ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ ಗೂ ಮುನ್ನ ಕೊಹ್ಲಿ ಏನಾದ್ರೂ ರಾಹುಲ್ ಗಾಂಧಿ ಮೀಟ್ ಮಾಡಿದ್ನಾ!

By Mahesh
IPL 2018 , SRH vs RCB: Twitter reactions after Match 39

ಬೆಂಗಳೂರು, ಮೇ 08: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ ಜನಪ್ರಿಯ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ ಸಿಬಿ) ಮತ್ತೊಮ್ಮೆ ಗೆಲುವಿನ ಹೊಸ್ತಿಲಲ್ಲಿ ಎಡವಿ, ಸೋಲುಂಡಿದೆ. ಕಡಿಮೆ ಮೊತ್ತವನ್ನು ಡಿಫೆಂಡ್ ಮಾಡುವ ಮೂಲಕ ಸನ್ ರೈಸರ್ಸ್ ಹೈದರಾಬಾದ್ (ಎಸ್ ಆರ್ ಎಚ್) ತಂಡವು ಪ್ಲೇ ಆಫ್ ಗೆ ಅರ್ಹತೆ ಪಡೆಯುವತ್ತ ಸಾಗಿದೆ.

ಮುಂದಿನ ಸಲ ಕಪ್ ನಮ್ದೇ-ಆರ್ ಸಿಬಿ ಪರ ಟ್ರಾಲ್ ಪುಟಗಳ ಬ್ಯಾಟಿಂಗ್ !ಮುಂದಿನ ಸಲ ಕಪ್ ನಮ್ದೇ-ಆರ್ ಸಿಬಿ ಪರ ಟ್ರಾಲ್ ಪುಟಗಳ ಬ್ಯಾಟಿಂಗ್ !

ಆರ್ ಸಿಬಿ ಮತ್ತೊಮ್ಮೆ ಪ್ರಮುಖ ಬ್ಯಾಟ್ಸ್ ಮನ್ ಗಳ ವೈಫಲ್ಯ ಎದುರಿಸಿತು. ಇದಕ್ಕಿಂತ ಹೈದರಾಬಾದಿನ ಬೌಲರ್ ಗಳು ಆರ್ ಸಿಬಿ ಬ್ಯಾಟ್ಸ್ ಮನ್ ಗಳನ್ನು ಕಟ್ಟಿ ಹಾಕಿದರು ಎನ್ನಬಹುದು.

ಐಪಿಎಲ್ 2018ರ ವಿಶೇಷ ಪುಟ | ಅಂಕಪಟ್ಟಿ | ಆರ್ ಸಿಬಿ ವೇಳಾಪಟ್ಟಿ

ಹೊಡಿಬಡಿ ಆಟವಾಡುವ ಸಮಯದಲ್ಲಿ ಬ್ಯಾಟಿಂಗ್ ಮರೆತಂತೆ ಕಂಡ ಆರ್ ಸಿಬಿ ಬ್ಯಾಟ್ಸ್ ಮನ್ ಗಳ ಬಗ್ಗೆ, ಕೊನೆ ಓವರ್ ಎಸೆದ ಭುವನೇಶ್ವರ್ ಬಗ್ಗೆ, ಕೇನ್ ವಿಲಿಯಮ್ಸನ್ ನಾಯಕತ್ವದ ಬಗ್ಗೆ ಥರಾವರಿ ಟ್ವೀಟ್ಸ್ ಬಂದಿವೆ.

ನೋಡ್ಬೇಡಿ ಪ್ಲೀಸ್; ಇದು 'ಈ ಸಾರಿ ಕಪ್ ನಮ್ದೇ' ಅಂದೋರ ಕತೆ..ನೋಡ್ಬೇಡಿ ಪ್ಲೀಸ್; ಇದು 'ಈ ಸಾರಿ ಕಪ್ ನಮ್ದೇ' ಅಂದೋರ ಕತೆ..

ಈ ಸಲ ಕಪ್ ನಮ್ದೇ ಎನ್ನುತ್ತಿದ್ದ ಫ್ಯಾನ್ಸ್ ಗಳು ಮತ್ತೊಮ್ಮೆ ತಮ್ಮ ಸಾಮಾಜಿಕ ಜಾಲ ತಾಣ ಪುಟಗಳಲ್ಲಿ ಮುಂದಿನ ಸಲ ಅಥವಾ ನೆಕ್ಸ್ಟ್ ಸಲ ಕಪ್ ನಮ್ದೇ ಎಂದು ಹಾಕಿಕೊಳ್ಳುತ್ತಿದ್ದಾರೆ. ಆರ್ ಸಿಬಿ ಫ್ಯಾನ್ಸ್ ತಾಳ್ಮೆ ಬಗ್ಗೆ ಮೆಚ್ಚುಗೆ ಕೂಡಾ ವ್ಯಕ್ತವಾಗಿದೆ.

ಸಾಮಾಜಿಕ ಜಾಲ ತಾಣಗಳಲ್ಲಿ ಆರ್ ಸಿಬಿ

ಆರ್ ಸಿಬಿ ಸೋಲಲಿ, ಗೆಲ್ಲಲಿ ಅಭಿಮಾನಿಗಳು ತಂಡವನ್ನು ಕೈ ಬಿಟ್ಟಿಲ್ಲ, ಮೊಹಮ್ಮದ್ ಸಿರಾಜ್, ಯಜುವೇಂದ್ರ ಚಾಹಲ್ ಬೌಲಿಂಗ್ ಬಗ್ಗೆ ಹೊಗಳಿದ್ದಾರೆ. ಮುಂದಿನ ಸಲ ಕಪ್ ಗೆಲ್ಲುವ ಭರವಸೆ ಇಟ್ಟುಕೊಳ್ಳಿ ಎಂದು ಕೊಹ್ಲಿಗೆ ಹೇಳಿದ್ದಾರೆ. ಈ ನಡುವೆ ಐಪಿಎಲ್ ಗೂ ಮುನ್ನ ಕೊಹ್ಲಿ ಏನಾದರೂ ರಾಹುಲ್ ಗಾಂಧಿನಾ ಮೀಟ್ ಮಾಡಿದ್ನಾ, ಹೀಗೆ ಸರಣಿ ಸೋಲು ಆರ್ ಸಿಬಿ ತಂಡ ಇಷ್ಟೊಂದು ಕಳಪೆಯಾಗಿರಲಿಲ್ಲ

ಈ ಸಲ ಕಪ್ ನಮ್ದೇ ಎನ್ನುವವರಿಗೆ ಶ್ರದ್ಧಾಂಜಲಿ

ಆರ್ ಸಿಬಿ ವಿರುದ್ಧ ಹೈದರಾಬಾದಿಗೆ 5 ರನ್ ಗಳ ಜಯ, ಈ ಸಲ ಕಪ್ ನಮ್ದೇ ಎನ್ನುವವರಿಗೆ ಶ್ರದ್ಧಾಂಜಲಿ ಸಲ್ಲಿಸಿ ಮೌನಾಚರಣೆ ಮಾಡೋಣ ಎನ್ನುವ ಟ್ವೀಟ್ ಗಳು ಬಂದಿವೆ.

ಬಾಲಕಿ ಈಗ ಪ್ರೌಢಾವಸ್ಥೆಗೆ ಬಂದರೂ ಆರ್ ಸಿಬಿ ಗೆದ್ದಿಲ್ಲ

ಆರ್ ಸಿಬಿ ಫ್ಯಾನ್ ಆಗುವುದಕ್ಕಿಂತ ದೊಡ್ಡ ಕಷ್ಟದ ಕೆಲಸ ಮತ್ತೊಂದಿಲ್ಲ. 8ನೇ ವಯಸ್ಸಿನಿಂದ ಆರ್ ಸಿಬಿ ಬೆಂಬಲಿಸುತ್ತಾ ಬಂದಿದ್ದೇನೆ. ಈಗ 19 ಆದರೂ ಆರ್ ಸಿಬಿ ಮುಡಿಗೆ ಕಪ್ ಸಿಗಿಸಲು ಆಗುತ್ತಿಲ್ಲ

ಆರ್ ಸಿಬಿ ಅಭಿಮಾನಿಗಳ ತಾಳ್ಮೆ

ಆರ್ ಸಿಬಿ ಅಭಿಮಾನಿಗಳ ತಾಳ್ಮೆ ಎಷ್ಟರಮಟ್ಟಿಗೆ ಇದೆ ಎಂಬುದನ್ನು ಮಿ. ಬೀನ್ ಚಿತ್ರಗಳ ಮೂಲಕ ತೋರಿಸಲಾಗಿದೆ.

ಆರ್ ಸಿಬಿಗೆ ಹೈದರಾಬಾದ್ ಯಾವತ್ತಿಗೂ ಶತ್ರು

ಆರ್ ಸಿಬಿಗೆ ಹೈದರಾಬಾದ್ ಯಾವತ್ತಿಗೂ ಶತ್ರು, 2015ರಲ್ಲಿ ಗ್ರೂಪ್ ಹಂತದಲ್ಲಿ, 2016ರಲ್ಲಿ ಫೈನಲ್ಸ್ ನಲ್ಲಿ, 2018ರಲ್ಲಿ ಕೂಡಾ ಆರ್ ಸಿಬಿ ಮುಳುಗಿಸಿ ಸೂರ್ಯ ಮೇಲಕ್ಕೇರಿದೆ.

ಭುವನೇಶ್ವರ್ ಕುಮಾರ್ ಗೆ ಬಹುಪರಾಕ್

ಭುವನೇಶ್ವರ್ ಕುಮಾರ್ ಗೆ ಬಹುಪರಾಕ್, ಧೋನಿ ಅವರು ಮ್ಯಾಚ್ ಫಿನಿಷರ್ ಇದ್ದಂತೆ, ಭುವಿ ಅವರು ಕೊನೆ ಓವರ್ ಎಸೆಯುವುದರಲ್ಲಿ ಸ್ಪೆಷಲಿಸ್ಟ್.

ಕಡಿಮೆ ಮೊತ್ತ ಡಿಫೆಂಡ್ ಹೈದರಾಬಾದ್

ಕಡಿಮೆ ಮೊತ್ತ ಡಿಫೆಂಡ್ ಮಾಡುವಲ್ಲಿ ಹೈದರಾಬಾದ್ ಎತ್ತಿದ ಕೈ. ನಾಲ್ಕು ಬಾರಿ ಇದನ್ನು ಸಾಧಿಸಿದೆ. ಈ ಬಾರಿ ಕೇನ್ ವಿಲಿಯಮ್ಸನ್ ಅವರ ನಾಯಕತ್ವಕ್ಕೆ ಜೈ ಎನ್ನಬೇಕು.

Story first published: Tuesday, May 8, 2018, 15:19 [IST]
Other articles published on May 8, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X