ಐಪಿಎಲ್ 2020 ಆದಾಯ: ಬಿಸಿಸಿಐಗೆ ಭರ್ಜರಿ ಗಳಿಕೆ, ವೆಚ್ಚ ಇಳಿಕೆ

ನವದೆಹಲಿ: ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಇತ್ತೀಚೆಗಷ್ಟೇ ಮುಕ್ತಾಯಗೊಂಡ 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಬಂದ ಗಳಿಕೆ, ಖರ್ಚು ವೆಚ್ಚಗಳ ಬಗ್ಗೆ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಮಾಹಿತಿ ನೀಡಿದೆ.
ಕೊರೊನಾ ಅವಧಿಯಲ್ಲಿ ನಡೆದ 2020ರ ಐಪಿಎಲ್‌ನಿಂದಾಗಿ ಭಾರತೀಯ ಕ್ರಿಕೆಟ್ ಬೋರ್ಡ್ 4000 ಕೋ.ರೂ. ಗಳಿಸಿದೆ. ಟಿವಿ ವೀಕ್ಷಕರ ಪ್ರಮಾಣ 25 ಶೇ. ಹೆಚ್ಚಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ಸಂದರ್ಶನದಲ್ಲಿ ಮಾತನಾಡಿದ ಬಿಸಿಸಿಐ ಖಜಾಂಚಿ ಅರುಣ್ ಧುಮಾಲ್ ಮಾಹಿತಿ ನೀಡಿದ್ದಾರೆ.
ಇಂಡಿಯನ್ ಎಕ್ಸ್‌ಪ್ರೆಸ್ ಜೊತೆ ಮಾತನಾಡಿದ ಧುಮಾಲ್, 'ಸುಮಾರು 35 ಶೇ.ದಷ್ಟು ಖರ್ಚು ಕಡಿಮೆಗೊಳಿಸುವಲ್ಲಿ ಬೋರ್ಡ್ ಯಶಸ್ವಿಯಾಗಿದೆ. ಕೊರೊನಾ ಪಿಡುಗಿನ ವೇಳೆ ನಾವು 4,000 ಕೋಟಿ ರೂ. ಗಳಿಸಿದ್ದೇವೆ. ನಮ್ಮ ಟಿವಿ ವೀಕ್ಷಕರ ಸಂಖ್ಯೆ 25 ಶೇ. ಹೆಚ್ಚಿದೆ,' ಎಂದಿದ್ದಾರೆ.
ಮಾತು ಮುಂದುವರೆಸಿದ ಧುಮಾಲ್, '(ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ) ಉದ್ಘಾಟನಾ ಪಂದ್ಯಕ್ಕೆ ಅತೀ ಹೆಚ್ಚಿನ ವೀಕ್ಷಕರು ನಮಗೆ ಸಿಕ್ಕಿದ್ದಾರೆ. ಐಪಿಎಲ್ ನಡೆಸುವ ಬಗ್ಗೆ ಯಾರು ಅನುಮಾನ ವ್ಯಕ್ತಪಡಿಸಿದ್ದರೋ ಅವರೇ ನಮಗೆ ಧನ್ಯವಾದ ಸಲ್ಲಿದ್ದಾರೆ,' ಎಂದು ತಿಳಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications