ಐಪಿಎಲ್ 2021: ಈ ಎರಡು ತಂಡಗಳ ನಡುವೆ ನಡೆಯಲಿದೆ ಫೈನಲ್: ಚೋಪ್ರ ಭವಿಷ್ಯ

ಐಪಿಎಲ್ 14ನೇ ಆವೃತ್ತಿಯ ಎರಡನೇ ಚರಣದ ಪಂದ್ಯಗಳ ಆರಂಭಕ್ಕೆ ಬೆರಳೆಣಿಕೆಯ ದಿನಗಳು ಮಾತ್ರವೇ ಬಾಕಿಯಿದೆ. ಈ ಬಾರಿಯ ಟೂರ್ನಿಯಲ್ಲಿ ಮೊದಲಾರ್ಧದ ಪಂದ್ಯಗಳು ಮುಕ್ತಾಯವಾಗಿದ್ದು ಈ ಹಂತದಲ್ಲಿ ಯಾವೆಲ್ಲಾ ತಂಡಗಳು ಯಾವ್ಯಾವ ಸ್ಥಾನದಲ್ಲಿದೆ ಎಂಬ ಬಗ್ಗೆ ಸ್ಪಷ್ಟ ಚಿತ್ರಣವಿದೆ. ಆದರೆ ಈ ಬಾರಿಯ ಟೂರ್ನಿಯನ್ನು ಗೆಲ್ಲುವ ತಂಡ ಯಾವುದು ಎಂಬ ಪ್ರಶ್ನೆಗೆ ಅಕ್ಟೋಬರ್ 15ರಂದು ಉತ್ತರ ದೊರೆಯಲಿದೆ. ಆದರೆ ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ ಹಾಗೂ ಹಾಲಿ ಕಾಮೆಂಟೇಟರ್ ಆಕಾಶ್ ಚೋಪ್ರ ಈ ಬಾರಿಯ ಐಪಿಎಲ್ ಟೂರ್ನಿಯ ಫೈನಲ್ ಹಂತಕ್ಕೇರಿವ ಎರಡು ತಂಡಗಳನ್ನು ಹೆಸರಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಆಕಾಶ್ ಚೋಪ್ರ ಅಭಿಮಾನಿಗಳಿಂದಿಗೆ ಪ್ರಶ್ನೋತ್ತರ ಸಂವಾದವನ್ನು ಇಟ್ಟುಕೊಂಡಿದ್ದರು. ಈ ಸಂದರ್ಭದಲ್ಲಿ ಈ ಬಾರಿ ಯಾವೆಲ್ಲಾ ತಂಡಗಳು ಫೈನಲ್‌ಗೆ ಪ್ರವೇಶ ಪಡೆಯಲಿದೆ ಎಂಬ ಪ್ರಶ್ನೆಯನ್ನು ಅಭಿಮಾನಿಯೋರ್ವರು ಕೇಳಿದ್ದಾರೆ. ಇದಕ್ಕೆ ಕಾಮೆಂಟೇಟರ್ ಹಾಗೂ ಕ್ರಿಕೆಟ್ ವಿಶ್ಲೇಷಕ ಆಕಾಶ್ ಚೋಪ್ರ ತಮ್ಮ ಉತ್ತರವನ್ನು ನೀಡಿದ್ದಾರೆ.

ಎರಡು ತಂಡಗಳನ್ನು ಹೆಸರಿಸಿದ ಆಕಾಶ್ ಚೋಪ್ರ: ಅಭಿಮಾನಿ ಕೇಳಿದ ಈ ಪ್ರಶ್ನೆಗೆ ಆಕಾಶ್ ಚೋಪ್ರ ತಮ್ಮ ಉತ್ತರವನ್ನು ನೀಡಿದ್ದಾರೆ. ಆಕಾಶ್ ಚೋಪ್ರ ಪ್ರಕಾರ ಈ ಬಾರಿಯ ಐಪಿಎಲ್ ಟೂರ್ನಿಯ ಫೈನಲ್ ಹಂತಕ್ಕೇರುವ ಎರಡು ತಂಡಗಳೆಂದರೆ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್. ಈ ತಂಡಗಳನ್ನು ಚೋಪ್ರ ಹೆಸರಿಸಿದ್ದಾರೆ.

ನಾವು ಐದನೇ ಟೆಸ್ಟ್‌ಗೆ ಮರು ವೇಳಾಪಟ್ಟಿ ತಯಾರಿಸಲಿದ್ದೇವೆ: ಗಂಗೂಲಿನಾವು ಐದನೇ ಟೆಸ್ಟ್‌ಗೆ ಮರು ವೇಳಾಪಟ್ಟಿ ತಯಾರಿಸಲಿದ್ದೇವೆ: ಗಂಗೂಲಿ

ಐಪಿಎಲ್ ಇತಿಹಾಸದ ಅತ್ಯಂತ ಯಶಸ್ವಿ ತಂಡಗಳು: ಆಕಾಶ್ ಚೋಪ್ರ ಹೆಸರಿಸಿದ ಈ ಬಾರಿಯ ಐಪಿಎಲ್ ಟೂರ್ನಿಯ ಫೈನಲ್ ಹಂತಕ್ಕೇರುವ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಐಪಿಎಲ್ ಇತಿಹಾಸದ ಅತ್ಯಂತ ಯಶಸ್ವಿ ತಂಡಗಳಾಗಿದೆ. ಈ ಹಿಂದೆ ನಡೆದಿರುವ 13 ಆವೃತ್ತಿಗಳ ಪೈಕಿ 8 ಆವೃತ್ತಿಯ ಟ್ರೋಫಿಯನ್ನು ಈ ಎರಡು ತಂಡಗಳೇ ಹಂಚಿಕೊಂಡಿರುವುದು ಇದಕ್ಕೆ ಸಾಕ್ಷಿಯಾಗಿದೆ. ಇದರಲ್ಲಿ ಮುಂಬೈ ಇಂಡಿಯನ್ಸ್ 5 ಬಾರಿ ಚಾಂಪಿಯನ್ ಪಟ್ಟಕ್ಕೇರಿದ್ದರೆ ಚೆನ್ನೈ ಸೂಪರ್ ಕಿಂಗ್ಸ್ 3 ಬಾರಿ ಟೂರ್ನಿಯನ್ನು ಗೆದ್ದುಕೊಂಡಿದೆ.

RCB blue jersey: ಕೆಕೆಆರ್ ವಿರುದ್ಧದ ಪಂದ್ಯದ ವೇಳೆ ನೀಲಿ ಜೆರ್ಸಿ ಧರಿಸಲಿದೆ ಆರ್‌ಸಿಬಿRCB blue jersey: ಕೆಕೆಆರ್ ವಿರುದ್ಧದ ಪಂದ್ಯದ ವೇಳೆ ನೀಲಿ ಜೆರ್ಸಿ ಧರಿಸಲಿದೆ ಆರ್‌ಸಿಬಿ

ನಾಯಕತ್ವ ವಿಭಜನೆ ಪ್ರಶ್ನೆಗೆ ಚೋಪ್ರ ಜಾಣ ಉತ್ತರ: ಇನ್ನು ಇದೇ ಸಂದರ್ಭದಲ್ಲಿ ಸದ್ಯ ಸಾಕಷ್ಟು ಚರ್ಚೆಗೆ ಕಾರಣವಾಗಿರುವ ನಾಯಕತ್ವ ವಿಭಜನೆ ವಿಚಾರವಾಗಿಯೂ ಅಭಿಮಾನಿಯೋರ್ವರು ಚೋಪ್ರಾಗೆ ಪ್ರಶ್ನಿಸಿದ್ದಾರೆ. ನಾಯಕತ್ವ ವಿಭಜನೆ ವಿಚಾರದ ಚರ್ಚೆಯಲ್ಲಿ ತಮ್ಮ ನಿಲುವೇನು ಎಂದು ಪ್ರತಿಕ್ ನಾಯ್ಕ್ ಎಂಬವರು ಪ್ರಶ್ನಿಸಿದ್ದರು. ಇದಕ್ಕೆ ಯಾವುದೇ ರೀತಿಯಲ್ಲಿಯೂ ವಿವಾದಗಳಿಗೆ ಎಡೆಮಾಡಿಕೊಡದಂತೆ ಎಚ್ಚರಿಕೆಯ ಉತ್ತರವನ್ನು ನೀಡಿದ್ದಾರೆ ಆಕಾಶ್ ಚೋಪ್ರ. "ಮುಂದಿನ ನಾಲ್ಕು ವಾರದಲ್ಲಿ ಭಾರತ ಟಿ20 ವಿಶ್ವಕಪ್‌ನಲ್ಲಿ ಆಡಲು ಇಳಿಯಲಿದೆ. ಈ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ಭಾರತೀಯ ತಂಡದ ನಾಯಕನಾಗಿದ್ದಾರೆ. ಆತನ ನಾಯಕತ್ವದ ಮೇಲೆ ನಾವು ನಂಬಿಕೆ ಹಾಗೂ ವಿಶ್ವಾಸವನ್ನು ಇಡಬೇಕು. ಅಲ್ಲಿಯವರೆಗೆ ಎಲ್ಲಾ ಚರ್ಚೆಗಳು ಕಾಯಬೇಕಾಗುತ್ತದೆ. ಉರಿಯುತ್ತಿರುವ ಬೆಂಕಿಗೆ ತುಪ್ಪ ಸುರಿಯಲಾರೆ" ಎಂದಿದ್ದಾರೆ ಆಕಾಶ್ ಚೋಪ್ರ.

IPL ನಲ್ಲಿ ಪಾಕ್ ಆಟಗಾರರಿಗೆ ಸಿಕ್ಕ ಸಕ್ಸಸ್ ವಿರಾಟ್ ಮತ್ತು ABD ಗೆ‌ ಇನ್ನೂ ಸಿಕ್ಕಿಲ್ಲ | Oneindia Kannada

ರೋಹಿತ್ ಅಥವಾ ಕೊಹ್ಲಿ ಪ್ರಶ್ನೆಗೆ ಧೋನಿ ಎಂದ ಚೋಪ್ರ: ಇನ್ನು ಇದೇ ಸಂದರ್ಭದಲ್ಲಿ ಅಭಿಮಾನಿಯೋರ್ವರು "ಯುವ ಆಟಗಾರರನ್ನು ಪೋಷಿಸುವ ವಿಚಾರವಾಗಿ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಮಧ್ಯೆ ಯಾರು ಅತ್ಯುತ್ತಮ ಎಂದು ಪ್ರಶ್ನಿಸಿದ್ದರು. ಇದಕ್ಕೆ ಕೂಡ ಆಕಾಶ್ ಚೋಪ್ರ ಬುದ್ದಿವಂತಿಕೆಯ ಉತ್ತರವನ್ನು ನೀಡಿದ್ದರೆ. ಕೊಹ್ಲಿ ಹಾಗೂ ರೋಹಿತ್ ಶರ್ಮಾ ಇಬ್ಬರ ಹೆಸರ್ನು ಕೂಡ ತೆಗೆದಯಕೊಳ್ಳದೆ 'ಧೋನಿ' ಎಂದಿದ್ದಾರೆ ಮಾಜಿ ಕ್ರಿಕೆಟಿಗ ಹಾಗೂ ಹಾಲಿ ಕಾಮೆಂಟೇಟರ್ ಆಕಾಶ್ ಚೋಪ್ರ. ಸ್ವತಃ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಎಂಎಸ್ ಧೋನಿ ನಾಯಕತ್ವದಲ್ಲಿ ಬೆಳೆದ ಆಟಗಾರರಾಗಿದ್ದಾರೆ. ಈ ಇಬ್ಬರು ಆಟಗಾರರ ಕಠಿಣ ಸಂದರ್ಭದಲ್ಲಿ ಕೂಡ ಎಂಎಸ್ ಧೋನಿ ಬೆಂಬಲವಾಗಿ ನಿಂತಿದ್ದಾರೆ. ನಾಯಕನಾಗಿ ಧೋನಿ ನೀಡಿದ ಆತ್ಮವಿಶ್ವಾಸ ಈ ಇಬ್ಬರು ಆಟಗಾರರು ಭಾರತೀಯ ಕ್ರಿಕೆಟ್ ತಂಡದ ಪ್ರಮುಖ ಆಧಾರ ಸ್ಥಂಬವಾಗುವಲ್ಲಿ ಮಹತ್ವದ ಪಾತ್ರವಹಿಸಿದೆ ಎಂದರೆ ತಪ್ಪಾಗಲಾರದು.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Tuesday, September 14, 2021, 16:30 [IST]
Other articles published on Sep 14, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X