ಎಸೆತಗಳು), ಆಂಡ್ರ್ಯೂ ರಸೆಲ್ 41ರನ್ (12 ಎಸೆತ) ಕ್ರಿಸ್ ಲಿನ್ 31, ಉತ್ತಪ್ಪ 35 ಉತ್ತಮ ಬ್ಯಾಟಿಂಗ್ ನೆರವಿನಿಂದ ಡೆಲ್ಲಿ 200/9 ಸ್ಕೋರ್ ಮಾಡಿತ್ತು. ಡೆಲ್ಲಿ ಪರ ರಾಹುಲ್ ತೆವಾಟಿಯಾ 18ರನ್ನಿತ್ತು 3 ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿಕೊಂಡರು.

ಐಪಿಎಲ್‌ನ ಇಂದಿನ ಪಂದ್ಯ ಸಮಾನ ದುಃಖಿಗಳ ನಡುವೆ ನಡೆಯುತ್ತಿದೆ. ಎರಡೂ ತಂಡಗಳು ಆಡಿರುವ ಮೂರು ಪಂದ್ಯಗಳಲ್ಲಿ 1 ಗೆದ್ದು 2ರಲ್ಲಿ ಸೋತಿವೆ. ಇಂದು ಗೆಲ್ಲುವ ತಂಡವು ಪಾಯಿಂಟ್ ಪಟ್ಟಿಯಲ್ಲಿ ಜಿಗಿತ ಕಾಣಲಿದೆ.

ಲೈವ್ ಸ್ಕೋರ್ ಕಾರ್ಡ್, ಕಾಮೆಂಟ್ರಿ

ಕೊಲ್ಕತ್ತ ತಂಡಕ್ಕೆ ಈ ಪಂದ್ಯವು ಮಹತ್ವದ್ದಾಗಿದ್ದು, ತವರಿನ ಅಭಿಮಾನಿಗಳ ಎದುರು ಗೆಲ್ಲುವ ಒತ್ತಡದಲ್ಲಿದೆ. ಎರಡೂ ತಂಡಗಳು ಸಮಾನ ಶಕ್ತಿಯುಳ್ಳದ್ದಾಗಿದ್ದು, ಗೆಲ್ಲುವ ಫೇವರೇಟ್ ಕೊಲ್ಕತ್ತ ಆಗಿದೆ.

ಕೊಲ್ಕತ್ತ ತಂಡಕ್ಕೆ ದಿನೇಶ್‌ ಕಾರ್ತಿಕ್, ಸುನಿಲ್ ನರೇನ್, ಕ್ರಿಸ್ ಲೆನ್, ರಾಬಿನ್ ಉತ್ತಪ್ಪ ಬಲ ತುಂಬಿದ್ದರೆ, ಡೆಲ್ಲಿ ತಂಡಕ್ಕೆ ಗೌತಮ್ ಗಂಭೀರ್, ಮ್ಯಾಕ್ಸ್‌ವೆಲ್, ಕ್ರಿಸ್ಟಿಯನ್‌ ಅವರ ಬಲ ಇದೆ.

ಐಪಿಎಲ್ ವಿಶೇಷ ಪುಟ | ಡೆಲ್ಲಿ ವೇಳಾಪಟ್ಟಿ | ಕೊಲ್ಕತ್ತಾ ವೇಳಾಪಟ್ಟಿ

ಕೊಲ್ಕತ್ತ-ಡೆಲ್ಲಿ ತಂಡವು ಈ ವರೆಗೆ 19 ಬಾರಿ ಐಪಿಎಲ್‌ನಲ್ಲಿ ಮುಖಾಮುಖಿ ಆಗಿದ್ದು ಅದರಲ್ಲಿ 12 ಪಂದ್ಯವನ್ನು ಕೊಲ್ಕತ್ತ ಗೆದ್ದಿದೆ. ಈಡನ್‌ ಗಾರ್ಡನ್‌ನಲ್ಲಿ ಕೊಲ್ಕತ್ತ ತಂಡವು 7 ರಲ್ಲಿ 6 ಬಾರಿ ಡೆಲ್ಲಿ ವಿರುದ್ಧ ಗೆದ್ದಿರುವುದು ವಿಶೇಷ.

ಆಡುವ 11 ಆಟಗಾರರ ಪಟ್ಟಿ ಇಂತಿವೆ...
ಕೊಲ್ಕತ್ತ ನೈಟ್ ರೈಡರ್ಸ್‌
ದಿನೇಶ್ ಕಾರ್ತಿಕ್ (ನಾಯಕ, ಕೀಪರ್‌), ಸುನಿಲ್ ನರೇನ್, ರಾಬಿನ್ ಉತ್ತಪ್ಪ, ಯೂಸಫ್ ಪಠಾಣ್, ಆಂಡ್ರು ರಸೆಲ್, ನಿತೀಶ್ ರಾನಾ, ಶುಬ್‌ಮನ್ ಗಿಲ್, ಶಿವಂ ಮಾವಿ, ಟಾಮ್ ಕುರನ್, ಕುಲ್ದೀಪ್ ಯಾದವ್.

ಡೆಲ್ಲಿ ಡೇರ್‌ಡೆವಿಲ್ಸ್‌
ಗೌತಮ್ ಗಂಭೀರ್ (ನಾಯಕ), ಜಾಸನ್ ರಾಯ್, ರಿಶಬ್ ಪಂತ್, ಗ್ಲೇನ್ ಮ್ಯಾಕ್ಸ್‌ವೆಲ್, ಶ್ರೇಯಸ್ ಐಯರ್, ವಿಜಯ್ ಶಂಕರ್, ಕ್ರಿಸ್ ಮಾರಿಸ್, ರಾಹುಲ್ ಟಿವಾಟಿಯಾ, ಶಹಬಾಜ್ ನದೀಮ್, ಮೊಹಮ್ಮದ್ ಶಮಿ, ಟ್ರೆಂಟ್ ಬೋಲ್ಟ್‌.

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Monday, April 16, 2018, 19:32 [IST]
Other articles published on Apr 16, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ