ಐಪಿಎಲ್ 2021: ಚೆನ್ನೈ vs ಕೋಲ್ಕತ್ತಾ ನೈಟ್ ರೈಡರ್ಸ್‌ನಲ್ಲಿ ಬಲಿಷ್ಠರಾರು?!

ಅಬುಧಾಬಿ: ಅಬುಧಾಬಿಯ ಶೈಕ್ ಝಾಯೆದ್ ಸ್ಟೇಡಿಯಂನಲ್ಲಿ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) 38ನೇ ಪಂದ್ಯದಲ್ಲಿ ಮಾಜಿ ಚಾಂಪಿಯನ್ಸ್ ತಂಡಗಳಾದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಕಾದಾಡಲಿವೆ. ಐಪಿಎಲ್ ದ್ವಿತೀಯ ಹಂತದಲ್ಲಿ ಎರಡೂ ತಂಡಗಳೂ ಆಡಿದ ಎರಡು ಪಂದ್ಯಗಳಲ್ಲೂ ಗೆದ್ದು ಹೊಸ ಹುಮ್ಮಸ್ಸಿನಲ್ಲಿವೆ. ಹೀಗಾಗಿ ಇಂದಿನ ಪಂದ್ಯ ಕುತೂಹಲ ಮೂಡಿಸಿದೆ.

ಐಪಿಎಲ್: ಪ್ಲೇ ಆಫ್ಸ್‌ ಭರವಸೆ ಕಳೆದುಕೊಂಡ ಮೊದಲ ತಂಡ ಹೈದರಾಬಾದ್ಐಪಿಎಲ್: ಪ್ಲೇ ಆಫ್ಸ್‌ ಭರವಸೆ ಕಳೆದುಕೊಂಡ ಮೊದಲ ತಂಡ ಹೈದರಾಬಾದ್

ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ದ್ವಿತೀಯ ಹಂತದ ಆರಂಭಿಕ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 20 ರನ್ ಗೆಲುವನ್ನಾಚರಿಸಿತ್ತು. ಎರಡನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 6 ವಿಕೆಟ್‌ಗಳಿಂದ ಗೆದ್ದಿತ್ತು. ಕೋಲ್ಕತ್ತಾ ನೈಟ್ ರೈಡರ್ಸ್ ಕೂಡ ಆರ್‌ಸಿಬಿ ವಿರುದ್ಧ ಮತ್ತು ಮುಂಬೈ ವಿರುದ್ಧ ಗೆದ್ದು ಬಲಿಷ್ಠ ತಂಡವಾಗಿ ಹೊರ ಹೊಮ್ಮಿದೆ.

ಪಂದ್ಯದ ಪ್ರಮುಖ ಮಾಹಿತಿಗಳು

ಪಂದ್ಯದ ಪ್ರಮುಖ ಮಾಹಿತಿಗಳು

ಇಂಡಿಯನ್ ಪ್ರೀಮಿಯರ್ ಲೀಗ್‌ 38ನೇ ಪಂದ್ಯವಾಗಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಮುಖಾಮುಖಿಯಾಗಲಿದ್ದು ಅಬುಧಾಬಿಯ ಶೈಕ್ ಝಾಯೆದ್ ಸ್ಟೇಡಿಯಂನಲ್ಲಿ ಸೆಪ್ಟೆಂಬರ್‌ 26ರ ಭಾನುವಾರ 3.30 PMಗೆ ಆರಂಭವಾಗಲಿದೆ. ಈ ದಿನ ಡಬಲ್ ಹೆಡ್ಡರ್ ಇರುವುದರಿಂದ ಆರಂಭಿಕ ಪಂದ್ಯದಲ್ಲಿ ಸಿಎಸ್‌ಕೆ-ಕೆಕೆಆರ್ ಕಾದಾಡಲಿವೆ. 39ನೇ ಪಂದ್ಯವಾಗಿ ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಸೆಣಸಾಡಲಿವೆ. ಸಿಎಸ್‌ಕೆ ತಂಡದಲ್ಲಿ ಇಂಗ್ಲೆಂಡ್ ಆಲ್ ರೌಂಡರ್ ಸ್ಯಾಮ್ ಕರನ್ ಈ ಬಾರಿ ಕೂಡ ಬೆಂಚ್‌ನಲ್ಲಿ ಕಾಣಸಿಕೊಳ್ಳುವ ಸಾಧ್ಯತೆಯಿದೆ. ಯಾಕೆಂದರೆ ಡ್ವೇನ್ ಬ್ರಾವೋ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಕೆಕೆಆರ್ ತಂಡದಲ್ಲಿ ಕೂಡ ಗಾಯದ ಸಮಸ್ಯೆಯಲ್ಲಿ ಯಾರೂ ಇಲ್ಲ. ಬಹುತೇಕ ಹಿಂದಿನ ತಂಡವೇ ಈ ಬಾರಿಯೂ ಕಣಕ್ಕಿಳಿಯಲಿದೆ. ಸ್ಟಾರ್‌ಸ್ಪೋರ್ಟ್ಸ್ ಕನ್ನಡ, ಸ್ಟಾರ್ ಸ್ಪೋರ್ಟ್ಸ್ ಹಿಂದಿನ ಮತ್ತು ಇಂಗ್ಲಿಷ್ ಚಾನೆಲ್‌ಗಳಲ್ಲಿ ಪಂದ್ಯದ ನೇರಪ್ರಸಾರ ಸಿಗಲಿದೆ. ಹಾಟ್‌ ಸ್ಟಾರ್‌ನಲ್ಲೂ ಪಂದ್ಯ ವೀಕ್ಷಿಸಬಹುದು.

ಯಾರು ಹೆಚ್ಚು ಬಲಶಾಲಿ?

ಯಾರು ಹೆಚ್ಚು ಬಲಶಾಲಿ?

ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ಇವುಗಳಲ್ಲಿ ಚೆನ್ನೈ ಹೆಚ್ಚು ಬಲಶಾಲಿ ತಂಡವಾಗಿ ಕಾಣಿಸಿದೆ. ಎರಡೂ ತಂಡಗಳು ಒಟ್ಟು 23 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ 15 ಪಂದ್ಯಗಳಲ್ಲಿ ಸಿಎಸ್‌ಕೆ ಗೆದ್ದಿದೆ. ಇನ್ನು 8 ಪಂದ್ಯಗಳಲ್ಲಿ ಕೆಕೆಆರ್ ಗೆದ್ದಿದೆ. ಚೆನ್ನೈ ತಂಡ ಒಟ್ಟು 3 ಬಾರಿ ಚಾಂಪಿಯನ್ಸ್ ಆಗಿರುವ ತಂಡ. ಹೀಗಾಗಿ ಸಹಜವಾಗಿಯೇ ತಂಡ ಕೊಂಚ ಬಲಿಷ್ಠವಾಗಿದೆ. 2018, 2011, 2010ರಲ್ಲಿ ಚೆನ್ನೈ ಚಾಂಪಿಯನ್ಸ್ ಪಟ್ಟ ಅಲಂಕರಿಸಿದೆ. ಕೋಲ್ಕತ್ತಾ ಕೂಡ 2 ಬಾರಿ ಚಾಂಪಿಯನ್ಸ್ ಪಟ್ಟ ಗೆದ್ದಿದೆ. 2014 ಮತ್ತು 2012ರಲ್ಲಿ ಕೆಕೆಆರ್ ಟ್ರೋಫಿ ಜಯಿಸಿತ್ತು. ಹೀಗಾಗಿ ಇಂದಿನ ಪಂದ್ಯ ಹೆಚ್ಚು ರೋಚಕ ಅನ್ನಿಸುವ ನಿರೀಕ್ಷೆಯಿದೆ. ಶುಬ್ಮನ್ ಗಿಲ್, ನಿತೀಶ್ ರಾಣಾ, ಆ್ಯಂಡ್ರೆ ರಸೆಲ್ ಆಟ ತಂಡದ ಫಲಿತಾಂಶವನ್ನು ನಿರ್ಧರಿಸಲಿದೆ. ಸದ್ಯದ ಅಂಕಪಟ್ಟಿಯಲ್ಲಿ ಚೆನ್ನೈ ದ್ವಿತೀಯ ಸ್ಥಾನದಲ್ಲಿದ್ದರೆ, ಕೋಲ್ಕತ್ತಾ ನಾಲ್ಕನೇ ಸ್ಥಾನದಲ್ಲಿದೆ.

Harshal Patel RCB ತಂಡಕ್ಕೆ ಸಿಕ್ಕಿರುವ ಅಪರೂಪದ ಬೌಲರ್ | Oneindia Kannada
ಚೆನ್ನೈ vs ಕೋಲ್ಕತ್ತಾ ಸಂಭಾವ್ಯ ತಂಡಗಳು

ಚೆನ್ನೈ vs ಕೋಲ್ಕತ್ತಾ ಸಂಭಾವ್ಯ ತಂಡಗಳು

ಚೆನ್ನೈ ಸೂಪರ್ ಕಿಂಗ್ಸ್ ಸಂಭಾವ್ಯ ತಂಡ: ಫಾಫ್ ಡು ಪ್ಲೆಸಿಸ್, ರುತುರಾಜ್ ಗಾಯಕವಾಡ್, ಮೊಯೀನ್ ಅಲಿ, ಸುರೇಶ್ ರೈನಾ, ಅಂಬಟಿ ರಾಯುಡು, ಎಂಎಸ್ ಧೋನಿ (ಡಬ್ಲ್ಯೂ/ಸಿ), ರವೀಂದ್ರ ಜಡೇಜಾ, ಡ್ವೇನ್ ಬ್ರಾವೋ, ಶಾರ್ದೂಲ್ ಠಾಕೂರ್, ದೀಪಕ್ ಚಹರ್, ಜೋಶ್ ಹಜಲ್‌ವುಡ್.

ಕೋಲ್ಕತ್ತಾ ನೈಟ್ ರೈಡರ್ಸ್: ವೆಂಕಟೇಶ್ ಅಯ್ಯರ್, ಶುಬ್ಮನ್ ಗಿಲ್, ರಾಹುಲ್ ತ್ರಿಪಾಠಿ, ನಿತೀಶ್ ರಾಣಾ, ಇಯೋನ್ ಮಾರ್ಗನ್ (ಸಿ), ದಿನೇಶ್ ಕಾರ್ತಿಕ್ (ಡಬ್ಲ್ಯೂ), ಆ್ಯಂಡ್ರೆ ರಸೆಲ್, ಸುನೀಲ್ ನರೈನ್, ಲಾಕಿ ಫರ್ಗುಸನ್, ವರುಣ್ ಚಕ್ರವರ್ತಿ, ಪ್ರಸಿದ್ ಕೃಷ್ಣ.

ಐಸಿಸಿ ಟಿ20 ವಿಶ್ವಕಪ್ 2021 ಊಹಿಸು
Match 22 - October 28 2021, 07:30 PM
ಆಸ್ಟ್ರೇಲಿಯಾ
ಶ್ರೀಲಂಕಾ
Predict Now

For Quick Alerts
ALLOW NOTIFICATIONS
For Daily Alerts
Story first published: Sunday, September 26, 2021, 13:14 [IST]
Other articles published on Sep 26, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X