ಐಪಿಎಲ್ 2018 ವಿರುದ್ಧ ಹೈಕೋರ್ಟಿನಲ್ಲಿ ಮೊಕದ್ದಮೆ

Posted By:
IPL 2018: Petition filed in Madras High Court against IPL

ಚೆನ್ನೈ, ಏಪ್ರಿಲ್ 04: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 11ನೇ ಆವೃತ್ತಿ ಆಯೋಜನೆ ವಿರುದ್ಧ ಮದ್ರಾಸ್ ಹೈಕೋರ್ಟ್ ನಲ್ಲಿ ಅರ್ಜಿ ಹಾಕಲಾಗಿದೆ.

ಮ್ಯಾಚ್ ಫಿಕ್ಸಿಂಗ್ ಹಾಗೂ ಬೆಟ್ಟಿಂಗ್ ಕುರಿತಂತೆ ಸೂಕ್ತ ಕ್ರಮ, ನಿಯಮಗಳನ್ನು ಪಾಲಿಸದ ಕಾರಣ 11ನೇ ಆವೃತ್ತಿ ಪಂದ್ಯಗಳನ್ನು ಆಯೋಜಿಸದಂತೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಗೆ ಕಡಿವಾಣ ಹಾಕುವಂತೆ ಕೋರಲಾಗಿದೆ.

ಐಪಿಎಲ್ ವಿಶೇಷ ಪುಟ | ಪೂರ್ಣವೇಳಾಪಟ್ಟಿ | ಆರ್ ಸಿಬಿ ವೇಳಾಪಟ್ಟಿ

ಐಪಿಎಸ್ ಅಧಿಕಾರಿ ಜಿ ಸಂಪತ್ ಕುಮಾರ್ ಅವರು ಸಲ್ಲಿಸಿದ್ದ ಅರ್ಜಿಯನ್ನು ಸ್ವೀಕರಿಸುವ ಮುಖ್ಯ ನ್ಯಾಯಮೂರ್ತಿ ಇಂದಿರಾ ಬ್ಯಾನರ್ಜಿ ಹಾಗೂ ಜಸ್ಟೀಸ್ ಎ ಸೆಲ್ವಮ್ ಅವರಿದ್ದ ನ್ಯಾಯಪೀಠವು, ಕೇಂದ್ರ ಸರ್ಕಾರ ಹಾಗೂ ಬಿಸಿಸಿಐಗೆ ನೋಟಿಸ್ ಜಾರಿ ಮಾಡಿ, ವಿಚಾರಣೆಯನ್ನು ಏಪ್ರಿಲ್ 13ಕ್ಕೆ ಮುಂದೂಡಿದೆ.

'ನನ್ನ ಉದ್ದೇಶ ಪಂದ್ಯಾವಳಿಯನ್ನು ತಡೆಯುವುದಲ್ಲ, ಬದಲಿದೆ ಆಟದಲ್ಲಿ ಪಾರದರ್ಶಕತೆ ತರುವುದಾಗಿದೆ. ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ 1988 ಅನ್ವಯ ನನ್ನ ಮನವಿ ನ್ಯಾಯಯುತವಾಗಿದೆ ಎಂದು ಅರ್ಜಿದಾರರು ಹೇಳಿದ್ದಾರೆ.

2015ರಲ್ಲಿ ಸುಪ್ರೀಂಕೋರ್ಟ್ ನೇಮಿಸಿದ್ದ ಆಯೋಗವು ಭ್ರಷ್ಟಾಚಾರದ ಆರೋಪದ ಮೇಲೆ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳಿಗೆ ಎರಡು ವರ್ಷಗಳ ಕಾಲ ನಿಷೇಧ ಹೇರಿದ್ದನ್ನು ಇಲ್ಲಿ ಸ್ಮರಿಸಬಹುದು.

11ನೇ ಆವೃತ್ತಿಯ ಐಪಿಎಲ್ ಪಂದ್ಯಗಳು ಏಪ್ರಿಲ್ 07ರಿಂದ ಆರಂಭಗೊಳ್ಳಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಮುಂಬೈ ಹಾಗೂ ಚೆನ್ನೈ ಸೆಣಸಾಡಲಿವೆ.

ಫ್ಯಾಂಟಸಿ ಲೀಗ್ ಪುಟಕ್ಕೆ ಇಲ್ಲಿದೆ ದಾರಿ

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Wednesday, April 4, 2018, 20:12 [IST]
Other articles published on Apr 4, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ