ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2020 ಅಂತ್ಯವಾದರೂ ಟ್ವಿಟ್ಟರ್‌ನಲ್ಲಿ ಡೆಲ್ಲಿ, ರಾಜಸ್ಥಾನ್ ಕಾಲೆಳೆತ ಅಂತ್ಯವಾಗಿಲ್ಲ!

IPL 2020 is over but RR admin continues to entertain fans, trolls DC

ಐಪಿಎಲ್‌ನ 13ನೇ ಆವೃತ್ತಿಯಲ್ಲಿ ಪ್ರತಿಯೊಂದು ತಂಡವೂ ಕೂಡ ಅಭಿಮಾನಿಗಳಿಗೆ ಅಂಗಳದಲ್ಲಿ ಸಾಕಷ್ಟು ರೋಚಕ ಕ್ಷಣಗಳನ್ನು ನೀಡಿದೆ. ಆದರೆ ಈಗ ಐಪಿಎಲ್ ಫೈನಲ್ ಪಂದ್ಯ ಮುಕ್ತಾಯವಾದ ಬಳಿಕ ಅಭಿಮಾನಿಗಳು ಇವುಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ಐಪಿಎಲ್ ಫ್ರಾಂಚೈಸಿಗಳ ಟ್ವಿಟ್ಟರ್‌ ಖಾತೆಯಲ್ಲಿ ಕಾಲೆಳೆತ ಮುಂದುವರಿದಿದೆ.

ಈ ಬಾರಿಯ ಐಪಿಎಲ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಟ್ವಿಟ್ಟರ್ ಅಡ್ಮಿನ್ ಸಕಾರಾತ್ಮಕವಾಗಿ ಎದುರಾಳಿ ತಂಡಗಳನ್ನು ಕಾಲೆಳೆಯುತ್ತಾ ಅಭಿಮಾನಿಗಳಿಗೆ ರಂಜಿಸಿದ್ದಾರೆ. ಇದು ಟೂರ್ನಿ ಮುಕ್ತಾಯವಾದ ಬಳಿಕವೂ ಮುಂದುವರಿದಿದೆ. ಡೆಲ್ಲಿ ತಂಡದ ಟ್ವಿಟ್ಟರ್‌ನ ಪೋಸ್ಟ್‌ವೊಂದಕ್ಕೆ ಪರೋಕ್ಷವಾಗಿ ಡೆಲ್ಲಿಯನ್ನು ತಮಾಷೆ ಮಾಡಿದೆ.

ರೋಹಿತ್ ಭಾರತ ತಂಡದ ನಾಯಕನಾಗದಿದ್ದರೆ ದೇಶದ ದುರಾದೃಷ್ಟ, ಆತನದ್ದಲ್ಲ: ಗೌತಮ್ ಗಂಭೀರ್ರೋಹಿತ್ ಭಾರತ ತಂಡದ ನಾಯಕನಾಗದಿದ್ದರೆ ದೇಶದ ದುರಾದೃಷ್ಟ, ಆತನದ್ದಲ್ಲ: ಗೌತಮ್ ಗಂಭೀರ್

ಡೆಲ್ಲಿ ಕ್ಯಾಪಿಟಲ್ಸ್‌ನ ಅಧಿಕರತ ಟ್ವಿಟ್ಟರ್ ಖಾತೆಯಲ್ಲಿ ರಾಜಸ್ಥಾನ್ ರಾಯಲ್ಸ್ ಅನ್ನು ಉದ್ದೇಶಿಸಿ " ಹೇಯ್ ರಾಜಸ್ಥಾನ್ ರಾಯಲ್ಸ್ ಪಿಚ್‌ನ ಒಳಗೆ ಮತ್ತು ಹೊರಗೆ ಯಾವಾಗಲೂ ಮನರಂಜಿಸಿದ್ದೀರಿ. ಆತ್ಮೀಯ ಆರ್‌ಆರ್‌ ಅಡ್ಮಿನ್ ನಮ್ಮ ಕಾಲೆಳೆತ 2021ರ ಐಪಿಎಲ್‌ನಲ್ಲೂ ಮುಂದುವರಿಯಲಿ, ಅಲ್ಲಿ ನೀವು ಬಲಿಷ್ಠರಾಗಿ ಬನ್ನಿ" ಎಂದು ಟ್ವೀಟ್ ಮಾಡಲಾಗಿತ್ತು.

ಈ ಟ್ವಿಟ್‌ಗೂ ರಾಜಸ್ಥಾನ್ ರಾಯಲ್ಸ್ ಆಡ್ಮಿನ್ ಪ್ರತಿಕ್ರಿಯಿಸಿ ಡೆಲ್ಲಿ ಕ್ಯಾಪಿಟಲ್ಸ್ ಆಡ್ಮಿನ್‌ಅನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ. ಡೆಲ್ಲಿ ಟ್ವಿಟ್‌ಅನ್ನು ರಿಟ್ವಿಟ್ ಮಾಡಿ "ಎಲ್ಲಾ ಅಭಿಮಾನಿಗಳಿಗೂ ಕನಿಷ್ಟ ಒಂದು ಬಾರಿ ಚಾಂಪಿಯನ್ ಆಗಿರುವವರ ಕಡೆಯಿಂದ ಶುಭರಾತ್ರಿ" ಎಂದು ಕೀಟಲೆಯ ಟ್ವಿಟ್ ಮಾಡಿದೆ.

ಐಪಿಎಲ್ ಹೊಸ ಫ್ರಾಂಚೈಸಿಗೆ ಸೂಪರ್ ಸ್ಟಾರ್ ಮೋಹನ್ ಲಾಲ್ ಓನರ್?ಐಪಿಎಲ್ ಹೊಸ ಫ್ರಾಂಚೈಸಿಗೆ ಸೂಪರ್ ಸ್ಟಾರ್ ಮೋಹನ್ ಲಾಲ್ ಓನರ್?

ಈ ಹಿಂದೆಯೂ ರಾಜಸ್ಥಾನ್ ರಾಯಲ್ಸ್ ಇದೇ ರೀತಿ ಎಲ್ಲಾ ತಂಡಗಳಿಗೂ ತಮಾಷೆಯ ಟ್ವೀಟ್‌ಗಳನ್ನು ಮಾಡುತ್ತಾ ಮನರಂಜಿಸಿತ್ತು. ಮುಂಬೈ ವಿರುದ್ದದ ಪಂದ್ಯಕ್ಕೂ ಮುನ್ನ ಮೆರೈನ್ ಡ್ರೈವ್‌ನ ಸುಂದರ ಚಿತ್ರವೊಂದನ್ನು ಹಂಚಿಕೊಂಡು "ಹೇಯ್ ರೋಹಿತ್ ಶರ್ಮಾ ಮೆರೈನ್ ಡ್ರೈವ್ ಎಷ್ಟು ಸುಂದರವಾಗಿದೆ ನೋಡಿ. ನೀವು ಇಲ್ಲಿಗೆ ಇಂದು ಹೋಗುವುದಿಲ್ಲವೇ?" ಎಂದು ಬರೆದುಕೊಂಡಿತ್ತು. ಹೈದರಾಬಾದ್ ವಿರುದ್ಧದ ಪಂದ್ಯಕ್ಕೂ ಮುನ್ನ ಟ್ವಿಟ್ಟರ್‌ನಲ್ಲೇ ಹೈದರಾಬಾದ್ ಬಿರಿಯಾನಿ ಆರ್ಡರ್ ಮಾಡಿ ಸೋತ ಬಳಿಕ ಅದನ್ನು 'ಕ್ಯಾನ್ಸಲ್' ಮಾಡಿತ್ತು.

Story first published: Friday, November 13, 2020, 13:15 [IST]
Other articles published on Nov 13, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X